ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾನ್ಯ ಬುಷ್‌ ಅವರೆ, ಸ್ವಲ್ಪ ತಾಳಿ

By Staff
|
Google Oneindia Kannada News

George Dubya BushAl Goreಹೆಚ್ಚುವರಿ ಹಣವನ್ನು ಅಶಕ್ತರ ನೆರವಿಗಾಗಿ ಉಪಯೋಗಿಸಬಹುದು ಎಂದೂ ಹೇಳುತ್ತಿರುವ ಆಲ್‌ಗೋರ್‌, surplus ಹಣದ ಉಳಿಕೆಗೆ ಕ್ಲಿಂಟನ್‌ ಸರಕಾರ ಕಾರಣವಾಗಿದ್ದು ಅದರ ಕ್ರೆಡಿಟ್‌ ತಮಗೇ ಸೇರಬೇಕೆಂದು ವಾದಿಸುತ್ತಿದ್ದಾರೆ. ಇಂಧನ ಮತ್ತು ಔಷಧಿ ಕಂಪನಿಗಳು ಸಾರ್ವಜನಿತರನ್ನು ಶೋಷಿಸುತ್ತಿರುವ ಬಗ್ಗೆ ಆಲ್‌ಗೋರ್‌ ಕಟುವಾಗಿ ಮಾತನಾಡಿದ್ದಾರೆ. ಹಣದ ಉಳಿಕೆಗೆ ಕ್ಲಿಂಟನ್‌ ಸರಕಾರ ಕಾರಣವಾಗಿರುವುದರಿಂದ ಅದರ ಕ್ರೆಡಿಟ್‌ ತಮಗೆ ಸೇರಬೇಕೆಂಬ ಆಲ್‌ಗೋರ್‌ ಅವರ ವಾದ ತೀರಾ ಅತಾರ್ಕಿಕ. ಇಂಟರ್‌ನೆಟ್‌ನಲ್ಲಿ ಬಂಡವಾಳ ತೊಡಗಿಸಿದ ಕಾರ್ಯ ಅಭಿನಂದನಾರ್ಹವಾದರೂ ಎಲ್ಲ ಅಭಿವೃದ್ಧಿಯ ಕ್ರೆಡಿಟ್‌ ಉದ್ಯಮಿಗಳಿಗೆ ಸಲ್ಲಬೇಕು. ಇವತ್ತಿನ ಅಭಿವೃದ್ಧಿಯ ಬೀಜಮಂತ್ರ ಬಿತ್ತಿದವರು ರೋನಾಲ್ಡ್‌ ರೇಗನ್‌. ಮಾರುಕಟ್ಟೆ ನಿಯಂತ್ರಣ, ತೆರಿಗೆ ಕಡಿತ ಮುಂತಾದ ವಿಷಯಗಳೂ ಸೇರಿದಂತೆ ಶೀತಲ ಸಮರಗಳಿಗೆ ಅಂತಿಮ ತೆರೆ ಎಳೆಯುವಲ್ಲಿ ರೋನಾಲ್ಡ್‌ ರೇಗನ್‌ ನೀತಿಗಳು ಮೂಲ ಕಾರಣ. ಇದು ಕ್ಲಿಂಟನ್‌ ಸಾಧನೆಯಲ್ಲ.

ಎಲ್ಲ ಕಾರ್ಮಿಕರ ಹೆಸರಲ್ಲಿ : ಆದರೆ ಗೋರ್‌ ಅವರಿಗೆ ಈ ಎಲ್ಲ ಮೂಲ ನೀತಿಗಳ ಅರಿವಿದ್ದಂತಿಲ್ಲ. ಆದ್ದರಿಂದ ಅವರಿಗೆ ಸರಕಾರವೊಂದು ಆರ್ಥಿಕ ಬೆಳವಣಿಗೆಯನ್ನು ದಿಢೀರ್‌ ಆಗಿ ಬದಲಿಸಲು ಅಥವಾ ನಾಶ ಮಾಡಲು ಸಾಧ್ಯವಿಲ್ಲ ಎಂಬ ಸತ್ಯ ಅರಿವಾಗಿಲ್ಲ.

ವ್ಯವಸ್ಥೆಯಾಂದನ್ನು ದಿಢೀರ್‌ ಬದಲಿಸಲು ಯಾರಿಗೂ ಹಕ್ಕಿಲ್ಲ. ಈ ನಿಟ್ಟಿನಲ್ಲಿ ರೂಪಿತವಾಗುವ ವಿದೇಶಾಂಗ ನೀತಿಗಳು ರಾಷ್ಟ್ರೀಯ ಉದ್ಯಮಕ್ಕೆ ಕುತ್ತು ತರುತ್ತವೆ. ಇದರ ಪರಿಣಾಮ ಎಲ್ಲದರ ಮೇಲೆ ಆಗುತ್ತದೆ. ಅಭಿವೃದ್ಧಿಯ ಬೀಜಮಂತ್ರ ತಮ್ಮ ಮೊದಲ ಆದ್ಯತೆ ಎಂದು ಹೇಳುತ್ತಿರುವ ಗೋರ್‌ ಅವರು ಕಳೆದ ಕೆಲವು ದಿನಗಳಿಂದ ನೀಡುತ್ತಿರುವ ಹೇಳಿಕೆಗಳು ಅನುಮಾನ ಹುಟ್ಟಿಸುತ್ತವೆ. ಆಲ್‌ಗೋರ್‌ ಉದ್ಯಮಿಗಳ ಶತ್ರುವಿನಂತೆ ಕಾಣುತ್ತಿದ್ದಾರೆ.

ಅಂತಿಮವಾಗಿ ಉಳಿಯುವ ಪ್ರಶ್ನೆ ಒಂದೆ. ರಾಷ್ಟ್ರದ ಈಗಿನ ಅಭಿವೃದ್ಧಿಯ ಆಧಾರ ಸ್ಥಂಭಗಳಾದ ಉದ್ಯಮಿಗಳ ಮೇಲೆ ಕಾರ್ಮಿಕ ಕುಟುಂಬಗಳ ಹೆಸರಲ್ಲಿ ಸಮರ ಸಾರಿರುವ ಗೋರ್‌ ಅವರನ್ನು ಏಕೆ ಆರಿಸಬೇಕು ಎಂಬುದು. ಗೋರ್‌ ಅವರ ಈಗಿನ ಧೋರಣೆ ಎಂಥದೆಂದರೆ ಬಂಗಾರದ ಮೊಟ್ಟೆ ಇಡುವ ಕೋಳಿಯನ್ನು ಒಮ್ಮೆಲೆ ಶ್ರೀಮಂತನಾಗಬೇಕೆಂಬ ಹಂಬಲದಿಂದ ಕೊಯ್ದಂತೆ. ಇದರಲ್ಲಿ ಅನುಮಾನ ಬೇಡ.

(ಐಎಎನ್‌ಎಸ್‌)

*ದಿನೇಶ್‌ ಡಿಸೋಜಾ ಅವರು ವೈಟ್‌ ಹೌಸ್‌ನಲ್ಲಿ ಸ್ಥಳೀಯ ನೀತಿಗಳ ವಿಶ್ಲೇಷಣೆಕಾರರಾಗಿ ಕೆಲಸ ಮಾಡಿದ್ದಾರೆ. ಈಗ ಅಮೇರಿಕದ ಉದ್ಯಮ ಸಂಸ್ಥೆಗಳ ಸಂಶೋಧನಾ ತಜ್ಞರಾಗಿ ಕೆಲಸ ಮಾಡುತ್ತಿದ್ದಾರೆ

ಮುಖಪುಟ / ಲೋಕೋಭಿನ್ನರುಚಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X