ನನ್ ಮಗಂದ್, ಯಾವ್ನಾದ್ರೂ ನಂಗೇ ಮತ ಹಾಕ್ಲಿಲ್ಲಾ ಅಂದ್ರೆ!
ಚುನಾವಣೆ ಅಂದ್ರೆ ತಮಾಷೆ ಅಲ್ಲ, ಅದೊಂದು ಸೀರಿಯಸ್ ಬಿಸಿನೆಸ್. ಮತದಾರರು ಅತ್ಯಂತ ಜವಾಬ್ದಾರಿಯುತವಾಗಿ ತಮ್ಮ ಕ್ಷೇತ್ರವನ್ನು ಪ್ರತಿನಿಧಿಸುವ ಪ್ರತಿನಿಧಿಯನ್ನು ಆರಿಸಬೇಕಾಗುತ್ತದೆ. ಮತಯಾಚನೆಗೆ ಬರುವ ಧುರೀಣರು ಕೂಡ ಕ್ಷೇತ್ರದ ಅಭಿವೃದ್ಧಿಯನ್ನಷ್ಟೇ ಗಮನದಲ್ಲಿಟ್ಟುಕೊಂಡು ಮತಭಿಕ್ಷೆ ಬೇಡಬೇಕಾಗುತ್ತದೆ.
ಆದರೆ, ಈಯುಗದಲ್ಲಿ ಇದು ಸಾಧ್ಯವೆ? ಪ್ರಾಮಾಣಿಕ ರಾಜಕಾರಣಿಯ ಮುಖವಾಡ ಧರಿಸಿ ಬರುವ ಪುಢಾರಿಗಳು ಮಾಡುವುದೆಲ್ಲ ಅನಾಚಾರವೆ (ಕೆಲ ಅಪವಾದಗಳುಂಟು), ನೀಡುವುದೆಲ್ಲ ಸುಳ್ಳು ಪೊಳ್ಳು ಭರವಸೆಗಳೇ. ಆಯ್ಕೆಯಾಗಿ ಬಂದ ನಂತರ ಐದು ವರ್ಷಗಳ ಕಾಲ ನಡೆಸುವುದೆಲ್ಲ ಅಭಿವೃದ್ಧಿ ವಿರೋಧಿ ರಾಜಕಾರಣ.3
ರಾಜಕಾರಣಿಗಳು ಹೋಗಲಿ ಮತದಾರರಾದರೂ ತಮ್ಮ ಕರ್ತವ್ಯವನ್ನು ಅತ್ಯಂತ ನಿಷ್ಠೆಯಿಂದ ನಿಭಾಯಿಸುತ್ತಾರಾ? ರಾಜಕಾರಣಿಗಳು ನೀಡುವ ಆಮಿಷಗಳಿಗೆ ತಕ್ಕಂತೆ ಕೆಲ ಮತದಾರರ ನಿಯತ್ತು ಕೂಡ ಬದಲಾಗುತ್ತಿರುತ್ತದೆ. ಸೀರೆ, ಮದಿರೆ, ನಿಕ್ಕರು, ಕುಕ್ಕರು, ಮೊಬೈಲು, ಇನ್ನೂ ಏನೇನೋ ಮಾಲು! ಅಯ್ಯೋ ಬಿಡಿ ಸಾರ್, ಚುನಾವಣೆಗಳಲ್ಲಿ ಇದೆಲ್ಲ ಮಾಮೂಲು!
ಕೆಲ ವರ್ಷಗಳ ಹಿಂದೆ ಹಣ, ಹೆಂಡ, ಸೀರೆ ಮಾತ್ರವಾಗಿ ಉಳಿದಿದ್ದ ಆಮಿಷಗಳು ಊಹಿಸಲಾಗದ ರೂಪಗಳನ್ನು ಪಡೆದುಕೊಳ್ಳುತ್ತಿವೆ. ಇದೆಲ್ಲದರಿಂದ ಸೀರಿಯಸ್ ವ್ಯಾಪಾರವಾಗಿರುವ ಚುನಾವಣೆಯೆಂಬುದು ಸಿಕ್ಕಾಪಟ್ಟೆ ತಮಾಷೆಯಾಗಿದೆ. ಕೊಟ್ಟೋನು ಕೋಡಂಗಿ, ಇಸ್ಕೊಂಡವನು ಈರಭದ್ರ! ಇಸ್ಕೊಳ್ಳೋದೆಲ್ಲ ಇಸ್ಕೊಂಬಿಟ್ಟು ಕಡೆಗೆ ಮತ ಹಾಕುವುದು ಬೇರೆಯವರಿಗೇ. ಅದು ಬೇರೆ ವಿಷಯ.
