Get Updates
Get notified of breaking news, exclusive insights, and must-see stories!

ದೈವದತ್ತ ಪ್ರತಿಭೆಯ ಕೋಗಿಲೆ ಸ್ಪರ್ಶಾ ಆರ್.ಕೆ.

ದೈವದತ್ತವಾಗಿ ಬಂದಂತಹ ಕಂಠದಲ್ಲಿ ವಿಶಿಷ್ಟವಾದ ಮಾಧುರ್ಯವಿದೆ. ಕಿವಿಗೆ ತಟ್ಟಿದರೆ ಸಾಕು ಆ ಕೋಗಿಲೆಯ ಉಲಿಯಲ್ಲಿ ಅವ್ಯಕ್ತವಾದ ಮತ್ತು ಹಿತಕರ ಕಂಪನ ಸೃಷ್ಟಿಸುವ ತಾಕತ್ತಿದೆ. ಅವರೇ ಸ್ಪರ್ಶಾ ಆರ್.ಕೆ. ಸ್ಪರ್ಶಾ ಅವರ ಸಂಗೀತದಲ್ಲಿ ಉನ್ಮಾದವಿದೆ, ಉಸಿರಿನಲ್ಲಿ ಕಾವ್ಯ ನಲಿದಾಡುತ್ತಿರುತ್ತದೆ, ಕೇಳುತ್ತಿದ್ದರೆ ವರ್ಷಪೂರ್ತಿ ವಸಂತಮಾಸ ಸಂಭ್ರಮಿಸುತ್ತಿರುತ್ತದೆ ಎಂದು ಭಾಸವಾಗುತ್ತದೆ.

ಸಂಗೀತವನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿರುವ ಸ್ಪರ್ಶಾ, ಚಂದನ ಮಧುರ ಮಧುರವೀ ಮಂಜುಳ ಗಾನ, ಈಟಿವಿ ಕನ್ನಡದ ಸ್ನೇಹದ ಕಡಲಲ್ಲಿ, ನಾಗತಿಹಳ್ಳಿ ಚಂದ್ರಶೇಖರ್ ಅವರ ಧಾರಾವಾಹಿ ನಿತ್ಯೋತ್ಸವದ ಶೀರ್ಷಿಕೆ ಗೀತೆ, ಶಾಲ್ಮಲಾ ಮತ್ತು ರಬ್ಡಿ ನಾಟಕದಲ್ಲಿಯೂ ಸ್ಪರ್ಶಾ ತಮ್ಮ ಸಂಗೀತ ಪ್ರತಿಭೆಯನ್ನು ಮೆರೆದಿದ್ದಾರೆ. ಇಷ್ಟು ಮಾತ್ರವಲ್ಲ, ಟಿಎನ್ ಸೀತಾರಾಂ ಅವರ 'ಮಹಾಪರ್ವ' ಧಾರಾವಾಹಿಯಲ್ಲಿ ಕೂಡ ನಟನಾ ಕೌಶಲ್ಯವನ್ನು ತೋರಿಸಿದ್ದಾರೆ.

Bhrame - Musical illusionists - Vocalist Sparsha RK

ವಿದ್ವಾನ್ ನಾಗೇಶ್ ರಾವ್, ವಿದ್ವಾನ್ ಲಕ್ಷಯ್ಯ, ವಿಧುಷಿ ಎಂಎ ಮೈಥಿಲಿ ಅವರ ಬಳಿ ಸ್ಪರ್ಶಾ ಅವರು ಹಲವಾರು ವರ್ಷಗಳಿಂದ ಕರ್ನಾಟಕ ಸಂಗೀತದಲ್ಲಿ ತರಬೇತಿ ಪಡೆದಿದ್ದಾರೆ. ಅಲ್ಲದೆ, ಪಂಡಿತ ಸುರಮಣಿ ದತ್ತಾತ್ರೇಯ ವೇಲಂಕಾರ್ ಬಳಿ ಹಿಂದೂಸ್ತಾನಿ, ರತ್ನಮಾಲಾ ಪ್ರಕಾಶ್ ಬಳಿ ಸುಗಮ ಸಂಗೀತ, ಕೆಎಂ ಕುಸುಮಾ ಬಳಿ ಭಕ್ತಿ ಮತ್ತು ಚಲನಚಿತ್ರ ಸಂಗೀತ ಮತ್ತು ಪಂಡಿತ ಜಯಂತ್ ಕುಮಾರ್ ದಾಸ್ ಬಳಿ ಸಿತಾರ್ ಕಲಿತಿದ್ದಾರೆ. ಇಷ್ಟೆಲ್ಲ ಸಾಧನೆ ಮಾಡಲು ತಂದೆ ತಾಯಿಯರ ಆಶೀರ್ವಾದವೇ ಕಾರಣ ಎಂದು ಹೇಳಲು ಅವರು ಮರೆಯುವುದಿಲ್ಲ.

ಇನ್ನು ಅವರು ಪಡೆದಿರುವ ಪ್ರಶಸ್ತಿಗಳಿಗಂತೂ ಲೆಕ್ಕವೇ ಇಲ್ಲ. ಈಟಿವಿ ಕನ್ನಡದ ಎದೆ ತುಂಬಿ ಹಾಡುವೆನು, ಬಿಗ್ ಎಫ್ಎಂ ಗೋಲ್ಡನ್ ವಾಯ್ಸ್, ಜೀ ಕನ್ನಡದ ಸಾರೆಗಮಪ ಮತ್ತಿತರ ರಾಜ್ಯಮಟ್ಟದ ಸಂಗೀತ ಸ್ಪರ್ಧೆಗಳಲ್ಲಿ ಸ್ಪರ್ಶಾ ಅವರು ಪ್ರಶಸ್ತಿ ಗಳಿಸಿದ್ದಾರೆ. ಸಿಂಗಪುರ ಕನ್ನಡ ಸಂಘದ ಕಾರ್ಯಕ್ರಮದಲ್ಲಿ, ಬೆಂಗಳೂರಿನ ಗಣೇಶೋತ್ಸವ ಕಾರ್ಯಕ್ರಮದಲ್ಲಿಯೂ ಸ್ಪರ್ಶಾ ಅವರು ಶ್ರೋತೃಗಳನ್ನು ಭಾವಪರವಶರನ್ನಾಗಿ ಮಾಡಿರುವುದು ಅವರು ಹೆಗ್ಗಳಿಕೆ. ಇತ್ತೀಚೆಗೆ ಬಿಡುಗಡೆಯಾದ ಲೂಸಿಯಾ, ಜೀತು ಮತ್ತು ಅಂಗುಲಿಮಾಲಾ ಚಿತ್ರಗಳಲ್ಲಿಯೂ ಸ್ಪರ್ಶಾ ಅವರು ಹಾಡುಗಳಿಗೆ ಜೀವ ತುಂಬಿದ್ದಾರೆ. [ಸ್ಪರ್ಶಾ ಫೇಸ್ ಬುಕ್ ಪುಟ]

ಭ್ರಮೆ ತಂಡದ ಬಗ್ಗೆ ಲೂಸಿಯಾ ಪವನ್ ಏನಂತಾರೆ?

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+