ಮಂಚಿ ಶಾಲೆ-ಗೆ ಪ್ರಧಾ-ನಿ ಕೊಟ್ಟ ಕಂಪ್ಯೂ-ಟ-ರ್ -ಕಾ-ಣೆ-ಯಾ-ದ-ದ್ದೆ-ಲ್ಲಿ ?
ಮಂಗಳೂರು : ಎರಡು ವರ್ಷಗಳ ಹಿಂದೆ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ , ದಕ್ಷಿಣ ಕನ್ನಡ ಜಿಲ್ಲೆಯ ಮಂಚಿ ಸರಕಾರಿ ಪ್ರೌಢ ಶಾಲೆಗೆ ನೀಡಿದ ಕಂಪ್ಯೂಟರ್ ಇನ್ನೂ ಬಂದಿಲ್ಲ. ದೇವ-ರು ನೀಡಿ-ದ ಪ್ರಸಾ-ದ, ಮಧ್ಯವ-ರ್ತಿ-ಗ-ಳಿಂ-ದಾ-ಗಿ ಭಕ್ತ-ರಿ-ಗೆ ತಲು-ಪ-ದ ಕತೆ ಇಲ್ಲಿ-ಯ-ದು. ತಮಾ-ಷೆ-ಯೆಂ-ದ-ರೆ, ಈವ-ರೆ-ಗೆ ಮಧ್ಯ-ವ-ರ್ತಿ-ಗ-ಳ ಸುಳಿ-ವು ನಿಗೂ-ಢ-ವಾ-ಗಿ-ದೆ.
-ಮಂ-ಚಿ ಶಾಲೆಯ ಅಧ್ಯಾಪಕರು, ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಅದಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಕಿಯೋನಿಕ್ಸ್ ಆಡಳಿತ ನಿರ್ದೇಶಕರಿಗೆ ಪತ್ರಗಳ ಮೇಲೆ ಪತ್ರಗಳನ್ನು ರವಾನಿಸುತ್ತಿದ್ದಾರೆ.ಆದರೆ, ಕಂಪ್ಯೂಟರ್ ಇನ್ನೂ ಪತ್ತೆಯಾಗಿಲ್ಲ.
1998ರಲ್ಲಿ ಬೆಂಗಳೂರಿನಲ್ಲಿ ನಡೆದ ಐಟಿ ಕಾಂ-98ರಲ್ಲಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಮಂಚಿ ಶಾಲೆಯ ಅಧ್ಯಾಪಕ ರಾಧಾ ಕೃಷ್ಣ ರಿಗೆ ಸಾಂಕೇತಿಕವಾಗಿ ಕಂಪ್ಯೂಟರನ್ನು ಹಸ್ತಾಂತರಿಸಿದ್ದರು. ಆಗಿನ ಮುಖ್ಯಮಂತ್ರಿ ಜೆ.ಹೆಚ್.ಪಟೇಲ್, ಉಪ ಮುಖ್ಯಮಂತ್ರಿ ಸಿದ್ಧ ರಾಮಯ್ಯ, ಅಂದಿನ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ. ಮೊೖದೀನ್, ಆಗಿನ ರಾಜ್ಯಪಾಲ ಖುರ್ಷಿದ್ ಆಲಂ ಖಾನ್ ಸಮ್ಮುಖದಲ್ಲಿ ಈ ಕಂಪ್ಯೂಟರನ್ನು ಹಸ್ತಾಂತರಿಸಲಾಗಿತ್ತು.
ಪ್ರಧಾನಿಯವರ, ಕಂಪ್ಯೂಟರ್ ಸಾಕ್ಷರತೆ ಕುರಿತ ಕಾರ್ಯಪಡೆ ಉಡುಪಿ, ದ.ಕ. ಜಿಲ್ಲೆಗಳನ್ನು , ದೇಶದ ಕಂಪ್ಯೂಟರ್ ಸಾಕ್ಷರ ಜಿಲ್ಲೆಯೆಂದು ಗುರುತಿಸಿ ಈ ಕಂಪ್ಯೂಟರನ್ನು ನೀಡಲಾಗಿತ್ತು. ಮಂಚಿ ಶಾಲೆಯ ಅಧ್ಯಾಪಕರು ಮತ್ತು ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳು ಕಂಪ್ಯೂಟರ್‌ಗಾಗಿ ಕೊಠಡಿಯಾಂದನ್ನು ಸಿದ್ಧ ಪಡಿಸಿ ಕಳೆದೆರಡು ವರ್ಷಗಳಿಂದ ಕಾಯುತ್ತಿದ್ದಾರೆ. ಈಗಲೂ ಕಾಯುತ್ತಿದ್ದಾರೆ.
ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಯವರನ್ನು ಸಂಪರ್ಕಿಸಿದರೆ, ಸರಕಾರ ಕಂಪ್ಯೂಟರ್ ಕೊಟ್ಟಿರುವುದು ನಿಜ. ಆದರೆ ಅದು ಎಲ್ಲಿದೆ ಎಂದು ಪತ್ತೆ ಹಚ್ಚಲು ಕಿಯೋನಿಕ್ಸ್ ಜೊತೆ ಪತ್ರ ವ್ಯವಹಾರ ನಡೆಸುತ್ತಿದ್ದೇವೆ ಎನ್ನುತ್ತಾರೆ. ಶಿಕ್ಷಣ ಇಲಾಖೆಯ ಪತ್ರ ಕಿಯೋನಿಕ್ಸ್ ಕಚೇರಿ ತಲುಪಿ, ಇಲಾಖೆ ಮರು ಉತ್ತರ ಪಡೆಯಲು ಎರಡು ವರ್ಷ ಯಾಕೆ ಸಾಕಾಗುವುದಿಲ್ಲ ಎನ್ನುವುದು ಮಂಚಿ ಶಾಲೆಯ ಅಧ್ಯಾಪಕರಿಗೆ ಇನ್ನೂ ಅರ್ಥವಾಗಿಲ್ಲ.
