ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂಗ ಆದಂಗ್ ಆಗ್ತೀವ್ ನಾವು ನಮ್ ರತ್ನನ್ ಪದಗಳ್ಗೆ!

By Staff
|
Google Oneindia Kannada News

ಇವತ್ತು(ಡಿ.5) ಜಿ.ಪಿ ರಾಜರತ್ನಂರ ಹುಟ್ದಬ್ಬ. ಬಹಳಷ್ಟು ಮಂದ್ಗೆ ನೆನಪಿರಕ್ಕಿಲ್ಲ. ಈ ಸಂದರ್ಭ್‌ನಾಗಾದ್ರೂ ರತ್ನನ್ನ ನೆನಸ್ಗೊಳ್ಳೋಣ ಅಂತ ಅವ್ರ ಒಂದು ಕವನ ಕೊಡ್ತಿದ್ದೀವಿ. ರತ್ನನ್ ಪದಗಳ್ನ ಕೇಳಿ ಕೇಳಿ ಖುಸಿ ಪಟ್ಟಿರ್ತೀರಾ. ನಿಮ್ ಖುಸಿಗೆ ಅಂತ ಅವರ 'ತಿರುಮಂತ್ರ" ಇಲ್ಲಿದೆ. ನೀವು ನೆಚ್ಚಿಗೊಳ್ತೀರಾ ಅಂತ ನಾವ್ ತಿಳ್ಗೋಬೋದಾ?

ಜಿ.ಪಿ.ರಾಜರತ್ನಂ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳುಯಾಂಡಲ್ ಯಿಂಗ್ ಯಿಡೀಕ್ಕ !
ಶೀಟ್ ಮ್ಯಾಗ್ ಮಡೀಕ್ಕ !

ಐ...ನಾಚ್ ಕ್ಯಾಕೆ ಮಲ್ಲಿ ?
ಯಾರೆ ಔರ್ ಇಲ್ಲಿ ?
ತಿಂಗಳ್ ಇದ್ರೇನೇ ? ಸುತ್ತೆಲ್ಲ ಮಬ್ಬು.
ಬೇಕಾರೆ ನೀ ನನ್ನ ಯಿಂಗ್ ಇಲ್ಲೆ ತಬ್ಬು
ಪತ್ತೇನ್ ಆಗೊಲ್ಲ !
ನೋಡೋರ್ ಯಾರಿಲ್ಲ !

ಯಿಂಗ್ ಕುಂತರ್ ಎಂಗೆ ? ನಾ ಕಲಿಶಿ ಕೊಡಕ್ ಉಂಟ ?
ಯಾಕೆ ಪಿರಕೀ? ನಿಂಗೆ ಸಡಿಲನಾ ಸೊಂಟ ?
ನಂಬು ನಿನ ಪಕದಾಗ ನಾನ್ ಇರೋಗಂಟ-
ಮೀಶೆ ಮ್ಯಾಗ್ ಯಿಂಗ್ ಕೈಯಿ ! ಬೈಸಿಕಲು ಬಂಟ !

ಅಕ್ಕಳಿಸಿತು- ಎಳೆ -ಎಳಕೋ -ವೊಟ್ಟೇ- ವೊಳೀಕೆ !
ಮುಂಬಾರ ! ಅಯ್ ! ಅಷ್ಟು ಬಗ್ ಬ್ಯಾಡ್ ಕೆಳೀಕೆ !
ಆ ! ಅಂಗೆ ! ಕುದುರೆ ಮ್ಯಾಗ್ ಶಿಪ್ಪಾಯ್ ಕುಂತಂಗೆ !
ನಡದಿಂದ ಮ್ಯಾಗೆ ಮೈ ಇರಬೇಕ್ ನಿಂತಂಗೆ

ಇಲ್ಲಿ - ಈ ಕಾಲ್ ಇತ್ತ - ಇ ಪ್ಯಡಲ ಮ್ಯಾಗ್ ಆಕು ;
ಅಲ್ಲಿ - ಆ ಕಾಲ್ ತತ್ತ - ಆ ಪ್ಯಡಲ ತುಳಿ, ನೂಕು ;

ಇದು ಬಿರೇಕ್ - ಮುಟ್ಟ ಬ್ಯಾಡ್ ಇದನ್ !
ಮುಟ್ಟಿದರೆ ಯಿಕ್ ತೈತೆ ಮೊಕ್ಕೆ ಮೂರ್ ಒದೇನ !

ವಾಲ್ ಬ್ಯಾಡ ಅಂಗೆ ನನ ಮ್ಯಾಗೆ !
ಅದಕೆಲ್ಲ ವೊತ್ತು - ಇಳಿದ ಆ ಮ್ಯಾಗೆ !

ಕುಂತೀಯ ಬದ್ರ ?
ಕೈಯ ಬಿಡಲೀಯ ?
ಬೀಳೊ ವಂಗಾದ್ರೆ-
ಇಲ್ಲೀವ್ನಿ ಸಾಯ !

ಬಿಡಲಿಯಾ ? ಬಿಡತೀನಿ !
ಆ ! ಇದೋ ! ಬಿಟ್ಟೆ ! ಬಿಟ್ಟೆ !
ಎಲ ಮಲ್ಲಿ ! ಎನೆ ನೀನ್ ಇಂಗ್ ಓಗ್ತಿ-
-ವೋಗು ವಂಗ್ ಚಿಟ್ಟೆ !
ದುಂಬಿ ವೊದಂಗ್ ಓಗ್ತಿ, ಕಂಬ ಸುತ್ ದಂಗ್ ಸುತ್ತ್ ತಿ,
ಪ್ಯಡಲ ತುಳಿತುಳಿತಿ, ಸರ್ಕಸೇ ಮಾಡ್ ತಿ ;
ಯಾಂಡಲೇ ಕೈಬಿಡತಿ, ಆಚೀಚಿಗ್ ಇಂಗ್ ಆಡ್ ತಿ ;
ಕೈಯ ಕೊಟ್ಳಲ್ಲಪ್ಪೋ ನಂಗೆ ನನ್ ಯೆಡ್ ತಿ !

"ಸೈಕಲ್ಲ, ಮಾರಾಯ್ತಿ, ಕಲಿಸಿದೋರ್ ಯಾರೇ
ನಿಂಗೆ, ನನ ಗರತಿ ?"
"ಪ್ಯಾಟೆ ಅಣದೀರೆಲ್ಲ ಪಾಟಿ ಯೇಳೌರೆ
ನಂಗಿಲ್ಲಿ ನೂರಾರು ಸರತಿ "

ಮತ್ತೇನೆ ಮಡಗೀದಿ - ಭರತನಾಟ್ಯ ?
ಚಿಂತಿಲ್ಲ - ಯೇಳು ರಾಸ್ಯ "
ಯೇಳೋವ ಕೇಳೋವ -ಸಮಯ ಬತ್ತೈತೆ-
ಈಗ ಸಾಕೇಳಿ ಅಸ್ಯ."

'ಬತ್ತೀರ ಒಂದು ಕೈ ? ಡಬ್ಬಲ್ ಸವಾರೀ !"
ಬಾರ್ ಮ್ಯಾಗೆ ? ಊಂರೀ ನಿಜಾ ರೀ !"
" ಸದ್ಯ ಕತ್ಲಾಗ್ ಕಳದೆ ನನ್ನ ಮರುವಾದಿ !
ಬರದಿದ್ರೆ ಬಿಟ್ಟೀಯಾ ಬಜಾರಿ !"

ಇನ್ನಷ್ಟು :

ಪರವೂರಲ್ಲಿ ಕೈಹಿಡಿದ ರಾಜರತ್ನಂ ಗೀತೆಗಳೆಂಬ 'ಪ್ರೇಮಗೋಲು
ಭೂಮಿಕಾದಲ್ಲಿ ಹರಿದ ಜಿ.ಪಿ.ರಾಜರತ್ನಂ ಕಾವ್ಯಸುಧೆ..." title="ಪರವೂರಲ್ಲಿ ಕೈಹಿಡಿದ ರಾಜರತ್ನಂ ಗೀತೆಗಳೆಂಬ 'ಪ್ರೇಮಗೋಲು"
ಭೂಮಿಕಾದಲ್ಲಿ ಹರಿದ ಜಿ.ಪಿ.ರಾಜರತ್ನಂ ಕಾವ್ಯಸುಧೆ..." />ಪರವೂರಲ್ಲಿ ಕೈಹಿಡಿದ ರಾಜರತ್ನಂ ಗೀತೆಗಳೆಂಬ 'ಪ್ರೇಮಗೋಲು"
ಭೂಮಿಕಾದಲ್ಲಿ ಹರಿದ ಜಿ.ಪಿ.ರಾಜರತ್ನಂ ಕಾವ್ಯಸುಧೆ...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X