178864kannada short storyಪ್ರೇಮಶೇಖರ ಸಣ್ಣಕಥೆ ಕ್ರೌರ್ಯ/literature/short-story/2009/0120-premshekhar-short-story-kraurya.html* ಪ್ರೇಮಶೇಖರ, ಪಾಂಡಿಚೆರಿ ಬೆಂಗಳೂರಿನ ಬಸ್ಸು ರಾತ್ರಿ ಹತ್ತೂವರೆಗೆ ಪಾಂಡಿಚೆರಿ ಬಸ್ ನಿಲ್ದಾಣದಿಂದ ಹೊರಟಾಗ ಎಲ್ಲವೂ ಸರಿಯಾಗಿಯೇ ಇತ್ತು. ಭರ್ಜರಿ ಆರಾಮಾಸನ, ವಾತಾನುಕೂಲಿ ಮಜಬೂತು ಐರಾವತದ ಪ್ರಯಾಣ ಕೆಲವೇ ಗಂಟೆಗಳಲ್ಲಿ ದುಃಸ್ವಪ್ನವಾಗಿ ಬದಲಾಗಲಿದ್ದ ಯಾವ ಸೂಚನೆಯೂ ಆಗ ಇರಲಿಲ್ಲ.ನನ್ನದು ಕಿಟಕಿ ಪಕ್ಕದ ಸೀಟು. ಪಕ್ಕದಲ್ಲಿ ಕುಳಿತಿದ್ದ ಎತ್ತರದ ಮನುಷ್ಯ ಹೊಸೂರಿಗೆ ಹೋಗುತ್ತಿರುವುದಾಗಿ ಹೇಳಿದ. ಅವನ ಜತೆ ಔಪಚಾರಿಕವಾಗಿ 34184http://kannada.oneindia.com/img/2009/01/20-premashekhara1.jpg178864kannada short storyಮರಾಠಿ ಚಂದ್ರು/literature/short-story/2009/0302-kannada-short-story-marathi-chandru.htmlಚಂದ್ರು ಅಂಥವರು ಸಮಾಜದ ಎಲ್ಲ ಸ್ತರಗಳಲ್ಲಿಯೂ ಹಾಸುಹೊಕ್ಕಾಗಿದ್ದಾರೆ. ಅವರು ಇಂಥದೇ ಜಾತಿ, ಪಂಗಡಕ್ಕೆ ಸೇರಿರಬೇಕೆಂದಿಲ್ಲ. ಮತ್ತು ಅಂಥವರು ನಮ್ಮ ನಿಮ್ಮ ನಡುವೆಯೇ ಇರುತ್ತಾರೆ. ಮರಾಠಿ ಚಂದ್ರು ಅಂಥವರನ್ನು ಬಳಸಿಕೊಂಡು ಬೇಳೆ ಬೇಯಿಸಿಕೊಳ್ಳುವವರು ಕೂಡ ಇರುತ್ತಾರೆ.* ರಾಜೇಂದ್ರ ಎಚ್ಆರ್, ಬೆಂಗಳೂರುಹೆಸರಿನಲ್ಲೇನಿದೆ ಸ್ವಾಮಿ, ಮರಾಠಿ ಚಂದ್ರುಗೆ ಕನ್ನಡವೇ ಸರಿಯಾಗಿ ಬರೋಲ್ಲ, ಇನ್ನು ಮರಾಠಿ ಎಲ್ಲಿಂದ ಬರುತ್ತೆ...? ಇವನು ಚಿಕ್ಕಮಗಳೂರಿನ ಒಂದು 34941http://kannada.oneindia.com/img/2009/03/02-rajendra-hr1.jpg178864kannada short storyಹೊಸ ಕತೆಗಾರರಿಗೆ 'ಛಂದ'ದ ಆಹ್ವಾನ/literature/book/2009/0318-chanda-pustaka-short-story-award.htmlಕಳೆದ ಐದು ವರ್ಷಗಳಿಂದ ಯಶಸ್ವಿಯಾಗಿ ಹೊಸ ಕತೆಗಾರರ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಛಂದ ಪುಸ್ತಕ 2009ನೇ ಸಾಲಿನ ಬಹುಮಾನಕ್ಕಾಗಿ ಹಸ್ತಪ್ರತಿಗಳನ್ನು ಆಹ್ವಾನಿಸುತ್ತಿದೆ.ಇದುವರೆಗೂ ಒಂದೂ ಕಥಾಸಂಕಲನ ಹೊರತಂದಿರದ ಲೇಖಕರಿಗೆ ಮಾತ್ರ ಅವಕಾಶ. ಸಾಹಿತ್ಯದ ಇತರ ಪ್ರಕಾರಗಳಲ್ಲಿ ಒಂದೆರಡು ಪುಸ್ತಕಗಳು ಪ್ರಕಟವಾಗಿದ್ದರೆ ಪರವಾಯಿಲ್ಲ. ತಮಗೆ ಉತ್ತಮವೆನಿಸಿದ ಸುಮಾರು 10 ಪ್ರಕಟಿತ/ಅಪ್ರಕಟಿತ ಸ್ವಂತ ಕತೆಗಳನ್ನು ಡಿಟಿಪಿ ಮಾಡಿಸಿ ಇಲ್ಲವೇ ಸ್ಫುಟವಾದ ಕೈಬರಹದಲ್ಲಿ ಬರೆದು 35333http://kannada.oneindia.com/img/2009/03/18-chanda4.jpg178864kannada short storyನಂಬಕೂಡದ ಸತ್ಯಕಥೆ/literature/short-story/2009/0321-satyakathe-short-story-by-narayana-murthy.htmlರಾತ್ರಿಯ 10-30ರ ಸಮಯ ತಲೆಯ ಮೇಲೆ ಕೆಂಪು ದೀಪವನ್ನಿಟ್ಟು ಕೊಂಡು ಮಲ್ಯ ಆಸ್ಪತ್ರೆಯ ಅಂಬ್ಯುಲೆನ್ಸ್ ಪುಣೆ ಹೈವೆಯಲ್ಲಿ ಚಿತ್ರದುರ್ಗ ಮಾರ್ಗವಾಗಿ ಹೋಗುತ್ತಿತ್ತು. ಡ್ರೈವರ್ ಆನಂದ ಸತತವಾಗಿ ಅಳುತ್ತಿದ್ದ ಸಂತೂವನ್ನು ಸಮಾಧಾನಪಡಿಸಲು ಹೆಣಗಾಡಿ ಸೋತಿದ್ದ. ಪಿತೃವಿಯೋಗ ಎಂದರೆ ಕೆಲವರಿಗೆ ಹಾಗೆಯೇ ಒಂದು ದಿನದಲ್ಲಿ ಅತ್ತೂ ಕರೆದು ಖಾಲಿ ಆಗುವುದಲ್ಲ. ಅದರಲ್ಲಿಯೂ ಸಂತೂ ಉರೂಫ್ ಸಂತೋಷನಿಗೆ ಸ್ವಪ್ನದಲ್ಲಿಯೂ ತಂದೆಯನ್ನ ಬಿಟ್ಟು 35411http://kannada.oneindia.com/img/2009/03/21-narayana-murthy-hosabale1.jpg178864kannada short storyಸಣ್ಣಕಥೆ : ವಾಸ್ತವ/literature/short-story/2009/0418-vastava-raghavendra-sharma-talavata.htmlಹೊಕ್ಕಳಬಳ್ಳಿ ಛಳಕ್ಕೆಂದೊಡನೆ ಮನಸ್ಸಿನ ಸ್ಥಿಮಿತ ಕಳೆದುಕೊಂಡು ಮಠಾಧಿಪತಿಯನ್ನು ಬಾಯಿಗೆ ಬಂದಂತೆ ಬೈಯುತ್ತಿದ್ದ ಆತನ ಬಗ್ಗೆ ಸ್ವಾಮೀಜಿ ಎಳ್ಳಷ್ಟೂ ಕೋಪಗೊಳ್ಳದಿದ್ದುದು ಸ್ವಾಮೀಜಿ ಬೆಂಬಲಿಗರಿಗೆ ಬಿಸಿ ತುಪ್ಪದಂತಾಗಿತ್ತು. ಅಷ್ಟಕ್ಕೂ ತನಗರಿವಿಲ್ಲದಂತೆ ಆತ ಅನ್ನುತ್ತಿದ್ದಾದರೂ ಏನು? ಆತ ಹೇಳುತ್ತಿದ್ದುದು ತಪ್ಪಾ, ಸರಿಯಾ? ಸ್ವಾಮೀಜಿ ಇದಕ್ಕೆ ಕಂಡುಕೊಂಡ ಪರಿಹಾರವಾದರೂ ಎಂಥದು?* ಆರ್.ಶರ್ಮಾ, ತಲವಾಟಅವನಿಗೆ ಮತ್ತೆ ವಿಚಿತ್ರ ಅನುಭವವಾಗತೊಡಗಿತು. ಹೊಟ್ಟೆಯೊಳಗಿನಿಂದ ಯೋಚನೆಗಳು ಭುಗಿಲೇಳುತ್ತಿದ್ದವು. ಅವುಗಳನ್ನು 36045http://kannada.oneindia.com/img/2009/04/18-raghavendra-sharma1.jpg35075bengaluruಪತ್ನಿಯರಿಂದ ಅತಂತ್ರರಾದ ಗಂಡಂದಿರ ಸ್ವಾತಂತ್ರ್ಯ ಕಹಳೆ/news/2009/08/04/harassed-husbands-meet-on-august-15-in-shimla.htmlಬೆಂಗಳೂರು, ಆ. 4 : ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರುಪಾಯಿ ಎಂದು ಪ್ರೇಮಕವಿ ಕೆಎಸ್ ನರಸಿಂಹಸ್ವಾಮಿಯವರು ಹೆಂಡತಿಯನ್ನು ಕೋಟಿ ರುಪಾಯಿಗೆ ಹೋಲಿಸಿದ್ದಾರೆ. ಆದರೆ ಅದೇ ಕೋಟಿ ರುಪಾಯಿಯ ಹೆಂಡತಿಯರಿಂದ ಪೀಡನೆಗೊಳಗಾಗಿ ಕೋತಿಯಂತಾಗಿರುವ ಗಂಡಂದಿರು ಆಗಸ್ಟ್ 15ರಂದು ಸ್ವಾತಂತ್ರ್ಯ ಬಯಸಿ ಶೀಮ್ಲಾದಲ್ಲಿ ಸಮಾವೇಶ ನಡೆಸಲಿದ್ದಾರೆ.ದೇಶದೆಲ್ಲೆಡೆ ವರದಕ್ಷಿಣೆ ಸಾವು, ಪತಿಯರಿಂದ ಪತ್ನಿಯರ ಮೇಲೆ ದೌರ್ಜನ್ಯದಂತಹ ಸುದ್ದಿಗಳೇ ಪ್ರಾಮುಖ್ಯತೆ ಪಡೆಯುತ್ತವೆ. 38422http://kannada.oneindia.com/img/2009/08/04-harassed-husband1.jpg35075bengaluruಸ೦ತ್ರಸ್ತರಿಗಾಗಿ ಸಿಎಂ ಪಾದಯಾತ್ರೆ/news/2009/10/06/yeddyurappa-and-his-colleagues-does-padayatra.htmlಬೆಂಗಳೂರು, ಅ. 6 : ರಾಜ್ಯದ ಉತ್ತರ ಕರ್ನಾಟಕ ಭಾಗದಲ್ಲಿ ಭಾರೀ ಮಳೆಯ ಪ್ರವಾಹದಿ೦ದಾಗಿ ತತ್ತರಿಸಿರುವ ಸ೦ತ್ರಸ್ತರ ನೆರವಿಗೆ ಮುಖ್ಯಮ೦ತ್ರಿಗಳು, ಸಚಿವರು, ಸ೦ಸದರು ಮತ್ತು ಜನಪ್ರತಿನಿಧಿಗಳೊ೦ದಿಗೆ ಅಕ್ಟೋಬರ್ 7ರ೦ದು ಬೆ೦ಗಳೂರಿನಲ್ಲಿ ಪಾದಯಾತ್ರೆ ನಡೆಸಲಿದ್ದಾರೆ.ನಗರದಲ್ಲಿ ಸುದ್ದಿಗಾರರೊ೦ದಿಗೆ ಮಾತನಾಡುತ್ತಿದ್ದ ಅವರು, ನೆರೆಹಾವಳಿಯಿ೦ದ ಮನೆ, ಮಠ ಕಳೆದುಕೊ೦ಡ ನಿರಾಶ್ರಿತರಾಗಿರುವ ಜನತೆಗೆ ನೆರವು ನೀಡಲು ಬೆ೦ಗಳೂರಿನ ಬೀದಿಗಳಲ್ಲಿ ಮನೆ-ಮನೆಗೆ ಹೋಗಿ ದೇಣಿಗೆ ಸ೦ಗ್ರಹಿಸುವುದಾಗಿ 39536http://kannada.oneindia.com/img/2009/10/06-yediyurappa-oath2.jpg35075bengaluruಪ್ರವಾಹ ನಿಧಿ : ಅವರೆಲ್ಲಿ ಐಟಿ ಮಂದಿ?/news/2009/10/08/flood-corporates-conspicuous-by-their-absence.htmlಉತ್ತರ ಕರ್ನಾಟಕದಲ್ಲಿ ಆಗಿರುವ ಜಲಪ್ರಳಯಕ್ಕೆ ಲಕ್ಷಾಂತರ ಮಂದಿ ವಸತಿಹೀನರಾಗಿರುವ ತಿಳಿದಿರುವ ಸಂಗತಿ. ಪ್ರವಾಹಕ್ಕೀಡಾಗಿರುವ ನತದೃಷ್ಟರ ಪುನರ್ ವಸತಿಗೆ ನೂರಾರು ಕೋಟಿ ರುಪಾಯಿಗಳ ಅವಶ್ಯಕತೆ ಇದೆ. ಮನೆಯಿಲ್ಲ, ಮಠಯಿಲ್ಲ, ವರುಣ ಮುನಿಸಿಗೆ ಪ್ರವಾಹದ ಅಬ್ಬರಕ್ಕೆ ಎಲ್ಲವೂ ಕಳೆದುಹೋಗಿದೆ. ಇಂತಹ ಸಂಕಷ್ಟ ಸಮಯದಲ್ಲಿ ಅವರ ಕೈಹಿಡಿಯುವ ಮೂಲಕ ಮಾನವೀಯತೆ ಮೆರೆಯಬೇಕಿದೆ. ಇದೇ ಕಾರಣಕ್ಕೆ ನಿಧಿ ಸಂಗ್ರಹಕ್ಕಾಗಿ ಬುಧವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ 39576http://kannada.oneindia.com/img/2009/10/08-wipro-logo.jpg35075bengaluruಬೆಂಗಳೂರಿನಲ್ಲಿ ಆಸ್ಕರ್ ವಿಜೇತ ಸ್ಮೈಲ್ ಪಿಂಕಿ/movies/headlines/2009/10/08-smile-pinki-in-bengaluru-pvr-cinemas.html2009ರ ಆಸ್ಕರ್ ಪ್ರಶಸ್ತಿ ವಿಜೇತ ಸಾಕ್ಷ್ಯಚಿತ್ರ 'ಸ್ಮೈಲ್ ಪಿಂಕಿ' ಬೆಂಗಳೂರಿನ ಪಿವಿಆರ್ ಚಿತ್ರಮಂದಿರಗಳಲ್ಲಿ ಬುಧವಾರದಿಂದ(ಅ.7) ಪ್ರದರ್ಶನಗೊಳ್ಳುತ್ತಿದೆ. ಒಂದು ವಾರ ಕಾಲ ಈ ಚಿತ್ರ ನಗರದಲ್ಲಿ ಪ್ರದರ್ಶನ ಕಾಣಲಿದೆ. ಈಗಾಗಲೇ ಈ ಚಿತ್ರ ಮುಂಬೈ ಮತ್ತು ಚೆನ್ನೈ ನಗರಗಳಲ್ಲಿ ಪ್ರದರ್ಶನಗೊಂಡು ಉತ್ತಮ ಪ್ರತಿಕ್ರಿಯೆಗೆ ಪಾತ್ರವಾಗಿದೆ.'ಸ್ಮೈಲ್ ಪಿಂಕಿ' ಚಿತ್ರ ಭಾರತದ ಐದು ನಗರಗಳಲ್ಲಿ ಪ್ರದರ್ಶನಗೊಳ್ಳತ್ತಿದ್ದು ದೆಹಲಿ ಮತ್ತು ವಾರಣಾಸಿಗಳಲ್ಲೂ 39579http://kannada.oneindia.com/img/2009/10/08-smile-pinki1.jpg35075bengaluruಹಸಿವು ಹೆಚ್ಚಿಸುವ ದಂಟಿನ ಸೊಪ್ಪಿನ ಪಲ್ಯ/recipe/palya/2009/1008-dantina-soppina-palya.htmlಹೆಚ್ಚು ನಾರಿನಂಶ ಹೊಂದಿರುವ ದಂಟಿನ ಸೊಪ್ಪಿನ ಪಲ್ಯ ಊಟದ ರುಚಿಯನ್ನು ಹೆಚ್ಚಿಸುತ್ತದೆ ಮಾತ್ರವಲ್ಲ ಆರೋಗ್ಯಕ್ಕೂ ಹಿತಕರ. ದಂಟಿನ ಸೊಪ್ಪಿನ ಪಲ್ಯವನ್ನು ಬಿಸಿಬಿಸಿ ಅನ್ನದೊಂದಿಗೆ ತುಪ್ಪ ಬೆರೆಸಿ ತಿಂದರೆ ನಿಮಗೆ ಗೊತ್ತಿಲ್ಲದಂತೆಯೇ ಎರಡು ತುತ್ತು ಜಾಸ್ತಿಯೇ ಹೊಟ್ಟೆಗಿಳಿದಿರುತ್ತದೆ. ಚಪಾತಿ, ರೊಟ್ಟಿಯೊಡನೆಯೂ ದಂಟಿನ ಸೊಪ್ಪಿನ ಪಲ್ಯವನ್ನು ತಿನ್ನಬಹುದು.* ಭಾರತಿ ಎಚ್ಎಸ್, ಬೆಂಗಳೂರುಬೇಕಾಗುವ ಪದಾರ್ಥಗಳುದಂಟಿನ ಸೊಪ್ಪು ಒಂದು ಬಟ್ಟಲುಬೆಳ್ಳುಳ್ಳಿ ಆರು ಎಸಳು 39590http://kannada.oneindia.com/img/2009/10/08-dantina-soppina-palya1.jpg97543ಸಣ್ಣಕಥೆನರಕದಲ್ಲಿ ಇಂದು : ಎಲ್ಲೂ ಕೇಳಿರದ ಪ್ರೇಮಕಥೆ/literature/short-story/2008/0905-hell-today-kannada-fiction-guruprasad.htmlಚಲನಚಿತ್ರ ನಿರ್ದೇಶಕ ಗುರುಪ್ರಸಾದ್ ಅನೇಕಾರು ಕಥೆಗಳನ್ನು ಬರೆದಿದ್ದಾರೆ, ಬರೆಯುತ್ತಿದ್ದಾರೆ. ತಮ್ಮ ಅಪ್ರಕಟಿತ ಕಥಾ ಕಣಜಕ್ಕೆ ಅವರು ಇಟ್ಟಿರುವ ಹೆಸರು "ಸಿನಿಮಾ ಮಾಡಲಾಗದ ಕಥೆಗಳು". ಈ ಕಥಾ ಗುಚ್ಛದಿಂದ ಆಯ್ದ ಒಂದು ಮುತ್ತು "ನರಕದಲ್ಲಿ ಇಂದು.." ಈ ಕತೆಯನ್ನು ಸೆಲ್ಯುಲ್ಯಾಡ್ ಗೆ ತರಬಹುದಾ? ಯಾವುದಕ್ಕೂ ನಿರ್ದೇಶಕರಿಗೇ ಎರಡು ಸಾಲು ಬರೆಯಿರಿ. ಕಥೆಗಾರ : ಗುರುಪ್ರಸಾದ್, ಬೆಂಗಳೂರು ಈಗ 976http://kannada.oneindia.com/img/2009/07/21-guruprasad3.jpg97543ಸಣ್ಣಕಥೆಮುದ್ದಿನ ಮಗ/nri/short-story/2008/1226-pet-son-ranganath-ps-dubai.htmlತಂದೆ ಮಗನ ಮಧುರ ಸಂಬಂಧಗಳು ಸುಪ್ತವಾಗಿರುತ್ತವೆ. ಅದು ಈಚೆ ಬರಬೇಕಾದರೆ ಸನ್ನಿವೇಶಗಳ ಬೆಂಬಲ ಅಗತ್ಯ ಎಂದು ಸಾರಿಹೇಳುವ ಸಣ್ಣಕಥೆ.