'ಮ'ಕಾರದ ಮೇಲಿನ ಮುಗಿಯದ ಮಮಕಾರ

ಮಂಜುನಾಥ ಮಂತ್ರಾಲಯದ ಮಠಾದಿಪತಿಗಳಲ್ಲಿ ಮಂತ್ರಮಂತಿಸಿ, ಮುರುಡೇಶ್ವರ, ಮಹಾಬಲಿಪುರ ಮಾರ್ಗವಾಗಿ ಮಹಾಯಾಗದಿಂದ, ಮಹಾಸಾಧನೆ ಮಾಡುವುದು ಮತ್ತು ಮುನಿವರ್ಯರು, ಮಹರ್ಷಿಗಳು ಮತ್ತಿತರಿಗೆ, ಮೋಹ, ಮದ, ಮಾತ್ಸರ್ಯ, ಮನಃಶ್ಯಾಂತಿ, ಮುಕ್ತಿ, ಮೋಕ್ಷದ ಮಹತ್ವಾಕಾಂಕ್ಷೆಯ ಮಾರ್ಗವನ್ನು ಮಾತೃಭೂಮಿಯ ಮೋಹಕ್ಕೆ ಮಾಡುತ್ತಿದ್ದ. ಮುದ್ದಿನ ಮಗಳು ಮೀನಾಕ್ಷಿ. ಮದುವೆ ಮನೆಗಳಿಗೆ ಮಸಾಲೆದೋಸೆ, ಮೈಸೂರುಪಾಕು, ಮಸಾಲವಡೆ, ಮುರುಕು, ಮಜ್ಜಿಗೆಹುಳಿ, ಮಂಡಿಗೆ ಮಾಡಿದ್ದಲ್ಲದೆ, ಮರುಗ ಮಲ್ಲಿಗೆ ಮಾಲೆಗಳನ್ನೂ ಮಾಡಿದ್ದೇ ಮಾಡಿದ್ದು. ಮಳೆಬಿಲ್ಲಿನಾಕಾರದ ಮಂಟಪದಲ್ಲಿ ಮಧುಮಕ್ಕಳು, ಮದುವಣಗಿತ್ತಿಯರು, ಮಂಗಳವಾಧ್ಯ, ಮಂಗಳಸೂತ್ರ, ಮಹಾಲಕ್ಷ್ಮಿಗೆ ಮೋಜಲ್ಲದೇ ಮತ್ತೇನು? ಮಹಿಳಾಮಂಡಲಿಯ ಮಹಿಳೆಯೊರೊಡನೆ ಮಾತು, ಮಹನೀಯರಿಗೆ ಮುಗುಳ್ನಗೆ. ಮೋಟುಗೋಡೆ ಮೋಟಮ್ಮ, ಮುನಿಯಮ್ಮರ ಮನೆಮುರುಕುತನ, ಮುಸಿಮುಸಿ ಮೆಲುಕುವುದೇ ಮಾತಾಗಿತು. ಮೀನಾಕ್ಷಿ ಮಲ್ಲೇಶ್ವರದ ಮಹಾಮಂಡಲಿಯ ಮುಖ್ಯಸ್ಥೆಯಾದಳು. ಮದುರೈಮಣಿ, ಮಹಾರಾಜಪುರಂ, ಮಲ್ಲಾಡಿ, ಮಣಿರತ್ನಂ, ಮಲ್ಲಿಕಾರ್ಜುನ ಮನ್ಸೂರ್, ಮಹಾಲಿಂಗಂ, ಮದುರಗಾನ ಮದುವನದಲ್ಲಿ ಮನರಂಜಿಸಿದವು.
ಮೀನಾಕ್ಷಿ ಮಗುವಿನ ಮೋಹಕ ಮಂದಹಾಸ ಮುಖದ ಮೋಹನನೊಡನೆ ಮಧುಚಂದ್ರದ ಮರುಕಳಿಸುವ ಮಾನಸ, ಮಾಯಾ, ಮೇಘಾ, ಮೃದುಲಾರೊಡನೆ, ಮತ್ತೆಲ್ಲೋ, ಮೊಹಿಂದರ್, ಮಾಲ್ಕಂ ಮಾರ್ಶಲ್, ಮಂಜ್ರೇಕರ್ ಮೈಲಿಗಲ್ಲೂ, ಮುಂದಿನ ಮಹಡಿ ಮನೆಯಲ್ಲಿ ಮಸಾಜು ಮಾಡಿಸಿದ್ದರ ಮಜದ ಮನರಂಜನೆಯ ಮಹತ್ವದ ಮೇಲುಗೈ! ಮೋಹನ ಮಲೇಶಿಯಾ, ಮ್ಯಾನ್ಚೆಸ್ಟರ್ ಮ್ಯಾನೇಜರ್ ಮುಂದಾಳತ್ವದಿಂದ, ಮೆರಿಲ್ಯಾಂಡ್, ಮ್ಯಾನ್ಹಟನ್, ಮ್ಯುನಿಚ್, ಮ್ಯಾಡ್ರಿಡ್, ಮಂಗೋಲಿಯ, ಮಾತಿನ ಮೆಚ್ಚಿಗೆಯ ಮಹದಾನಂದ ಮರ್ಯಾದೆ ಮಾಡಿದ್ದ. ಮಹಾಲಕ್ಷ್ಮಿಗೆ, ಮಂದಾಕಿನಿ, ಮಾಲತಿ, ಮಂಜುಳರೊಡನೆ, ಮಾಯಾಮೃಗ, ಮನ್ವಂತರ, ಮೌನರಾಗ, ಮುತ್ತಿನತೋರಣ, ಮಹಾನವಮಿ, ಮುಕ್ತ ಮುಕ್ತದ ಮಂಗಳತ್ತೆ ಮುನಿಸು, ಮಧು ಮುಗ್ಧತೆ, ಮರುಕ, ಮಂಥನದ ಮುದ್ದಣ್ಣ ಮನೋರಮೆಯರ ಮಿಂಚಿನಂಥ ಮಾತೇ ಮನರಂಜನೆ. ಮಾಲೂರಿನ ಮನೆಬಾಗಿಲು ಮೂರೇ! ಮಹಾಲಕ್ಷ್ಮಿ ಮಂದಾಸನದಲ್ಲಿ, ಮೌನ, ಮಂಗಳಗೌರಿ, ಮಹಿಮೆ, ಮುದಾಕರಾತ್ತ ಮೋದಕಂ, ಮಹಾಲಷ್ಮೈಸ್ತೋತ್ರ, ಮಂಗಳಾರತಿ, ಮಹಾಪ್ರಸಾದ, ಮಹಾದ್ವಾರದಲ್ಲಿದ್ದವರಿಗೆಲ್ಲಾ ಮುಟ್ಟಿಸಿ, ಮುತ್ತಿನ ಮತುಕತೆಯಾಡಿಕೊಂಡು ಮಾರ್ಗದರ್ಶಿಯಾದರು.
ಮನೆಯೇ ಮಂತ್ರಾಲಯ, ಮನಸೇ ಮಾಹಾಸಾಗರ ಎಂದು ಮನದಟ್ಟುನಂತೆ ಮಾಡುವ ಮಹಾಲಕ್ಷ್ಮಿಯ ಮನೆಯಲ್ಲಿ ಮಕ್ಕಳಿರಲವ್ವಾ ಮನೆತುಂಬಾ ಮಂತ್ರ ಮನದಣಿಯಾಯಿತು.












Click it and Unblock the Notifications