ಹನಿಗವನಗಳು
- ಚಂದ್ರಮ, ಬೆಂಗಳೂರು
[email protected]
ನೀನು ಬಂದೆಯೆಂದು
ನೆರಳು ಸರಿದಾಡಿದರೂ ಅನಿಸುತ್ತೆ
ನೀನು ಬಂದೆಯೆಂದು
ಈಗ ನೀನೆ ಹೇಳು ನಲ್ಲೆ
ನೀನ್ಯಾವ ಭೂತಕ್ಕಿಂತ ಕಮ್ಮಿಯೆಂದು !!!
*
ಸುಡೊದಕ್ಕೆ ಬೆಂಕಿ ಅಂತಾರೆ
ಆರಿದ್ದಕ್ಕೆ ಬೂದಿ ಅಂತಾರೆ
ನಿನ್ನ ಹತ್ತಿರ ಏನಿಲ್ಲವೋ
ಅದಕ್ಕೆ ಮೆದುಳು ಅಂತಾರೆ !!!
*
ದೇವರು ಭೂಮಿಯನ್ನು ಸೃಷ್ಟಿಸಿದ
ಅರಣ್ಯವನ್ನು ಸೃಷ್ಟಿಸಿದ
ನದಿ ಕೆರೆಗಳನ್ನು ಸೃಷ್ಟಿಸಿದ
ಜೊತೆಗೆ ನಿನ್ನನ್ನು ಸೃಷ್ಟಿಸಿದ
ಹೌದು ದೇವರು ಕೂಡ ಕೆಲವೊಮ್ಮೆ
ತಪ್ಪು ಮಾಡುತ್ತಾನೆ !!!
*
ಮದ್ಯದಿಂದ ನಶೆ ಏರುತ್ತದೆ
ನಶೆಯಿಂದ ಛಲ ಬರುತ್ತದೆ
ಛಲದಿಂದ ದುಡಿಮೆಯಾಗುತ್ತದೆ
ದುಡಿಮೆಯಿಂದ ದುಡ್ಡು ಬರುತ್ತದೆ
ದುಡ್ಡಿನಿಂದ ಗೌರವ ಬರುತ್ತದೆ
ಅದಕ್ಕೆ ಗೌರವ ಪಡೆಯಲು
ಮದ್ಯ ಸೇವನೆ ಅಗತ್ಯವಾಗಿರುತ್ತದೆ
Cheers!
*
ಹೂವಿನಂತೆ ಸುಂದರ ಯಾವುದೂ ಇಲ್ಲ
ಸಾಗರದ ಆಳದಷ್ಟು ಯಾವುದೂ ಇಲ್ಲ
ಇನ್ನೂ ನಿನ್ನ ಏನೆಂದು ಹೊಗಳಲಿ
ಗೆಳೆಯಾ ನಿನ್ನಂಥ
ನಾಲಾಯಕ್ ಯಾರೂ ಇಲ್ಲ
*
ತುಟಿಯಿಂದ ಮುತ್ತಿಟ್ಟ
ಅನುಭವ ಇನ್ನೂ ಹಾಗೆ ಇದೆ
ಕಣ್ಣಾಲಿಗಳಲ್ಲಿ ನೀರಿದೆ
ಊಸಿರಾಟದಲ್ಲಿ ಜ್ವಾಲೆಯಿದೆ
ಯಾಕಿರಲ್ಲ ಹೇಳು
ನೀ ತಿನ್ನಿಸಿದ ಹಸಿ ಮೆಣಸಿನಕಾಯಿ
ಇನ್ನೂ ಬಾಯಲ್ಲಿ ಹಾಗೆ ಇದೆ !!!
More From
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications