ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬುರುಡೆ

By Staff
|
Google Oneindia Kannada News

(...ಕಥೆಯ ಹಿಂದಿನ ಭಾಗ)

ರಸ್ತೆಗೆ ಅಡ್ಡವಾಗಿ ಐದಡಿ ಅಗಲದ ಕಾಲುವೆಯೊಂದನ್ನು ತೋಡಿದ್ದರು. ಕಟ್ಟಬೇಕಾಗಿರುವ ಕಲ್ವರ್ಟ್‌ಗೆಂದು ಕಲ್ಲುಗಳನ್ನೂ, ಮರಳನ್ನೂ ರಾಶಿ ಹಾಕಿದ್ದರು. ಅಲ್ಲೇ ನಿಂತು ಅದನ್ನು ದಾಟಲು ದಾರಿ ಯಾವುದು ಎಂದು ಎಡಬಲ ಟಾರ್ಚ್‌ ಬೆಳಕು ಹರಿದಾಡಿಸಿದೆ. ಎಡಕ್ಕೆ ಸ್ಮಶಾನದ ಬೇಲಿಯನ್ನು ಕತ್ತರಿಸಿದ್ದುದು ಕಂಡುಬಂತು. ಅದರ ಮೂಲಕ ಸ್ಮಶಾನದ ಒಳಗೆ ಹಾದು ನಂತರ ಮತ್ತೆ ಮಣ್ಣುಹಾದಿಗೆ ಇಳಿಯಬಹುದು ಎನಿಸಿತು. ಅತ್ತ ಹೆಜ್ಜೆ ಇಟ್ಟೆ.

ಸ್ಮಶಾನದೊಳಗೆ ಹಾದು ಮತ್ತೆ ರಸ್ತೆಗೆ ಇಳಿಯಬೇಕೆಂದು ನೋಡಿದರೆ ಅಲ್ಲಿ ಕತ್ತರಿಸಿದ ಮುಂಡುಗಳ್ಳಿಗಳ ರಾಶಿ ಅಡ್ಡವಾಗಿತ್ತು. ಮತ್ತೂ ಎಡಕ್ಕೆ ಹಾದುಹೋಗಿದ್ದ ಕಾಲುಹಾದಿಯನ್ನೇ ಅರೆಕ್ಷಣ ದಿಟ್ಟಿಸಿದೆ. ಇದರಲ್ಲಿ ನಡೆದರೆ ಸ್ವಲ್ಪ ದೂರದ ನಂತರ ಮತ್ತೆ ಮಣ್ಣುಹಾದಿ ಸೇರಬಹುದೇ ಅಥವಾ ಈ ಕಾಲುದಾರಿ ನನ್ನನ್ನು ಬೇರೆತ್ತಲೋ ಕರೆದೊಯ್ಯುತ್ತದೆಯೇ? ಪ್ರಶ್ನೆ ಮೂಡಿತು. ಹಾಗೇ ನಿಂತೆ.

ಬೆನ್ನ ಹಿಂದೆ ಯಾರೋ ಕೆಮ್ಮಿದಂತಾಯಿತು!

ಬೆಚ್ಚಿ ಗಕ್ಕನೆ ಹಿಂದೆ ತಿರುಗಿದೆ. ಕರ್ರಗಿನ ಆಕೃತಿಯೊಂದು ನನ್ನತ್ತ ಬರುತ್ತಿತ್ತು! ಅದೇನು ಕರಿಯ ಕಂಬಳಿ ಹೊದ್ದ ಮನುಷ್ಯನೋ ಅಥವಾ...?

ನನ್ನ ಪ್ರಶ್ನೆಗೆ ಮಂಗಳ ಹಾಡುವಂತೆ ಆ ಆಕೃತಿಯಿಂದ ಗೊರಗು ದನಿ ಬಂತು. ''ಹಾಗೇ ಮುಂದಕ್ಕೆ ನಡೀರಿ. ಊರು ಸಿಕ್ತೈತೆ.""

ಓಹೋ ಇದು ನನ್ನ ಹಾಗೇ ನರಮನುಷ್ಯನೇ! ನೆಮ್ಮದಿಯೆನಿಸಿತು.

''ನೀವೂ ಮಲ್ಲಿಗೆಹಳ್ಳಿಗೆ ಹೋಗ್ತಿದೀರಾ?"" ಕೇಳಿದೆ.

ಉತ್ತರವಾಗಿ ಬಂದದ್ದು ಕೆಮ್ಮು. ಅದರ ನಡುವೆ ಏನೋ ಗೊಣಗಾಟ. ಅದು ''ಹ್ಞೂಂ"" ಎಂದೋ ಅಥವಾ ''ಉಹ್ಞುಂ"" ಎಂದೋ ಗೊತ್ತಾಗಲಿಲ್ಲ. ಮತ್ತೊಮ್ಮೆ ಕೇಳಿದೆ. ಈಗ ಕೆಮ್ಮಿನ ನಡುವೆ ಪದಗಳು ಹೊರಬಂದವು. ''ಹ್ಞೂಂ ಅತ್ಲಾಗೇ ಬತ್ತಾ ಇವ್ನಿ.""

