ಎಂಕೆಗಾಂಧಿ ಕಥಾಸ್ಪರ್ಧೆ ಬಹುಮಾನ ವಿಜೇತರು

ನಾಡಿನ ಹೆಸರಾಂತ ಸಾಹಿತಿಗಳು, ಲೇಖಕರು ಭಾರೀ ಉತ್ಸಾಹದಿಂದಲೇ ಕಥಾಸ್ಪರ್ಧೆಯಲ್ಲಿ ಪಾಲ್ಗೊಂಡು ಕತೆಗಳನ್ನು ಬರೆದು ಕಳುಹಿಸಿಕೊಟ್ಟಿದ್ದರು. ಆ ಕತೆಗಳನ್ನು ಕತೆಗಾರರಾದ ಡಾ.ನಟರಾಜ್ ಹುಳಿಯಾರ್, ಕೃಷ್ಣ ಮಾಸಡಿ ಮತ್ತು ಅನಿತಾ ಹುಳಿಯಾರ್‌ರವರು ಓದಿ, ಕೂತು ಚರ್ಚಿಸಿ, ಉತ್ತಮವಾದ ಮೂರು ಕತೆಗಳನ್ನು ಆಯ್ಕೆ ಮಾಡಿದರು. ಆ ಮೂರು ಬಹುಮಾನಿತ ಕತೆಗಳು ಇಂತಿವೆ :
* ಮೊದಲ ಬಹುಮಾನ ರೂ. 6,000, ಬಹುಮಾನಿತ ಕತೆ > ಗಾಂಧಿಕಟ್ಟೆ >ಕತೆಗಾರರು > ಕಲಿಗಣನಾಥ ಗುಡದೂರು
* ಎರಡನೆಯ ಬಹುಮಾನ ರೂ. 4,000, ಬಹುಮಾನಿತ ಕತೆ > ವಂದೇಮಾತರಂ > ಕತೆಗಾರರು > ಭಾಗೀರಥಿ ಹೆಗಡೆ
* ಮೂರನೆಯ ಬಹುಮಾನ ರೂ. 3,000 ಬಹುಮಾನಿತ ಕತೆ > ಗಾಂಧಿ ವೇಷ > ಕತೆಗಾರರು> ವಿಶ್ವನಾಥ ಪಾಟೀಲಗೋನಾಳ
ಆಯ್ಕೆಯಾದ ಈ ಮೂರು ಕತೆಗಳನ್ನು ಬರೆದ ಕತೆಗಾರರನ್ನು ದಿನಾಂಕ 22.05.2010 ರ ಶನಿವಾರ ಬೆಂಗಳೂರಿಗೆ ಬರಮಾಡಿಕೊಂಡು, ಪ್ರೆಸ್ ಕ್ಲಬ್‌ನಲ್ಲಿ, ಬಹುಮಾನಿತ ಕತೆಗಾರರಿಗೆ ನಾಡಿನ ಸಂಸ್ಕೃತಿ ಚಿಂತಕರಾದ ಪ್ರೊ. ಕಿ.ರಂ. ನಾಗರಾಜ ಅವರು ಬಹುಮಾನ ವಿತರಣೆ ಮಾಡಿದರು. ವಿಕ್ರಾಂತ ಕರ್ನಾಟಕ ಪತ್ರಿಕೆಯ ರವೀಂದ್ರ ರೇಷ್ಮೆ, ಬಸವರಾಜು ಹಾಗೂ ಬಹುಮಾನವನ್ನು ಪ್ರಾಯೋಜಿಸಿದ ರವಿ ಕೃಷ್ಣಾ ರೆಡ್ಡಿಯವರು ಉಪಸ್ಥಿತರಿದ್ದರು.












Click it and Unblock the Notifications