ಮಾನ್ಯ ಆಲ್ ಗೋರ್ ಅವರೆ, ಸ್ವಲ್ಪ ತಾಳಿ

ರಿಪಬ್ಲಿಕನ್ ಪಕ್ಷದ ಆರ್ಥಿಕ ನೀತಿಗಳು ರೊನಾಲ್ಡ್ ರೇಗನ್ ಕಾಲದವು. ಅವುಗಳಲ್ಲಿ ಕೆಲವು ನಿಯಮಗಳನ್ನು ಬದಲಿಸಿ ಹಾಗೇ ಇಟ್ಟುಕೊಂಡಿದ್ದಾರೆ. ಆರ್ಥಿಕ ವಿಚಾರಕ್ಕೆ ಸಂಬಂಧಿಸಿದ ಹೊಸ ಮಸೂದೆ ಇತ್ತೀಚೆಗೆ ಅನುಮೋದನೆಗೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ ಆಲ್ ಗೋರ್ ಅವರ ಒಂದು ಮತ, ರಿಪಬ್ಲಿಕನ್ ಪಕ್ಷದ ಒಂದೇ ಒಂದು ಮತವಿಲ್ಲದೆ ಅನುಮೋದನೆ ಪಡೆಯುವಲ್ಲಿ ಯಶಸ್ವಿಯಾಯಿತು. ಜಾರ್ಜ್ ಬುಷ್ ಅಧ್ಯಕ್ಷರಾಗಿದ್ದ ಕಾಲದಲ್ಲಿ ವಾರ್ಷಿಕ 200 ಬಿಲಿಯನ್ ಡಾಲರ್‌ಗೂ ಹೆಚ್ಚು ಹಣ ಕೊರತೆ ಇತ್ತು. ಆದರೆ ಕ್ಲಿಂಟನ್ ಕಾಲದಲ್ಲಿ ಹೊಸ ಆರ್ಥಿಕ ನೀತಿಯಿಂದಾಗಿ ವಾರ್ಷಿಕ 200 ಬಿಲಿಯನ್ ಡಾಲರ್ ಹಣ ಹೆಚ್ಚುವರಿ (surplus) ಉಳಿಯಿತು. ಇದರಿಂದ ಬಡ್ಡಿ ದರಗಳಲ್ಲಿ ಇಳಿಮುಖವಾಯಿತು.
ಈ ಎಲ್ಲ ಬೆಳವಣಿಗೆಗಳ ಹಿನ್ನಲೆಯಲ್ಲಿ ತಲಾದಾಯ ಹೆಚ್ಚಿದೆ. ಆದರೆ ಇದನ್ನು ಒಪ್ಪದ ಇನ್ನೊಬ್ಬ ಅಭ್ಯರ್ಥಿ ರಿಪಬ್ಲಿಕನ್ ಪಕ್ಷದ ದುಬ್ಯಾ ಬುಷ್ ಅವರು ಈಗಿನ ಆರ್ಥಿಕ ನೀತಿ ಸರಿಯಿಲ್ಲ ಹಣವನ್ನು ಕೇವಲ ಹೆಚ್ಚು ಕೆಲಸ ಮಾಡುವ ಮಂದಿ ಮಾತ್ರ ಪಡೆಯಬೇಕು ಎಂದು ವಾದಿಸುತ್ತಿದ್ದಾರೆ. ಅಷ್ಟೇ ಅಲ್ಲ ತಮ್ಮ ತಂದೆ ತಂದ ಆರ್ಥಿಕ ಸುಧಾರಣೆಗಳು ಅಮೆರಿಕದ ಆರ್ಥಿಕ ಪರಿಸ್ಥಿತಿಯನ್ನು ರಸತಾಳಕ್ಕಿಳಿಸಿದವು ಎಂಬ ಸತ್ಯವನ್ನು ಮರೆತಿದ್ದಾರೆ.
ಗೋರ್ ಮತ್ತು ಲೇಬರ್‌ಮನ್ ಅವರು ಕಳೆದ 8 ವರ್ಷದಿಂದ ಜಾರಿಯಲ್ಲಿರುವ ಆರ್ಥಿಕ ನೀತಿಯನ್ನೇ ಮುಂದುವರಿಸಲು ಇಚ್ಚಿಸಿದ್ದಾರೆ. ಮಧ್ಯಮ ವರ್ಗದವರ ಮೇಲಿನ ತೆರಿಗೆ ಭಾರ ಇಳಿಸಲು ನಿರ್ಧರಿಸಿದ್ದಾರೆ. ಜಾರ್ಜ್ ಬುಷ್ ಮತ್ತು ರೊನಾಲ್ಡ್ ರೇಗನ್ ಕಾಲದ, ಈಗಲೂ ಜಾರಿಯಲ್ಲಿರುವ ಕೆಲವು ಆರ್ಥಿಕ ನೀತಿಗಳನ್ನು ಬದಲಾಯಿಸಲು ತೀರ್ಮಾನಿಸಿದ್ದಾರೆ. ಅವುಗಳಲ್ಲಿ ಕೇಂದ್ರದ ಮೇಲಿನ ಸಾಲವನ್ನು 2002ನೇ ಇಸವಿ ಹೊತ್ತಿಗೆ ಸೊನ್ನೆಗಿಳಿಸಲು ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.
