ಮರಳಿ ಬಾ ತವರಿಗೆ ಮಲೆನಾಡಿಗ

ಋಷಿಗಳಂತಿರುವ ಅಚಲ ಗುಡ್ಡಗಾಡು
ಚಿಲಿಪಿಲಿ ನಿನಾದದ ಹಕ್ಕಿಗಳ ಬೀಡು
ಕಬ್ಬಿಗನೇ ನೀ ಸುಮ್ಮನೆ ಬಂದುಬಿಡು
ಪಟ್ಟಣದ ಸಂತೆಯಲಿ ಕಳೆದುಹೋಗದಿರು
ಸ್ವರತಿಯವರೊಡನಾಡಿ ಮತ್ತೆ ಮರುಗದಿರು
ಭೂಲೋಕದ ನಾಕವಿದು ಮರೆಯದಿರು
ಬಂದು ನೆಲೆಸಿಲ್ಲಿ ನೀ ಸುಖವಾಗಿರು
ಪ್ರಕೃತಿದೇವಿಯೇ ನೆಲೆಸಿರುವ ಜಾಗ
ಇಲ್ಲಿಲ್ಲ ಮೈಮರೆಸುವ ವೈಭೋಗ
ಅರೆಹೊಟ್ಟೆಯನುಂಡರೂ ಸಂತಸವಾಗಿರುವ ಮೊಗ
ನೋಡಿ ನೀನೂ ಅವರಂತಾಗು ಕಬ್ಬಿಗ
ಹಣದಾಸೆಗೆ ನಿನ್ನನೇ ಮಾರಿಕೊಂಡಿರುವ ಓ ಚತುರ
ಖಂಡಿತಾ ಕ್ಷಮಿಸುವಳೀ ತಾಯಿ ಮತ್ತೆ ಬಾರಾ
ಮನಸು ಮುರಿಯುವ ಮೊದಲು ತೆಗೆದುಕೋ ನಿರ್ಧಾರ
ಆಗ ಹರಿದು ಬಂದೀತು ನಿನ್ನೆದೆಗೆ ಸಂತಸದ ಮಹಾಪೂರ












Click it and Unblock the Notifications