79ರ ವಯಸ್ಸಿನಲ್ಲೂ ದುಡಿದು ತಿನ್ನೋ ಛಲ, ಎಳ್ಳಷ್ಟೂ ಕುಗ್ಗದ ಜೀವನೋತ್ಸಾಹ
ವರ್ಷ 79 ತುಂಬಿದ್ದರೂ ಜೀವನೋತ್ಸಾಹ ಇನ್ನೂ ಎಳ್ಳಷ್ಟೂ ಕಳೆಗುಂದಿಲ್ಲ,ದುಡಿಯಬೇಕು ಎನ್ನುವ ಛಲ, ದುಡಿಯದೆ ಕುಳಿತರೆ ನಾಳೆ ಒಂದು ಹೊತ್ತಿನ ಊಟಕ್ಕೂ ಗತಿ ಇಲ್ಲವೆಂಬ ಆತಂಕ.
ಅದರ ಜೊತೆ ಹೃದಯ ಸಂಬಂಧಿ ಕಾಯಿಲೆ, ಕಾಲು ಶಸ್ತ್ರಚಿಕಿತ್ಸೆ ಬೇರೆ ಬಡತನವೆಂಬ ಬೇನೆಗೆ ಮತ್ತಷ್ಟು ಕಾರದಪುಡಿ ಎರಚಿದಂತಾಗಿತ್ತು.
ಅಷ್ಟಕ್ಕೂ ನಾನು ಹೇಳುತ್ತಿರುವುದು ಯಾರ ಬಗ್ಗೆ ಎಂಬುದನ್ನು ನೋಡೋಣ, ಅವರ ಹೆಸರು ಕೆಎಚ್ ರೇವಣ್ಣ ಸಿದ್ದಪ್ಪ. ಉದ್ಯೋಗವನ್ನರಸಿ ಹಲವು ವರ್ಷಗಳ ಹಿಂದೆಯೇ ಬೆಂಗಳೂರಿಗೆ ಬಂದವರು, ಕೈನಲ್ಲಿ ಬಿಡಿಗಾಸೂ ಇಲ್ಲದ ಕಾರಣ ರಾಗಿರೊಟ್ಟಿಯ ಬುತ್ತಿಕಟ್ಟಿಕೊಂಡು 5 ದಿನಗಳ ಕಾಲ ನಡೆದು ಬೆಂಗಳೂರಿಗೆ ಸೇರಿದ್ದರು.

ಆಗಿನ ಕಾಲದಲ್ಲಿ ಬಸ್‌ಗಳ ಟಿಕೆಟ್ ದರ ಕಡಿಮೆಯೇ ಆದರೂ ಆ ಹಣವನ್ನು ನೀಡಲೂ ಅವರ ಬಳಿ ಇರಲಿಲ್ಲ.ಬಳಿಕ ಬಂದು ಇಷ್ಟು ವರ್ಷಗಳ ಕಾಲ ಔಷಧ ಸಸ್ಯಗಳನ್ನು ಮಾರಾಟ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಮೊದಲು ನೆಲದ ಮೇಲೆಯೇ ಇಟ್ಟುಕೊಂಡಿದ್ದರು, ಇದೀಗ ಒಂದು ಟೇಬಲ್ ಹಾಗೂ ಖುರ್ಚಿಯನ್ನು ಹಾಕಿಕೊಂಡು ವ್ಯಾಪಾರ ನಡೆಸುತ್ತಿದ್ದಾರೆ.
ದೊಡ್ಡಪತ್ರೆ, ಕರಿಬೇವು, ಅಲೋವೆರಾ, ಕನಕಾಂಬರ, ತುಳಿಸಿಯಿಂದ ಹಿಡಿದು ಹಲವು ಬಗೆಯ ಸಸ್ಯಗಳು ಅವರ ಬಳಿ ದೊರೆಯುತ್ತದೆ.
ಅವರಿಗೆ ಸುಮಾರು 18 ವರ್ಷಗಳ ಹಿಂದೆ ನಡೆದ ಅಪಘಾತದಲ್ಲಿ ಕಾಲಿಗೆ ಭಾರಿ ಏಟಾಗಿ ರಾಡ್ ಅಳವಡಿಸಿದ್ದಾರೆ. ಆದರೆ ಅದನ್ನು ತೆಗೆಯಲು ಬೇಕಾದ ಸುಮಾರು 20 ಸಾವಿರದಷ್ಟು ಮೊತ್ತ ಅವರ ಬಳಿ ಇಲ್ಲ.
ಹಾಗೆಯೇ ಅವರಿಗೆ ಹೃದಯ ಶಸ್ತ್ರ ಚಿಕಿತ್ಸೆ ಕೂಡ ಆಗಿದೆ. ಇಷ್ಟಾದರೂ ಎದೆಗುಂದದೆ ನಿಷ್ಠೆಯಿಂದ ಅವರ ಕೆಲಸವನ್ನು ಮಾಡಿಕೊಂಡು ಹೋಗುತ್ತಿದ್ದಾರೆ. ಬರುವ ಅಲ್ಪ ಸ್ವಲ್ಪ ಹಣದಲ್ಲಿ ಜೀವನ ಸಾಗಿಸುತ್ತಿದ್ದಾರೆ.
Recommended Video
ಸಾರಕ್ಕಿ ಸಿಗ್ನಲ್ ಬಳಿ ಇರುವ ಜಾಕಿ ಶೋ ರೂಂ ಬಳಿ ಅವರು ಈ ಪುಟ್ಟ ವ್ಯಾಪಾರ ನಡೆಸುತ್ತಿದ್ದಾರೆ. ಆರಾಮವಾಗಿ ಮಕ್ಕಳ ಆಶ್ರಯದಲ್ಲಿ ಕಾಲ ಕಳೆಯಬೇಕಿದ್ದ ಈ ವೃದ್ಧ ದಂಪತಿ ಬಿಸಿಲಿನಲ್ಲಿ ಬೇಯುವಂತಾಗಿದೆ.
-
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು











Click it and Unblock the Notifications