ಸಮಾಧಾನವೆನಿಸಿತು. ದಾರಿ ತೋರಲು ಒಂದು ನರಪ್ರಾಣಿ ಜತೆಗಿದ್ದರೆ ಗುರಿ ಹತ್ತಿರ, ಬದುಕು ಸರಾಗ.

ಮುಂದೆ ನಡೆದೆ. ಕುರುಚಲು ಗಿಡಗಂಟೆಗಳ ನಡುವೆ ಏರಿಳಿಯುತ್ತಾ ದಾರಿ ಸಾಗಿತ್ತು. ನೆಲವನ್ನೇ ನೋಡುತ್ತಾ ಎಚ್ಚರಿಕೆಯಿಂದ ಹೆಜ್ಜೆ ಹಾಕಿದೆ. ಐದಾರು ನಿಮಿಷ ನಡೆದಿರಬೇಕು. ಕಲ್ಲೊಂದನ್ನೆಡವಿ ಮುಗ್ಗರಿಸಿದೆ. ಜೇಬಿನಿಂದ ಏನೋ ಹೊರಚಿಮ್ಮಿದಂತೆನಿಸಿತು. ಸಾವರಿಸಿಕೊಂಡು ನಿಂತು ಜೇಬಿಗೆ ಕೈ ಹಾಕಿದೆ. ಸೆಲ್‌ ಫೋನ್‌ ಮಾಯವಾಗಿತ್ತು! ಅದೆತ್ತ ಎಗರಿ ಬಿತ್ತೋ ತಿಳಿಯಲಿಲ್ಲ. ಆತುರಾತುರವಾಗಿ ಅತ್ತಿತ್ತ ಟಾರ್ಚ್‌ ಬೆಳಕು ಹಾಯಿಸಿದೆ. ಒಂದಕ್ಕೊಂದು ಹೆಣೆದುಕೊಂಡಿದ್ದ ಮುಳ್ಳುಕಂಟಿ, ಕಾಡುಗಿಡಗಳಲ್ಲಿ ನನ್ನ ಸೆಲ್‌ ಫೋನ್‌ ಕಾಣುವಂತಿರಲಿಲ್ಲ. ''ಇವರೇ... ಇವರೇ... ಸ್ವಲ್ಪ ಇಲ್ಲಿ ಬನ್ನಿ."" ಹಿಂತಿರುಗದೇ ಪೊದೆಗಳ ಮೇಲೆ ಕಣ್ಣಿಟ್ಟೇ ಕರೆದೆ.

ಹಿಂದಿನಿಂದ ಉತ್ತರ ಬರಲಿಲ್ಲ!

ಅಚ್ಚರಿಯಾಯಿತು. ಹುಡುಕಾಟ ನಿಲ್ಲಿಸಿ ಹಿಂದೆ ತಿರುಗಿದೆ.

ನನ್ನ ಹಿಂದೆ ಯಾರೂ ಇರಲಿಲ್ಲ!

ಅರೆ! ಕರೀ ಕಂಬಳಿ ಹೊದ್ದ ಮನುಷ್ಯ ಇದೆಲ್ಲಿ ಮಾಯವಾಗಿಹೋದ?

ಅತ್ತಿತ್ತ ಟಾರ್ಚ್‌ ಬೆಳಕು ಹರಿದಾಡಿಸಿದೆ. ಉಹ್ಞುಂ ಅವನು ಕಣ್ಣಿಗೆ ಬೀಳಲಿಲ್ಲ. ಅದ್ಯಾವ ಮಾಯದಲ್ಲೋ ಈ ಕತ್ತಲಿನಲ್ಲಿ ಬಂದಂತೇ ಕರಗಿಹೋಗಿದ್ದ.

ಏರಿ ಇಳಿಯುತ್ತಿದ್ದ ಕಿರಿದಾದ ಅಪರಿಚಿತ ಕಾಲುಹಾದಿ, ಎಡಬಲದಲ್ಲಿ ಕುರುಚಲು ಗಿಡಗಂಟೆಗಳು. ಎಲ್ಲವೂ ನಿಶ್ಚಲ, ನೀರವ. ಕತ್ತಲ ರಾತ್ರಿ. ನನ್ನನ್ನು ಈ ದಾರಿಯಲ್ಲಿ ನಡೆಸಿದ ಮನುಷ್ಯ ಏಕಾಏಕಿ ನಾಪತ್ತೆ!

ನಾನು ಸ್ಥಂಭಿತನಾಗಿ ನಿಂತೆ.

