ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಳಿಗಾಲದ ಅಧಿವೇಶನದಲ್ಲಿ ‘ವಿದ್ಯುತ್‌ ಮಸೂದೆ 2000’ ಮಂಡನೆ

By Staff
|
Google Oneindia Kannada News

ನವದೆಹಲಿ : ವಿದ್ಯುತ್‌ ಕ್ಷೇತ್ರದ ಅಭಿವೃದ್ಧಿಗೆ ಸಾರ್ವಜನಿಕ ವಲಯಗಳು ಭಾಗಿಯಾಗಲು ಇರುವ ಅಡೆತಡೆಗಳನ್ನು ನಿರ್ಮೂಲನೆ ಮಾಡಲು ನವೆಂಬರ್‌ ತಿಂಗಳ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಹೊಸ ವಿದ್ಯುತ್‌ ಮಸೂದೆಯನ್ನು ಮಂಡಿಸಲಾಗುವುದು.

ಹೊಸ ಮಸೂದೆ ಕರಡನ್ನು ಮಂತ್ರಿಮಂಡಲ ಪರಿಶೀಲಿಸಿದ್ದು, ಮಸೂದೆ ಜಾರಿಗೆ ಒಪ್ಪಿಗೆ ನೀಡಿದೆ. ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ‘ವಿದ್ಯುತ್‌ ಮಸೂದೆ -2000’ ಜಾರಿಗೆ ಬರಲಿದೆ ಎಂದು ಕೇಂದ್ರ ವಿದ್ಯುತ್‌ ಖಾತೆ ರಾಜ್ಯ ಸಚಿವ ಜಯವಂತಿಬೇನ್‌ ಮೆಹ್ತ 3ನೇ ಭಾರತ ವಿದ್ಯುತ್‌ ವೇದಿಕೆಯನ್ನು ಉದ್ದೇಶಿಸಿ ಮಂಗಳವಾರ ಮಾತನಾಡುತ್ತಾ ತಿಳಿಸಿದರು.

ವಿದ್ಯುತ್‌ ಪ್ರಸರಣ ಮತ್ತು ಖರೀದಿ ಕುರಿತ ಹೊಸ ಖಾತರಿ ಯೋಜನೆ ಸಿದ್ಧವಾಗಿದ್ದು, ಅದಕ್ಕೆ ಸಚಿವ ಸಂಪುಟದ ಒಪ್ಪಿಗೆ ಬೇಕಾಗಿದೆ. ಈ ಒಪ್ಪಿಗೆ ದೊರೆತಲ್ಲಿ ನೆನೆಗುದಿಗೆ ಬಿದ್ದಿರುವ ವಿದ್ಯುತ್‌ ಯೋಜನೆಗಳಿಗೆ ಮರುಜೀವ ಬರಲಿದೆ. 2012ರ ಹೊತ್ತಿಗೆ ಒಂದು ಲಕ್ಷ ಮೆಗಾವ್ಯಾಟ್‌ ಹೆಚ್ಚುವರಿ ವಿದ್ಯುತ್‌ ಉತ್ಪಾದಿಸುವ ಸರ್ಕಾರದ ಕನಸು ನನಸಾಗಲಿದೆ ಎಂದರು.

ಅಕ್ರಮ ವಿದ್ಯುತ್‌ ಬಳಕೆ ತಡೆಗಟ್ಟಲು ಮುಂದಿನ ವರ್ಷದೊಳಗೆ ದೇಶಾದ್ಯಂತ 42 ಸಾವಿರ ಹೊಸ ಮೀಟರ್‌ಗಳನ್ನು ಅಳವಡಿಸಲಾಗುವುದು. ವಿದ್ಯುತ್‌ ಕಳ್ಳರನ್ನು ಪತ್ತೆ ಮಾಡಿ, ತಕ್ಕ ಶಾಸ್ತಿ ಮಾಡಲಾಗುವುದು ಎಂದು ಹೇಳಿದರು.

(ಐಎಎನ್‌ಎಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X