ಭ್ರಮೆಯ ಜಿಗುರು ಪ್ರತಿಭೆ ವಿಶ್ವಾಸ್ ವಸಿಷ್ಠ
'ಭ್ರಮೆ' ತಂಡದಲ್ಲಿರುವ ಮತ್ತೊಬ್ಬ ಯುವ ಪ್ರತಿಭಾವಂತ ಸಂಗೀತಗಾರ ವಿಶ್ವಾಸ್ ವಸಿಷ್ಠ. ವಿಕಾಸ ವಸಿಷ್ಠ ಅವರ ಸಹೋದರರಾಗಿರುವ ವಿಶ್ವಾಸ್ ಭ್ರಮೆ ತಂಡದಲ್ಲಿರುವ ಸದಸ್ಯರಲ್ಲಿ ಕಿರಿಯರು. ಆದರೆ, ಅವರ ಸಂಗೀತದಲ್ಲಿ ಯಾವುದೇ ಕಿರಿತನವಿಲ್ಲ.
ಅಣ್ಣ ವಿಕಾಸ ಜೊತೆ ಗುರು ಬಾಲಸುಬ್ರಮಣ್ಯ ಶರ್ಮಾ ಅವರ ಬಳಿ ಕಳೆದ 12 ವರ್ಷಗಳಿಂದ ಕರ್ನಾಟಕ ಸಂಗೀತ ಕಲಿಯುತ್ತಿರುವ ವಿಶ್ವಾಸ್ ಅವರು, ಸುಗಮ ಸಂಗೀತವನ್ನು ಉಪಾಸನಾ ಮೋಹನ್ ಮತ್ತು ನರಹರಿ ದೀಕ್ಷಿತ್ ಅವರ ಬಳಿ ಕಲಿಯುತ್ತಿದ್ದಾರೆ.

ಅವರ ಪ್ರತಿಭೆಗೆ ಮರುಳಾಗಿ ಹಲವಾರು ಪ್ರಶಸ್ತಿಗಳು ತಾವಾಗಿಯೇ ಹುಡುಕಿ ಬಂದಿವೆ. ಈಟಿವಿ ಕನ್ನಡದ ಎದೆ ತುಂಬಿ ಹಾಡುವೆನು ರಿಯಾಲಿಟಿ ಶೋನಲ್ಲಿ ವಿಶ್ವಾಸ್ ಅಂತಿಮ ಹಂತ ತಲುಪಿದ್ದರು. ಕರ್ನಾಟಕ ಸರಕಾರದಿಂದ ಪ್ರತಿಭಾಶ್ರೀ ಪ್ರಶಸ್ತಿ ಮತ್ತು ಬಾಲ ಪ್ರತಿಭೆ ಪ್ರಶಸ್ತಿಯನ್ನು ಸತತವಾಗಿ ನಾಲ್ಕು ಬಾರಿ ವಿಶ್ವಾಸ್ ಗೆದ್ದಿರುವುದು ಅವರ ಅನನ್ಯ ಪ್ರತಿಭೆಗೆ ಸಾಕ್ಷಿ.
ಬೆಂಗಳೂರಿನಲ್ಲಿ ಆರ್‌ಎನ್ಎಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಇಂಜಿನಿಯರಿಂಗ್ ಮುಗಿಸಿ ಫೋರಸ್ ಹೆಲ್ತ್ ಕಂಪನಿಯಲ್ಲಿ ದುಡಿಮೆ ಮಾಡುತ್ತಿರುವ ವಿಶ್ವಾಸ್ ಅವರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ಗಳಿಸಿದ 'ನನ್ನ ಗೋಪಾಲ' ಸಾಕ್ಷ್ಯಚಿತ್ರದಲ್ಲಿ ಹಾಡಿದ್ದಾರೆ. ಅಲ್ಲದೆ, 6 ಆಲ್ಬಂಗಳಿಗೂ ವಿಶ್ವಾಸ್ ದನಿ ನೀಡಿದ್ದಾರೆ. [ವಿಶ್ವಾಸ್ ವಸಿಷ್ಠ ಫೇಸ್ ಬುಕ್ ಪುಟ]
ಭ್ರಮೆ ತಂಡದ ಬಗ್ಗೆ ಚಿತ್ರಸಾಹಿತಿ ಕವಿರಾಜ್ ಏನಂತಾರೆ?












Click it and Unblock the Notifications