ಕುಕ್ಕೆಯಿಂದ ಹರಿದುಬಂದ ಪ್ರತಿಭೆ ಅಲಕಾ ಸುಬ್ರಮಣ್ಯ
ಚಲನಚಿತ್ರ ಸಂಗೀತವಿರಲಿ, ಹಿಂದೂಸ್ತಾನಿ ಗಾಯನವಿರಲಿ, ರಂಗಗೀತೆಯಿರಲಿ, ಹರಿದಾಸ ಸಾಹಿತ್ಯವಿರಲಿ, ಭಾವಗೀತೆಯಿರಲಿ, ನಶೆಯೇರಿಸುವ ಗಝಲುಗಳಿರಲಿ ಅಲಕಾ ಸುಬ್ರಮಣ್ಯ ಕಂಠದಿಂದ ಕೇಳಿಬರುತ್ತಿದ್ದರೆ ಸಾಕ್ಷಾತ್ ಸರಸ್ವತಿಯೇ ಈಕೆಯ ನಾಲಿಗೆಯಲ್ಲಿ ನಲಿದಾಡುತ್ತಿದ್ದಾಳೆ ಎಂಬಂತೆ ಭಾಸವಾಗುತ್ತದೆ. ಅಂತಹ ದೈತ್ಯ ಪ್ರತಿಭೆಯ ಅಲಕಾ 'ಭ್ರಮೆ'ಯ ಅಲಂಕಾರ, ಭ್ರಮೆಯ ಜೀವಾಳ.
ಭ್ರಮೆಯ ಉಳಿದವರೆಲ್ಲ ಬೆಂಗಳೂರಿನ ಗಾಳಿ ನೀರು ಕುಡಿದು ಸಂಗೀತದ ಆರಾಧನೆ ಮಾಡುತ್ತಿದ್ದರೆ, ಅಲಕಾ ಸುಬ್ರಮಣ್ಯ ಅವರು ಕುಕ್ಕೆ ಸುಬ್ರಮಣ್ಯದ ನಿರ್ಮಲ ಪರಿಸರದಲ್ಲಿ, ಪ್ರಕೃತಿಯ ಮಡಿಲಲ್ಲಿ ಸಂಗೀತದ ಸಾಧನೆಯಲ್ಲಿ ತೊಡಗಿದ್ದಾರೆ. ಸುಸಂಸ್ಕೃತ ಮನೆತನದ ಧಾರ್ಮಿಕ ವಾತಾವರಣದಲ್ಲಿ ಬೆಳೆದ ಅಲಕಾ ಅವರಿಗೆ ಬಾಲ್ಯದಿಂದಲೇ ಸಂಗೀತ ಒಲಿದುಬಂದಿದೆ.
ಶ್ರೀಮತಿ ಶಾರದಾ ಮೂರ್ತಿ ಅವರ ಬಳಿ ಸಂಗೀತ ಕಲಿಯಲು ಆರಂಭಿಸಿದ ಅಲಕಾ ಸುಬ್ರಮಣ್ಯ ಅವರು ಶ್ರೀಮತಿ ಪೂರ್ಣಿಮಾ ಮಾಡಪ್ಪಾಡಿ ಅವರ ಬಳಿ ಮುಂದುವರಿಸಿದರು. ತಮ್ಮ ಸಂಗೀತ ಸಾಧನೆಗೆ ನೀರು, ಗೊಬ್ಬರ ಎರೆಯುತ್ತಿರುವವರು ತಂದೆ ತಾಯಿಯಾದ ಗೋವಿಂದ್ ಕುಮಾರ್ ಮತ್ತು ಇಂದುಮತಿ ಅವರು ಎಂದು ವಿನಮ್ರವಾಗಿ ಹೇಳಲು ಅಲಕಾ ಮರೆಯುವುದಿಲ್ಲ.

ಕರ್ನಾಟಕ ಮತ್ತು ಹಿಂದೂಸ್ತಾನಿ ಪ್ರಕಾರಗಳಲ್ಲಿ ತರಬೇತಿ ಪಡೆದಿರುವ ಅಲಕಾ ಅವರು, ಹಲವಾರು ವೇದಿಕೆಗಳಲ್ಲಿ ತಮ್ಮ ಪ್ರತಿಭೆ ಮೆರೆದಿದ್ದಾರೆ. ಕನ್ನಡದಲ್ಲಿ ಮಾತ್ರವಲ್ಲ, ಮಲಯಾಳಂ, ತುಳು, ಹಿಂದಿ, ತಮಿಳು ಭಾಷೆಗಳಲ್ಲಿಯೂ ಅಷ್ಟೇ ಮಾಧುರ್ಯವಾಗಿ ಹಾಡುವ ಪರಿಣತಿಯನ್ನು ಅಲಕಾ ಬೆಳೆಸಿಕೊಂಡಿರುವುದು ಅವರ ಪ್ರತಿಭೆಗೆ ಸಾಕ್ಷಿ. ಆಕಾಶವಾಣಿಯಲ್ಲಿಯೂ ಕಲಾವಿದೆಯಾಗಿರುವ ಅಲಕಾ ಭರತನಾಟ್ಯದಲ್ಲಿಯೂ ವಿಧುಷಿಯಾಗಿದ್ದಾರೆ.
ಸಂಗೀತ ದಿಗ್ಗಜರಾದ ಪುತ್ತೂರು ನರಸಿಂಹ ನಾಯಕ್, ವಿಜಯ್ ಯೇಸುದಾಸ್, ಅನೂಪ್ ಶ್ರೀಧರ್, ರತ್ನಮಾಲಾ ಪ್ರಕಾಶ್, ಕಸ್ತೂರಿ ಶಂಕರ್ ಜೊತೆ ವೇದಿಕೆ ಹಂಚಿಕೊಂಡಿರುವ ಅಲಕಾ, ಕೊಲ್ಲೂರಿನ ಮೂಕಾಂಬಿಕಾ ದೇವಸ್ಥಾನ, ಬೆಂಗಳೂರಿನ ಮ್ಯೂಸಿಕಾನಾ ಸೂಪರ್ ಸ್ಟಾರ್, ಕೇರಳದ ಕಣ್ಣೂರು, ತ್ರಿಸ್ಸೂರು ಮತ್ತಿತರ ಪ್ರದೇಶಗಳಲ್ಲಿನ ಪ್ರಸಿದ್ಧ ದೇವಸ್ಥಾನಗಳಲ್ಲಿ ಸಂಗೀತದ ಮೋಡಿಯಲ್ಲಿ ಮುಳುಗಿಸಿದ್ದಾರೆ. [ಅಲಕಾ ಸುಬ್ರಮಣ್ಯ ಫೇಸ್ ಬುಕ್ ಪುಟ]
ಭ್ರಮೆ ತಂಡಕ್ಕೆ 'ಸಿಂಪಲ್' ನಾಯಕಿ ಶ್ವೇತಾ ಶ್ರೀವಾಸ್ತವ್ ಶುಭ ಹಾರೈಕೆ
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications