ಪುಟ್ಟ ವಿಮಾನದಲ್ಲಿ ವಿಶ್ವ ಪರ್ಯಟನೆ: ಇಬ್ಬರು ಮಹಿಳೆಯರ ಸಾಹಸಗಾಥೆ

ಮಹಿಳಾ ಸಬಲೀಕರಣ ಮತ್ತು ಬೇಟಿ ಬಚಾವೋ, ಬೇಟಿ ಪಡಾವೋ ಆಂದೋಲನವನ್ನು ಜಗತ್ತಿನಾದ್ಯಂತ ಪಸರಿಸುವ ಉದ್ದೇಶ ಹೊತ್ತು ಇಬ್ಬರು ಸಾಹಸೀ ಮಹಿಳಾ ಪೈಲೆಟ್ ಗಳು ಜುಲೈ ನಲ್ಲಿ ವಿಮಾನ ಪರ್ಯಟನೆ ಆರಂಭಿಸಿದ್ದಾರೆ.

ಪಟಿಯಾಲ ಏವಿಯೇಶನ್ ಕ್ಲಬ್ ನ ಆರೋಹಿ ಮತ್ತಿ ಕೀಥೈತ್ ಮಿಸ್ಕಿಟಾ ಇಬ್ಬರೂ ಕ್ರಮವಾಗಿ 22, 23 ವರ್ಷ ವಯಸ್ಸಿನವರು.

ಈ ಪುಟ್ಟ ವಯಸ್ಸಿನಲ್ಲಿಯೇ ಇಂಥದೊಂದು ಮಹತ್ವದ ಕಾರ್ಯಕ್ಕೆ ಕೈಹಾಕಿದ್ದು 90 ದಿನಗಳ ಕಾಲ ವಿಮಾನದಲ್ಲಿ ಹಾರಾಟ ನಡೆಸಿ, ಬೇರೆ ಬೇರೆ ದೇಶಗಳಲ್ಲಿ ಮಹಿಳಾ ಸಬಲೀಕರಣ ಮತ್ತು ಬೇಟಿ ಬಚಾವೋ, ಬೇಟಿ ಪಡಾವೋ ಆಂದೋಲನದ ಕುರಿತು ಅರಿವು ಮೂಡಿಸುತ್ತಿದ್ದಾರೆ. ಈ ತಿಂಗಳು ಅವರ ಪರ್ಯಟನೆ ಮುಕ್ತಾಯವಾಗಲಿದ್ದು ಒಟ್ಟು 23 ದೇಶಗಳ ಪರ್ಯಟನೆಯ ಅನುಭವ ಹೊತ್ತು ಸ್ವದೇಶಕ್ಕೆ ಮರಳಲಿದ್ದಾರೆ.

ಚಿಕ್ಕಂದಿನಿಂದಲೂ ಪೈಲೆಟ್ ಆಗುವ ಬಯಕೆ

ಚಿಕ್ಕಂದಿನಿಂದಲೂ ಪೈಲೆಟ್ ಆಗುವ ಬಯಕೆ

ಮುಂಬೈಯ 22 ವರ್ಷ ವಯಸ್ಸಿನ ಆರೋಹಿ ಪಂಡಿತ್ ಗೆ ಐದು ವರ್ಷ ವಯಸ್ಸಿನಿಂದಲೂ ಆಕಾಶಕ್ಕೆ ಹಾರುವ ಬಯಕೆ, ಪೈಲೆಟ್ ಆಗಬೇಕು ಅನ್ನೋದು ಆಕೆಯ ಎಂದಿನ ಕನಸು. ಆಕೆಯದೇ ಮನಸ್ಥಿತಿಯ ಕೀಥೈತ್ ಮಿಸ್ಕಿಟಾ ಅವರೊಂದಿಗೆ ಸೇರಿ ಚಿಕ್ಕಂದಿನಿಂದಲೂ ಪೈಲೆಟ್ ಆಗುವ ಕನಸನ್ನು ಒಟ್ಟಾಗಿಯೇ ಹೆಣೆಯತೊಡಗಿದ್ದರು. ಕುಟುಂಬದಿಂದಲೂ ಸಾಕಷ್ಟು ಬೆಂಬಲವಿತ್ತು.

ಸಿಕ್ಕಿತು ಕಮರ್ಶಿಯಲ್ ಫ್ಲೈಟ್ ಲೈಸೆನ್ಸ್

ಸಿಕ್ಕಿತು ಕಮರ್ಶಿಯಲ್ ಫ್ಲೈಟ್ ಲೈಸೆನ್ಸ್

ಬಾಂಬೆ ಫ್ಲೈಯಿಂಗ್ ಕ್ಲಬ್ ಮೂಲಕ ಕಮರ್ಶಿಯಲ್ ಫ್ಲೈಟ್ ಲೈಸೆನ್ಸ್ ಪಡೆದ ಈ ಇಬ್ಬರು ಈ ಪ್ರಪಂಚ ಪರ್ಯಟನೆಯ ಯೋಚನೆಗೆ ಮುಂದಾದರು.

ನಂತರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನೆರವಿನೊಂದಿಗೆ ಬೆಟಿ ಬಚಾವೋ, ಬೇಟಿ ಫಡಾವೋ ಯೋಜನೆಯ ಕುರಿತು ಅರಿವು ಮೂಡಿಸುವ ಯೋಜನೆಗೆ ಕೈಹಾಕಿದರು. ಹೆಣ್ಣು ಭ್ರೂಣ ಹತ್ಯೆ ತಡೆ ಮತ್ತು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವ ಕುರಿತು ಜಾಗೃತಿ ಮೂಡಿಸುವ ಈ ಯೋಜನೆಯೊಂದಿಗೆ ಮಹಿಳಾ ಸಬಲೀಕರಣವೂ ಇವರ ಪಯಣದ ಉದ್ದೇಶವಾಯಿತು.

ಪುಟ್ಟ ವಿಮಾದಲ್ಲಿ ವಿಶ್ವ ಪರ್ಯಟನೆ

ಪುಟ್ಟ ವಿಮಾದಲ್ಲಿ ವಿಶ್ವ ಪರ್ಯಟನೆ

ಈ ಇಬ್ಬರಿಗಾಗಿಯೇ ಚಿಕ್ಕ ಹಗುರ ಕ್ರೀಡಾ ವಿಮಾನ(ಎಲ್ ಎಸ್ಎ)ವಿಮಾನವೊಂದು ತಯಾರಾಯಿತು. ಇದರಲ್ಲಿ 40,000 ಕಿ.ಮೀ ವ್ಯಾಪ್ತಿಯಲ್ಲಿ ಮೂರು ಖಂಡಗಳ ಸುಮಾರು 23 ದೇಶಗಳನ್ನು ಈ ಇಬ್ಬರು ಸಾಹಸೀ ಯುವತಿಯರು ಸುತ್ತುತ್ತಿದ್ದಾರೆ.

ಜಯಂತ್ ಸಿನ್ಹಾ ಶುಭ ಹಾರೈಕೆ

ಜುಲೈನಲ್ಲಿ ಪಯಣ ಆರಂಭಿಸಿದ್ದ ಈ ಇಬ್ಬರು ಸಾಹಸೀ ಮಹಿಳೆಯರಿಗೆ ನಾಗರಿಕ ವಿಮಾನಯಾನ ರಾಜ್ಯ ಸಚಿವ ಜಯಂತ್ ಸಿನ್ಹಾ ಸಹ ಟ್ವೀಟ್ ಮಾಡಿ ಶುಭ ಹಾರೈಸಿದ್ದರು.

"ಭಾರತೀಯ ಮಹಿಳೆಯರಿಗೆ ಸಬಲೀಕರಣದ ಸಂದೇಶ ನೀಡುತ್ತ 90 ದಿನಗಳ ಕಾಲ ಪ್ರಪಂಚ ಪರ್ಯಟನೆ ಮಾಡಲಿರುವ ಸಾಹಸೀ ಮಹಿಳೆಯರಾದ ಆರೋಹಿ ಪಂಡಿತ್ ಮತ್ತು ಕೀಥೈತ್ ಮಿಸ್ಕಿಟಾ ಅವರಿಗೆ ನನ್ನ ಶುಭ ಹಾರೈಕೆಗಳು" ಎಂದು ಸಿನ್ಜಾ ಟ್ವೀಟ್ ಮಾಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+