ಜನರಿಗೆ ನಿರಾಸೆ ತಂದ ಕ್ರೋನಿಯೆ ಟಿವಿ ಸಂದರ್ಶನ
ಜೋಹಾನ್ಸ್ಬರ್ಗ್ : ಕಿಂಗ್ ಆಯೋಗದ ಮುಂದೆ ಹಾಜರಾದ ನಂತರ ಕ್ರೋನಿಯೆ ನೀಡಿದ ಮೊದಲ ಟಿವಿ ಸಂದರ್ಶನ ಜನರಿಗೆ ನಿರೀಕ್ಷಿಸಿದಷ್ಟು ಮುದ ನೀಡಲಿಲ್ಲ.
ಗುರುವಾರ ರಾತ್ರಿ ಪ್ರಸಾರವಾದ ಸಂದರ್ಶನದಲ್ಲಿ , ಇಂಥ ಕೆಲಸ ಮಾಡಿದ್ದಕ್ಕೆ ನಿಮಗೆ ವಿಷಾದವಿದೆಯೇ, ಜನ ನಿಮ್ಮ ತಪ್ಪನ್ನು ಹೊಟ್ಟೆಗೆ ಹಾಕಿಕೊಂಡು ಕ್ಷಮಿಸಿದ್ದೇವೆ ಎಂದು ನಿಮ್ಮಲ್ಲಿಗೆ ಬಂದು ಹೇಳುತ್ತಿರುವುದು ನಿಜವೇ ಎಂಬಿತ್ಯಾದಿ ಸವಕಲು ಪ್ರಶ್ನೆಗಳೇ ಕೇಳಿಬಂದವು. ಸಂದರ್ಶಕ, ಆಸ್ಟ್ರೇಲಿಯಾದ ಮಾಜಿ ಆಟಗಾರ ಮೈಕ್ ಹೇಸ್ಮನ್ ಬಹುದಿನಗಳ ನಿರೀಕ್ಷೆ ಹೊತ್ತು ಟಿವಿ ಮುಂದೆ ಕೂತ ಪ್ರೇಕ್ಷಕರ ಉತ್ಸಾಹಕ್ಕೆ ತಣ್ಣೀರೆರಚಿದರು. ಮ್ಯಾಚ್ಫಿಕ್ಸಿಂಗ್ನಿಂದ ಬೇರೆಯೇ ದಾರಿಗೆ ಹೋದ ಸಂದರ್ಶನ ಕ್ರೋನಿಯೆ ಕ್ರಿಕೆಟ್ ಪ್ರೋಫೈಲಾಯಿತು.
ಕಿಂಗ್ ಆಯೋಗದ ವಿಚಾರಣೆಯ ನಂತರ ಕ್ರೋನಿಯೆ ಬಗೆಗಿನ ಜನಾಭಿಪ್ರಾಯವೇ ಬೇರೆಯಾಯಿತು. ಆತನ ವಿರುದ್ಧ ಕೆಂಡ ಕಾರುತ್ತಿದ್ದ ಜನ ಅವನನ್ನು ಕ್ಷಮಿಸಿ ಎನ್ನತೊಡಗಿದರು. ಕ್ರಿಕೆಟ್ ನೀತಿ ಬಗೆಗೆ ಪಾಠ ಹೇಳೋ ಕೆಲಸ ಕೊಡಲೂ ಪ್ರಿಟೋರಿಯಾ ವಿಶ್ವವಿದ್ಯಾಲಯ ಮುಂದಾಯಿತು. ಕಿಂಗ್ ಆಯೋಗದ ಮುಂದೆ ಹೇಳಿರದ ಕೆಲ ವಿಷಯಗಳನ್ನು ಸಂದರ್ಶನದಲ್ಲಿ ಕ್ರೋನಿಯೆ ಬಾಯಿಬಿಡುವಂತೆ ಮಾಡಬಹುದು ಎಂದು ಜನ ನಿರೀಕ್ಷಿಸಿದ್ದರು. ಆದರೆ ಅವರ ನಿರೀಕ್ಷೆ ಈಡೇರಲಿಲ್ಲ.
(ಐಎಎನ್ಎಸ್)
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications