ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರೋಬಿಕ್ಸ್‌ ಅಂತರರಾಷ್ಟ್ರೀಯ ಸ್ಪರ್ಧೆಗೆ ಮೈಸೂರಿನ ದಂತವೈದ್ಯೆ

By Staff
|
Google Oneindia Kannada News

ಮೈಸೂರು : ಏರೋಬಿಕ್ಸ್‌ ಎಂದಾಕ್ಷಣ ಫಿಟ್‌ನೆಸ್‌ನ ಒಂದು ತಂತ್ರ ಅಂದುಕೊಳ್ಳುವವರೇ ನಮ್ಮಲ್ಲಿ ಹೆಚ್ಚು. ನಮ್ಮ ದೇಶದಲ್ಲಿ ಇದೊಂದು ಸ್ಪರ್ಧೆಯಾಗಿ ಇನ್ನೂ ಶೈಶಾವಸ್ಥೆಯಲ್ಲೇ ಇದೆ. ಈ ನಡುವೆಯೂ ಕನ್ನಡತಿ ಡಾ. ಅನುರಾಧ ಕೆ.ಎನ್‌. ವಾರಾಂತ್ಯದಲ್ಲಿ ಅಂತರರಾಷ್ಟ್ರೀಯ ಏರೋಬಿಕ್ಸ್‌ ಸ್ಪರ್ಧೆಯಲ್ಲಿ ಭಾಗವಹಿಸಲು ಅಮೆರಿಕೆಗೆ ಹಾರಲಿದ್ದಾರೆ.

ದಂತವೈದ್ಯೆಯಾಗಿರುವ 28 ವರ್ಷದ ಅನುರಾಧ ಕಳೆದೆರಡು ವರ್ಷಗಳಿಂದ ರಾಷ್ಟ್ರೀಯ ಚಾಂಪಿಯನ್‌. ಜಿಮ್ನ್ಯಾಶಿಯಂನಿಂದ ಏರೋಬಿಕ್ಸ್‌ನತ್ತ ಅವರು ಜಿಗಿದದ್ದೇ ಇಂದು ಅವರಿಗೆ ವರವಾಗಿದೆ. ‘ನಾನು ಚಿಕ್ಕವಳಿದ್ದಾಗಲೇ ಜಿಮ್ನ್ಯಾಶಿಯಂ ಸೇರಿದ್ದೆ. 1995ರಲ್ಲಿ ನನಗೆ ಪೆಟ್ಟಾಯಿತು. ಫಿಟ್‌ ಆಗಿರಲು ನಾನು ಏನಾದರೊಂದು ಮಾಡಲೇಬೇಕಾಯಿತು. ಏರೋಬಿಕ್ಸ್‌ ಆಯ್ದುಕೊಂಡೆ. ಈಗ ಅದು ಕ್ರೀಡಾಪಟುವಾಗಿ ಗುರ್ತಿಸಿಕೊಳ್ಳಲು ಅವಕಾಶ ಮಾಡಿ ಕೊಟ್ಟಿದೆ’ ಎಂದು ಅನುರಾಧ ಹೇಳುವಾಗ ಸಂತೋಷ ಉಕ್ಕುತ್ತದೆ.

‘ಹಿಂದೆ ಅಥ್ಲೀಟ್‌ಗಳಾಗಿದ್ದವರು ತಮ್ಮ ದೇಹದ ಫಿಟ್‌ನೆಸ್‌ ಕಾಯ್ದುಕೊಳ್ಳಲು ಏರೋಬಿಕ್ಸ್‌ ಉತ್ತಮ ಅವಕಾಶ. ಇದಕ್ಕೆ ಹೆಚ್ಚು ಹೆಚ್ಚು ಜನ ಸೇರಬೇಕು. ದೈಹಿಕ ಸಾಮರ್ಥ್ಯ, ಸಮತೋಲನ ಹಾಗೂ ಆಟದ ಲಯ ಕಾಯ್ದುಕೊಳ್ಳಲು ಈ ಕ್ರೀಡೆ ಉತ್ತಮವಾದದ್ದು’ ಎನ್ನುತ್ತಾರೆ ಸಂಚಾಲಕ ಎಂ.ಕಾಮತ್‌.

ನ್ಯಾಷನಲ್‌ ಸ್ಫೋರ್ಟ್‌ ಡಾನ್ಸಿಂಗ್‌ ಮತ್ತು ಫಿಟ್‌ನೆಸ್‌ ಫೆಡರೇಷನ್‌ ನಡೆಸಿದ ರಾಷ್ಟ್ರೀಯ ಕ್ರೀಡೆಗಳಲ್ಲಿ 2 ವರ್ಷಗಳಿಂದ ಅನುರಾಧ ಚಾಂಪಿಯನ್‌ ಪಟ್ಟ ಬಿಟ್ಟು ಕೊಟ್ಟಿಲ್ಲ. ಏರೋಬಿಕ್ಸ್‌ ಕೂಡ 1.45 ನಿಮಿಷಗಳ ರುಟೀನ್‌. ಅದರಲ್ಲೇ ನಿಮ್ಮ ಮೊನಚು, ಹೊಸತನ ತೋರಬೇಕಷ್ಟೆ. ಹಾಗೆ ಮಾಡಲು ಸತತ ಪರಿಶ್ರಮ ಬೇಕೇ ಬೇಕು ಎಂಬುದು ಅನುರಾಧ ಅವರ ಅನುಭವದ ಮಾತು.

ಸೋಂಕೊಂದರ ತೊಂದರೆ ಅನುಭವಿಸುತ್ತಿರುವ ಅನುರಾಧಗೆ ಇನ್ನೂ ವೀಸಾ ಸಿಕ್ಕಿಲ್ಲ. ಯಾವುದಾದರೂ ಪ್ರಾಯೋಜಕರ ಬರುವಿನ ನಿರೀಕ್ಷೆಯಲ್ಲಿರುವ ಅವರು ಪ್ರತಿಭೆ ಎನ್ನುವುದರಲ್ಲಿ ಎರಡು ಮಾತಿಲ್ಲ. ತನ್ನ ಸಾಧನೆಗಳು ಇಂಥ ಸಮಸ್ಯೆಗಳನ್ನು ಚಿಟಿಕೆ ಹೊಡೆಯುವಷ್ಟರಲ್ಲಿ ಹೊಡೆದೋಡಿಸುತ್ತವೆಂಬ ಭರವಸೆ ಹೊತ್ತಿರುವ ಅನುರಾಧಗೆ ಆಲ್‌ ದಿ ಬೆಸ್ಟ್‌ .

(ಮೈಸೂರು ಪ್ರತಿನಿಧಿಯಿಂದ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X