ಬಂದೋಬಸ್ತ್ : ಬೆಂಗಳೂರಿಗೆ ಆಂಧ್ರ, ಕೇರಳ ಸಶಸ್ತ್ರ ಪೊಲೀಸ್ ಪಡೆ
ಬೆಂಗಳೂರು : ಡಾ. ರಾಜ್ ಬಿಡುಗಡೆಗೆ ವೀರಪ್ಪನ್ ಒಡ್ಡಿರುವ ಬೇಡಿಕೆಗಳ ಹಿನ್ನೆಲೆಯಲ್ಲಿ ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗೃತಾ ಕ್ರಮವಾಗಿ ಸೂಕ್ಷ್ಮ ಪ್ರದೇಶಗಳಾದ ಚಾಮರಾಜಪೇಟೆ, ಶ್ರೀರಾಮಪುರ, ರಾಜಾಜಿನಗರ, ವಿಜಯನಗರ ಮುಂತಾದ ಕಡೆಗಳಲ್ಲಿ ಬಿಗಿ ಪೊಲೀಸ್ ಪಹರೆಯನ್ನು ನಿಯೋಜಿಸಲಾಗಿದೆ.
ಆಂಧ್ರ, ಕೇರಳ ಪೊಲೀಸರು ನಗರಕ್ಕೆ : ನೆರೆ ರಾಜ್ಯಗಳಾದ ಆಂಧ್ರ ಹಾಗೂ ಕೇರಳಗಳಿಂದಲೂ ಸಶಸ್ತ್ರ ಪೊಲೀಸ್ ಪಡೆಗಳನ್ನು ಕರೆಸಿಕೊಳ್ಳಲಾಗಿದೆ. ಆಂಧ್ರಪ್ರದೇಶದ ಸುಮಾರು 400 ಪೊಲೀಸರನ್ನು ಹೆಚ್ಚುವರಿಯಾಗಿ ಕರೆಸಿಕೊಳ್ಳಲಾಗಿದೆ. ಇದಲ್ಲದೆ ಕೇಂದ್ರ ರಿಸರ್ವ್ ಪೊಲೀಸ್‌ನ ಮೂರು ತುಕ-ಡಿಗಳು, ಕೇಂದ್ರ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್‌ಎಫ್)ಯ 1 -ತು-ಕ-ಡಿ ಹಾಗೂ ಕರ್ನಾಟಕ ವಿಶೇಷ ರಿಸರ್ವ್ ಪೊಲೀಸ್ ಪಡೆಯ 30 ತುಕಡಿಗಳು ನಗರ ಸಶಸ್ತ್ರ ಮೀಸಲು ಪಡೆಯ ಜತೆಯಲ್ಲಿ ಈಗಾಗಲೇ ಬಂದೋಬಸ್ತ್ ಕಾರ್ಯದಲ್ಲಿ ತೊಡಗಿವೆ ಎಂದು ಪೊಲೀಸ್ ಕಮೀಷನರ್ ಟಿ. ಮಡಿಯಾಳ್ ತಿಳಿಸಿದ್ದಾರೆ.












Click it and Unblock the Notifications