ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂಜಿನಿಯರಿಂಗ್‌ ಸಂಶೋಧನಾ ಕೇಂದ್ರಕ್ಕೆ6 ಕೋಟಿ ವೆ-ಚ್ಚ-ದ-ಲ್ಲಿ ಕಾಯಕಲ್ಪ

By Staff
|
Google Oneindia Kannada News

ಬೆಂಗಳೂರು : 6 ಕೋಟಿ ರುಪಾಯಿ ವೆಚ್ಚದಲ್ಲಿ ಎಂಜಿ-ನಿ-ಯ-ರಿಂ-ಗ್‌ ಸಂಶೋಧನಾ ಕೇಂದ್ರವನ್ನು ಪುನಶ್ಚೇತನಗೊಳಿಸುವಂತೆ ಕೆ. ವೆಂಕ-ಟ-ರಾ-ವ್‌ ಸಮಿ-ತಿ ಸರ್ಕಾ-ರ-ಕ್ಕೆ ಶಿಫಾರಸು ಮಾಡಿದೆ.

ಎಂಜಿನಿಯರಿಂಗ್‌ ಸಂಶೋಧನಾ ಕ್ಷೇತ್ರವ-ನ್ನು ಅಭಿವೃದ್ಧಿಪ-ಡಿ-ಸ-ಲು ಅಧ್ಯಯನಕ್ಕಾಗಿ ನೇಮಿಸಿದ್ದ , ನಿವೃತ್ತ ಎಂಜಿನಿಯರ್‌ ಇನ್‌ ಚೀಫ್‌ ಕೆ. ವೆಂಕಟರಾವ್‌ ನೇತೃತ್ವದ ತಜ್ಞರ ಸಮಿತಿ ಗುರುವಾರ ಸ-ರ್ಕಾರಕ್ಕೆ ವರದಿ ಸಲ್ಲಿಸಿದೆ. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಮಾಡಲಾಗುವ ಕಟ್ಟಡಗಳ ಗುಣಮಟ್ಟ ಪರೀಕ್ಷೆಯನ್ನು ಎಂಜಿ-ನಿ-ಯ-ರಿಂ-ಗ್‌ ಸಂಶೋಧನಾ ಕೇಂದ್ರದಿಂದಲೇ ಮಾಡಿಸುವಂತೆ ಸಮಿ-ತಿ ಸರ್ಕಾ-ರ-ಕ್ಕೆ ಸಲ-ಹೆ ನೀಡಿ-ದೆ.

ಎಂಜಿನಿಯರಿಂಗ್‌ ಸಂಶೋಧನಾ ಕೇಂದ್ರ ಕೃಷ್ಣರಾಜಸಾಗರದಲ್ಲಿದ್ದು, ಈ ಕೇಂದ್ರಕ್ಕೆ ಕಾಯಕಲ್ಪ ನೀಡುವ ನಿಟ್ಟಿನಲ್ಲಿ 11 ಮಂದಿ ತಜ್ಞರ ತಂಡವನ್ನು ನೇಮಿಸಲಾಗಿತ್ತು. ಈ ತಂಡ ಅಧ್ಯಯನ ನಡೆಸಿ ತನ್ನ ಶಿಫಾರಸುಗಳನ್ನು ಸ-ರ್ಕಾರಕ್ಕೆ ಸಲ್ಲಿಸಿದೆ ಎಂದು ಬೃಹತ್‌ ನೀರಾವರಿ ಸಚಿವ ಎಚ್‌. ಕೆ. ಪಾಟೀಲ್‌ ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X