ವಾಣಿಜ್ಯ ನಿಯಮ : ಗೋರ್ ಸೇರಿದಂತೆ ಎಲ್ಲ ಡೆಮಾಕ್ರೆಟಿಕ್ ಸದಸ್ಯರು ಮುಕ್ತ ವ್ಯಾಪಾರದ ಬಗ್ಗೆ ಒಲವಿರುವವರು. ಗ್ಯಾಟ್ ಮತ್ತು ನಾಫ್ತಾದ ಬಗ್ಗೆಯೂ ಒಲವಿರುವ ಕಾರಣಗಳಿಗಾಗಿ ಒಂದಷ್ಟು ಮತಗಳನ್ನು ಕಳೆದುಕೊಳ್ಳುವ ಭಯ ಗೋರ್‌ಗಿದೆ. ಇನ್ನು ಶಿಕ್ಷಣದ ವಿಷಯದಲ್ಲೂ ಎಲ್ಲರಿಗೂ ಶಿಕ್ಷಣ ಮತ್ತು ಸಮಾನತೆ, ಆರ್ಥಿಕ ಬೆಳವಣಿಗೆ ಆಧರಿತ ನೀತಿ ಅಡಿಯಲ್ಲಿ ಉನ್ನತ ಶಿಕ್ಷಣದಲ್ಲಿ ತೆರಿಗೆ ಕಡಿತ, ಶಿಕ್ಷಕರ ಉತ್ತರದಾಯಿತ್ವ ವಿಷಯಗಳನ್ನು ಗೋರ್ ಬೆಂಬಲಿಗರು ಪ್ರತಿಪಾದಿಸುತ್ತಿದ್ದಾರೆ.
ಆರೋಗ್ಯ ಮತ್ತು ಮಹಿಳಾ ಹಕ್ಕು : ಗರ್ಭಪಾತವನ್ನು ಕಾನೂನು ಬಾಹಿರ ಎಂದು ಸಾರಲು ಬುಷ್ ತಂಡ ತಯಾರಾಗಿದ್ದರೆ, ಕ್ಲಿಂಟನ್ ಮತ್ತು ಗೋರ್ ತಂಡ ಅದನ್ನು ಮಹಿಳೆಯರ ವಿವೇಚನೆಗೆ ಬಿಡಲು ಇಚ್ಚಿಸಿದೆ. ಈ ಎಲ್ಲ ವಿಷಯಗಳು ಸೇರಿದಂತೆ ಸಮಗ್ರ ವಿಷಯಗಳ ಬಗ್ಗೆ ಡೆಮಾಕ್ರೆಟಿಕ್ ಪಕ್ಷಕ್ಕೆ ಸ್ಪಷ್ಟ ನಿಲುವು ಇದೆ. ಆರ್ಥಿಕ ವಿಷಯಗಳೂ ಸೇರಿದಂತೆ ಈಗಿನ ವ್ಯವಸ್ಥೆ ಮುಂದುವರಿಯಲು ಗೋರ್ ಮತ್ತು ಲೇಬರ್‌ಮನ್ ಅವರ ಆಯ್ಕೆ ಉತ್ತಮ.
(* ಭಾರತೀಯ ಮೂಲದವರಾದ ಕುಮಾರ್ ಭಾರ್ವೆ ಅವರು ಮೇರಿಲ್ಯಾಂಡ್ ಹೌಸ್‌ನ ಉನ್ನತ ನಿಯೋಗದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಈ ವಿಶ್ಲೇಷಣೆಯನ್ನು , ವಾಲ್ ಸ್ಟ್ರೀಟ್ ಜರ್ನಲ್‌ನಲ್ಲಿನ ನ್ಯೂ ವಾಯ್ಸ್ ಇನ್ ಡೆಮಾಕ್ರಟಿಕ್ ಪಾರ್ಟಿ ಎಂಬ ಲೇಖನದಿಂದ ಆರಿಸಿಕೊಳ್ಳಲಾಗಿದೆ.)
ಮುಖಪುಟ / ಲೋಕೋಭಿನ್ನರುಚಿ
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications