ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೆನಪುಗಳ ವಿಶ್ವಕ್ಕೆ ಕರೆದೊಯ್ಯುವ ಜಾನಪದ ಲೋಕ

By Staff
|
Google Oneindia Kannada News

ರಾಮ-ನ-ಗ-ರ ತಾ-ಲ್ಲೂ-ಕು ಕೇಂದ್ರ-ದಿಂ-ದ ಮೂರೇ ಕಿಲೋ ಮೀಟ-ರು ದೂರದಲ್ಲಿ ನಮ್ಮ ಹಳೆಯ ನೆನಪುಗಳನ್ನು ಕೆದಕುವ ಹೊಸ ಲೋಕವಿದೆ. ಅದುವೇ ಜಾನ-ಪ-ದ ಲೋಕ- . 15 ಎಕೆ-ರ-ಗ-ಳ ವಿಶಾ-ಲ ಆವ-ರ-ಣ-ದ--ಲ್ಲಿ ನೆರ-ಳು ಹಾಸಿ ನಿಂತ ಗಿಡ ಮರ-ಗ-ಳು. --ನ-ಡುನ-ಡುವೆ ಗುರುಕುಲಗಳ ಮಾದರಿಯ ಕುಟೀ-ರ-ಗ-ಳು. ಅ-ಲ್ಲ-ಲ್ಲಿ ಭಗ್ನ-ಗೊಂ-ಡ ಮೂರ್ತಿ-ಗ-ಳು. ಅರ್ಧ ಬೆಂದ ರಥ. ಎರ-ಡು ಎತ್ತು ಹೂಡಿ ಬೀಸು-ತ್ತಿ-ದ್ದ-ರೆ-ನ್ನು-ವ ಪುರಾತನವಾದ ಬೃಹ-ತ್‌ ಬೀಸು-ವಕ-ಲ್ಲು . ಜಾನ-ಪ-ದ ಲೋಕ-ದ ವಿಸ್ತಾ-ರ- ವಿಶೇ-ಷ-ವ-ನ್ನು ಕಂಡೇ ಕಣ್ತುಂಬಿ-ಕೊ-ಳ್ಳ-ಬೇ-ಕು.

ನಶಿ-ಸಿ ಹೋಗು-ತ್ತಿ-ರು-ವ ಜಾನ-ಪ-ದ ಕಲೆ- ಸಾಹಿ-ತ್ಯ-- ಸಂಸ್ಕೃತಿಯ-ನ್ನು ಹಾಗೂ ಜನಪದರು ಬಳಸುತ್ತಿದ್ದ ಹಳೆಯ ಅತಿ ಹಳೆಯ ಸಾಮಾನು - ಸರಂಜಾಮುಗಳನ್ನು ಒಂದೆ-ಡೆ ಕಲೆ-ಹಾ-ಕಿ ಮುಂದಿ-ನ ಪೀಳಿ-ಗೆ-ಗೆ ಪರಿ-ಚ-ಯಿ-ಸು-ವ ಉದ್ದೇಶ-ದಿಂ-ದ ರೂಪಿ-ತ-ವಾ-ದು-ದೇ ಜಾನ-ಪ-ದ ಲೋಕ. ಈ ಲೋಕ-ದ ರೂವಾ-ರಿ ಎಚ್‌.ಎಲ್‌. ನಾಗೇ-ಗೌ-ಡ. ಸೋಬಾ-ನೆ -ಚಿ-ಕ್ಕ-ಮ್ಮ , ದೊಡ್ಡ-ಮ-ನೆ-ಯ ನಾಗೇ-ಗೌ-ಡ-ರೆಂ-ದ-ರೆ ಸಾಹಿ-ತ್ಯ ಓದಿ ಕೊಂಡಿ-ರು-ವ ಜಾಣ-ರಿ-ಗೆ ತ-ಟ್ಟ-ನೇ ಅರ್ಥ-ವಾ-ದೀ-ತು. ಜಾನ-ಪ-ದ-ದ ಬಗೆ-ಗೆ ಅಪಾರ ಕಾ-ಳ-ಜಿ-ಯು-ಳ್ಳ ನಾಗೇ-ಗೌ-ಡರ ಬದು-ಕು ಪೂರ ಜಾನ-ಪ-ದ-ಕ್ಕೇ ಅರ್ಪಿ-ತ.

