ಪಠ್ಯಪುಸ್ತಕ ಪರಿಷ್ಕರಣೆ ವಿವಾದ: 11 ಆರೋಪಗಳಿಗೆ ಬೊಮ್ಮಾಯಿ ಸಮರ್ಥನೆಗಳು!
ಬೆಂಗಳೂರು, ಜೂ. 4: ಕರ್ನಾಟಕ ಪಠ್ಯ ಪುಸ್ತಕ ಪರಿಷ್ಕರಣೆ ವಿವಾದಕ್ಕೆ ಚಾಣಾಕ್ಷ ರೀತಿಯಲ್ಲಿ ತೆರೆ ಎಳೆಯಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಯತ್ನ ಮಾಡಿದ್ದಾರೆ. ರೋಹಿತ್ ಚಕ್ರತೀರ್ಥ ನೇತೃತ್ವದ ಪರಿಷ್ಕರಣೆ ಸಮಿತಿಯನ್ನು ರದ್ದು ಮಾಡುವ ಮೂಲಕ ವಿರೋಧಿಗಳ ಬಾಯಿ ಮುಚ್ಚಿಸಿರುವ ಬೊಮ್ಮಾಯಿ, ಚಕ್ರತೀರ್ಥ ನೇತೃತ್ವದ ಸಮಿತಿ ಪರಿಷ್ಕರಣೆಯನ್ನು ಕೈ ಬಿಡದೇ ಸಮರ್ಥಿಸಿಕೊಳ್ಳುವ ಮೂಲಕ ಎರಡೂ ಸಮುದಾಯಗಳನ್ನು ಹೋಲೈಸಿ ವಿವಾದಕ್ಕೆ ಅಂತ್ಯ ಹಾಡುವ ಪ್ರಯತ್ನ ಮಾಡಿದ್ದಾರೆ.
ಪಠ್ಯ ಪುಸ್ತಕ ಪರಿಷ್ಕರಣೆ ಸಂಬಂಧ ಎದ್ದಿದ್ದ ಪ್ರತಿವಾದಕ್ಕೂ ಸ್ಪಷ್ಟನೆ ನೀಡುವ ಮೂಲಕ ಪಠ್ಯ ಪುಸ್ತಕಗಳ ಪರಿಷ್ಕರಣೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಆದರೆ, ರೋಹಿತ್ ಚಕ್ರತೀರ್ಥ ನೇತೃತ್ವದ ಪರಿಷ್ಕರಣೆ ಸಮಿತಿ ವಿಸರ್ಜನೆ ಮಾಡಿರುವ ವಿಷಯವನ್ನು ಪ್ರಕಟಿಸಿ ಹೋರಾಟಗಾರರನ್ನು ತಣ್ಣಗಾಗಿಸಿದ್ದಾರೆ. ಪರಿಷ್ಕೃತ ಪಠ್ಯ ಪುಸ್ತಕದಲ್ಲಿ ವಿವಾದ ಇದ್ದರೆ, ಅದನ್ನು ಬದಲಿಸಲು ಸರ್ಕಾರ ಮುಕ್ತ ಮನನಿಸಿನಿಂದ ಮಡುತ್ತದೆ. ಬಸವಣ್ಣ ವಿಷಯಕ್ಕೆ ಸಂಬಂಧಿಸಿದಂತೆ ಸೂಕ್ಷ್ಮವಾಗಿ ಪರಿಷ್ಕರಿಸಲು ಸೂಚಿಸಲಾಗಿದೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.
ಕರ್ನಾಟಕದ 1 ರಿಂದ 10 ನೇ ತರಗತಿ ವರೆಗಿನ ಆಯ್ದ ಪಠ್ಯ ಪುಸ್ತಕಗಳ ಪರಿಷ್ಕರಣೆ ಸಂಬಂಧ ಎದ್ದಿರುವ ಹನ್ನೊಂದು ವಿವಾದಗಳಿಗೆ ಬಸವರಾಜ ಬೊಮ್ಮಾಯಿ ಒಂದೊಂದಕ್ಕೂ ಸೂಕ್ತ ಕಾರಣ ಕೊಟ್ಟಿದ್ದಾರೆ. ಈಗಾಗಲೇ ಪಠ್ಯ ಪುಸ್ತಕಗಳು ಮುದ್ರಣ ಆಗಿರುವುದದಿಂರ ಪುನಃ ಅವನ್ನು ಪರಿಷ್ಕರಣೆ ಗೋಜಿಗೆ ಹೋದ್ರೆ ಎಡವಟ್ಟು ಆದೀತು. ಈ ಎಲ್ಲಾ ವಿಷಯಗಳನ್ನು ಸೂಕ್ಷ್ಮವಾಗಿ ಅರಿತ ಸಿಎಂ ಮಹತ್ವದ ತೀರ್ಮಾನ ತೆಗೆದುಕೊಂಡಿದ್ದಾರೆ.

ರೋಹಿತ್ ಚಕ್ರತೀರ್ಥ ನೇತತ್ವದ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ರದ್ದು ಪಡಿಸಲಾಗಿದೆ. ಸಮಿತಿ ಪರಿಷ್ಕರಿಸಿರುವ ಪಠ್ಯದಲ್ಲಿ ಆಕ್ಷೇಪಾರ್ಹ ವಿಷಯ ಇದ್ದರೆ ಅದನ್ನು ಕಿತ್ತೊಗೆಯಲು ಸರ್ಕಾರ ಮುಕ್ತ ಮನಸು ಹೊಂದಿದೆ. ಬಸವಣ್ಣ ವಿಷಯಕ್ಕೆ ಸಂಬಂಧಸಿದಂತೆ ಸೂಕ್ತ ಪರಿಷ್ಕರಣೆ ನಿರ್ಧಾರ ಮಾಡಲಾಗಿದೆ. ಈ ಕುರಿತು ಎದ್ದಿರುವ ವಿವಾದ ಮತ್ತು ಸಿಎಂ ಬೊಮ್ಮಾಯಿ ನೀಡಿರುವ ಸಲಹೆಗಳ ಸಮಗ್ರ ವಿವರ ಇಲ್ಲಿದೆ.
ವಿವಾದ 1:
ಆರೋಪ: ರಾಷ್ಟ್ರಕವಿ ಕುವೆಂಪು ಅವರ ವ್ಯಕ್ತಿತ್ವಕ್ಕೆ ಅವಮಾನ ಬರುವಂತೆ ಬರೆಯಲಾಗಿದೆ. ನಾಲ್ಕನೇ ತರಗತಿ ಪರಿಸರ ಅಧ್ಯಯನ ಪುಸ್ತಕದಲ್ಲಿ ಕುವೆಂಪು ಪರಿಚಯ ಮಾಡಿಸುವ ವಿಚಾರದಲ್ಲಿ ಅನೇಕರ ಪ್ರೋತ್ಸಾಹದಿಂದ ಇವರು ಮುಂದೆ ಪ್ರಖ್ಯಾತ ಕವಿ ಎನಿಸಿಕೊಂಡರು ಎಂಬ ಸಾಲುಗಳ ಬಗ್ಗೆ.
ಸ್ಪಷ್ಟೀಕರಣ: 1 ರಿಂದ 5 ನೇ ತರಗತಿ ಪರಿಸರ ಅಧ್ಯಯನ ಪಠ್ಯ ಪುಸ್ತಕ ಪರಿಷ್ಕರಣೆಯನ್ನು ಚಕ್ರತೀರ್ಥ ಸಮಿತಿ ಮಾಡಿಲ್ಲ. ನಾಲ್ಕನೇ ತರಗತಿ ಪರಿಸರ ಅಧ್ಯಯನದ ಕುವೆಂಪು ಅವರಿಗೆ ಸಂಬಂಧಿಸಿದ ಸಾಲುಗಳನ್ನು 2014-15 ರಲ್ಲಿ ಮುಡಂಬಡಿತಾಯ ಸಮಿತಿ ರಚಿಸಿದ ಪಠ್ಯ ಹಾಗೂ ಪ್ರೊ. ಬರಗೂರು ರಾಮಚಂದ್ರಪ್ಪ ಪರಿಷ್ಕರಿಸಿದ ಪಠ್ಯ ಮುಂದುವರೆಸಲಾಗಿದೆ.

