ಸೌಂದ-ರ್ಯ ತೋಟ-ದ-ಲ್ಲಿ ಮೂಡಿ-ದ ಸನ್‌-ಶೈ-ನ್‌

yuktha mukhi transfering miss world crown crown to priyanka chopraನಾನು ಮುದ್ದು ಮುದ್ದಾಗಿದ್ದೇನೆ ಅಂತ ಮನೆಯಲ್ಲಿ ನನ್ನನ್ನು ಮಿಮಿ ಎನ್ನುತ್ತಾರೆ. ಯಾವಾಗಲೂ ನಗುತ್ತಿರುತ್ತೇನೆ ಅಂತ ಕಾಲೇಜಿನಲ್ಲಿ ಸನ್‌ಶೈನ್‌ ಎಂದು ಕರೆಯುತ್ತಾರೆ ಎಂದು ತನ್ನ ನಿಕ್‌ ನೇಮ್‌ ಬಗ್ಗೆ ತುಸು ಹೆಮ್ಮೆಯಿಂದಲೇ ಹೇಳಿಕೊಳ್ಳುವ ಪ್ರಿಯಾಂಕ ಈಗ ಸೌಂದರ್ಯ ರಾಣಿ.

ನವೆಂಬರ್‌ 30ರಂದು ಲಂಡನ್‌ನ ಮಿಲೆನಿಯಂ ಟವರ್‌ನಲ್ಲಿ ನಡೆದ ಮಿಸ್‌ ವರ್ಲ್ಡ್‌ ಸ್ಪರ್ಧೆಯ ತುರುಸಿನ ಅಂತಿಮ ಸುತ್ತಿನಲ್ಲಿ ಗುಮ್ಮಟದ ತುಂಬಾ ಅನಾವರಣಗೊಂಡಿದ್ದು ಪ್ರಿಯಾಂಕರ ಮೊರದಗಲವಾದ ಮೊಗದಿಂದ ಉಕ್ಕುತ್ತಿದ್ದ ಬೆಳದಿಂಗಳು. ಅಲ್ಲಿಗೆ ಅವರೇ ಖುಷಿಯಿಂದ ಹೇಳಿಕೊಳ್ಳುವ ನಿಕ್‌ನೇಮ್‌ ಸನ್‌ಶೈನ್‌ ಸಾರ್ಥಕವಾಯಿತು . ಬಂದಿರುವ ಸ್ಪರ್ಧಿಗಳಲ್ಲಿ ಪ್ರಿಯಾಂಕನೇ ತುಂಬಾ ಚಂದ ಅಂತ ಲಂಡನ್‌ ಬುಕ್ಕಿಗಳು ಹೇಳಿದ ಭವಿಷ್ಯ ನಿಜವಾಯಿತು. ಸ್ಪರ್ಧೆಗೆ ಮೊದಲೇ ಹುಟ್ಟಿಕೊಂಡಿದ್ದ ಪ್ರಿಯಾಂಕ ಅವರ ಅಭಿಮಾನಿ ಬಳಗ ಈಗ ಮತ್ತಷ್ಟು ದೊಡ್ಡದಾಗಿದೆ. ನೂತನ ವಿಶ್ವ ಸುಂದರಿಯ ಇಷ್ಟ , ಖುಷಿ ಬೇಜಾರುಗಳೆಲ್ಲ ಇಲ್ಲಿವೆ.

10 ನೇ ತರಗತಿಯಲ್ಲಿ 89 ಶೇಕಡಾ ಅಂಕ ಗಳಿಸಿ, 12 ನೇ ತರಗತಿಯಲ್ಲಿ ಓದುತ್ತಿರುವ ಪ್ರಿಯಾಂಕ ಕಂಪ್ಯೂಟರ್ಸ್‌ನಲ್ಲಿ ಮಾಡುತ್ತಿದ್ದಾರೆ. ಉತ್ತಮ ನಟಿ, ಮಾಡೆಲಿಂಗ್‌ ಮತ್ತು ಜಾಹೀರಾತುಗಳಲ್ಲಿ ಮಿಂಚುವ ಕನಸನ್ನು ಬೊಗಸೆಯಲ್ಲಿಟ್ಟುಕೊಂಡ ಅವರನ್ನು ನಿತ್ಯ ಕಾಡುವ ದೊಡ್ಡ ಕನಸು ವಿಶ್ವ ಸುಂದರಿಯ ಕಿರೀಟ. ಅದಕ್ಕೇ ಪ್ರಿಯಾಂಕ ಕನಸಿನ ಬೆನ್ನು ಹತ್ತಿ ಈಗ ಕಿರೀಟದ ಪಕ್ಕ ನಿಂತಿದ್ದಾರೆ.

its the happiest moment of priyanka chopraಅಂದ ಚಂದ, ಹೈಟು ವೈಟುಗಳ ಬಗ್ಗೆ ಕಾಳಜಿ ವಹಿಸುತ್ತಲೇ ಪ್ರಿಯಾಂಕ ಉತ್ತಮ ಅಂಕಗಳ ಕೀರ್ತಿಯನ್ನು ಪಕ್ಕದಲ್ಲಿ ಕೂರಿಸಿಕೊಂಡಿದ್ದಾರೆ. ಭಾಷಣ, ನೃತ್ಯ, ಸಮಾಜ ಸೇವೆಗೆಂದು ದಿನದ 24 ಗಂಟೆಗಳನ್ನು ವಿಭಾಗಿಸುತ್ತಾ ಸಾಧನೆಯ ನಕಾಶೆ ಬಿಡಿಸುತ್ತಾರೆ. ನ್ಯೂ ಯಾರ್ಕ್‌-97 ಓಪಸ್‌ ಹಾನರ್‌ ಚಾಯರ್‌ನಲ್ಲಿ ಭಾರತವನ್ನು (ಜೆಎಫ್‌ಕೆ ಪ್ರೌಢ ಶಾಲೆಯನ್ನು)ಪ್ರತಿನಿಧಿಸಿದ್ದರು. ಭಾರತದ ವಿವಿಧ ರಾಜ್ಯಗಳಲ್ಲಿ ಪ್ರಿಯಾಂಕ ಮಾತ್ರ ಈ ಸರಣಿ ಸ್ಪರ್ಧೆಗೆ ಆಯ್ಕೆಯಾಗಿದ್ದರು. ಅದು ನನ್ನ ಜೀವನದ ಅತ್ಯಂತ ಸಂತೋಷದ ಗಳಿಗೆ ಎಂದು ಪ್ರಿಯಾಂಕ ಆ ಗಳಿಗೆಯನ್ನು ಮತ್ತೆ ಮತ್ತೆ ಕಣ್ಣ ಮುಂದೆ ಸೃಷ್ಟಿಸಿಕೊಂಡು ಖುಷಿಪಡುತ್ತಾರೆ. ಬಾಯಿ ತುಂಬಾ ನಗುತ್ತಾರೆ. ಹಾಡು, ನೃತ್ಯ ಮತ್ತು ಆಶು ಭಾಷಣದಲ್ಲಿ ಪ್ರಶಸ್ತಿಗಳನ್ನು ಬ್ಯಾಗ್‌ನೊಳಗೆ ತುಂಬಿಸಿಕೊಂಡು ಬಂದಿದ್ದಾರೆ.

ನಿಂತಲ್ಲಿ ನಿಲಲಾರದ ಚಲನಶೀಲತೆ

ನಿಮ್ಮ ವ್ಯಕ್ತಿತ್ವದಲ್ಲಿ ನೀವಿಷ್ಟ ಪಡುವ ಉತ್ತಮ ಅಂಶ ಯಾವುದು ಅನ್ನುತ್ತೀರಿ ಎಂದರೆ, ಮೈ ಗುಡ್‌ ಲುಕಿಂಗ್‌ ಎನ್ನುತ್ತಾ ಮುಂಗೈ ಮೇಲಿರುವ ಬ್ರೇಸ್‌ಲೆಟ್‌ ಮೇಲೆ ಬರೆದಿರುವ ಓಂ ನಮಃ ಶಿವಾಯ ನೋಡಿಕೊಂಡು, ಇದು ನನಗೆ ನೆಮ್ಮದಿ ಕೊಡುತ್ತದೆ ಎಂದು ಗಂಭೀರವಾಗಿ ಹೇಳುತ್ತಾರೆ. ಸರಿಯಪ್ಪಾ, ನಿಮ್ಮ ದೌರ್ಬಲ್ಯ ಯಾವುದು ಎಂದರೆ, ನಂಗೆ ತುಂಬಾ ಹೊತ್ತು ಮೌನವಾಗಿ, ಗಂಭೀರವಾಗಿ ಕುಳಿತುಕೊಳ್ಳುವುದಕ್ಕಾಗುವುದೇ ಇಲ್ಲ ನೋಡಿ ಎಂದು ಕೋಣೆಯೆಲ್ಲಾ ತುಳುಕುವಂತೆ ನಗುತ್ತಾರೆ.

ಶೇಕ್ಸ್‌ಪಿಯರ್‌ನ ರೋಮಿಯೋ ಜ್ಯೂಲಿಯೆಟ್‌, ಸಿಡ್ನಿ ಶೆಲ್ಡನ್‌ ಮತ್ತು ಟೆಲ್‌ ಮಿ ಯುವರ್‌ ಡ್ರೀಮ್ಸ್‌ ಪ್ರಿಯಾಂಕರ ಅಚ್ಚು ಮೆಚ್ಚಿನ ಪುಸ್ತಕಗಳು. ಫ್ಯಾಷನ್‌ ಮಾಹಿತಿಗೆ ಫೆಮಿನಾ ಇಷ್ಟ. ಜ್ಞಾನಕ್ಕೆ ರೀಡರ್ಸ್‌ ಡೈಜೆಸ್ಟ್‌ ಆಪ್ತ. ಮಿಲ್‌ ಗಿಬ್ಸನ್‌ ಮತ್ತು ಕಿಶೋರ್‌ ಕುಮಾರ್‌ -ಇಬ್ಬರೂ ಆದರ್ಶ ಹೀರೋಗಳು. ಪ್ರೆಟ್ಟಿ ವುಮನ್‌, ವಾಕ್‌ ಇನ್‌ ದ ಕ್ಲೌಡ್ಸ್‌ ಚಲನ ಚಿತ್ರಗಳು ಪ್ರಿಯಾಂಕರಿಗೆ ಹುಚ್ಚು ಹಿಡಿಸುವಷ್ಟು ಖುಷಿ ಕೊಟ್ಟಿದೆ. ಬೇಜಾರಾದಾಗಲೆಲ್ಲಾ ಕೇರ್‌ಲೆಸ್‌ ವಿಸ್ಪರ್ಸ್‌ ಮತ್ತು ಐ ಆಲ್ವೇಸ್‌ ಲವ್‌ ಯು .. ಹಾಡುಗಳನ್ನು ಇಷ್ಟ ಪಟ್ಟು ಗುನುಗುತ್ತಾರೆ. ಅಥಾವ ಸಿಡಿ ಹಾಕಿ ಕೇಳುತ್ತಾ ಮನೆಯಲ್ಲಿ ಕಾಲ ಕಳೆಯುತ್ತಾರೆ.

ನಗುವ ಚಿರತೆ ನಂಗಿಷ್ಟ : 12ನೇ ತರಗತಿ ಹೊತ್ತಿಗಾಗಲೇ ಪ್ರಿಯಾಂಕ, ಚರ್ಚ್‌, ಮುಸ್ಲಿಂ ಸಂಘಟನೆ, ಆಸ್ಪತ್ರೆಗಳಲ್ಲಿ ಅನಾಥ ಮಕ್ಕಳ ಸೇವೆಯಲ್ಲಿ ತೊಡಗಿದ್ದಾರೆ. ನಾಟಕ, ಚರ್ಚೆ, ಪ್ರವಾಸ, ನೃತ್ಯ ಮತ್ತು ಈಜು ಅವರ ದಿನದಲ್ಲಿ ಉಲ್ಲಾಸ ತುಂಬಿಸುತ್ತವಂತೆ. ಅಂದ ಹಾಗೆ ಈ ಚೆಂದದ ಹುಡುಗಿ ಸುಳ್ಳು ಹೇಳುತ್ತಾಳೆ. ಆದರೆ ತುಂಬಾ ಕಡಿಮೆ, ನಾನು ಗಂಭೀರ ವಿಷಯಗಳಿಗೆ ಸಂಬಂಧಿಸಿದಂತೆ ಎಂದೂ ಸುಳ್ಳು ಹೇಳುವುದಿಲ್ಲ ಎನ್ನುತ್ತಾರೆ. ಬೆಳಂದಿಗಳಡಿಯಲ್ಲಿ ಮಲಗಿ ಚುಕ್ಕಿಯೆಣಿಸುತ್ತಾ ನಾನು ರಾತ್ರಿಯನ್ನು ಪ್ರೀತಿಯಿಂದ ಕಳೆಯ ಬಯಸುತ್ತೇನೆ. ಆದರೆ ಎಂಟು ಕಾಲಿನ ಯಾವುದೇ ಹುಳು, ಕೀಟ ಬಂದರೂ ಇನ್ನಿಲ್ಲದಂತೆ ಹೆದರುತ್ತೇನೆ. ಹಾಗಂತ ನಾನೇನೂ ಪುಕ್ಕಲಿ ಅಲ್ಲ. ನಗುವ ಚಿರತೆ ಎಂದರೆ ನಂಗೆ ತುಂಬಾ ಇಷ್ಟ ಎನ್ನುತ್ತಾ ತಾನು ಧೈರ್ಯ ಶಾಲಿ ಎಂದು ಸಮರ್ಥಿಸಿಕೊಳ್ಳುತ್ತಾರೆ.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಸಾಹಿತ್ಯ ಸೊಗಡು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+