ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಪಿ ನಗರದಲ್ಲಿ ವೀಣೆ, ಪಿಟೀಲು ಜುಗಲಬಂದಿ

By Prasad
|
Google Oneindia Kannada News

Vishwa Mohan Bhatt and Dr Mysore M. Manjunath
ಬೆಂಗಳೂರು, ಜ. 28 : ಗ್ರ್ಯಾಮಿ ಪ್ರಶಸ್ತಿ ವಿಜೇತ ಖ್ಯಾತ ಮೋಹನ ವೀಣಾ ವಾದಕ 'ಪದ್ಮಶ್ರೀ' ಪಂಡಿತ್ ವಿಶ್ವ ಮೋಹನ ಭಟ್ ಮತ್ತು ಖ್ಯಾತ ಪಿಟೀಲು ವಾದಕ ಡಾ. ಮೈಸೂರು ಎಂ. ಮಂಜುನಾಥ್ ಅವರು ಜುಗಲಬಂದಿ ಜನವರಿ 29ರ ಶನಿವಾರ ಸಂಜೆ 6 ಗಂಟೆಗೆ ಬೆಂಗಳೂರಿನ ಜೆಪಿನಗರದಲ್ಲಿ ನಡೆಯುತ್ತಿದೆ.

ವಿಶೇಷ ಫೈನ್ ಆರ್ಟ್ ಚಾರಿಟೇಬಲ್ ಟ್ರಸ್ಟ್ ಆಯೋಜಿಸಿರುವ ಈ ಸಂಗೀತ ಕಾರ್ಯಕ್ರಮ ಜೆಪಿ ನಗರ 7ನೇ ಹಂತ(ಪುಟ್ಟೇನಹಳ್ಳಿ)ದಲ್ಲಿರುವ ಬ್ರಿಗೇಡ್ ಮಿಲೇನಿಯಂ ಅಪಾರ್ಟ್ ಮೆಂಟ್ ನ ಎಮ್ಎಲ್ಆರ್ ಕನ್ವೆನ್ಷನ್ ಸೆಂಟರ್ ನಲ್ಲಿ ಆಯೋಜಿಸಲಾಗಿದೆ. ವಿಶ್ವ ಮೋಹನ ಭಟ್ ಮತ್ತು ಮಂಜುನಾಥ್ ಅವರಿಗೆ ಮೃದಂಗ ವಾದಕ ವಿದ್ವಾನ್ ಅರುಣ್ ಕುಮಾರ್ ಮತ್ತು ತಬಲಾ ವಾದಕ ವಿದ್ವಾನ್ ರವೀಂದ್ರ ಯಾವಗಲ್ ಸಾಥ್ ನೀಡಲಿದ್ದಾರೆ.

ಬ್ರಿಗೇಡ್ ಗ್ರೂಪ್ ನ ಮುಖ್ಯಾಧಿಕಾರಿಗಳಾದ ಎಂ.ಆರ್.ಜಯಶಂಕರ್, ಬೆಂಗಳೂರು ದೂರದರ್ಶನ ಕೇಂದ್ರದ ಉಪ ಮಹಾ ನಿರ್ದೇಶಕರಾದ ಡಾ.ಮಹೇಶ್ ಜೋಷಿ ಹಾಗು ಖ್ಯಾತ ಸಂಗೀತಗಾರರಾದ, ಗಾನಕಲಾ ಭೂಷಣ ವಿದ್ವಾನ್ ಆರ್.ಕೆ.ಪದ್ಮನಾಭ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ಧಾರೆ.

ವಿಶೇಷ ಫೈನ್ ಅರ್ಟ್ಸ್ ಬಗ್ಗೆ : ಲಲಿತ ಕಲೆಗಳ ಸಂರಕ್ಷಣೆ ಮತ್ತು ಪ್ರಸಾರಕ್ಕಾಗಿ ಪ್ರಾರಂಭವಾಗಿರುವ ಒಂದು ಚಾರಿಟಬಲ್ ಟ್ರಸ್ಟ್ ವಿಶೇಷ ಫೈನ್ ಅರ್ಟ್ಸ್ ನ ಉದ್ಘಾಟನೆ ಕೂಡ ಇದೇ ಸಂದರ್ಭದಲ್ಲಿ ನಡೆಯಲಿದೆ. ಅರ್ಹ ವಿದ್ಯಾರ್ಥಿಗಳಿಗೆ ಶಿಷ್ಯವೇತನ, ಶಾಲೆಗಳಲ್ಲಿ ಲಲಿತಕಲೆಗಳ ಪರಿಜ್ಞಾನ ಮತ್ತು ಕಲಾವಿದರ ಕ್ಷೇಮವನ್ನು ಗಮನದಲ್ಲಿಟ್ಟುಕೊಂಡು ಟ್ರಸ್ಟ್ ಪ್ರಾರಂಭಿಸಲಾಗಿದೆ.

ಈ ಟ್ರಸ್ಟ್ ನ ಸಲಹಾ ಸಮಿತಿಯ ಸದಸ್ಯರುಗಳು - ಪ್ರಖ್ಯಾತ ಪಿಟೀಲುವಾದಕರು ಮತ್ತು ಆಕಾಶವಾಣಿಯ ನಿಲಯದ ಕಲಾವಿದರು ವಿದ್ವಾನ್. ಮ್ಯೆಸೂರು ಎಂ. ನಾಗರಾಜ್, ಅಭಿನವ ರವಿವರ್ಮ ಬಿ.ಕೆ.ಎಸ್. ವರ್ಮ, ಜಿ.ಎನ್. ಸೀತಾರಾಮಯ್ಯ (ಚಿತ್ರಕಲಾಕಾರರು), ವಿದುಷಿ ವಾಣಿ ಸತೀಶ್ (ಗಾಯಕಿ ಮತ್ತು ಸಂಸ್ಥೆಯ ಮೂಖ್ಯಸ್ಥೆ), ಡಾ. ಮ್ಯೆಸೂರು ಮಂಜುನಾಥ್ (ಪ್ರಖ್ಯಾತ ಪಿಟೀಲು ವಾದಕರು ಮತ್ತು ಮ್ಯೆಸೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರು) ಹಾಗು ಬಳ್ಳಾರಿ ಎಂ. ರಾಘವೇಂದ್ರ (ಗಾಯಕರು ಹಾಗು ಆಕಾಶವಾಣಿಯ ಕಾರ್ಯ ನಿರ್ವಾಹಕರು).

ಕಾರ್ಯಕ್ರಮ ವಿವರ
ಜುಗಲ್ಬಂದಿ ಕಾರ್ಯಕ್ರಮ
ದಿನಾಂಕ : ಜನವರಿ 29, 2011, ಸಂಜೆ 6 ಗಂಟೆಗೆ
ಸ್ಥಳ : ಎಂ.ಎಲ್.ಆರ್. ಸಭಾಂಗಣ, ಜೆ.ಪಿ.ನಗರ ಏಳನೇ ಹಂತ (ಪುಟ್ಟೇನ ಹಳ್ಳಿ)

ಸಂಪರ್ಕಿಸಿ
ಮೈಸೂರು ಸತೀಶ್ : 99725 83670
ರಾಮ್ ಪ್ರಸಾದ್: 98456 08001
ಹೆಚ್ಚಿನ ವಿವರಗಳಿಗೆ : www.vishesha.org

English summary
Vishesha Fine Arts presents jugalbandi concert by Grammy award winner Padma Sri pandit Vishwa Mohan Bhatt and Violin maestro Dr Mysore M. Manjunath at MLR convention center, Brigade Millenium, JP Nagar 7th phase (Puttenahalli), Bangalore on Jan 29.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X