ನಮ್ಮ ನಾಡು

ನಾನಾ ನದಿಗಳಿಗೆ ಜಾಗಕೊಟ್ಟು
ಜಲಪಾತಗಳ ಧುಮುಕಬಿಟ್ಟು
ದಿನಮಣಿ ಇಡುವನು ಮೂಡಣದಿ ಬೊಟ್ಟು
ಸುತ್ತಲೂ ಹರಿದ್ವರ್ಣದ ಕಾಡುಗಳು
ಪಡೆದಿದೆ ಆಶ್ರಯವ ನಾನಾ ಪ್ರಾಣಿಗಳು
ತೇಗ ಶ್ರೀಗಂಧ ಮರಗಳ ಸಾಲು
ಮಾಡಿವೆ ಕನ್ನಡತಿಯ ಎಲ್ಲದರಲು ಮೇಲು
ಸಾಂಸ್ಕೃತಿಕ ಕಲೆಗಳ ತವರೂರು
ಇಲ್ಲಿ ಕವಿಗಳದೆ ಕಾರುಬಾರು
ತಾಯಿ ಮಡಿಲ ತುಂಬಿದೆ ಏಳು ಜ್ಞಾನಪೀಠ
ಶಾಸ್ತ್ರೀಯ ಸ್ಥಾನಮಾನದ ಗೌರವ ಪಟ್ಟ
ವಿಜಯ ಕನಕ ಪುರಂದರದಾಸರು
ಸಾವಿರ ದೀಪಗಳರಮನೆಯ ಅರಸರು
ಗಣ್ಯಾತಿಗಣ್ಯ ವ್ಯಕ್ತಿಗಳನೇಕರು
ಕರ್ನಾಟಕವೇ ನಮ್ಮೆಲ್ಲರ ತವರು
ಉಳಿಸಿಬೆಳೆಸುವಾ ಬನ್ನಿ ಕರುನಾಡನು
ಬನ್ನಿ ಹಾಡುವಾ ಕನ್ನಡಮ್ಮನ ಹಾಡನು












Click it and Unblock the Notifications