ವಿವಾದ -2 :
ಆರೋಪ: ರಾಷ್ಟ್ರಕವಿ ಕುವೆಂಪು ಬರಹಗಳನ್ನು ಭಾಷಾ ಪಠ್ಯ ಪುಸ್ತಕದಿಂದ ಕೈ ಬಿಡಲಾಗಿದೆ.
ಸ್ಪಷ್ಟೀಕರಣ: ಪ್ರೊ. ಮುಡಂಬಡಿತಾಯ ಸಮಿತಿ ರಚಿಸಿದ ಕನ್ನಡ ಭಾಷ ಪುಠ್ಯ ಪುಸ್ತಕಗಳಲ್ಲಿ ಕುವೆಂಪು ಅವರ ಒಟ್ಟು 8 ಪಾಠ ಪದ್ಯಗಳಿದ್ದವು. ಪ್ರೊ. ಪ್ರೊ. ಬರಗೂರು ಸಮಿತಿಯು ಒಂದು ಪಾಠ ಕಡಿಮೆ ಮಾಡಿ ಏಳು ಬರಹಗಳನ್ನು ಅಳವಡಿಸಿತ್ತು. ರೋಹಿತ್ ಚಕ್ರತೀರ್ಥ ಸಮಿತಿ ಭಾಷಾ ಪಠ್ಯ ಪುಸ್ತಕಗಳಲ್ಲಿ ಹೊಸದಾಗಿ ಕುವೆಂಪು ಅವರ ಮೂರು ಪಾಠ ಮತ್ತು ಪದ್ಯಗಳನ್ನು ಸೇರಿಸಿ ಒಟ್ಟು 10 ಬರಹ ಅಳವಡಿಸಿದೆ.
ವಿವಾದ 03:
ಆರೋಪ: ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಪಾಠವನ್ನು ಕೈ ಬಿಡಲಾಗಿದೆ.
ಸ್ಪಷ್ಟೀಕರಣ: 2021-22 ನೇ ಸಾಲಿನ ಕನ್ನಡ ಪ್ರಥಮ ಭಾಷೆ ಪಠ್ಯ ಪುಸ್ತಕದಲ್ಲಿ ಇದ್ದ ಭಗತ್ ಸಿಂಗ್ ಪಾಠವು ಪರಿಷ್ಕೃತ ಪಠ್ಯ ಪುಸ್ತಕದಲ್ಲಿ ಮುಂದುವರೆದಿದೆ. ಭಗತ್ ಸಿಂಗ್ ಮತ್ತು ಸಮಾಜ ವಿಜ್ಞಾನ 7 ನೇ ತರಗತಿಯಲ್ಲಿ ಹಾಗೂ ಹತ್ತನೇ ತರಗತಿ ಪಠ್ಯ ಪುಸ್ತಕದಲ್ಲಿ ಮಾಹಿತಿ ನೀಡಲಾಗಿದೆ.
ವಿವಾದ -4:
ಆರೋಪ: ನಾರಾಯಣ ಗುರು, ಪೆರಿಯಾರ್ ಪಠ್ಯವನ್ನು ಪಠ್ಯ ಪುಸ್ತಕದಿಂದ ತೆಗೆದು ಹಾಕಲಾಗಿದೆ.