ಇರಲಿ ಬಿಡಿ, ಚುನಾವಣೆಯೆಂದ ಮೇಲೆ ತಮಾಷೆಗಳೂ ಇರಲೇಬೇಕು. ರಾಜಕಾರಣಿಗಳ ಭಾಷಣಗಳು, ಬೀದಿಯಲ್ಲಿನ ಮಾತಿನ ಕಾದಾಟಗಳು, ದೆಹಲಿಯಿಂದ ಬಂದಿರುವ ನಾಯಕರ ತಪ್ಪುತಪ್ಪು ಉಚ್ಚಾರಗಳು, ಅಭ್ಯರ್ಥಿಗಳು ಕೊಡುವ ನಂಬಲಸಾಧ್ಯ ಚಿತ್ರವಿಚಿತ್ರ ಭರವಸೆಗಳು... ತಮಾಷೆಗೇನು ಕೊರತೆ. ಹಾಗೆಯೆ, ಇಲ್ಲೊಂದಿಷ್ಟು ಮೀಮ್ಸ್ ಗಳಿವೆ, ನೋಡಿ ಎಂಜಾಯ್ ಮಾಡಿ, ಆದರೆ ಗಂಭೀರವಾಗಿಯೇ ಮತ ಹಾಕಿ.

ಅವ್ನ ತಲೆ ಮೇಲೇ ಕುಕ್ಕಿ!
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸುತ್ತಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಮ್ಮದೇ ಭಾವಿಚಿತ್ರವಿರುವ ಕುಕ್ಕರ್ ಹಂಚಿ ಖ್ಯಾತಿ ಗಳಿಸಿದ್ದಾರೆ. ಅದೇ ದಾರಿಯಲ್ಲಿ ಇದೇ ರಾಜರಾಜೇಶ್ವರಿ ನಗರದಲ್ಲಿ ಕಣಕ್ಕಿಳಿದಿರುವ ಕಾಂಗ್ರೆಸ್ ಧುರೀಣ, ಹಾಲಿ ಶಾಸಕ ಮುನಿರತ್ನ ಅವರು ಕುಕ್ಕರ್ ಹಂಚಿದ್ದರಿಂದ ಖ್ಯಾತಿ ಗಳಿಸುವ ಬದಲು ಎಲ್ ವೆಂಕಟರಾಮ್ ಅಲಿಯಾಸ್ ಹುಚ್ಚ ವೆಂಕಟ್ ಅವರ ಕೆಂಡಾಮಂಡಲ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಯಾರಾದರೂ ಕುಕ್ಕರ್ ಕೊಡಲು ಬಂದರ್ ಅದೇ ಕುಕ್ಕರ್ ನಿಂದ ಅವರ ತಲೆ ಕುಕ್ಕಿ ಎಂದು ಆದೇಶಿಸಿದ್ದಾರೆ. ಮಾಡ್ತೀರಾ?

ಇಸ್ಕಳ್ಳಿ, ಆದ್ರೆ ನನಗೇ ಮತ ಹಾಕಿ!
ಇದೇ ಸನ್ನಿವೇಶವನ್ನು ಸ್ವಲ್ಪ ಬದಲಾವಣೆ ಮಾಡೋಣ. ಕೊಡುವವರು ಕೊಡಲು ಬಂದಾಗ, ಇಸಿದುಕೊಳ್ಳದಿರಲು ಸಾಧ್ಯವೆ? ನಾವೇನು ಅಂತಹ ಸಾಚಾಗಳೂ ಇಲ್ಲ, ಬೇಡವೆನ್ನಲು ಭಾರೀ ಶ್ರೀಮಂತರೂ ಅಲ್ಲ. ಮತ ಹಾಕುವವರೆಲ್ಲ ಕೆಳಮಧ್ಯಮ ವರ್ಗದವರೆ. ಹಾಗಿದ್ದ ಮೇಲೆ ಕುಕ್ಕರ್ ಇಸಿದುಕೊಳ್ಳದೆ ಮೂರ್ಖರಾಗುವ ಬದಲು, ಅದನ್ನು ಇಸಿದುಕೊಂಡು ಬೇಕಿದ್ದರೆ ಎಲ್ ವೆಂಕಟರಾಮ್ ಅವರಿಗೇ ಮತ ಹಾಕಿ, ಅವರು ಅರ್ಹ ವ್ಯಕ್ತಿ ಅನ್ನಿಸಿದರೆ.

ಆ ಕುಕ್ಕರ್ನ ನಿಮ್ ತಲೆ ಮೇಲೆ ಕುಕ್ತೀನಿ!
ಎಲ್ಲಕ್ಕಿಂತ ಮೊದಲು ಫ್ಲಾಶ್ ಬ್ಯಾಕಿಗೆ ಹೋಗಿ. ವೆಂಕಟರಾಮ್ ಅವರ ಕೆಂಡದಂಥಾ ಕೋಪ ಎಂಥದೆಂಬುದನ್ನು ಸ್ವಲ್ಪ ಮನನ ಮಾಡಿಕೊಳ್ಳಿ. ಕುಕ್ಕರ್ ಇಸಿದುಕೊಂಡೂ ಮತ ಹಾಕದಿದ್ದರೆ, ಮುಂದೆ ಅವರು ಸಿಕ್ಕಾಗ ಏನಾಗಬಹುದೆಂದು ವಸಿ ಊಹಿಸಿಕೊಳ್ಳಿ. ಇಂಥ ಬಿಟ್ಟಿ ಉಪದೇಶ ಪಡೆದು ಮತ ಹಾಕದಿದ್ದರೆ ಯಾರಿಗಾದರೂ ಕೋಪ ಬರದೆ ಇರಲು ಸಾಧ್ಯವೆ? ಹಿಂದೆ ವೆಂಕಟರಾಮ್ ಅವರ ಸಿನೆಮಾ ನೋಡದೆ ಅವರ ಆಕ್ರೋಶಕ್ಕೆ ಗುರಿಯಾಗಿದ್ದಿರಿ. ಈಗ ಮತ ಹಾಕದಿದ್ದರೆ ಅಂಥದೇ ರೌದ್ರ ಕೋಪಕ್ಕೆ ಗುರಿಯಾಗಬೇಕಿರುವುದು ಸಹಜವಲ್ಲವೆ? ಅನುಭವಿಸಿ.

ಯಾವತ್ತೂ ಎಲೆಕ್ಷನ್‌ಗೆ ನಿಂತ್ಕಳ್ಳಾಕಿಲ್ಲ!
ವೆಂಕಟರಾಮ್ ಅವರು ಚುನಾವಣೆಗೆ ನಿಂತಿದ್ದರೂ ನಿಮ್ಮ ಮುಂದೆ ಮತಯಾಚನೆಗೆ ಬರುವುದಿಲ್ಲ. ನಾನ್ ಮತ ಕೇಳಲ್ಲ, ಬೇಕಿದ್ರೆ ನೀವೇ ನನ್ನನ್ನು ಗೆಲ್ಲಿಸಿ ಶಾಸಕನನ್ನಾಗಿ ಮಾಡಿ ಎಂದಿದ್ದಾರೆ. ಮತ ಯಾಚನೆಗೆ ಬರದವರಿಗೆ ಮತ ಹಾಕಬಾರದೆಂದೇನೂ ಇಲ್ಲ. ಒಟ್ಟಿನಲ್ಲಿ ಉತ್ತಮ ವ್ಯಕ್ತಿಗೆ ಮತ ಹಾಕಿ ಗೆಲ್ಲಿಸಿ. ಏಕೆಂದರೆ, ಮುಂದೆ ಐದು ವರ್ಷಗಳ ಕಾಲ ನಿಮ್ಮ ಹಿತಾಸಕ್ತಿಗೆ ಸ್ಪಂದಿಸಬೇಕಾಗಿರುವವರು ಅವರೇ. ಹಂ... ಹೀಗೂ ಒಂದು ವೇಳೆ ವೆಂಕಟರಾಮ್ ಅವರಿಗೆ ನೀವು ಮತ ಹಾಕದಿದ್ದರೆ, ಏನಾಗುತ್ತೆ ಗೊತ್ತಾ?
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications