ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೀಪಾವಳಿ

By Staff
|
Google Oneindia Kannada News
  • ವಿಕ್ರಮ್‌ ಹತ್ವಾರ್‌, ಬೆಂಗಳೂರು
    [email protected]
-1-

ಇಂದ್ರ, ಅಗ್ನಿ,
ನಿಋತ, ಯಮ,
ವಾಯು, ವರುಣ,
ಈಶಾನ, ಸೋಮ
ದಿಕ್ಕು ದಿಕ್ಕಿನಲ್ಲಿಯೂ
ಬೆಳಗು ಬೆಳಗು
ಬೆಳಗು ಬೆಳಗು
ಬೆಳಗು ಬೆಳಗು ದೀಪವ
ಹಣತೆ ಪೀಠದಂಚಿನಲ್ಲಿ
ತಪೋನಿರತ ಅಗ್ನಿದೇವ

ಪಂಚ- ಭೂತ,
ಕರ್ಮ, ಜ್ಞಾನ.
ಅಹಂ-ಬುದ್ಧಿ-
ಚಿತ್ತ-ಸ್ಮರಣ-
ಮನಸು, ಸಾಕ್ಷಿಯಲ್ಲಿಯೂ
ಜ್ವಲಿಸು ಜ್ವಲಿಸು
ಜ್ವಲಿಸು ಜ್ವಲಿಸು
ಪ್ರಜ್ವಲಿಸು ಪ್ರಾಣ ಪ್ರಜ್ಞೆ
ತೃಣ ತೃಣಗಳ ಅಣುವಿನಲ್ಲಿ
ಸಾಕಾರ ಸುಗುಣ ಚಿಹ್ನೆ

-2-

ದೇವಕೋಣೆ, ಹೊಸ್ತಿಲು,
ಜಗಲಿ-ಚಾವಡಿ-ಮೆಟ್ಟಿಲು
ಅಂಗಳ, ಹೆಬ್ಬಾಗಿಲು,
ತುಳಸಿ ಬೃಂದಾವನ ಸುತ್ತಲೂ,
ಪುರದ ಮೂಲೆ ಮೂಲೆಗೆ
ಒಳಹೊರಗಿನ ಮಬ್ಬಿಗೆ
ಅವಳಿ ದೀಪ ದಾಳಿ-
ಜ್ಯೋತಿರ್ಮಯ

-3-

ವರುಷಕೊಮ್ಮೆಯಾದರೂ
ಆ ಚಂದ್ರ ನಾಚಲಿ
ತಾನಿಲ್ಲದಿರುಳು ಬುವಿಗೆ
ಸೊಬಗಿಲ್ಲವೆಂಬ ಗರ್ವ ಮುರಿಯಲಿ
ಕಾಣದ ಇರುಳಲಿ
ನೂರು ನೋವನು ದಾಟಿ
ಕವಿತೆ ಚಿಮ್ಮಿದ ಹಾಗೆ
ಹೂಕುಂಡವಿರಲಿ ಇರದಿರಲಿ
ಕಾರ್ತಿಕನ ಉಡುಗೊರೆಗೆ
ಹಣತೆ ಸದಾ ಸಂಭ್ರಮಿಸಲಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X