ಜಾನ-ಪ-ದ ಲೋಕ ಪ್ರಾರಂಭವಾ-ದ-ದ್ದು 1986 ರಲ್ಲಿ . 1979 ರಲ್ಲಿ ಲೋಕ-ಸೇ-ವಾ ಆಯೋ-ಗ-ದ ಸೇವೆ-ಯಿಂ-ದ ನಾಗೇ-ಗೌ-ಡ-ರು ನಿ-ವೃ-ತ್ತ-ರಾ-ದಾ-ಗ ನಡೆ-ದ ನಾಗ-ರಿ-ಕ ಸನ್ಮಾ-ನ ಸಮಾ-ರಂ-ಭ-ದ-ಲ್ಲಿ ಅವ-ರಿ-ಗೆ ಲಕ್ಷ ರುಪಾ-ಯಿ-ಗ-ಳ ನಿಧಿ ಅರ್ಪಿ-ಸ-ಲಾ-ಯಿ-ತು. ಆ ಹಣ-ದ-ಲ್ಲೇ ಕರ್ನಾ-ಟ-ಕ ಜಾನ-ಪ-ದ ಟ್ರಸ್ಟ್‌ ಶುರು ಮಾಡಿ-ದ-ರು. ಜಾನ-ಪ-ದ ಲೋಕ-ದ ಮಾತೃ ಸ್ವರೂಪಿಯೇ ಈ ಟ್ರಸ್ಟ್‌. ಜಾನ-ಪ-ದ ಲೋಕ-ಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾ-ರಗಳು ಸಹಾ-ಯ- ಧ-ನ ನೀಡಿವೆ. ಲೋಕ- - ಜನಾವಲೋಕನಕ್ಕೆ ಯೋಗ್ಯ ತಾಣವಾಗಲು ಹಲ-ವು ಸಂಘ ಸಂಸ್ಥೆ-ಗ-ಳು ಹತ್ತಾ-ರು ರೂಪ-ದ-ಲ್ಲಿ ನೆರ-ವಾ-ಗಿ-ವೆ. ಆದ-ರೆ, ಸಾಗ-ಬೇ-ಕಾ-ದ ದಾರಿ ದೂರ-ವಿ-ದೆ ಎಂದು ನಾಗೇ-ಗೌ-ಡ-ರು ಹೇಳು-ತ್ತಾ-ರೆ.

ಐ-ಎಎ-ಸ್‌ ಅ-ಧಿ-ಕಾ-ರಿ--ಯಾ-ಗಿ-ದ್ದಾ-ಗ, ನಾಗೇ-ಗೌ-ಡ-ರು ನಾಡ-ನ್ನೆ-ಲ್ಲಾ ಸುತ್ತಿ-ದ-ರು. ಕಂಡ ಜಾನ-ಪ-ದ ವಸ್ತು-ಗ-ಳ-ನ್ನೆಲ್ಲಾ ಕಾಡಿ, ಬೇಡಿ ಜಾನ-ಪ-ದ ಲೋಕ-ದ-ಲ್ಲಿ ಜೋಪಾ-ನ-ವಾ-ಗಿ-ಟ್ಟಿ-ದ್ದಾ-ರೆ. ಜಾನ-ಪ-ದ ಲೋಕ ನೋಡ-ಬ-ರು-ವ ಮಕ್ಕ-ಳು- ರಾಗೀ-ಕ-ಲ್ಲು ಅಂದ-ರೆ ಇದೇ-ನಾ ಎಂದು ಕಣ್ಣ-ರ-ಳಿ-ಸು-ವಾ-ಗ ನಾಗೇ-ಗೌ-ಡ-ರ ಮುಖ-ದ-ಲ್ಲಿ ಸಾರ್ಥ-ಕ-ತೆ-ಯ ಭಾವ ಅರ-ಳು-ತ್ತ-ದೆ. ಬ-ಹ-ಳ-ಷ್ಟು ರೈತ-ರ ನೆನ-ಪಿಂ-ದ ಮಾಸಿ-ರು-ವ ಬೇಸಾ-ಯ-ದ ಉಪ-ಕ-ರ-ಣ-ಗ-ಳು, ವಾಡೆ, ಗುಡಾ-ಣ, ಮರ--ದ ಪೆಟ್ಟಿ-ಗೆ-ಗ-ಳು, ಸಟ್ಟು-ಗ, ಬಾಸಿಂ-ಗ, ಸೂತ್ರ-ದ ಗೊಂಬೆ, ತೊಗ-ಲು ಗೊಂಬೆ, ತರೆಹೆವಾ-ರಿ ಆಭ-ರ-ಣ, ಆಯು-ಧ ಇತ್ಯಾದಿ .... ಇತ್ಯಾದಿ.... ಜಾನ-ಪ-ದ ಲೋಕ ದರ್ಶ-ನವೆಂ-ದ-ರೆ ಮರೆ-ತು ಹೋದ ಸಾಮ್ರಾ-ಜ್ಯ-ಕ್ಕೆ ಮರು ಪ್ರಯಾ-ಣ ಎಂದೇ ಅರ್ಥ.