* ಪಿ.ಎಸ್. ರಂಗನಾಥ, ದುಬೈರಾತ್ರಿ ಒಂಬತ್ತರ ಸಮಯ, ಟಿವಿ ಯಲ್ಲಿ ಒಂದು ಧಾರವಾಹಿ ಆಗ ತಾನೆ ಶುರುವಾಗಿತ್ತು ಅದನ್ನು ನೋಡೊಣ ಎಂದು ನೆಟ್ಟಕಲ್ಲಪ್ಪನವರು ತಮ್ಮ ಕೆಲಸಗಳನ್ನು ಮುಗಿಸಿ ಟಿವಿ ಮುಂದೆ ಕುಳಿತಿದ್ದರು. ಸ್ವಲ್ಪ ಹೊತ್ತಾಗುವರಲ್ಲಿ ಮೊಬೈಲ್ ಫೋನ್ ರಿಂಗಾಯ್ತು. 33720http://kannada.oneindia.com/img/2008/12/26-ranganath-ps1e.jpg97543ಸಣ್ಣಕಥೆಪ್ರೇಮಶೇಖರ ಸಣ್ಣಕಥೆ ಕ್ರೌರ್ಯ/literature/short-story/2009/0120-premshekhar-short-story-kraurya.html* ಪ್ರೇಮಶೇಖರ, ಪಾಂಡಿಚೆರಿ ಬೆಂಗಳೂರಿನ ಬಸ್ಸು ರಾತ್ರಿ ಹತ್ತೂವರೆಗೆ ಪಾಂಡಿಚೆರಿ ಬಸ್ ನಿಲ್ದಾಣದಿಂದ ಹೊರಟಾಗ ಎಲ್ಲವೂ ಸರಿಯಾಗಿಯೇ ಇತ್ತು. ಭರ್ಜರಿ ಆರಾಮಾಸನ, ವಾತಾನುಕೂಲಿ ಮಜಬೂತು ಐರಾವತದ ಪ್ರಯಾಣ ಕೆಲವೇ ಗಂಟೆಗಳಲ್ಲಿ ದುಃಸ್ವಪ್ನವಾಗಿ ಬದಲಾಗಲಿದ್ದ ಯಾವ ಸೂಚನೆಯೂ ಆಗ ಇರಲಿಲ್ಲ.ನನ್ನದು ಕಿಟಕಿ ಪಕ್ಕದ ಸೀಟು. ಪಕ್ಕದಲ್ಲಿ ಕುಳಿತಿದ್ದ ಎತ್ತರದ ಮನುಷ್ಯ ಹೊಸೂರಿಗೆ ಹೋಗುತ್ತಿರುವುದಾಗಿ ಹೇಳಿದ. ಅವನ ಜತೆ ಔಪಚಾರಿಕವಾಗಿ 34184http://kannada.oneindia.com/img/2009/01/20-premashekhara1.jpg97543ಸಣ್ಣಕಥೆಕಡಲಕಿನಾರೆಯ ಕಥಾ ಪ್ರಸಂಗಗಳು/column/shreenidhi/2009/0127-beach-is-not-a-funspot-for-fishermen.htmlಕಾಡುಹರಟೆಗಳಲ್ಲಿ ಸಮುದ್ರದ ಹರಟೆಗಳೂ ಇರುತ್ತವಾ? ಅಲೆಗಳ ಏರಿಳಿತಕ್ಕೆ ಸಂವಾದಿಯಾಗಿ ಅರಳುವ ಮುದುರುವ ಮಡಿಚಿಕೊಳ್ಳುವ ಒಂದು ಮೀನುಗಾರ ಕುಟುಂಬದ ಕಥಾಕಾಲಕ್ಷೇಪಕ್ಕೆ ನಿಮಗೆಲ್ಲ ಸ್ವಾಗತ. ರಜಾ ಕಾಲದಲ್ಲಿ ಬೀಚುಗಳಿಗೆ, ಬೀಚು ರೆಸಾರ್ಟುಗಳಿಗೆ ನಾವು ವಿಹಾರ ಕೈಗೊಳ್ಳುವುದಕ್ಕೂ, 365 ದಿವಸ ಅಲ್ಲಿಯೇ ಬದುಕಿನ ಲಂಗರು ಹಾಕುವುದಕ್ಕೂ ಇರುವ ವ್ಯತ್ಯಾಸಗಳನ್ನು ಮಾರ್ಮಿಕವಾಗಿ ಚಿತ್ರಿಸುವ ಇದು ಸೇಸು ಪುರಾಣವಲ್ಲದೆ ಮತ್ತೇನು?* ಶ್ರೀನಿಧಿ ಡಿ.ಎಸ್.ಸೇಸುಗೆ ಎಂದಿನ 34318http://kannada.oneindia.com/img/2009/01/27-ullal-beach1.jpg97543ಸಣ್ಣಕಥೆಮರಾಠಿ ಚಂದ್ರು/literature/short-story/2009/0302-kannada-short-story-marathi-chandru.htmlಚಂದ್ರು ಅಂಥವರು ಸಮಾಜದ ಎಲ್ಲ ಸ್ತರಗಳಲ್ಲಿಯೂ ಹಾಸುಹೊಕ್ಕಾಗಿದ್ದಾರೆ. ಅವರು ಇಂಥದೇ ಜಾತಿ, ಪಂಗಡಕ್ಕೆ ಸೇರಿರಬೇಕೆಂದಿಲ್ಲ. ಮತ್ತು ಅಂಥವರು ನಮ್ಮ ನಿಮ್ಮ ನಡುವೆಯೇ ಇರುತ್ತಾರೆ. ಮರಾಠಿ ಚಂದ್ರು ಅಂಥವರನ್ನು ಬಳಸಿಕೊಂಡು ಬೇಳೆ ಬೇಯಿಸಿಕೊಳ್ಳುವವರು ಕೂಡ ಇರುತ್ತಾರೆ.* ರಾಜೇಂದ್ರ ಎಚ್ಆರ್, ಬೆಂಗಳೂರುಹೆಸರಿನಲ್ಲೇನಿದೆ ಸ್ವಾಮಿ, ಮರಾಠಿ ಚಂದ್ರುಗೆ ಕನ್ನಡವೇ ಸರಿಯಾಗಿ ಬರೋಲ್ಲ, ಇನ್ನು ಮರಾಠಿ ಎಲ್ಲಿಂದ ಬರುತ್ತೆ...? ಇವನು ಚಿಕ್ಕಮಗಳೂರಿನ ಒಂದು 34941http://kannada.oneindia.com/img/2009/03/02-rajendra-hr1.jpgnews"> ಮರಾಠಿ ಚಂದ್ರು | Marathi Chandru | Kananda short story | Rajendra HR - ಸಣ್ಣಕಥೆ : ಮರಾಠಿ ಚಂದ್ರು - Kannada Oneindia

ಮರಾಠಿ ಚಂದ್ರು

Rajendra HR, Bengaluru
ಚಂದ್ರು ಅಂಥವರು ಸಮಾಜದ ಎಲ್ಲ ಸ್ತರಗಳಲ್ಲಿಯೂ ಹಾಸುಹೊಕ್ಕಾಗಿದ್ದಾರೆ. ಅವರು ಇಂಥದೇ ಜಾತಿ, ಪಂಗಡಕ್ಕೆ ಸೇರಿರಬೇಕೆಂದಿಲ್ಲ. ಮತ್ತು ಅಂಥವರು ನಮ್ಮ ನಿಮ್ಮ ನಡುವೆಯೇ ಇರುತ್ತಾರೆ. ಮರಾಠಿ ಚಂದ್ರು ಅಂಥವರನ್ನು ಬಳಸಿಕೊಂಡು ಬೇಳೆ ಬೇಯಿಸಿಕೊಳ್ಳುವವರು ಕೂಡ ಇರುತ್ತಾರೆ.

* ರಾಜೇಂದ್ರ ಎಚ್ಆರ್, ಬೆಂಗಳೂರು

ಹೆಸರಿನಲ್ಲೇನಿದೆ ಸ್ವಾಮಿ, ಮರಾಠಿ ಚಂದ್ರುಗೆ ಕನ್ನಡವೇ ಸರಿಯಾಗಿ ಬರೋಲ್ಲ, ಇನ್ನು ಮರಾಠಿ ಎಲ್ಲಿಂದ ಬರುತ್ತೆ...? ಇವನು ಚಿಕ್ಕಮಗಳೂರಿನ ಒಂದು ಚಿಕ್ಕಹಳ್ಳಿಯ ಗ್ರಾಮಸ್ತ, ನೋಡಲು ಹಾವಾಡಿಗನಂತೆ ಕಾಣುವ ಈತ, ಮಾತಿನ ಮಲ್ಲ. ಮೂರನೆ ಕ್ಲಾಸ್ ದಾಟದಿದ್ದರೂ, ನಿಮಿಷಕ್ಕೆ 360 ಮಾತನಾಡುವುದು ಇವನ ಸ್ಪೆಷಲ್ ಕೆಪಾಸಿಟಿ. ಬಾಯಿತುಂಬ ಜರದ, ಹೊಗೆಸೊಪ್ಪು ಇದ್ರೇನೆ ಇವನ ಆಟ. ಫಿಟ್ಸ್ ರೋಗವಿದ್ದರೂ ಅದಕ್ಕೆ ಕೇರ್ ಮಾಡೋ ಆಸಾಮಿಯಲ್ಲ. ಹಾಗಾಗಿ ಬೆಳಗಿನ ಗಂಜಿಕಾಸುವ ಬೆಂಕಿಗೆ ಇವನ ಕೈ-ಮೈಗಳು ಆಹುತಿಯಾಗಿ ಇವನ ಸೌಂದರ್ಯಕ್ಕೆ ವಿಶೇಷವಾದ ಕಳೆಬರುವಂತೆ ಮಾಡಿವೆ.

ಕುಡುಕನಲ್ಲದಿದ್ದರೂ ಕುಡುಕರಿಗಿಂತಲೂ ಕಡೆಯಾಗಿ ಯೋಚಿಸುವ ಶಕ್ತಿ ದೈವದತ್ತ ಬಳುವಳಿಯಾಗಿ ಇವನಲ್ಲಿದೆ. ಮೂರಕ್ಷರ ಕಲಿತಿದ್ದರೆ ಎಮ್.ಎಲ್.ಎ, ಹೋಗಲಿ, ಪಂಚಾಯತ್ ಅಧ್ಯಕ್ಷನಾಗಿಯಾದರೂ ಹಳ್ಳಿಯನ್ನು ಆಳುತಿದ್ದ. ಈಗೇನು ಕಮ್ಮಿಯಿಲ್ಲ.. ಊರವರನ್ನೆಲ್ಲ ಎದುರು ಹಾಕಿಕೊಂಡು ಒಂದು ಕೈ ನೋಡಿಯೆಬಿಡುವೆ ಎನ್ನಬಲ್ಲ....

ಹೋಯ್ ಹಾಗದರೆ ಚಂದ್ರು ಯಾರು..? ಅವನಿಗೆ ಅಷ್ಟೊಂದು ಸಾಮರ್ಥ್ಯ ಇದೆಯೇ ಎಂದು ಅವನ ಮನೆ ಪಕ್ಕದ 'ಶೀತ'ರಾಮನಲ್ಲಿ ಕೇಳಿದರೆ...."ಸ್ವಾಮಿ ಕೈಯಲ್ಲಿ ಗರಟ ಹಿಡಿದು ನಿಲ್ಲಲು ಶಕ್ತಿಯಿಲ್ಲದಿದ್ದರೂ, ತುಂಬ ಒರಟ, ಹೊಡಿತೀನಿ ,ಬಡಿತೀನಿ ಅಂತಾನೆ ಬಡ್ಡೀಮಗ" ಎಂದು ಬೀಡಿ ಸೇದುತ್ತಾ ಹೇಳ್ತಾನೆ.

ಸರಿ, ಈ ಚಂದ್ರುಗೆ ಯಾಕೆ ಬಂತು ಈ ಹಾಳಾದ ರೋಗ ಅಂತ ಅವನೆಲ್ಲೆ ಕೇಳಿದರೆ, "ನಂಗೆ ಈ ವರ್ಸ ಸರ್ಪದ ದೋಸ ಇದೆ, ಹಾಗಾಗಿ ಹಿಂಗೆ ಮಾತಾಡ್ತ ಇರಬೇಕಾಗಿದೆ, 500 ರೂ ಸಾಲ ಕೊಡಿ, ದೊರಗಲ್ಲ ಭಟ್ಟರತ್ರ ಪೂಜೆಮಾಡಿಸುತ್ತೇನೆ" ಅಂತ ಸಾಲಕೇಳೊ ಐನಾತಿ ಈ ಚಂದ್ರು.

ಇವನ ಕೊಳಕು ಮಾತುಗಳನ್ನು ಕೇಳಿ-ಕೇಳಿ ರೋಸಿ ಹೋದ ಇವನ ಜೊತೆಗಾರರು ಇವನಿಗೆ ತಕ್ಕ ಶಾಸ್ತಿ ಮಾಡಲು ಇವನನ್ನು ತಮ್ಮಜೊತೆ ಭಟ್ಟರಮನೆ ತೋಟದ ಕೆಲಸಕ್ಕೆ ಬಾರದಂತೆ ಕಂಡಿಶನ್ ಹಾಕಲು ಪ್ಲಾನ್ ಮಾಡಿಟ್ಟುಕೊಂಡಿದ್ದಾರೆ. ಅರೇ ಅವನು ಕೆಟ್ಟದಾಗಿ ಬಯ್ದರೆ ಇವರೇಕೆ ಬಯ್ಯಿಸಿಕೊಳ್ಳಬೇಕು? ಯಾಕೆ ನಾಲ್ಕು ಬಾರಿಸುತ್ತಿಲ್ಲ ಆ ಬಡ ಜೀವಿಗೆ, ಇವರೇನು ಗಾಂಧಿವಾದಿಗಳೇ? ಅದಕ್ಕೆ ಉತ್ತರ ಅವನ ಜಾತಿ. ಇವನು ಅನ್ಟ್‍ಚ್ಚೇಬಲ್ ಸಾಲಿಡ್ ಒಬ್ಜೆಕ್ಟ್!

ಸರ್ಕಾರದ ಪಾಲಿಸಿಗಳು ಎಲ್ಲಿಯತನಕ ಮಿಸ್ಯುಸ್ ಆಗುತ್ತವೆ ಅನ್ನುವುದಕ್ಕೆ ಇದೊಂದು ಉದಾಹರಣೆ ಅಷ್ಟೆ. ಇವನ ಪಂಗಡವನ್ನು ದಲಿತರ ಗುಂಪಿಗೆ ಸೇರಿಸಿದ್ದರಿಂದ ಅವರ ಸವಲತ್ತುಗಳು ಇವನಿಗೆ ಲಭ್ಯವಾಗಿದೆ. ಹಾಗಾಗಿ ಇವನಿಗೆ ಹೊಡೆತ ಬಿದ್ದರೆ, ದಲಿತರ ದೌರ್ಜನ್ಯದ ಹೆಸರಿನಲ್ಲಿ ಹೊಡೆದವನ ಹೆಡೆಮುರಿಯುವ ಸರ್ಕಾರ, ಇವನ ಕೈಗೆ ಹಣ ಇಡುತ್ತೆ, ಪರಿಹಾರದ ರೂಪದಲ್ಲಿ. ಹೀಗಾಗಿ ತನ್ನ ಮೇಲೆ ಒಂದು ಮಾತನಾಡಿದರೆ ನೂರು ಮಾತನಾಡುವ ಶಕ್ತಿ ಸರ್ಕಾರ ಇವನಿಗೆ ದಯಪಾಲಿಸಿದೆ. ಹಾಗಾಗಿ ತನ್ನ ಕುಡುಕ ಜೊತೆಗಾರರಿಗೆ ಗಂಟಲೊಳಗಿನ ಬಿಸಿರಮ್ ನಂತಾಗಿದ್ದನೆ.

ಚಂದ್ರುವಿಗೆ ತಕ್ಕ ಪಾಠ ಕಲಿಸಲು ಮೇಸ್ತ್ರಿ 'ಶೀತ'ರಾಮನು ಹೆಂಡದಂಗಡಿಯಲ್ಲಿ ವಿಶೇಷವಾದ ಸಭೆಯೊಂದನ್ನು ಕರೆದು, ಅಂಗಡಿಯವ ಸಾಲ ನಿರಾಕರಿಸುವವರೆಗೆ ಕುಡಿದು, ಚಂದ್ರುವನ್ನು ಭಟ್ಟರಮನೆಯ ಕೆಲಸದಿಂದ ಬಹಿಷ್ಕರಿಸುವ ನಿರ್ಣಯಕ್ಕೆ ಬರುತ್ತಾರೆ. ಮಾರನೇ ದಿನ ಮೇಸ್ತ್ರಿ ತನ್ನ ಜೊತೆಗಾರರ ಜೊತೆಗೆ ಭಟ್ಟರಲ್ಲಿ ತಮ್ಮ ನಿರ್ಣಯವನ್ನು ತಿಳಿಸುತ್ತಾರೆ. ಆದರೆ ಅವರಿಗೆ ಅವನಮೇಲೆ ಯಾವುದೇ ದ್ವೇಷವಿಲ್ಲ, 15 ವರ್ಷದ ಸೇವೆ ಮನಸ್ಸಿನಲ್ಲಿದೆ ಜೊತೆಗೆ ಅವನ ಸಾಲದ ಲೆಕ್ಕ ಪುಸ್ತಕದಲ್ಲಿದೆ. ನೋಡ್ರಪ್ಪ ನಿಮ್ಮ ಜಗಳವನ್ನೆಲ್ಲ ನಮ್ಮ ಮನೆ ಕಾಂಪೌಂಡ್ ಒಳಗೆ ತರಬೇಡಿ ಎಂದರು. ಅವಿವೇಕಿಗಳಾದ ಮೇಸ್ತ್ರಿ ಕಡೆಯವರು ಹೆಂಡದಂಗಡಿಯಲ್ಲಿ ಕೊಂಡ ತೀರ್ಮಾನಕ್ಕೆ ಅಂಟಿಕೊಂಡಿದ್ದರು. ಕೆಲಸದ ಸಮಯವನ್ನೆಲ್ಲ ವ್ಯರ್ಥಮಾಡುವ ಲಕ್ಷಣತೋರಿದ್ದರಿಂದ ಅವರ ತೀರ್ಮಾನಕ್ಕೆ ಅಸ್ತು ಅನ್ನದೆ ವಿಧಿಯಿರಲಿಲ್ಲ.

ಇಷ್ಟಾಗುವಾಗ ಚಂದ್ರು ಅಲ್ಲಿ ಪ್ರತ್ಯಕ್ಷನಾಗಿದ್ದನು, ಕೆಲಸಗಾರರೆಲ್ಲ ಚದುರಿದರು. ಆದರೆ ಅವರ ಮಾತುಗಳು ವಾತಾವರಣದಲ್ಲಿ ಹಾಗೆ ಉಳಿದು ಚಂದ್ರುವಿನ ಕಿವಿಹೊಕ್ಕಿತು. ಬಾಯಿಯಲಿದ್ದ ಜರದ ತಲೆಗೇರಿ ದರಿದ್ರನ ಮನಸ್ಸನ್ನು ದಿಕ್ಕಪಾಲಾಗಿಸಿತು. ಅಗಿಯುತಿದ್ದ ಜರದವನ್ನು ಅಲ್ಲೇ ತುಪ್ಪಿ ಶುರುವಿಟ್ಟನು, ಸೂಳೆಮಕ್ಕಳ, ನಿಮ್ಮ ಹಣೆಬರಹಕ್ಕೆ ಬೆಂಕಿಹಾಕ, ಹೇಸಿಗೆ ತಿನ್ನುವ ನಾಯಿಗಳ, ನಿಮ್ಮ ಮಾತಿಗೆಲ್ಲ ಜಗ್ಗುವಮಗನಲ್ಲ ಎನ್ನುತ್ತ ತನ್ನ ಸಾಹುಕಾರನ್ನು ಕೂಗಿದನು.

ಭಟ್ಟರೆ ನೀವು ಆ ನಾಯಿಗಳ ಮಾತು ಕೇಳ್ತಿರಾ, ನಿಮ್ಮ ಮನೆ ಕೆಲಸಕ್ಕೆ ನಾ ಬೇಡ ಅನ್ನೋಕೆ ಆ ತೋಲಪ್ಪನಾಯಕನ್ಯಾರು? ಸರಿ..ಬಿಡಪ್ಪ ನಿನಗೆ ನನ್ನ ಸ್ನೇಹಿತನ ಮನೆಯಲ್ಲಿ ಕೆಲಸ ಕೊಡಿಸುವ-ಅಂದರೆ, ಅವನು-ಹೋ, ಇದೆಲ್ಲ ಒಪ್ಪುವ ಮಗ ನಾನಲ್ಲ. ನಾನು ದುಡಿಯುವ ಮನುಷ್ಯ, ಎಲ್ಲಿ ಬೇಕಾದರು ದುಡಿಯಬಲ್ಲೆ, ಆದರೆ ನನ್ನ ಸೇವೆ ಏನಿದ್ದರು ಈ ಮನೆಗೆ. ನನ್ನ ಸಾಲವೇನು ಅವರಪ್ಪ ತೀರಿಸುತ್ತಾರ, ನಾ ಇಲ್ಲಿ ಕೆಲಸ ಮಾಡೋದು ಯಾರು ತಪ್ಪಿಸುತ್ತಾರೆ ನೋಡೇಬಿಡುವೆ ಎನ್ನುತ್ತ, ಭಟ್ಟರ ಉತ್ತರಕ್ಕೂ ಕಾಯದೆ ಬಿರಬಿರನೆ ನಡೆದ.

ಸಂಜೆಕಳೆಯಿತು, ಚಂದ್ರು ಹೊರಬಂದು ಸೀದ ಮೇಸ್ತ್ರಿಮನೆ ಮುಂದೆ ಹೋದ, ಆಗತಾನೆ ಕುಡಿದು ಬಂದಿದ್ದ ಮೇಸ್ತ್ರಿಯನ್ನು ಜೋರಾಗಿ ಕೂಗಿದ. ವಠಾರದಲ್ಲಿದ್ದವರೆಲ್ಲ ಅಲ್ಲಿ ಸೇರಿದ್ದರು, ಉತ್ತೇಜನಗೊಂಡ ಚಂದ್ರು-ದುಷ್ಟ ಬೋಳಿಮಗನೆ, ನನ್ನ ಕೆಲಸಕ್ಕೆ ಬ್ಯಾಡ ಅನ್ನುತಿಯೇನೊ? ಎಂದ. ಮತ್ತಿನಲ್ಲಿ ತೇಲುತಿದ್ದ ಮೇಸ್ತ್ರಿ ಹೆದರಿಸಲು ದೊಣ್ಣೆಯೊಂದಿಗೆ ಹೊರಬಂದ. ಮಾತಿಗೆ ಮಾತು ಬೆಳೆದು, ಗಂಡಸ್ತನದ ಪ್ರಶ್ನೆ ಎದುರಾದಗ, ಮೇಸ್ತ್ರಿ ಒಂದೇಟು ಹಾಕಿಯೇ ಬಿಟ್ಟ. ಇಷ್ಟು ಸಾಕಿತ್ತು ಸರ್ಕಾರಿ ಹಣ ದುರುಪಯೋಗವಾಗಲು. ಅಲ್ಲಿ ಸೇರಿದ್ದ ಮಕ್ಕಳೆಲ್ಲ ಭಾರಿ ಫೈಟಿಂಗ್ ಒಂದನ್ನು ನಿರೀಕ್ಷಿಸಿದ್ದರು, ಒಂದೇ ಏಟಿಗೆ ತೆಪ್ಪನಾದ ಚಂದ್ರು ಅವರಿಗೆ ನಿರಾಸೆ ಗೊಳಿಸಿದ್ದ. ಚಂದ್ರು ಸೋತು ಗೆದ್ದಿದ್ದ.

ಊರೆಲ್ಲ ಸುದ್ದಿಹಬ್ಬಿದಮೇಲೆ, ಅಲ್ಲಿಗೆ ಬಂದ ಲೋಕಲ್ ಪೇಪರ್ ಸಂಪಾದಕ ಸಂಜಯ್ ಶೆಟ್ಟಿ. ಇಂತಹ ಕೇಸ್‍ಗಳನ್ನು ನಯವಾಗಿ ಸರಿಪಡಿಸುವಲ್ಲಿ ಇವನದು ಎತ್ತಿದ ಕೈ. ಹೆಣ್ಣುಮಕ್ಕಳ್ಯಾರಾದರು ಮನೆ ಬಿಟ್ಟು ಓಡಿಹೋದರೆ, ಗಂಡ ಹೆಂಡಿರು ಜಗಳವಾಡಿಕೊಂಡರೆ, ಆ ಮನೆಯನ್ನು ಕೂಡಲೆ ತಲುಪಿ ಬಣ್ಣದ ಮಾತುಗಳನ್ನಾಡಿ ಜೇಬು ತುಂಬಿಸಿಕೊಂಡು ಹೋಗುವ, ಹಣ ಕೊಡಲು ಒಪ್ಪದಿರೆ ತನ್ನ ಪೇಪರ್‌ನ ಕಾಲಂ ತುಂಬಿಸುವ ಛಾತಿ ಇವನದು. ಬಂದವನೆ ಮೇಸ್ತ್ರಿಯಮನೆ ಹೊಕ್ಕು ಅವನಿಗರ್ಥವಾಗದ ಭಾಷೆಯಲ್ಲಿ ಕಾನೂನಿನ ಉದ್ದಗಲಗಳನ್ನು ವಿವರಿಸಿ, ಇವನಿಂದ ತನಗೇನು ಪ್ರಯೋಜನವಿಲ್ಲವೆಂದೆಣಿಸಿ, ಮೇಸ್ತ್ರಿಗೆ ಜೀವನವೇಸಾಕು ಎಂಬಷ್ಟರ ಮಟ್ಟಿಗೆ ಹೆದರಿಸಿ, ಕೂಡಲೆ ಚಂದ್ರುವಿನ ಮನೆಸೇರಿ ಅವನ ಮನತುಂಬಿಸಿ, ಒಳಒಪ್ಪಂದವಂದನ್ನು ಮಾಡಿಕೊಂಡು ತನ್ನ ಪ್ರೆಸ್ ತಲುಪಿದನು. ಆ ಸಂಜೆ ತನ್ನ ಲೋಕಲ್‍ಪೇಪರ್ 'ಬಡವರಕೂಗು'ವಿನಲ್ಲಿ ದಲಿತನ ದೌರ್ಜನ್ಯ ಎಂದು ದೊಡ್ಡದಾಗಿ ಪ್ರಕಟಿಸಿ, ಕಾಣದ ಕೈಗಳ ಕೈವಾಡವಿದೆಯೆಂದು ಸೇರಿಸಿದನು. ಚಂದ್ರು ಪೊಲೀಸ್ ಕೇಸ್ ಒಂದನ್ನು ನೋಂದಾಯಿಸಿ ತನ್ನ ಕರ್ತವ್ಯಮೆರೆದನು.. ಇತ್ತ ಮೇಸ್ತ್ರಿ ಮಾತ್ರ ಒಬ್ಬಂಟಿಗನಾಗಿ ನೋವಿನ ಜೊತೆ, ಹೆಂಡಹೀರುತ್ತ ಕುಳಿತಿದ್ದನು. ಆ ದಿನ ಕಳೆಯಿತು.

ಅಪರೂಪಕ್ಕೊಮ್ಮೆ ಪೋಲಿಸ್ ಜೀಪ್ ಹಳ್ಳಿಕಡೆಗೆ ಬರುತ್ತದೆ, ಹಾಗಾಗಿ ಎಲ್ಲರೂ ಅದನ್ನು ವಿಶೇಷವಾಗಿ ಗಮನಿಸುತ್ತಾರೆ. ಸಣ್ಣಹಳ್ಳಿಯಾಗಿದ್ದರಿಂದ ಪೋಲಿಸ್ ಬಂದಕಾರಣ ಪ್ರತಿಯೊಬ್ಬರಿಗು ತಿಳಿದಿರುತ್ತದೆ. ಭಾನುವಾರ ಆದಕಾರಣ ಮೇಸ್ತ್ರಿಮಲಗೆ ಇದ್ದ, ಅಷ್ಟರಮಟ್ಟಿಗೆ ರಾತ್ರಿ ಕುಡಿದ ಮದ್ಯ ಕೆಲಸಮಾಡಿತ್ತು. ಪೋಲಿಸ್ ಜೀಪ್ ಮನೆ ಮುಂದೆನಿಂತಾಗ ಮೇಸ್ತ್ರಿಗೆ ಎಚ್ಚರವಾಗಿ ಪ್ರತಿರೋಧ ತೋರದೆ ಹೊರನೆಡೆದ. ಪೋಲಿಸ್ ಇನ್ಸ್‍ಪೆಕ್ಟರ್ ಕರಿಯಪ್ಪ ದರ್ಪದಿಂದ ಜೀಪ್ ಹತ್ತೋ ಬೋಳಿಮಗನೆ ಅಂದ... ಬಾಯಿ ಬಡಿಯುತ್ತ, ಅಯ್ಯೋ ನನ್ನ ಯಜಮಾನರು ಏನೂ ತಪ್ಪುಮಾಡಿಲ್ಲವೆನ್ನುತ್ತ ಸತಿ ಸಾವಿತ್ರಿ ಹೊರಬಂದಳು, ಮೇಸ್ತ್ರಿ ಮಕ್ಕಳ ಚೀರಾಟ ಸುತ್ತಲ ಜನರನ್ನು ಹತ್ತಿರ ಸೇರಿಸಿತು.

ಮೇಸ್ತ್ರಿ ತನ್ನ ಸಣಕಲು ಸ್ವರದಲ್ಲಿ- ಸಾಯಬ್ರೆ, ಸ್ಟೆಷನ್‍ಗೆಲ್ಲ ಯಾಕೆ? ನಾನು ಏನ್ ತಪ್ಪು ಮಾಡಿದ್ದೇನೆ? ಸಿಟ್ಟಿಗೆದ್ದ ಕರಿಯಪ್ಪ ಕೆನ್ನೆಗೊಂದು ಬೀಸಿ ಬಾಯಿಗೆ ಬಂದ ಹಾಗೆ ಮಾತನಾಡಲಾರಂಭಿಸಿದನು. ಹಲ್ಕನನ್ನಮಕ್ಕಳ ಬಡದಲಿತ ನನ್ನು ಹಿಂಸಿಸುತ್ತೀರ? ಏನೆಂದು ಕೊಂಡಿದ್ದೀರ ಕಾನೂನನ್ನು, ಮೇಸ್ತ್ರಿಯ ಕಣ್ಣಲ್ಲಿ ನೀರು... ನೋವಿಗಲ್ಲ, ಮರ್ಯಾದೆಗೆ.

ಅರೇ, ಯಾರೋ ನನ್ನ ಪರವೇ ಮಾತನಾಡುತ್ತಿದ್ದಾರಲ್ಲ ಎಂದು ಯೋಚಿಸುತ್ತ ಚಂದ್ರು ತನ್ನ ಮನೆಯಿಂದ ಹೊರಬಿದ್ದನು. ಮೇಸ್ತ್ರಿಮನೆಕಡೆಗೆ ಅವನ ದೃಷ್ಟಿಹರಿಯಿತು... ಅವನ ಹೆಂಡತಿ, ಮಕ್ಕಳ ಕೂಗು ಮುಗಿಲು ಮುಟ್ಟುತ್ತಿದೆ. ಇತ್ತ ಮೇಸ್ತ್ರಿ, ಕರಿಯಪ್ಪನ ಬಿ.ಪಿಗೆ ಬಲಿಯಾಗುತಿದ್ದರೆ, ಜನ ಮರಗುವವರಂತೆ ನಟಿಸುತ್ತ ತಮಾಷೆನೋಡುತ್ತಿದ್ದಾರೆ.... ಚಂದ್ರುವಿಗೆ ಭೀಕರ ಕೋಪಬಂತು. ನೆರೆದ ಜನಗಳಮೇಲೆ, ಸಂಜಯ್ ಶೆಟ್ಟಿಯ ಮೇಲೆ, ನಂತರ ತನ್ನಮೇಲೆಯೇ...ಏನೇನೋ ಯೋಚಿಸಿ ಇನ್ಸ್‍ಪೆಕ್ಟರ್ ಕರಿಯಪ್ಪನ ಬಳಿನೆಡೆದ.

ಸಾರ್, ಕೇಸ್ ವಾಪಾಸ್ ತಗೊಳ್ತೀನಿ, ಅವನನ್ನು ಬಿಟ್ಟುಬಿಡಿ ಸಾರ್.....ಕರಿಯಪ್ಪ ಸಿಟ್ಟಿನಿಂದ ಇವನ ಮುಖನೋಡಿ, ಇವನಿಗೂ ನಾಲ್ಕು ಬಿಗಿಯುವ ಮನಸ್ಸು ಮಾಡುತ್ತಾನೆ. ಕೂಡಲೆ ಕಾಯಿದೆಯ ನೆನಪಾಗಿ, ದರಿದ್ರ ಮಕ್ಕಳ ನೀವೆಲ್ಲಾ ಒಂದೆ, ನಡಿ ಸ್ಟೆಷನ್‍ಗೆ. ಬರಿ ಬಾಯಲ್ಲಿ ಹೇಳಿದರಾಗಲಿಲ್ಲ, ಬಂದು ಸಹಿಹಾಕು ಎಂದು ಜೀಪುಹತ್ತಿಸಿದ. ಎಲ್ಲರು ಮನೆಸೇರಿದರು.. ಇತ್ತ ಸೂರ್ಯಕೂಡ ಚಂದ್ರುವಿನ ಮನಸ್ಸನ್ನು ಅರ್ಥಮಾಡಿಕೊಳ್ಳಲಾಗದೆ ಮೋಡದ ಮರೆಯಲ್ಲಿ ಕಳೆದುಹೋದ;

ನಂತರ ವಾರದ 'ಬಡವರಕೂಗು'ವಿನಲ್ಲಿ "ದೊಡ್ಡವರ ದುಡ್ಡುತಿಂದ ಇನ್ಸ್‍ಪೆಕ್ಟರ್ ಕರಿಯಪ್ಪ" ಎಂದು ಪ್ರಕಟವಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+