ಹಾಗೊಮ್ಮೆ ಗಾಳಿ ಬೀಸಿತು. ಅದರ ಹಿಂದೆಯೇ ಸಾವಿರಾರು ಎಲೆಗಳ ಸಾಮೂಹಿಕ ಪಟಪಟ ಶಬ್ಧ ಎಡದಿಂದ ಕೇಳಿಬಂತು. ಅತ್ತ ತಿರುಗಿದೆ. ದೈತ್ಯಾಕಾರದ ವೃಕ್ಷವೊಂದು ಕತ್ತಲಿನಲ್ಲಿ ಭಯ ಹುಟ್ಟಿಸುವಂತೆ ನಿಂತಿತ್ತು. ಅದು ಅರಳೀಮರವೇ ಇರಬೇಕು. ನಸುಗಾಳಿ ಬೀಸಿದಾಗ ಹಾಗೆ ಪಟಗುಟ್ಟುವುಧು ಅರಳೀ ಎಲೆಗಳು ಮಾತ್ರ.

ಎಲೆಗಳ ಪಟಗುಟ್ಟುವಿಕೆ ನಿಲ್ಲುತ್ತಿದ್ದಂತೇ ಮಲ್ಲಿಗೆ ಹೂವಿನ ಗಾಢ ಪರಿಮಳ ತೇಲಿಬಂತು! ಹಿಂದೆಯೇ ಗೆಜ್ಜೆಯ ''ರಿkುಲ್‌ ರಿkುಲ್‌"" ಶಬ್ಧ! ಜತೆಗೆ ಹೆಣ್ಣಿನ ಕುಲುಕುಲು ನಗೆ!

ಬೆಚ್ಚಿ ಎದಬಲ ತಿರುಗಿದೆ. ಯಾರೂ ಕಣ್ಣಿಗೆ ಬೀಳಲಿಲ್ಲ!

ಮಲ್ಲಿಗೆಯ ಪರಿಮಳ ಏಕಾಏಕಿ ಮಾಯ. ಗೆಜ್ಜೆ ಶಬ್ಧ, ಕುಲುಕುಲು ನಗೆ ಎರಡೂ ಥಟ್ಟನೆ ನಿಂತುಹೋದವು. ಮತ್ತೆ ಎಲ್ಲೆಡೆ ನಿಶ್ಶಬ್ಧ.

ಇದೇನು ಭ್ರಮೆಯೇ? ಏನೊಂದೂ ಅರ್ಥವಾಗದೇ ಬೆಪ್ಪನಂತೆ ಅತ್ತಿತ್ತ ನೋಟ ಹೊರಳಿಸಿದೆ. ಅರಳೀಮರದ ಪಕ್ಕದಲ್ಲಿ ಅದಕ್ಕಿಂತಲೂ ಕಪ್ಪಾಗಿ ನಿಂತಿದ್ದ ಮತ್ತೊಂದು ಮರದ ಕೆಳಗೆ ಮಿಣುಕು ಬೆಳಕು ಕಂಡಿತು.

ಅಲ್ಲಿ ಯಾರೋ ಇದ್ದಾರೆ! ಅವರಿಂದ ನನಗೆ ಸರಿಯಾದ ದಾರಿ ತಿಳಿಯಬಹುದು. ಅತ್ತ ನಡೆದೆ. ಬೆಳಕನ್ನು ಸಮೀಪಿಸಿದಂತೆ ಅದೊಂದು ಹಣತೆ ಎಂದು ಗುರುತು ಹತ್ತಿತು. ಆದರೆ ಅಕ್ಕಪಕ್ಕದಲ್ಲಿ ಯಾರೂ ಇಲ್ಲ! ಇದೇನು ಸೋಜಿಗ?

ವಲ್ಪ ದೂರದಲ್ಲಿ ನಿಂತು ''ಯಾರಾದರೂ ಇದ್ದೀರಾ?"" ಎಂದು ಕೂಗಿದೆ. ನನ್ನ ದನಿ ಪಾತಾಳದಿಂದ ಬಂದಂತೆನಿಸಿತು. ಮತ್ತೊಮ್ಮೆ ಕೂಗಿದೆ. ಉಹ್ಞುಂ ಯಾರ ಪ್ರತಿಕ್ರಿಯೆಯೂ ಇಲ್ಲ.

ಏನೋ ಸೆಳೆತಕ್ಕೊಳಗಾದವನಂತೆ ದೀಪದತ್ತ ಮತ್ತೆರಡು ಹೆಜ್ಜೆ ಇಟ್ಟೆ. ಹಣತೆ ನೆಲದ ಮೇಲಿರದೇ ಯಾವುದೋ ಪುಟ್ಟ ಬಿಳುಪು ವೇದಿಕೆಯ ಮೇಲಿದ್ದಂತೆ ಕಂಡಿತು. ಅದೇನೆಂದು ಕುತೂಹಲವಾಯಿತು. ಮತ್ತೆರಡು ಹೆಜ್ಜೆ ಮುಂದಿಟ್ಟೆ... ಬಿಟ್ಟಕಣ್ಣುಬಿಟ್ಟಂತೇ ನಿಂತುಬಿಟ್ಟೆ.

ಅಲ್ಲಿ ನಾನು ಕಂಡದ್ದು...! ಓಹ್‌ ದೇವರೇ...

ಕಥೆಯ ಮುಂದಿನ ಭಾಗ »

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X