ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹತ್ತೇ ದಿನಗಳಲ್ಲಿ ವಾಜಪೇಯಿ ನಡೆಯಲಿದ್ದಾರೆ- ರಾಣಾವತ್‌ ಭರವಸೆ

By Staff
|
Google Oneindia Kannada News

ಮುಂಬೈ : ಸೋಮವಾರ ಸಂಜೆ ವಾಜಪೇಯಿ ಅವರ ಸರಣಿ ವೈದ್ಯಕೀಯ ಪರೀಕ್ಷೆಗಳು ಮುಗಿದ ನಂತರ ಶಸ್ತ್ರಚಿಕಿತ್ಸೆ ಮಾಡಲಿರುವ ವೈದ್ಯ ಡಾ. ಚಿತ್ತರಂಜನ್‌ ರಾಣಾವತ್‌ ವಾಜಪೇಯಿ ಜೊತೆ ಬ್ರಿಚ್‌ ಕ್ಯಾಂಡಿ ಆಸ್ಪತ್ರೆಯಲ್ಲಿ ಚರ್ಚೆ ನಡೆಸಿದರು.

‘ವಾಜಪೇಯಿ ಅವರು ಮಾನಸಿಕವಾಗಿ ಲವಲವಿಕೆಯಿಂದಿದ್ದಾರೆ. 7 ಕ್ಲಿನಿಕಲ್‌ ಟೆಸ್ಟ್‌ಗಳನ್ನು ಸೋಮವಾರ ಸಂಜೆ ಅವರಿಗೆ ಮಾಡಲಾಗಿದೆ. ಮಂಗಳವಾರ ಮುಂಜಾನೆ 9.30 ಗಂಟೆಗೆ ಶಸ್ತ್ರಚಿಕಿತ್ಸೆ ಪ್ರಾರಂಭವಾಗಲಿದ್ದು, ಸುಮಾರು ಒಂದು ತಾಸು ನಡೆಯಲಿದೆ. ಇದು ಮೇಜರ್‌ ಆಪರೇಷನ್‌ ಆದರೂ, ಯಾವುದೇ ತೊಂದರೆಯಿಲ್ಲದೆ ನಡೆಯಲಿದ್ದು, 10 ದಿನಗಳಲ್ಲಿ ಪ್ರಧಾನಿ ವಾಕಿಂಗ್‌ ಸ್ಟಿಕ್‌ ಸಹಾಯದಿಂದ ನಡೆಯಬಹುದಾಗಿದೆ’ ಎಂದು ರಾಣಾವತ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X