ತೇಜಸ್ವಿನಿ ಹೆಗಡೆ ಸಣ್ಣಕಥೆ : ಜೀವತಂತು (ಭಾಗ 5)
(ಕಥೆ ಮುಂದುವರಿದಿದೆ...)
"ಹೆಣ್ಮಗು ಮಾತ್ರ ನಂಗೆ ಬೇಡ ನೋಡು... ಹೆಣ್ಣಾದ್ರೆ ನೀನು ಇಲ್ಲಿಗೆ ಬರ್ಲೇಬೇಡ... ಇದು ನನ್ನ ನಿರ್ಧಾರ..." ಎಂದು ಸುದ್ದಿ ತಿಳಿದ ದಿನವೇ ಕಟುವಾಗಿ ಹೇಳ್ಬಿಟ್ಟಿದ್ದ. ಈ ಮಾತನ್ನ ಅವನೇ ಹೇಳಿದ್ದೆಂದು ನಂಗೆ ನಂಬೋಕೆ ಆಗ್ಲಿಲ್ಲ ಎಷ್ಟೋ ದಿವ್ಸ! ಇಲ್ಲಿಗೆ ಬರೋವರೆಗೂ ಎಲ್ಲಾ ರೀತಿಯಲ್ಲೂ ಪ್ರಯತ್ನಿಸಿದೆ. ಊಹೂಂ! ಕರಗಲೇ ಇಲ್ಲ ಆಸಾಮಿ. ದೇವ್ರಿಗೆ ಹರಕೆ ಹೊತ್ತಿದ್ದೇ ಬಂತು ನಾನು. ಆಗಿದ್ದು ಕಡೆಗೂ ಅವನ ಇಚ್ಛೆಯ ವಿರುದ್ಧವೇ.
ಮಗಳು ಹುಟ್ಟಿದ ವಿಷಯ ಗೊತ್ತಾಗಿದ್ದೇ ಅಣ್ಣಂಗೆ ಕಾಲ್ ಮಾಡಿ ಆ ಮಗು ತಗೊಂಡು ಇವ್ಳು ಇಲ್ಲಿಗೆ ಬರೋದೇ ಬೇಡ ಅಂತ ಅಂದ್ಬಿಟ್ಟ. ಡಿಸ್ಚಾರ್ಜ್‌ಗೊಂದು ಹೇಗೋ ಹಣ ಕಟ್ಟಿದ್ದ ಅಣ್ಣ ಮನೆಗೆ ಹೋದ್ಮೇಲಿಂದ ಕೂತ್ರೆ ನಿಂತ್ರೆ ಕೊಂಕಾಡೋವ್ನು. ಅತ್ಗೇನೂ ಸುಮ್ನಿರೋವ್ಳಲ್ಲ. ನಂಗೋ ಏನೂ ತೋಚ್ತಿರ್ಲಿಲ್ಲ. ನಿಂಗೆ ಕಾಲ್ ಮಾಡೋಕೂ ತಲೆಗೆ ಹೊಳೀಲಿಲ್ಲ ನೋಡು. ಸೌರಭ್ ನನ್ನಿಂದ ದೂರ ಆದ್ರೆ ನನ್ನೋರು ಅನ್ನೋರೇ ಇರಲ್ಲ... ಎಲ್ಲಾ ಈ ಮಗುವಿನಿಂದ ಅನ್ನಿಸೋಕೆ ಶುರುವಾಯ್ತು. ಅದ್ಕೇ ಅದ್ಕೇ... ಮೊನ್ನೆ ರಾತ್ರೆ ನಾನು..." ತುಟಿಕಚ್ಚಿ ತಡೆಹಿಡಿದವಳ ಮುಂದಿನ ಮಾತು ಊಹಿಸಲೂ ಇಷ್ಟವಾಗದೆ ಮಾನಸ ಮುಖ ಬೇರೆಡೆ ತಿರುಗಿಸಿದಳು.

"ಸುಮ್ನಿರು ಶುಭಾ. ಪದೇಪದೇ ಅದನ್ನೇ ಗಟ್ಟಿಯಾಗಿ ಹೇಳ್ಬೇಡ. ಯಾರಾದ್ರೂ ಕೇಳಿದ್ರೆ ಪ್ರಾಬ್ಲಂ ಆಗುತ್ತೆ. ಪರಿಸ್ಥಿತಿ ನಿನ್ನಿಂದ ಹಾಗೆ ಮಾಡ್ಸಿದೆ. ಆದ್ರೆ ಧೈರ್ಯವಾಗಿರು. ನೀನೇ ನಿಂತು ಮಗುವಿಗೆ ಚಿಕಿತ್ಸೆ ಕೊಡಿಸ್ತಿದ್ದೀಯಲ್ಲಾ. ನಿಯತಿ ನಿಂಗೆ ಮತ್ತೊಂದು ಅವಕಾಶ ಕೊಟ್ಟಿದೆ ಅಂದ್ಕೊ. ಅದನ್ನೆಲ್ಲಾ ಮರೆಯೋಕೆ ನೋಡು; ಪ್ಲೀಸ್..." ಸುಮತಿ ಮೇಡಮ್ ಅವಳನ್ನು ಸುಮ್ಮನಿರಲು ಪ್ರಯತ್ನಿಸುವುದನ್ನು ಕಂಡು ಮಾನಸಳಿಗೆ ಬೆರಗಾಯಿತು. ಅವರ ಮೊಗ ನೋಡಲು, ತನೆಗೆಲ್ಲಾ ಗೊತ್ತಾಗಿದೆ ಎಂಬ ಭಾವ ಅಲ್ಲಿತ್ತು.
"ಊಹೂಂ... ಇಲ್ಲ ಮೇಡಮ್. ಈ ಹಿಂಸೆಯನ್ನ ಮೌನವಾಗಿ ಸಹಿಸೋಕೆ ಆಗ್ತಿಲ್ಲ. ಮಾನು, ನೀ ನನ್ನ ಬೈಯ್ಯೆ... ಅಸಹ್ಯ ಪಟ್ಕೊ ನನ್ನ ಮೇಲೆ. ಹೆತ್ತ ತಾಯಿಯಾಗಿ ನಾನು, ನನ್ನ ಹದಿನೈದು ದಿನದ ಹಸುಳೆಯನ್ನ ರಾತ್ರಿಯಿಡೀ ಬರಿಮೈಯಲ್ಲಿ ಅಂಗಳದಲ್ಲಿಟ್ಟುಕೊಂಡು ಕೂತಿದ್ದೆ ಗೊತ್ತಾ? ಅದ್ಯಾಕೆ ಹಾಂಗೆ ಮಾಡಿದ್ನೋ! ಅದ್ಯಾವ ಭೂತ ನನ್ನಲ್ಲಿ ವಕ್ಕರಿಸಿತ್ತೋ...? ಏನಾಯ್ತು... ಹೇಂಗಾಂಯ್ತು ಒಂದೂ ತಿಳೀತಿಲ್ಲಾ ನಂಗೆ... ಛೀ... ಈಗ ಯೋಚ್ನೆ ಮಾಡೋಕೂ ಅಸಹ್ಯ ಅನ್ಸತ್ತೆ..." ತನ್ನ ಮೇಲೇ ಅವಳಿಗಿರುವ ತಿರಸ್ಕಾರ ಮೊಗದಲ್ಲಿ ಒಡೆದು ಕಾಣುತ್ತಿತ್ತು. ಕಣ್ಣೊಳಗೆ ಕೆಂಡದುಂಡೆಯ ಜ್ವಾಲೆ. ಗೆಳತಿಯ ಈ ಹೊಸ ಮುಖದ ಪರಿಚಯವಿಲ್ಲದ ಮಾನಸಳಿಗೂ ನಡುಕ ಹುಟ್ಟಿತು. ಅವಳನ್ನು ಬಳಸಿದ್ದ ಮಾನಸಳ ಕೈಗಳು ಅಪ್ರಯತ್ನವಾಗಿ ಸಡಿಲವಾಗಿದ್ದು ಶುಭಾಳ ಗಮನಕ್ಕೂ ಬಂದು ಪಕಪಕನೆ ನಕ್ಕುಬಿಟ್ಟಳು.
ಅಸಹ್ಯ ಅನ್ಸುತ್ತೆ ಅಲ್ವಾ ನನ್ನ ಮುಟ್ಟೋಕೂ? ಅದ್ರಲ್ಲೇನೂ ತಪ್ಪಿಲ್ವೇ... ನಾನು ಇದಕ್ಕೇ ಯೋಗ್ಯಳು. ನಿಜ ಕಣೆ ಮಾನು... ನಾನೇ ಸ್ವತಃ ಸಾಯಿಸೋಕೆ ಹೊರಟಿದ್ದು! ಹಾಂಗೇ ಕುಳಿತಲ್ಲೇ ಎಷ್ಟು ಹೊತ್ತಿಗೆ ನಿದ್ದೆಗೆ ಜಾರಿದ್ನೋ ಅದೂ ನೆನ್ಪಿಲ್ಲ... ಆದ್ರೆ ನಸುಕಲ್ಲಿ, ಬೆಳಗಿನ ಜಾವದ ಚಳಿ ತಡಿಯೋಕೆ ಆಗದೆ ಎದ್ದುಕುಳಿತೆ. ಸುತ್ತಲೂ ನೋಡೀದ್ರೆ, ಯಾರೂ ಎದ್ದಿರ್ಲಿಲ್ಲ. ಥಟ್ಟನೆ ಮಗು ನೆನ್ಪಾಗಿ ಪಕ್ಕದಲ್ಲಿ ನೋಡಿದ್ರೆ ಬರೀಮೈಲಿದ್ದ ಅದು ಚಳಿಗೆ ನೀಲಿಗಟ್ಟತೊಡಗಿತ್ತು. ಹಾಗೇ ನನ್ನ ಕೈಯನ್ನ ಅದ್ರ ಮೂಗಿಗೆ ಹಿಡಿದ್ರೆ ಉಸಿರು ಕ್ಷೀಣವಾಗಿತ್ತು. ಆ ಚಳಿಲೂ ಅದು ಜೀವ ಹಿಡ್ಕೊಂಡಿತ್ತು ಕಣೆ. ಅದು ಜೀವ..."
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications