ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2.8 ಕೋಟಿ ರು. ಮೌಲ್ಯದ 600 ನಕಲಿ ಸಿ.ಡಿ. ವಶ

By Super
|
Google Oneindia Kannada News

ಬೆಂಗಳೂರು : ಸೈಬರ್‌ ಅಪರಾಧದ ಜಾಲವೊಂದನ್ನು ಭೇದಿಸಿರುವ ಪೊಲೀಸರು ಮೂರು ಪ್ರತ್ಯೇಕ ಕಂಪ್ಯೂಟರ್‌ ಸಂಸ್ಥೆಗಳ ಮೇಲೆ ಮಂಗಳವಾರ ದಾಳಿ ಮಾಡಿ, ಎರಡೂವರೆ ಕೋಟಿ ರುಪಾಯಿ ಮೌಲ್ಯದ 600 ಅಕ್ರಮ ಸಿಡಿಗಳನ್ನು ವಶಪಡಿಸಿಕೊಂಡಿರುವುದೇ ಅಲ್ಲದೆ ಏಳು ಮಂದಿಯನ್ನು ಬಂಧಿಸಿದ್ದಾರೆ.

ಜಂಟಿ ಪೊಲೀಸ್‌ ಆಯುಕ್ತ ಬಿ.ಎನ್‌. ನಾಗರಾಜ್‌ ಈ ವಿಷಯವನ್ನು ಬುಧವಾರ ತಿಳಿಸಿದರು. ಈ ಸಿಡಿಗಳು ಸುಮಾರು 2.87 ಕೋಟಿ ರುಪಾಯಿ ಮೌಲ್ಯದ ಕಳ್ಳತನದ ಸಾಫ್ಟ್‌ವೇರ್‌ಗಳನ್ನು ಒಳಗೊಂಡಿತ್ತು ಎಂದು ಅವರು ಹೇಳಿದರು. ಇತ್ತೀಚಿನ ದಿನಗಳಲ್ಲಿ ಈ ರೀತಿಯ ಕಾರ್ಯಾಚರಣೆ ಇದೇ ಮೊದಲನೆಯದೆಂದರು.

ಕೆಲವು ಕಂಪ್ಯೂಟರ್‌ ಸಂಸ್ಥೆಗಳು ನೀಡಿದ ದೂರಿನ ಮೇಲೆ ಏಕಕಾಲದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಪೊಲೀಸರು ಕಾಪಿರೈಟ್‌ ಕಾಯಿದೆಯಡಿಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ನಕಲಿ ಸಾಫ್ಟ್‌ವೇರ್‌ ಸಿಡಿಗಳ ತಯಾರಿಕೆಯಲ್ಲಿ ತೊಡಗಿದ್ದ ಆರೋಪದ ಮೇಲೆ 7 ಜನರನ್ನು ಬಂಧಿಸಲಾಗಿದೆ.

English summary
Software piracy
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X