ಕರ್ನಾಟಕ ಆರಣ್ಯ ವಲಯದ ಆಸುಪಾಸಿನಲ್ಲೇ ಇದ್ದಾರೆ ರಾಜ್‌

ಬೆಂಗಳೂರು : ಕಾಡುಗಳ್ಳ ವೀರಪ್ಪನ್‌ ತಾನು ಅಪಹರಿಸಿರುವ ಮೇರು ನಟ ಡಾ. ರಾಜ್‌ಕುಮಾರ್‌ ಹಾಗೂ ಇತರರೊಂದಿಗೆ ಕರ್ನಾಟಕ ಅರಣ್ಯ ವಲಯದ ಆಸುಪಾಸಿನ ಮನೆಯಾಂದರಲ್ಲಿಯೇ ಇದ್ದಾನೆ ಎಂಬ ಬಗ್ಗೆ ಮಾಹಿತಿಗಳು ಸಿಕ್ಕಿವೆ ಎಂದು ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ತಿಳಿಸಿದ್ದಾರೆ.

ಕಾಡುಗಳ್ಳ ವೀರಪ್ಪನ್‌ ಕನ್ನಡದ ಕಣ್ಮಣಿಯನ್ನು ಕಾಡಿನ ಗುಹೆಯಲ್ಲಿಟ್ಟಿಲ್ಲ. ರಾಜ್‌ ಅವರು ಮರದ ಕೆಳಗೋ, ಕಲ್ಲು ಬಂಡೆಯ ಮೇಲೋ ಅಥವಾ ಗುಹೆಯಲ್ಲೋ ಇಲ್ಲ . ಅವರು ಕರ್ನಾಟಕ ಅರಣ್ಯ ವಲಯದ ಆಸುಪಾಸಿನಲ್ಲಿಯೇ ಇರುವ ಮನೆಯಾಂದರಲ್ಲಿ ಕ್ಷೇಮವಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಅರಣ್ಯ ವಲಯದ ಲೈನ್‌ಮ್ಯಾನ್‌ ಒಬ್ಬರನ್ನು ಪೊಲೀಸರು ಪ್ರಶ್ನಿಸಿದ್ದು ಇದರಿಂದ ಈ ಮಾಹಿತಿ ಲಭ್ಯವಾಗಿದೆ ಎಂದು ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಸೋಮವಾರ ಮಧ್ಯಾಹ್ನ ಮಾತನಾಡುತ್ತಿದ್ದ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಸಂಧಾನ ಕಾರ ಗೋಪಾಲ್‌ ನೀಡಿರುವ ಮಾಹಿತಿಯಿಂದಲೂ ಇದು ವೇದ್ಯವಾಗಿದೆ ಎಂದು ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+