ಜಾನ-ಪ-ದ ಲೋಕ-ದ-ಲ್ಲಿ 12 ಘಟ-ಕ-ಗ-ಳಿ-ವೆ. ಗ್ರಾಮೀಣ ಮಹಿ-ಳೆ-ಯ-ರ ಚಿತ್ರ-ಕ-ಲೆ, ಮನೆ ಬಳ-ಕೆ ವಸ್ತು-ಗ-ಳಿ-ಗೆ ಮೀಸ-ಲಾ--ದ ಲೋಕ-ಮಾ-ತಾ ಮಂದಿ-ರ- -ಜಾ-ನ-ಪ-ದ-ದ ಸೊಗ-ಡ-ನ್ನು ಕ್ಯಾಸೆ-ಟ್‌, ಸ್ಲೈಡ್‌-ಗ-ಳ-ಲ್ಲಿ ತುಂ-ಬಿ-ಕೊಂ-ಡ ಚಿತ್ರ-ಕು-ಟೀ-ರ- ಬಹು ಅಮೂ-ಲ್ಯ ವಸ್ತು-ಗ-ಳ ಸಂಗ್ರ-ಹಾ-ಗಾ-ರ ಲೋಕ-ಮ-ಹ-ಲ್‌- ವೀರ-ಗ-ಲ್ಲು, ಮಾಸ್ತಿ-ಗ-ಲ್ಲು-ಗ-ಳಿರು-ವ ಶಿಲ್ಪ-ಮಾ-ಳ- -ನಾ-ಗೇ-ಗೌ-ಡ-ರ ದೊಡ್ಡ-ಮ-ನೆ-ಯ-ನ್ನು ನೆನ-ಪಿ-ಗೆ ತರು-ವ ದೊಡ್ಡ-ಮ-ನೆ- ಕೂತು ಮಾತಾ-ಡ-ಲಿ-ಕ್ಕೆ ಇರು-ವ ತೊಟ್ಟಿ ಮನೆ- ಗ್ರೀಕ್‌ ಮಾದ-ರಿ-ಯ ಬಯ-ಲು ರಂಗ-ಮಂ-ದಿ-ರ ಲೋಕ-ನಿ-ವಾ-ಸ ಇ-ವು-ಗ-ಳ-ನ್ನೆ-ಲ್ಲಾ ನೋಡ-ಲಿ-ಕ್ಕೆ ಎರ-ಡು ಮೂರು ದಿನ-ಗ-ಳಾ-ದ-ರೂ ಬೇಕು. ನಿಮ್ಮಲ್ಲಿ ವೇಳೆ ಇದೆ-ಯೆಂ-ದಾ-ದ-ರೆ, ಸಾವಿ-ರಾರು ತಾಸು-ಗ-ಳ ದೃಕ್‌ ಶ್ರವ-ಣ ಮುದ್ರಿ-ಕೆ-ಗ-ಳು ಇಲ್ಲಿ-ವೆ.

ಇಲ್ಲಿ ಸುಸ-ಜ್ಜಿ-ತ ಗ್ರಂಥ ಭಂಡಾ-ರ-ವೂ ಉಂಟು. ಪ್ರವಾ-ಸಿ-ಗ-ಳು ಉಳಿ-ದು-ಕೊ-ಳ್ಳ--ಲು ಪ್ರವಾ-ಸಿ ಕುಟೀ-ರ-ಗ-ಳೂ ಇವೆ. ಹೊಟ್ಟೆ ತುಂಬಿ-ಸ-ಲಿ-ಕ್ಕೆ ಲೋಕ-ರು-ಚಿ ರೆಸ್ಟೋ-ರೆಂ-ಟ್‌, ನಂದಿ-ನಿ ಕ್ಷೀರ-ಕೇಂ-ದ್ರ-ವಿ-ದೆ.

ಅಜ್ಜಿ ಉಪ್ಪಿನ ಕಾಯಿ ಹಾಕುತ್ತಿದ್ದ ಬಳಪದ ಕಲ್ಲಿನ ಜಾಡಿ, ಚಿಕ್ಕ ಬಾಯಿಯ ದೊಡ್ಡ ಹೂಜಿ, ಆದಿವಾಸಿಗಳು ಬಳಸುತ್ತಿದ್ದ ಮಣ್ಣಿನ ಹರಿವಾಣ, ಶಿಲಾಯುಗದಲ್ಲಿ ಅಸ್ತಿ ಸಂಚಯಿಸಿ ಇಡುತ್ತಿದ್ದ ಸಾವಿರಾರು ವರ್ಷಗಳ ಹಿಂದಿನ ಮಡಿಕೆ - ಕುಡಿಕೆ, ಕೊಂಬು, ಕಹಳೆ, ಹಳೆಯ ನಾಣ್ಯಗಳು, ಹಳೆಯ ಗಾಳಿ ವಾದ್ಯಗಳು, ಚರ್ಮವಾದ್ಯಗಳು, ತಾಳವಾದ್ಯಗಳು, ಓಲೆ ಗರಿಗಳು, ಶಾಸನಗಳು, ನೂರಾರು ವರ್ಷ ಹಳೆಯದಾದ ಅಂಕಣದ ಮನೆಯ ಕಂಬಗಳು, ಕಂಚಿನ ವಾದ್ಯಗಳೇ ಮುಂತಾದ ಸಾವಿರಾರು ಬಗೆಯ ವಸ್ತು ವೈವಿಧ್ಯಗಳಿವೆ.

ಜಾನ-ಪ-ದ ಲೋಕ ಕೇವ-ಲ ಪಳೆ-ಯು-ಳಿ-ಕೆ-ಗ-ಳ ಸಂಗ್ರ-ಹಾಗಾ-ರ-ವ-ಲ್ಲ . ಜಾನ-ಪ-ದ ಕಲೆ- ಸಾಹಿ-ತ್ಯ-ವ-ನ್ನು ಉಳಿ-ಸು-ವ-ಲ್ಲಿ , ಜಾನ-ಪ-ದ ಕಲಾ-ವಿ-ದ-ರ-ನ್ನು ಪ್ರೋತ್ಸಾ-ಹಿ-ಸು-ವ-ಲ್ಲಿ ಇದ-ರ ಪಾತ್ರ ದೊಡ್ಡ-ದು. ಯುವ-ಜ-ನ-ತೆ--ಗೆ ಜಾನ-ಪ-ದ-ವ-ನ್ನು ಪರಿ-ಚ-ಯಿ-ಸು-ವ ಕಮ್ಮ-ಟ-ವ-ನ್ನು , ಜಾನ-ಪ-ದ ಪರಿ-ಷ-ತ್ತಿ-ನ ಸಹ-ಯೋ-ಗ-ದೊಂ-ದಿ-ಗೆ ಪ್ರತಿ-ವ-ರ್ಷ ಜಾನ-ಪ-ದ ಲೋಕ ನಡೆ-ಸು-ತ್ತ-ದೆ. ಹಿರಿ-ಯ ಜಾನ-ಪ-ದ ಕಲಾ-ವಿ-ದ-ರ-ನ್ನು ಗುರ್ತಿ-ಸಿ ಸನ್ಮಾ-ನಿ-ಸು-ತ್ತಿ-ದೆ. ಎಲ್ಲ-ದ-ರ ಹಿಂದೆ ನಾಗೇ-ಗೌ-ಡ-ರ ನೆ-ರ-ಳು ಇದ್ದೇ ಇರು-ತ್ತ-ದೆ.

ಜಾನ-ಪ-ದ ಲೋಕ ಡೀಮ್ಡ್‌ ಯೂನಿ-ವ-ರ್ಸಿ-ಟಿ ಆಗ-ಬೇ-ಕೆ-ನ್ನು-ವು-ದು ನಾಗೇ-ಗೌ-ಡ-ರ ಕನ-ಸು. ಆದು ಈ-ವ-ತ್ತ-ಲ್ಲ ನಾ-ಳೆ ಈಡೇ-ರು-ತ್ತ-ದೆ-ನ್ನು-ವ ಬಗೆ-ಗೆ ಅವ-ರಿ-ಗ್ಯಾ-ವ ಸಂಶ-ಯ-ವೂ ಇಲ್ಲ . ಜಾನ-ಪ-ದ ಲೋಕ-ಕ್ಕೆ ಯಾರೂ ಏನೂ ಕೊಡು-ವು-ದು ಬೇಡ, ಬಂದು ನೋಡಿ ಸಂತೋ-ಷ ಪಟ್ಟರೆ ಸಾಕು ಎನ್ನು-ತ್ತಾ-ರೆ. ಜಾನ-ಪ-ದ ಲೋಕ ದಿನೇ-ದಿ-ನೇ ಬೆಳೆ-ಯು-ತ್ತಿ-ರು-ವ ವೇಗ-ವ-ನ್ನು ಗಮ-ನಿ-ಸಿ-ದ-ರೆ, ಅವ-ರ ಕನ-ಸು ದೂರ-ವಿ-ಲ್ಲ ಎನಿ-ಸು-ತ್ತ-ದೆ.

ನಿಮ್ಮ ಮನೆಯಲ್ಲಿ ಹಳೆಯ ಕಾಲದ, ಅಜ್ಜ - ಅಜ್ಜಿಯೋ ಮುತ್ತಜ್ಜಿಯೋ ಬಳಸುತ್ತಿದ್ದ ವಸ್ತು ನಿಮಗಿಂದು ವ್ಯರ್ಥ ಎನ್ನಿಸಿದರೆ ಬಿಸಾಡದೆ ಜನಪದ ಲೋಕಕ್ಕೆ ನೀಡಿ. ಮುಂದಿನ ಪೀಳಿಗೆ ಇಂತಹ ಒಂದು ವಸ್ತು ಹಿಂದಿತ್ತು ಎಂಬ ಪರಿಚಯ ಅದು ಮಾಡಿಸುತ್ತದೆ. ಶಿಲಾಯುಗದ ಸಾಧನಗಳಿಂದ ಹಿಡಿದು ಇತ್ತೀಚಿನ ಜನಪದ ಸಾಮಗ್ರಿಗಳೆಲ್ಲ ಇಲ್ಲಿವೆ. ನಾವು ಕಂಡು ಕೇಳರಿಯದ ವಸ್ತುಗಳೂ ಇಲ್ಲಿವೆ.

ಬೆಂಗಳೂರಿನಿಂದ ಸರಿಯಾಗಿ 50 ಕಿಲೋ ಮೀಟರ್‌ ದೂರದಲ್ಲಿ ಬೆಂಗಳೂರು - ಮೈಸೂರು ರಸ್ತೆಯಲ್ಲಿರುವ ಈ ರಮ್ಯ ಲೋಕಕ್ಕೊಮ್ಮೆ ಭೇಟಿ ನೀಡಿ. ನೀವು ಬಾಲ್ಯದಲ್ಲಿ ನೋಡಿದ್ದ ಎಷ್ಟೋ ವಸ್ತುಗಳನ್ನು ನಿಮ್ಮ ಮಕ್ಕಳಿಗೂ ಪರಿಚಯಿಸಿ. ಜಾನಪದ ಲೋಕ ನಿಮ್ಮನ್ನು ಹೊಸ ಲೋಕಕ್ಕೆ ಕೊಂಡೊಯ್ಯುವ ಮಹತ್ವದ ಕಲ್ಪನಾ ವಿಶ್ವ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X