-ಅಂ-ತಿಂ-ಥ-ದ್ದ-ಲ್ಲ ಮಂಚಿ ಶಾಲೆ : ಮಂಚಿ ಶಾಲೆ, ಗ್ರಾಮಾಂತರ ಪ್ರದೇಶದ ಅತ್ಯುತ್ತಮ ಸರಕಾರಿ ಪ್ರೌಢ ಶಾಲೆ ಎಂದು ರಾಜ್ಯಪಾಲರಿಂದ ಪ್ರಶಂಸೆಗೊಳಗಾಗಿದೆ. ಈ ವರ್ಷ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದ ಆಶಾ ಸಿ.ಎಸ್. ಗ್ರಾಮಾಂತರ ಪ್ರದೇಶದ ರಾಜ್ಯ ಮಟ್ಟದ ಪ್ರತಿಭಾವಂತ ವಿದ್ಯಾರ್ಥಿನಿ ಎಂದು ರಾಜ್ಯಪಾಲರಿಂದ ಪುರಸ್ಕಾರ ಪಡೆದಿದ್ದಾಳೆ. ಶಾಲೆಯ ಸ್ಕೌಟ್ಸ್ -ಗೈಡ್ಸ್ ಘಟಕ ರಾಷ್ಟ್ರಪತಿ ಮತ್ತು ರಾಜ್ಯಪಾಲರ ಮನ್ನಣೆಗೆ ಪಾತ್ರವಾಗಿದೆ. 1997-98ರಲ್ಲಿ ಈ ಶಾಲೆ ಬಂಟ್ವಾಳ ತಾಲೂಕಿನ ಉತ್ತಮ ಶಿಕ್ಷಣ ಸಂಸ್ಥೆಯೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಮನ್ನಿಸಲ್ಪಟ್ಟರೆ, 98-99ರಲ್ಲಿ ತಾಲೂಕು ಕ್ರೀಡಾ ಕೂಟದಲ್ಲಿ ಪ್ರಥಮ ಸ್ಥಾನ ಪಡೆದಿದೆ. 1977ರಲ್ಲಿ ಸ್ಥಾಪನೆಯಾಗಿರುವ ಈ ಶಾಲೆಯಲ್ಲಿ ಪ್ರಸ್ತುತ 416 ವಿದ್ಯಾರ್ಥಿಗಳಿದ್ದಾರೆ. ಆದ-ರೆ, 13 ಕೊಠಡಿಗಳ ಶಾಲಾ ಕಟ್ಟಡ ಶಿಥಿಲಾವಸ್ಥೆಯಲ್ಲಿದೆ. ಹೊಸ ಕಟ್ಟಡ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆ ಶಿಫಾರಸು ಮಾಡಿದ್ದರೂ, ಮಂಚಿ ಶಾಲೆಯವರಿಗೆ ಶಿಫಾರಸುಗಳೆಂದರೆ ಏನೂ ಖುಷಿಯಾಗುವುದಿಲ್ಲ. ಕ್ರೀಡಾಂಗಣ, ಸಭಾಂಗಣ, ಉತ್ತಮ ಕ್ಲಾಸ್ ರೂಂ- ಪ್ರಯೋ-ಗ ಶಾಲೆಗಳು ಮಂಚಿ ಶಾಲೆಯಲ್ಲಿಲ್ಲ.
ಬೆಂಗಳೂರಿನಲ್ಲಿ ಸಿಕ್ಕ ಕಂಪ್ಯೂಟರ್ ಉಡುಗೊರೆ ಮಂಚಿಗೆ ಬರಲಿಲ್ಲ. ಕನಿ-ಷ್ಠ , ಉಡು-ಗೊ-ರೆ ಎಲ್ಲಿ ದಾರಿ ತಪ್ಪಿ-ತು ಎನ್ನು-ವು-ದೂ ಪತ್ತೆ-ಯಾ-ಗಿ-ಲ್ಲ . ಬಾ-ಯಿ-ಗೆ ಬರ-ದ ತುತ್ತಿ-ನ ಬಗೆ-ಗೆ ಶಾಲೆ-ಯ ವಿದ್ಯಾ-ರ್ಥಿ-ಗ-ಳು, ಶಿಕ್ಷ-ಕ-ರಿಗೆ ವಿಷಾ-ದ-ವಿ-ದೆ. ಈ ವಿಷಾ-ದ ಒಂದು ಶಾಲೆ-ಯ-ದು ಮಾತ್ರ-ವ-ಲ್ಲ , ಇಡೀ ಶಿಕ್ಷ-ಣ ವ್ಯವ-ಸ್ಥೆ-ಯ-ದು ಎನ್ನು-ವು-ದೇ ಈ ಹೊತ್ತಿ-ನ ದುರಂ-ತ.
(ಮಂಗಳೂರು ಪ್ರತಿನಿಧಿಯಿಂದ)
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications