Get Updates
Get notified of breaking news, exclusive insights, and must-see stories!

ರೈತರ ಹೋರಾಟ : ಮಹದಾಯಿ ವರುಷದ ಕೂಗು

ಜುಲೈ 16, 2015ರಂದು ರೈತ ಸೇನೆ ಕರ್ನಾಟಕದ ವತಿಯಿಂದ ಕಳಸಾ ಬಂಡೂರ ಹೋರಾಟ ಸಮನ್ವಯ ಸಮಿತಿಯು ನರಗುಂದದ ರೈತ ಸ್ಮಾರಕದ ಎದಿರು ಧರಣಿ ಸತ್ಯಾಗ್ರಹವನ್ನು ಶುರುಮಾಡಿತು. ಇದು ಮಹದಾಯಿ ನದಿ ನೀರನ್ನು ಕಾಲುವೆಗಳಿಗೆ ಹರಿಸುವ ಮೂಲಕ ಆ ಭಾಗದ ಜಮೀನುಗಳನ್ನು ನೀರಾವರಿ ಪ್ರದೇಶವಾಗಿಸಿ, ಮಲಪ್ರಭೆಯ ಮೂಲಯೋಜನೆಯಂತೆ ಈ ಭಾಗದ ರೈತರಿಗೆ ಅನುಕೂಲ ಮಾಡಿಕೊಡುವಂತೆ ಬೇಡಿಕೆ ಮುಂದಿಟ್ಟಿತು. ಈ ಪ್ರತಿಭಟನೆಗೆ ಇದೀಗ ಒಂದು ವರ್ಷ ತುಂಬಲಿದೆ. ಇಷ್ಟು ಸಮಯದಲ್ಲಿ ಮಲಪ್ರಭೆಯಲ್ಲಿ ಸಾಕಷ್ಟು ನೀರು ಹರಿದುಹೋಯಿತು ಎನ್ನಲು ನೀರೇ ಇಲ್ಲದ ಪರಿಸ್ಥಿತಿ ಕಾರಣವಾಯಿತು.

ಧರಣಿ ಸತ್ಯಾಗ್ರಹ ಶುರುವಾದ ಮೂರ್ನಾಲ್ಕು ದಿನಗಳ ಕಾಲ ನೀರಸವಾಗಿದ್ದ ಜನಸ್ಪಂದನೆ ನಂತರ ತುರುಸು ಪಡೆಯಿತು. ಸಾವಿರಾರು ಜನರು ಬಂದು ಸೇರತೊಡಗಿದರು. 600ಕ್ಕೂ ಹೆಚ್ಚು ಸಂಘಸಂಸ್ಥೆಗಳು ಈ ಹೋರಾಟಕ್ಕೆ ಬೆಂಬಲ ಕೊಟ್ಟವು. 37ನೇ ದಿವಸ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು. ಹಿಂದೆ ತೆಲುಗುಗಂಗಾ, ನರ್ಮದಾ, ಚನ್ನೈಗೆ ಕೃಷ್ಣಾ ನೀರು ಕೊಟ್ಟ ಘಟನೆಗಳ ಉದಾಹರಣೆಯ ಹಿನ್ನೆಲೆಯಲ್ಲಿ ಮಹದಾಯಿ ವಿವಾದವನ್ನು ಪ್ರಧಾನಮಂತ್ರಿಗಳ ಮಧ್ಯಸ್ಥಿಕೆಯಲ್ಲಿ ಬಗೆಹರಿಸಬೇಕೆಂಬ ಮನವಿ ನೀಡಲಾಯಿತು.

ಉಪವಾಸ, ಧರಣಿ ಮೊದಲಾದವುಗಳ ಬೆನ್ನಲ್ಲೇ ಸುಮಾರು 730 ಕಿಮೀ ದೂರದಷ್ಟು ಜಾಗೃತಿ ಜಾಥಾವನ್ನು ಕೂಡಲ ಸಂಗಮದಿಂದ ಕಣಕುಂಬಿಯವರೆಗೆ, ಮಹದಾಯಿ ಜಲಾನಯನ ಪ್ರದೇಶದ ನೂರೈವತ್ತಾರು ಹಳ್ಳಿಗಳ ಮೂಲಕ ನಡೆಸಲಾಯ್ತು. ಚಳವಳಿಯ ಅಂಗವಾಗಿ ರಾಜಧಾನಿ ಬೆಂಗಳೂರಲ್ಲಿ ಒಂದುವಾರ ಕಾಲ ಧರಣಿ ಸತ್ಯಾಗ್ರಹವನ್ನು ನಡೆಸಲಾಯ್ತು. ಆಗಸ್ಟ್ 24ರಂದು ಪ್ರಧಾನಮಂತ್ರಿಗಳನ್ನು ಭೇಟಿಮಾಡಿ ಮಧ್ಯಸ್ಥಿಕೆ ವಹಿಸುವಂತೆ ಕೋರಲು ಒಂದು ನಿಯೋಗವನ್ನು ದೆಹಲಿಗೆ ಒಯ್ದು ಭೇಟಿ ಮಾಡಲಾಯಿತಾದರೂ ಅದರಿಂದ ನಿರೀಕ್ಷಿತ ಫಲವೇನೂ ಸಿಗಲಿಲ್ಲ. ಆ ಭಾಗದ ಸಂಸದರ, ಪ್ರಮುಖ ರಾಜಕಾರಣಿಗಳಿಗೆ ಘೇರಾವ್ ಹಾಕುವ ಮೂಲಕ, ಮುತ್ತಿಗೆ ಹಾಕುವ ಕಾರ್ಯಕ್ರಮಗಳೂ ನಡೆದವು. ರೈಲು ತಡೆಯ ಕಾರ್ಯಕ್ರಮಗಳೂ ನಡೆದವು.

Complete story behind Kalasa Banduri fight (part 5)

ನರಗುಂದದ ರೈತ ಹುತಾತ್ಮ ಮೈದಾನದಲ್ಲಿ ರೈತ ಸೇನೆಯ ವತಿಯಿಂದ ದಿನಾಂಕ 21ನೇ ಜುಲೈ 2015ರಿಂದ ನಡೆಸಲಾಗುತ್ತಿರುವ ಮಹದಾಯಿಗಾಗಿ ಹೋರಾಟವು ವಾಸ್ತವವಾಗಿ ಬರಿಯ ಕಳಸ ಬಂಡೂರಿ ಹೋರಾಟವಲ್ಲ. ಇದು 7.56 ಟಿಎಂಸಿ ಪ್ರಮಾಣದ ಕುಡಿಯುವ ನೀರಿಗಾಗಿ ನಡೆಯುತ್ತಿರುವ ಹೋರಾಟವಲ್ಲ. ಇದು 1962ರಲ್ಲೇ ಯೋಜಿಸಿ ಅಣೆಕಟ್ಟೆ ಕಟ್ಟಿ, ಕಾಲುವೆಗಳನ್ನು ತೋಡಿ, ನೀರಾವರಿ ಪ್ರದೇಶವೆಂದು ಕರ ವಸೂಲಿ ಮಾಡಿ ಮೂಗಿಗೆ ತುಪ್ಪ ಸವರಿದ ಮೂಲ ಮಲಪ್ರಭಾ ಯೋಜನೆಯನ್ನು, ಮಹದಾಯಿ ನೀರನ್ನು ತರುವ ಮೂಲಕ ಸಂಪೂರ್ಣವಾಗಿ ಜಾರಿಮಾಡಬೇಕೆಂದು ನಡೆಸುತ್ತಿರುವ ಹೋರಾಟ.

ಶಂಕರಪ್ಪ ಅಂಬಲಿಯವರ ಅಭಿಮತ : ನರಗುಂದ ಹೋರಾಟಗಾರರು, ಕೆಲ ಸ್ವಘೋಷಿತ ನಾಯಕರುಗಳು ಕಳಸಾ ನಾಲೆಯ ಗೋಡೆ ಒಡೆದೆವು, ಒಡೆಯುತ್ತೇವೆ ಮುಂತಾಗಿ ನೀಡುವ ಹೇಳಿಕೆಗಳನ್ನು ಹೋರಾಟದ ದಾರಿ ತಪ್ಪಿಸುವ ದುರುದ್ದೇಶದ ಕ್ರಮ ಎಂದೇ ಪರಿಗಣಿಸುತ್ತಾರೆ. ಹಾಗೆ ಗೋಡೆ ಒಡೆಯುವುದರಿಂದ ನೀರು ಸಿಗುವುದಾದರೆ ರೈತರು ಈ ಕೆಲಸ ಯಾವಾಗಲೋ ಮಾಡುತ್ತಿದ್ದರು. ನಮ್ಮ ಹೋರಾಟವಿರುವುದು ಸರ್ಕಾರಗಳು ನ್ಯಾಯಾಧೀಕರಣದ ಕಲಾಪಗಳನ್ನು ಬೇಗ ಬೇಗ ಮಾಡುವಂತೆ ಎಲ್ಲಾ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸುವುದಕ್ಕಾಗಿ ಮಾತ್ರ ಎನ್ನುತ್ತಾರೆ.

ಇದುವರೆವಿಗೆ ಮಹದಾಯಿ ನೀರು ತರುತ್ತೇವೆ ಎಂದು ಭಾವುಕವಾಗಿ ಮಾತನ್ನಾಡಿ ಜನರಿಂದ ಮತ ಗಳಿಸಿ ಗೆದ್ದ ರಾಜಕಾರಣಿಗಳನ್ನು ನಂಬದೆ, ನ್ಯಾಯಾಲಯದ ತೀರ್ಪಷ್ಟೇ ನಂಬಿ ಇನ್ಮುಂದೆ ಯಾವುದೇ ರಾಜಕಾರಣಿ ಮಹದಾಯಿಯನ್ನು ಮತಕ್ಕಾಗಿ ಬಳಸಿಕೊಳ್ಳದಂತೆ ನೋಡಿಕೊಳ್ಳುತ್ತೇವೆ ಎನ್ನುತ್ತಾರೆ. ಈ ನಡುವೆ ಕೆಲವು ನಾಯಕರು ಮಹದಾಯಿ ಹೋರಾಟವನ್ನು ಬಳಸಿಕೊಂಡು ಪ್ರತ್ಯೇಕತೆಯ ಮಾತನ್ನಾಡಿರುವುದನ್ನು ಖಂಡಿಸಿ "ಬೇರೆ ರಾಜ್ಯವಾದರೆ ಮಹದಾಯಿ ಬಂದುಬಿಡುತ್ತಾಳೇನು? ಇದೆಲ್ಲಾ ಕಿಡಿಗೇಡಿತನಕ್ಕೆ ನಮ್ಮ ಸಹಮತವಿಲ್ಲ" ಎನ್ನುತ್ತಾರೆ ಶಂಕರಪ್ಪ ಅಂಬಲಿಯವರು.

ಈ ಹೋರಾಟ ಆರಂಭವಾದಂದಿನಿಂದ ನಮ್ಮ ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳವರೂ ಬಂದು ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ ಎನ್ನುವ ಇವರು, ಹಾಗಾದರೆ ಯೋಜನೆಯನ್ನು ಜಾರಿಮಾಡಬೇಕಾದವರು ಇವರಲ್ಲದೆ ಪಾಕಿಸ್ತಾನದವರಾ? ಅಥವಾ ಅಮೇರಿಕದವರಾ? ಎನ್ನುವ ಮೂಲಕ ಎಲ್ಲಾ ರಾಜಕೀಯ ಪಕ್ಷಗಳ ಬಣ್ಣ ಬಯಲು ಮಾಡುತ್ತಾರೆ. ಈ ಹೋರಾಟವನ್ನು ಹತ್ತಿಕ್ಕುವ, ನಾಯಕರುಗಳನ್ನು ಬಗ್ಗು ಬಡಿಯುವ ಅನೇಕ ಯತ್ನಗಳು ನಡೆದಿವೆ. ಇವಕ್ಕೆಲ್ಲಾ ನಾವು ಬಗ್ಗುವುದಿಲ್ಲಾ ಎನ್ನುತ್ತಾರೆ ಅಂಬಲಿಯವರು. ಪ್ರಧಾನಮಂತ್ರಿಯವರು ಮಧ್ಯಸ್ಥಿಕೆ ವಹಿಸಲು ನಿರಾಕರಿಸಲು ಕಾರಣ ಮಹದಾಯಿ ಸಮಸ್ಯೆಯನ್ನು ವಿವರಿಸಲು ನಮ್ಮ ಸಂಸದರು ಎಡವಿದ್ದೇ ಕಾರಣ ಎನ್ನುತ್ತಾರೆ. ಇದೇ ಸಮಯದಲ್ಲಿ ಈ ಹೋರಾಟದ ಒಂದುವರ್ಷದ ಅವಧಿಯಲ್ಲಿ ಪ್ರಾಣ ಬಿಟ್ಟ ಧರ್ಮಣ್ಣ ಮತ್ತು ಚಿತ್ತರಂಜನ್ ಎಂಬುವರ ತ್ಯಾಗವನ್ನೂ ನೆನೆಯುತ್ತಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+