ಸಚಿನ್ ಸಂದರ್ಶನ‘ಜನರನ್ನೆ ದೇವರೆಂದೆ’
*ಸಂಜಯ್ ಕುಮಾರ್
ಮುಂಬಯಿ : ಕ್ರಿಕೆಟ್ಟಿಗೆ ಕಾಲಿಟ್ಟ ಅತಿ ಚಿಕ್ಕ ವಯಸ್ಸಿನ ಭಾರತೀಯ ಇವತ್ತು ಗಗನಚುಂಬಿ. ಒಂಡೇ ಕ್ರಿಕೆಟ್ಟಿನಲ್ಲಿ 10 ಸಾವಿರ ರನ್ ದೋಚಿದ ವಿಶ್ವದ ಮೊದಲ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್‌ಗೆ ಮಂಗಳವಾರ (ಏಪ್ರಿಲ್ 24 ) 28ನೇ ಬರ್ತ್‌ಡೇ. ಈ ಶುಭ ಸಂದರ್ಭದಲ್ಲಿ ನಮ್ಮ ಬಳಗದ ದಟ್ಸ್ ಕ್ರಿಕೆಟ್ ಡಾಟ್ ಕಾಂ ವರದಿಗಾರರಿಗೆ ಸಚಿನ್ ವಿಶೇಷ ಸಂದರ್ಶನ ಕೊಟ್ಟಿದ್ದಾರೆ...
- 12 ವರ್ಷಗಳ ನಿಮ್ಮ ಕೆರ್ರಿಯರ್ರಿನತ್ತ ಒಮ್ಮೆ ನೋಡಿದಲ್ಲಿ ನಿಮಗೆ ಏನನ್ನಿಸುತ್ತದೆ?
- ಈ ಅವಧಿಯಲ್ಲಿ ನೀವು ಗಳಿಸಿದ್ದೇನು, ಕಳಕೊಂಡಿದ್ದೇನು?
- ಈವರೆಗೆ ಕ್ರಿಕೆಟ್ಟಿಗೆ ನಿಮ್ಮ ಕೊಡುಗೆ ಬಗ್ಗೆ ನೀವೇನಂತೀರಿ?
- ಅಂತರರಾಷ್ಟ್ರೀಯ ಕ್ರಿಕೆಟ್ಟಿಗೆ ಕಾಲಿಟ್ಟಾಗ, ಇಷ್ಟು ದೂರ ನೀವು ಪಯಣಿಸುವ ನಿರೀಕ್ಷೆ ಇತ್ತೆ ?
- ನಿಮ್ಮ ಪ್ರಚಂಡ ಯಶಸ್ಸಿನ ಹಿಂದೆ ನಿಮ್ಮ ಹೆಂಡತಿ ಹಾಗೂ ಸಂಸಾರದ ಕಾಣಿಕೆ ಏನಾದರೂ ಇದೆಯಾ?
- ದ್ರಾವಿಡ್, ಕುಂಬ್ಳೆ, ಕಾಂಬ್ಳಿ, ರಾನಡೆ ಮೊದಲಾದ ನಿಮ್ಮ ಸಹ ಆಟಗಾರರು, ನಿಮ್ಮ ಗುರು (ರಮಾಕಾಂತ್ ಅಚ್ರೇಕರ್) ಹಾಗೂ ಗುರುಕನ್ಯಾ (ಅಚ್ರೇಕರ್ ಮಗಳು) ಕಲ್ಪನ- ಇವರೆಲ್ಲಾ ನಿಮ್ಮನ್ನು ಹಾಡಿ ಹೊಗಳಿದ್ದಾರೆ. ಇನ್ನಷ್ಟು ಯಶಸ್ಸು ನಿಮಗೆ ಸಲ್ಲಲಿ ಎಂದು ಬಯಸಿದ್ದಾರೆ. ಇದಕ್ಕೆ ನೀವೇನಾದರೂ ಹೇಳಬಯಸುವಿರಾ?
- ಇಡೀ ದೇಶ ಹೇಳುತ್ತಿದೆ- ಹ್ಯಾಪಿ ಬರ್ತ್‌ಡೇ ಸಚಿನ್. ಇದಕ್ಕೆ ನಿಮ್ಮ ಕಾಮೆಂಟ್ಸ್ ?
ದಶಕಕ್ಕೂ ಹೆಚ್ಚು ಕಾಲ ಆಡಿರುವುದಕ್ಕೆ ಸಂತೋಷವಾಗುತ್ತದೆ. ಇದು ಖಂಡಿತ ದೀರ್ಘಾವಧಿ. ಕ್ರಿಕೆಟ್ ನನ್ನ ನೆಚ್ಚಾಗಿತ್ತು. ದೇಶಕ್ಕಾಗಿ ಇಂದಿಗೂ ಆಡುವ ಭಾಗ್ಯ ನನ್ನದಾಗಿದೆ. ಕನಸು ನನಸಾದ ಖುಷಿ ನನ್ನದು.
ನಾನು ಕಳಕೊಂಡಿದ್ದೇನೂ ಇಲ್ಲ, ಎಲ್ಲಾ ಗಳಿಸಿದ್ದೇ. ನಾನು ನೆಚ್ಚಿರುವ ಕ್ರಿಕೆಟ್ ನನಗೆ ಸಾಕಷ್ಟು ಕೊಟ್ಟಿದೆ.
ಅದನ್ನ ಹೇಳಬೇಕಾದವನು ನಾನಲ್ಲ. ಕಣದಲ್ಲಿ ನಾನು ಬ್ಯಾಟ್ಸ್‌ಮನ್ ಆಗಿ, ಬೌಲರ್ ಆಗಿ, ಫೀಲ್ಡರ್ ಆಗಿ ಹಾಗೂ ನಾಯಕನಾಗಿ ಕೈಲಾದಷ್ಟು ಆಟ ಪ್ರದರ್ಶಿಸಿದ್ದೇನೆ. ಅದನ್ನು ನೀವು ಕ್ರಿಕೆಟ್ಟಿಗೆ ನಾನು ಕೊಟ್ಟ ಕೊಡುಗೆ ಅಂತೀರಿ. ಆದರೆ ನನ್ನ ಬಗ್ಗೆ ನಾನೇ ಹೇಳೋದು ಸರಿಯಲ್ಲ . ನಾನು ಆಡುತ್ತಿದ್ದೇನೆ. ಅದರ ಆಳದ ಬಗ್ಗೆ ಬೇರೆಯವರು ಮಾತನಾಡಬೇಕು.
ನಾನು ಮೊದಲ ಪಂದ್ಯ ಆಡಲು ಹೋದಾಗಿನಿಂದ ಹೇಳಿಕೊಳ್ಳುತ್ತಾ ಬಂದಿರುವುದು ಒಂದೇ ಮಾತು- ‘ಐ ಶುಡ್ ಪ್ಲೇ ಮೈ ಲೆವೆಲ್ ಬೆಸ್ಟ್’. ಯಾವುದೋ ಗುರಿಯನ್ನು ಮನಸ್ಸಲ್ಲಿ ಹೊತ್ತು ಒತ್ತಡದಲ್ಲಿ ಸಿಲುಕುವುದು ಬೇಡ ಎಂಬುದು ನನ್ನ ತೀರ್ಮಾನವಾಗಿತ್ತು . ವರ್ಷಗಳೆದಂತೆ ನಾನು ಹೇಳಿಕೊಂಡ ಸ್ವಗತ, ಆಟದ ರೂಪದಲ್ಲಿ ಹೊರ ಬಂದು, ಇವತ್ತು ಕ್ರಿಕೆಟ್ ಹಾದಿಯ ಪಯಣದಲ್ಲಿ ಈವರೆಗೆ ತಂದು ನಿಲ್ಲಿಸಿದೆ.
ನನ್ನ ಹೆಂಡತಿ ನನಗೆ ಸಾಕಷ್ಟು ಬೆಂಬಲ ಕೊಡುತ್ತಾಳೆ. ಒಂದು ಯಶಸ್ಸು ಕಂಡ ನನಗೆ ದಾರಿ ಇನ್ನೂ ದೊಡ್ಡದಿದೆ ಎಂದು ಮನವರಿಕೆ ಮಾಡಿಸುವುದೇ ಆಕೆ. ನನಗೆ ಬೆನ್ನು ತಟ್ಟುವುದರ ಜೊತೆಗೆ ಆಕೆ ಸಲಹೆಗಳನ್ನೂ ಕೊಡುತ್ತಾಳೆ. ನನ್ನ ಹೆಂಡತಿ ಅಷ್ಟೇ ಅಲ್ಲ, ಅಣ್ಣ ಅಜಿತ್, ಅಪ್ಪ- ಅಮ್ಮ, ಸಂಸಾರದ ಪ್ರತಿಯಾಬ್ಬ ಸದಸ್ಯ, ನಾನು ಯಶಸ್ಸಿನ ರುಚಿ ಕಾಣುವಾಗ ನೆನಪಿಗೆ ಬರುತ್ತಾರೆ. ಅಂತರರಾಷ್ಟ್ರೀಯ ಕ್ರಿಕೆಟ್ಟಿನಲ್ಲಿ ನಾನು ಈ ಮಟ್ಟಕ್ಕೆ ಬರಬೇಕಾದರೆ, ಅದಕ್ಕೆ ಇವರೆಲ್ಲಾ ಒಂದಲ್ಲ ಒಂದು ರೀತಿ ಕಾರಣಕರ್ತರು. ಅವರಿಗೆಲ್ಲಾ ನಾನು ಋಣಿ.
ನನ್ನ ಕೋಚ್, ಸಹ ಆಟಗಾರರು ಹಾಗೂ ಗೆಳೆಯರಿಗೆ ನಾನು ಅಭಾರಿ. ನನಗೆ ಬೆನ್ನು ತಟ್ಟುತ್ತಾ, ಅಗತ್ಯ ಬಿದ್ದಾಗ ಸಹಾಯ ಮಾಡುತ್ತಾ ಬಂದಿರುವ ನನ್ನ ಹಿತೈಷಿಗಳಿವರು. ಇವರೆಲ್ಲರಿಗೂ ನನ್ನ ಧನ್ಯವಾದಗಳು.
ನನಗೂ ಇದು ಗೊತ್ತು. ಕ್ರಿಕೆಟ್ ಪ್ರೇಮಿಗಳು ಹಾಗೂ ನನ್ನ ಶ್ಲಾಘಿಸುವ ಮಂದಿ ನಾನು ಚೆನ್ನಾಗಿ ಆಡಲೆಂದು ಪ್ರಾರ್ಥಿಸುತ್ತಿದ್ದಾರೆ. ಪ್ರತಿಯಾಂದು ಬಾರಿಯೂ ನಾನು ಒಳ್ಳೆ ಆಟ ಪ್ರದರ್ಶಿಸಲು ಈ ನನ್ನ ಜನರೇ ಸ್ಫೂರ್ತಿ. ಅವರ ನಿರಂತರ ಬೆಂಬಲ ಹಾಗೂ ಶುಭ ಹಾರೈಕೆಗಳಿಂದ ನಾನು ಮುದುಡಿ ಹೋಗಿದ್ದೇನೆ. ಆದರೆ ಅವೇ ನನ್ನನ್ನು ಕಣದಲ್ಲಿ ಅರಳುವಂತೆ ಮಾಡಿತ್ತವೆ. ನನ್ನ ಜನಕ್ಕೆ ನಾನು ಅಭಾರಿ.
ಮುಖಪುಟ / ಸಾಹಿತ್ಯ ಸೊಗಡು












Click it and Unblock the Notifications