ಸ್ಪಷ್ಟೀಕರಣ: ಕಳೆದ 10 ನೇ ತರಗತಿ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿ ನಾರಾಯಣ ಗುರು, ಪೆರಿಯಾರ್ ವಿಶಯಾಂಶ ನೀಡಲಾಗಿತ್ತು. ಪರಿಷ್ಕರಣೆ ಸಂದರ್ಭದಲ್ಲಿ ಮಕ್ಕಳಿಗೆ ಸಮಾಜ ವಿಜ್ಞಾನ ಹೊರ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಕೆಲವನ್ನು ಕೈ ಬಿಡಲಾಗಿದೆ. ಕೆಲವನ್ನು ಸಂಕ್ಷಿಪ್ತಗೊಳಿಸಲಾಗಿದೆ. ಕೆಲವನ್ನು ನೇರ ವಿಷಯಗಳಿಗೆ ವರ್ಗಾವಣೆ ಮಾಡಲಾಗಿದೆ. ನಾರಾಯಣ ಗುರು ಮತ್ತು ಪರಿಯಾರ್ ವಿಷಯಗಳನ್ನು ಹತ್ತನೇ ತರಗತಿ ಪ್ರತಮ ಭಾಷೆ ಕನ್ನಡದಲ್ಲಿ ಅಳವಡಿಸಲಾಗಿದೆ. ನಾರಾಯಣ ಗುರು ಪಾಠವನ್ನು ಏಳನೇ ತರಗತಿ ಸಮಾಜ ವಿಜ್ದಾನದಲ್ಲಿ ಮುಂದುವರೆಸಲಾಗಿದೆ.

ವಿವಾದ -05:
ಆರೋಪ: ಟಿಪ್ಪು ಸುಲ್ತಾನ್ ಕುರಿತ ಪಾಠವನ್ನು ತೆಗೆದ ಅರೋಪ
ಸ್ಪಷ್ಟೀಕರಣ: ಕಳೆದ ಸಾಲಿನ ಸಮಾಜ ವಿಜ್ಞಾನ 06-07 ನೇ ಹಾಗೂ 10 ನೇ ತರಗತಿ ಪಠ್ಯ ಪುಸ್ತಕಗಳಲ್ಲಿ ಟಿಪ್ಪು ಸುಲ್ತಾನ್ ಪಾಠ ನೀಡಲಾಗಿತ್ತು. ಪರಿಷ್ಕೃತ 6,7 ಮತ್ತು 10 ನೇ ತರಗತಿ ಸಮಾಜ ವಿಜ್ಞಾನ ಪಠ್ಯ ಪುಸ್ತಕಗಳಲ್ಲಿ ಟಿಪ್ಪು ಸುಲ್ತಾನ್ ಪಠ್ಯ ಉಳಿಸಿಕೊಳ್ಳಲಾಗಿದೆ. ಟಿಪ್ಪು ಸುಲ್ತಾನ್ ಒಬ್ಬ ಮತಾಂಧ ಎಂಬ ವಿಚಾರವನ್ನು ದುರುದ್ದೇಶ ಪೂರ್ವಕವಾಗಿ ಸೇರ್ಪಡೆ ಮಾಡಲಾಗಿದೆ ಎಂಬ ಆರೋಪದ ಬಗ್ಗೆ ಬೊಮ್ಮಾಯಿ ಸ್ಪಷ್ಟನೆ ನೀಡಿಲ್ಲ.
ವಿವಾದ- 06 :
ಆರೋಪ: ಜಗಜ್ಯೋತಿ ಬಸವಣ್ಣ ಕುರಿತ ವಿಷಯಾಂಶದಲ್ಲಿ ವಿವಾದಾತ್ಮಕ ಅಂಶ ಇವೆ ಎನ್ನುವ ಆರೋಪ
ಸ್ಪಷ್ಟೀಕರಣ: ಹಿಂದಿನ ಪಠ್ಯ ಪುಸ್ತಕಗಳಲ್ಲಿ ಬಸವಣ್ಣ ಪಾಠ ಹಾಗೂ ಅಳವಡಿಸುವ ಪಾಠಗಳಲ್ಲಿಯೂ ವೀರಶೈವ ಧರ್ಮ ಎಂಬ ಉಲ್ಲೇಕವಿದೆ. ಎರಡೂ ಪಠ್ಯ ಪುಸ್ತಕಗಳಲ್ಲಿ ಬಸವಣ್ಣ ಲಿಂಗದೀಕ್ಷೆ ಪಡೆದರು ಎಂಬ ಉಲ್ಲೇಖವಿದೆ.
ವಿವಾದ 07:
ಅರೋಪ: ಕನ್ನಡದ ಭಾಷಾ ಪಠ್ಯ ಪುಸ್ತಕಗಳಲ್ಲಿ ಕೆಲವು ಲೇಖಕರ ಪಾಠ ಪದ್ಯ ಕೈ ಬಿಟ್ಟಿರುವ ಆಕ್ಷೇಪಣೆ.
ಸ್ಪಷ್ಟನೆ: 1 ರಿಂದ 10 ನೇ ತರಗತಿ ಭಾಷಾ ಪಠ್ಯ ಪುಸ್ತಕಗಳಲ್ಲಿ ಪರಿಷ್ಕರಿಸಿರುವ ಸಂದರ್ಭದಲ್ಲಿ ಪ್ರಥಮ ಭಾಷೆಯಲ್ಲಿ 33 ಪಾಠ ಪದ್ಯಗಳು, ದ್ವಿತೀಯ ಭಾಷೆಯಲ್ಲಿ 08, ತೃತೀಯ ಭಾಷೆಯಲ್ಲಿ 4 , ಬದಲಾವಣೆ ಮಾಡಲಾಗಿದೆ. ಉಳಿದ ಪ್ರಥಮ ಭಾಷೆ -165, ದ್ವಿತೀಯ ಭಾಷೆ -162, ತೃತೀಯ ಭಾಷೆ, 94 ಯಥಾವತ್ತಾಗಿ ಉಳಿಸಲಾಗಿದೆ ಎಂದು ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ.

ವಿವಾದ 08:
ಆರೋಪ: ಕೆಲವು ಕನ್ನಡದ ಲೇಖಕರು ತಮ್ಮ ಪದ್ಯ ಗದ್ಯಗಳನ್ನು ಪಠ್ಯ ಪುಸ್ತಕದಿಂದ ತೆಗೆಯುವಂತೆ ಪತ್ರ ಬರೆದಿದ್ದಾರೆ ಎಂಬ ಆರೋಪ
ಸ್ಪಷ್ಟನೆ: 1 ರಿಂದ 10 ನೇ ತರಗತಿ ವರೆಗಿನ ಪರಿಷ್ಕೃತ ಕನ್ನಡ ಭಾಷೆ ಪಠ್ಯ ಪುಸ್ತಕಗಳಲ್ಲಿರುವ ತಮ್ಮ ಪದ್ಯ ಮತ್ತು ಗದ್ಯಗಳಿಗೆ ನೀಡಿದ್ದ ಅನುಮತಿಯನ್ನು ಹಿಂಪೆಯುವಾಗಿ ಈವರೆಗೂ ಏಳು ಲೇಖಕರು ಹೇಳಿದ್ದಾರೆ.
ವಿವಾದ 08 :
ಆರೋಪ: ಆರ್ಎಸ್ಎಸ್ ಸ್ಥಾಪಕ ಹೆಗಡೆವಾರ್ ಪಾಠವನ್ನ 10 ನೇ ತರಗತಿ ಕನ್ನಡ ಭಾಷಾ ಪಠ್ಯದಲ್ಲಿ ಸೇರ್ಪಡೆ ಮಾಡಿದ ಆರೋಪ.
ಸ್ಪಷ್ಟೀಕರಣ: ನಿಜವಾದ ಆದರ್ಶ ಪುರುಷ ಯಾರಾಗಬೇಕು ಎಂಬ ಸದರಿ ಪಾಠವು ವ್ಯಕ್ತಿಗಳ ಬದಲಿಗೆ ತತ್ವಗಳನ್ನ ಗೌರವಸಿ ಎಂಬ ಸಂದೇಶ ನೀಡುತ್ತಿದ್ದು, ಬರಹ ಮೌಲ್ಯಾವನ್ನಾಧರಿಸಿ ಆಯ್ಕೆ ಮಾಡಲಾಗಿದೆ. ಶಿವಕೋಟ್ಯಾಚಾರ್ಯರ ಸುಕುಮಾರ ಸ್ವಾಮಿಯ ಕಥೆ ಪಾಠದ ಬದಲು ಸೇರ್ಪಡೆ ಮಾಡಿದೆ.
ವಿವಾದ 09 :
ಆರೋಪ: ಸೂಲಿಬೆಲೆ ಚಕ್ರವರ್ತಿ ಅವರ ತಾಯಿ ಭಾರತಿಯ ಅಮರ ಪುತ್ರರು ಎಂಬ ಪಾಠವನ್ನು ಹೊಸದಾಗಿ ಸೇರ್ಪಡೆ ಮಾಡಿದ ಅರೋಪ.
ಸ್ಪಷ್ಟನೆ: ಹುತಾತ್ಮ ಭಗತ್ ಸಿಂಗ್ , ಸುಖದೇವ್, ರಾಜ್‌ಗುರು ಸ್ವಾತಂತ್ರ್ಯ ಹೋರಾಟಗಾರರು. ಇವರ ಸ್ವಾತಂತ್ರ್ಯ ಹೋರಾಟದ ಸ್ಫೂರ್ತಿಯ ಕಥೆಯನ್ನು ಪಾಠದ ಮೌಲ್ಯ ವಿಷಯದ ಕಾರಣ ಆಯ್ಕೆ ಮಾಡಲಾಗಿದೆ ಎಂದು ಸಿಎಂ ಸಮರ್ಥನೆ ಮಾಡಿಕೊಂಡಿದ್ದಾರೆ.
ವಿವಾದ 10 :
ಆರೋಪ: ಕನ್ನಡ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅವರು ನಾಡಗೀತೆಗೆ ಅಪಮಾನ ಮಾಡಿದ್ದಾರೆ ?
ಸ್ಪಷ್ಟನೆ: 2017 ರಲ್ಲಿ ನಡೆದ ಘಟನೆಯಿತು. ಕುವೆಂಪು ಅವರ ಪದ್ಯದ ದಾಟಿಯಲ್ಲಿ ಯಾರೋ ಬರೆದ ಕವನವನ್ನು ರೋಹಿತ್ ಚಕ್ರತೀರ್ಥ ರವರು ಸಾಮಾಜಿಕ ಜಾಲ ತಾಣದಲ್ಲಿ ಶೇರ್ ಮಾಡಿದ್ದರು. ಅವರು ಬರೆದಿದ್ದಲ್ಲ. ಈ ಕುರಿತು ಪೊಲೀಸರೇ ತನಿಖೆ ನಡೆಸಿ ಬಿ ವರದಿ ಸಲ್ಲಿಸಿದ್ದಾರೆ.
ವಿವಾದ: 11:
ಆರೋಪ: ಚಕ್ರತೀರ್ಥ ಸಮಿತಿ ಎಲ್ಲಾ ಕನ್ನಡ ಪಠ್ಯ ಪುಸ್ತಕಗಳನ್ನು ಪರಿಷ್ಕರಣೆ ಮಾಡಲಾಗಿದೆಯೇ ?
ಸ್ಪಷ್ಟನೆ: ರೋಹಿತ್ ಚಕ್ರತೀರ್ಥ ಸಮಿತಿ 1 ರಿಂದ 10 ನೇ ತರಗತಿ ವರೆಗೆ ಕನ್ನಡ ಭಾಷೆಯ 15 ಪುಸ್ತಕ ಪರಿಷ್ಕರಿಸಿದೆ. ಸಮಾಜ ವಿಜ್ಞಾನದ ಐದು ಪಠ್ಯ ಪುಸ್ತಕ ಪರಿಷ್ಕರಣೆ ಮಾಡಲಾಗಿದೆ.
-
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
ಮಾರ್ಚ್ 24ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Bengaluru: 50 ವಾರ್ಡ್ಗಳಲ್ಲಿ ಕಸ ವಿಲೇವಾರಿ ಸ್ಥಗಿತ; ವೇತನ ವಿಳಂಬಕ್ಕೆ ಮುನಿದು ಸಾಮೂಹಿಕ ರಜೆ ಹಾಕಿದ ಕಾರ್ಮಿಕರು -
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Bengaluru: ಬಿಡಿಎಗೆ 50ರ ಸಂಭ್ರಮ; ಹೊಸ ಲೋಗೋ, ಟ್ಯಾಗ್ಲೈನ್ ವಿನ್ಯಾಸ ಮಾಡಿ 1 ಲಕ್ಷ ರೂ. ಬಹುಮಾನ ಗೆಲ್ಲಿ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು











Click it and Unblock the Notifications