ಇನ್ನೊಂದು ಕ್ಯಾಸೆಟ್ ಬರಲಿದೆ.... ಅದರಲ್ಲೇನಿದೆ? ‘ವದಂತಿಗೆ ಆಹಾರ’
ಬೆಂಗಳೂರು : ರಾಜ್ಕುಮಾರ್ ಬಿಡುಗಡೆಯ ಶುಭವಾರ್ತೆ ಈಗ ಬರುತ್ತದೆ, ಆಗ ಬರುತ್ತದೆ ಎಂದು ನಾಡಿನ ಜನತೆ ಕಾತರದಿಂದ ಕಾಯುತ್ತಿದ್ದರೆ, ಬುಧವಾರ ರಾತ್ರಿ ವೀರಪ್ಪನ್ ಮತ್ತೊಂದು ಆಡಿಯೋ ಕ್ಯಾಸೆಟ್ ಕಳುಹಿಸಲಿದ್ದಾನೆ ಎಂಬ ಸುದ್ದಿ ಇದೀಗ ದೊರಕಿದೆ.
ತಮಿಳುನಾಡಿನ ಉನ್ನತ ಪೊಲೀಸ್ ಮೂಲಗಳು ಈ ವಿಷಯವನ್ನು ಸ್ಪಷ್ಟಪಡಿಸಿವೆ. ಈ ಮಧ್ಯೆ ವೀರಪ್ಪನ್ನಿಂದ ಮತ್ತೊಂದು ಕ್ಯಾಸೆಟ್ ಬುಧವಾರ ರಾತ್ರಿ ಅಥವಾ ಗುರುವಾರ ಬೆಳಗ್ಗೆ ಚೆನ್ನೈಗೆ ಬರಲಿದೆ ಎಂಬ ಸುದ್ದಿ ಮತ್ತೆ ಹತ್ತು ಹಲವು ವದಂತಿಗಳನ್ನು ಹುಟ್ಟುಹಾಕುತ್ತಿದೆ. ವೀರಪ್ಪನ್ ಮತ್ತೊಂದು ಕಂತಿನ ಬೇಡಿಕೆಯನ್ನು ಈ ಕ್ಯಾಸೆಟ್ ಮೂಲಕ ಕಳುಹಿಸುತ್ತಿದ್ದಾನೆ. ಈ ಕ್ಯಾಸೆಟ್ನೊಂದಿಗೆ ಡಾ. ರಾಜ್ಕುಮಾರ್ ಹಾಗೂ ಇತರ ಒತ್ತೆಯಾಳುಗಳ ಫೋಟೋಗಳು ಸಹ ಬರಲಿವೆ ಎನ್ನುವ ಸುದ್ದಿ ಹಬ್ಬಿದೆ.
ಮತ್ತೊಂದು ಕಂತಿನ ಬೇಡಿಕೆಯಲ್ಲಿ ಏನೆಲ್ಲಾ ಅಂಶಗಳು ಅಡಕವಾಗಿವೆ ಎಂಬ ಬಗ್ಗೆಯೂ ಊಹಾಪೋಹಗಳು ಇವೆ. ಯಾವುದೇ ಕ್ಷಣದಲ್ಲಾದರೂ ಡಾ. ರಾಜ್ಕುಮಾರ್ ಬಿಡುಗಡೆ ಆಗಬಹುದು ಎನ್ನುವ ಉತ್ಸಾಹಕ್ಕೆ ಈ ಸುದ್ದಿ ತಣ್ಣೀರು ಎರಚಿದೆ. ರಾಜ್ಕುಮಾರ್ ಅವರ ಬಿಡುಗಡೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆಗಳು ಈಗ ಸ್ಪಷ್ಟವಾಗುತ್ತಿವೆ.
ರಾಜ್ಕುಮಾರ್ ಹಾಗೂ ಇತರ ಮೂವರು ವೀರಪ್ಪನ್ ವಶದಲ್ಲಿ ಕ್ಷೇಮವಾಗಿದ್ದಾರೆ ಎಂಬುದನ್ನು ಖಾತ್ರಿಪಡಿಸಲು ಈ ಫೋಟೋಗಳನ್ನು ಕಳುಹಿಸಲಾಗುತ್ತಿದೆ ಎಂದು ತಿಳಿದು ಬಂದಿದ್ದು, ಇನ್ನೂ ಹಲವು ಹೊಸ ಬೇಡಿಕೆಗಳನ್ನು ವೀರಪ್ಪನ್ ಮುಂದಿಡಲಿದ್ದಾನೆ ಎಂದೂ ಹೇಳಲಾಗುತ್ತಿದೆ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications