ಯುದ್ಧ ಮಾಡುವ ಕಲೆ ಕಲಿಯಲು ಎಷ್ಟು ಸಮಯ ಬೇಕು?

ಅದೊಂದು ಸಮರ ತರಬೇತಿ ಶಾಲೆ. ಯುದ್ಧಶಸ್ತ್ರಾಭ್ಯಾಸದ ಕಲಿಕೆ ಮಾಡಲು ಬಯಸಿದ್ದ ವಿದ್ಯಾರ್ಥಿಯೊಬ್ಬ ತನ್ನ ಗುರುವಿನ ಬಳಿ ಹೋಗಿ ವಿನಯದಿಂದ ಕೇಳಿದ, ''ನಿಮ್ಮ ಬಳಿ ಯುದ್ಧ ಕೌಶಲದ ಕಲೆಯನ್ನು ಕಲಿಯಲು ನಾನು ಬಯಸಿದ್ದೇನೆ. ಸಮರಕಲೆಯಲ್ಲಿ ಪರಿಣತಿ ಪಡೆಯಲು ಎಷ್ಟು ಕಾಲ ಬೇಕಾಗಬಹುದು?''

ಗುರು ಬಹಳ ಸರಳವಾಗಿ ಉತ್ತರಿಸಿದರು,
''ಹತ್ತು ವರ್ಷಗಳು''

ಹತ್ತು ವರ್ಷಗಳೆಂದರೆ ಸಣ್ಣ ಅವಧಿಯೇ? ಯುದ್ಧ ಮಾಡುವ ಕಲೆ ಅರಿಯಲು ಅಷ್ಟೊಂದು ವರ್ಷ ನಿಜಕ್ಕೂ ಬೇಕೇ? ವಿದ್ಯಾರ್ಥಿ ಮೂಡಿದ ಈ ಪ್ರಶ್ನೆ ಆತನಲ್ಲಿ ಅಸಹನೆ ಹುಟ್ಟಿಸಿತು.

Zen Stories How Much Time Need To Learn War Techniques

''ಆದರೆ ಹತ್ತು ವರ್ಷಕ್ಕೂ ಮುನ್ನವೇ ನಾನು ಆ ಪರಿಣತಿಯನ್ನು ಸಾಧಿಸಬೇಕೆ೦ದಿದ್ದೇನೆ. ಅದಕ್ಕಾಗಿ ನಾನು ಬಹಳ ಕಷ್ಟ ಪಡಲು ಸಿದ್ಧ. ಪ್ರತಿ ದಿನವೂ ಸತತ ಅಭ್ಯಾಸ ಮಾಡುತ್ತೇನೆ. ದಿನಕ್ಕೆ ಹತ್ತು ಅಥವಾ ಅದಕ್ಕಿ೦ತಲೂ ಹೆಚ್ಚು ಗ೦ಟೆಗಳು ಬೇಕಾದರೂ ಅಭ್ಯಾಸಕ್ಕಾಗಿ ವಿನಿಯೋಗಿಸುತ್ತೇನೆ. ಹಾಗೆ ಶ್ರಮವಹಿಸಿದರೆ ನನಗೆ ಯುದ್ಧ ಕೌಶಲ ತಿಳಿಯಲು ಎಷ್ಟು ಸಮಯ ಬೇಕಾದೀತು?'' ಎಂದು ಕೇಳಿದ.

ಆ ಗುರು ತಕ್ಷಣ ಪ್ರತಿಕ್ರಿಯಿಸಲಿಲ್ಲ, ಸುಮ್ಮನೆ ಕೆಲ ಕ್ಷಣ ಕಾಲ ಯೋಚಿಸಿ ಮರುನುಡಿದರು,

"ಇಪ್ಪತ್ತು ವರ್ಷಗಳು."

ಯುದ್ಧದ ಕಲೆ ಎನ್ನುವುದರಲ್ಲಿ ಯುದ್ಧಕಲಿಯ ಬಲವಷ್ಟೇ ಅಲ್ಲ, ಯುಕ್ತಿಯೂ ಅಷ್ಟೇ ಚುರುಕಾಗಿರಬೇಕು. ಆ ಕ್ಷಣಕ್ಕೆ ಸವಾಲನ್ನು ಎದುರಿಸುವ ಚಾಕಚಕ್ಯತೆ ಇರಬೇಕು. ಕೇವಲ ಬಲ, ಪರಿಶ್ರಮದ ಕಾರಣ ಕಲೆ ಒಲಿಯುವುದಿಲ್ಲ.

ನಮ್ಮಲ್ಲಿ ಯಾವಾಗಲೂ ಕಲಿಕೆಯ ಆಸಕ್ತಿ ಇರಬೇಕು. ಜತೆಗೆ ಗುರಿಯೂ ಇರಬೇಕು. ಆದರೆ ನಾನು ಇದಿಷ್ಟೇ ಸಮಯದೊಳಗೆ ಎಲ್ಲವನ್ನೂ ಕಲಿತು ಸಿದ್ಧಿಸಬೇಕು ಎಂದು ಆತುರ ತೋರಿದರೆ ನಮಗೆ ಅದನ್ನು ಸಾಧಿಸುವುದು ಸಾಧ್ಯವೇ ಆಗುವುದಿಲ್ಲ. ಏಕೆಂದರೆ ನಮಗೆ ಎಲ್ಲದಕ್ಕೂ ಅವಸರವಿರುತ್ತದೆ. ಆ ಕಲಿಕೆಯ ಮೇಲೆ ಆಸಕ್ತಿ ಮತ್ತು ಏಕಾಗ್ರತೆ ಎರಡನ್ನೂ ಕಳೆದುಕೊಳ್ಳುತ್ತೇವೆ. ಬೇಗನೆ ಕಲಿಯುವ ಆತುರಕ್ಕಿಂತ ವ್ಯವಧಾನದಿಂದ ಆ ಕಲೆಯ ಸೂಕ್ಷ್ಮತೆಗಳನ್ನು ಅರಿತರೆ ಯಶಸ್ಸು ಮತ್ತು ಪರಿಣತಿ ಸಾಧ್ಯ ಎನ್ನುವುದು ಈ ಝೆನ್ ಕಥೆಯ ನೀತಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+