ಐದ-ನೇ ಸಂಧಾನಕ್ಕೆ ಕಾಡಿಗೆ ತೆರಳಿದ ಗೋಪಾಲ್‌ಅ-ಕ್ಟೋ-ಬ-ರ್.11ಕ್ಕೆ ಮುಂಚೆ ಸಂಧಾ-ನ ಮುಗಿ-ಯು-ವ ಲ-ಕ್ಷ-ಣ-ಗ-ಳಿ-ಲ್ಲ
ಬೆಂಗಳೂರು:ರಾಜ್ ಹಾಗೂ ಇತರ ಇಬ್ಬರು ಸಹಚರರ ಬಿಡುಗಡೆಗೆ ಸಂಬಂಧಿಸಿ ಕರ್ನಾಟಕ ಹಾಗೂ ತಮಿಳುನಾಡು ಸರಕಾರಗಳ ನಿರ್ಧಾರದಂತೆ ನಕ್ಕಿರನ್ ಸಂಪಾದಕ ಆರ್. ಆರ್. ಗೋಪಾಲ್ ಅವರು ಐದನೇ ಬಾರಿಗೆ ಕಾಡಿ-ಗೆ ತೆರಳಿದ್ದಾರೆ.
ಈ ವಿಷಯವನ್ನು ಖಚಿತಪಡಿಸಿರುವ ನಕ್ಕೀರನ್ ಪತ್ರಿಕೆ ಮೂಲಗಳು , ವೀರಪ್ಪನ್‌ನಿಂದ ಮುಂದಿನ ಸಂದೇಶ ಬರುವವರೆಗೆ ಸತ್ಯಮಂಗಳಮ್ ಅರಣ್ಯದಲ್ಲಿ ಗೋಪಾಲ್ ಕಾಯುತ್ತಾರೆ ಎಂದು ತಿಳಿಸಿವೆ.
ಸೆ. 28ರಂದು ವೀರಪ್ಪನ್ ಜೊತೆ ನಾಲ್ಕನೇ ಬಾರಿಗೆ ಸಂಧಾನ ನಡೆಸುತ್ತಿದ್ದಾಗ ಅಪಹೃತರಲ್ಲೊಬ್ಬರಾದ ನಾಗಪ್ಪ ತಪ್ಪಿಸಿಕೊಂಡಿದ್ದರಿಂದ ಸಂಧಾನ ವಿಫಲವಾಯಿತು ಎಂದು ಗೋಪಾಲ್ ಈ ಮುಂಚೆ ಹೇಳಿದ್ದರು. ಅಕ್ಟೋಬರ್ 11ರಂದು ಸುಪ್ರೀಂಕೋರ್ಟ್‌ನಲ್ಲಿ ಟಾಡಾ ಬಂಧಿಗಳ ಬಿಡುಗಡೆ ಕುರಿತು ವಿಚಾರಣೆ ಇರುವುದರಿಂದ ಐದನೇ ಸಂಧಾನ ಅಕ್ಟೋಬರ್ 11ಕ್ಕೆ ಮುಂಚೆ ಮುಗಿಯುವ ಲಕ್ಷಣಗಳಿಲ್ಲ ಎಂದು ಹೇಳಲಾಗಿದೆ.
ವಿಚಾರಣೆ: ಅಕ್ಟೋಬರ್ 11ರಂದು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ಇರುವ ಹಿನ್ನಲೆಯಲ್ಲಿ ಅಡ್ವೋಕೇಟ್ ಜನರಲ್ ಎನ್. ಜಯರಾಮ್ ಅವರು ಶನಿವಾರ ದೆಹಲಿಗೆ ತೆರಳಿದ್ದಾರೆ. ಟಾಡಾ ಕೈದಿಗಳ ಬಿಡುಗಡೆಗೆ ಜಿಲ್ಲಾ ನ್ಯಾಯಾಲಯ ಜಾಮೀನು ನೀಡಲು ಒಪ್ಪಿರುವುದನ್ನು ತಡೆಹಿಡಿದಿರುವ ಸುಪ್ರೀಂಕೋರ್ಟ್‌ಗೆ ತಮಿಳುನಾಡು ಹಾಗೂ ಕರ್ನಾಟಕ ಸರಕಾರಗಳು ಈಗಾಗಲೇ ಪ್ಲೀಡಿಂಗ್ಸ್ ಸಲ್ಲಿಸಿವೆ. ರಾಜ್ಯದ ಪಬ್ಲಿಕ್ ಪ್ರಾಸಿಕ್ಯೂಟರ್ ಮೋಹನ ಶಾಂತನಗೌಡರ್ ಮತ್ತು ಮೈಸೂರು ನ್ಯಾಯಾಲಯದಲ್ಲಿ ಸರಕಾರದ ಪರವಾಗಿ ವಾದಿಸುತ್ತಿರುವ ಅಶ್ವಿನ್‌ಕುಮಾರ್ ಸೋಮವಾರ ರಾತ್ರಿ ದೆಹಲಿಗೆ ತೆರಳುವ ನಿರೀಕ್ಷೆ ಇದೆ.
ಮುಖ್ಯಮಂತ್ರಿ ವಿಶ್ವಾಸ (ಮೈಸೂ-ರು ವರ-ದಿ) : ಸರಕಾರಗಳ ದೂತ ಗೋಪಾಲ್ ಅವರ ಸಂಧಾನಗಳು ವಿಫಲವಾಗಿವೆ ಎಂಬುದನ್ನು ನಿರಾಕರಿಸಿರುವ ಮುಖ್ಯಮಂತ್ರಿ ಕೃಷ್ಣ ಅವರು, ರಾಜ್ ಅವರ ಸುರಕ್ಷಿತ ಬಿಡುಗಡೆ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕೆ.ಆರ್.ಎಸ್‌ನಲ್ಲಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿದ ನಂತರ ಕೃಷ್ಣ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
(ಇನ್ಫೋ ವರ-ದಿ)
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications