Rtd IAS ಅಧಿಕಾರಿ ಮದನ್ ಗೋಪಾಲ್ 'ರೇನ್ಬೋ ಇಯರ್ಸ್' ಪುಸ್ತಕ ಬಿಡುಗಡೆ
ಬೆಂಗಳೂರು, ಮಾ. 17: ರಾಜ್ಯ ಕಂಡ ಅತ್ಯಂತ ಪ್ರಾಮಾಣಿಕ ಮತ್ತು ದಕ್ಷ ಐಎಎಸ್ ಅಧಿಕಾರಿ ಮದನ ಗೋಪಾಲ್. ನಿವೃತ್ತಿ ಬಳಿಕ ಅವರು ಬರೆದಿರುವ "ರೇನ್ಬೋ ಇಯರ್ಸ್" ಕಾದಂಬರಿ ಬಿಡುಗಡೆ ಸಮಾರಂಭ ಮಾ. 23 ರಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರಿನಲ್ಲಿ ನಡೆಯಲಿದೆ.
ಇನ್‌ಫೆಂಟ್ರಿ ರಸ್ತೆಯಲ್ಲಿರುವ ಐಎಎಸ್ ಅಧಿಕಾರಿಗಳ ಅಸೋಸಿಯೇಷನ್ ನಲ್ಲಿ ಈ ಸಮಾರಂಭ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ನಿವೃತ್ತ ಲೋಕಾಯುಕ್ತ ನ್ಯಾ. ಎನ್. ಸಂತೋಷ್ ಹೆಗ್ಡೆ ಅವರು ಭಾಗವಹಿಸಲಿದ್ದಾರೆ. ವಿಶೇಷ ಅತಿಥಿಗಳಾಗಿ ಮಾಜಿ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಮತ್ತು ಕರ್ನಾಟಕ ರಾಜ್ಯ ಕಂಡ ಪ್ರಾಮಾಣಿಕ ಐಪಿಎಸ್ ಅಧಿಕಾರಿ ಡಾ. ಅಜಯ್ ಕುಮಾರ್ ಸಿಂಗ್ ಪಾಲ್ಗೊಳ್ಳಲಿದ್ದಾರೆ.

ನಿವೃತ್ತ ಐಎಎಸ್ ಅಧಿಕಾರಿ ಮದನ ಗೋಪಾಲ್ 1984 ರಲ್ಲಿ ನಂಜನಗೂಡು ಉಪ ವಿಭಾಗದ ಉಪ ವಿಭಾಗಾಧಿಕಾರಿಯಾಗಿ ಮೊದಲು ಸೇವೆಯನ್ನು ಆರಂಭಿಸಿದ್ದರು. ರಾಜ್ಯದಲ್ಲಿ ಕಳೆದ 30 ವರ್ಷ ಸೇವೆ ಸಲ್ಲಿಸಿ ತಮ್ಮದೇ ಕೊಡುಗೆ ನೀಡುವ ಮೂಲಕ ಸಮಾಜಕ್ಕೆ ಚಿರಪರಿಚಿತರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ, ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ನಿವೃತ್ತ ಬಳಿಕ ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಸಂಬಂಧ ಸರ್ಕಾರ ರಚನೆ ಮಾಡಿದ್ದ ಸಮಿತಿಯ ಮುಖ್ಯಸ್ಥರಾಗಿ ಇಡೀ ಕರ್ನಾಟಕದಲ್ಲಿ ಶೈಕ್ಷಣಿಕ ವಲಯ ರಚಿಸಿ ಶಿಫಾರಸು ಮಾಡಿದ್ದಾರೆ. ಇದೀಗ ಅವರು ಬರೆದಿರುವ ರೇನ್ಬೋ ಇಯರ್ಸ್ ಪುಸ್ತಕ ದೊಡ್ಡ ಸಂಚಲನ ಮೂಡಿಸಿದೆ.

ಭಾರತ ಸ್ವಾತಂತ್ರ್ಯಗೊಂಡ ಕೆಲ ದಶಕಗಳ ನಂತರ ಮಾರ್ಕ್ಸಿಸ್ ( ಕಮ್ಯುನಿಸ್ಟ್ ) ವಾದ ಯುವ ಸಮೂಹವನ್ನು ಆಕರ್ಷಣೆ ಮಾಡಿತ್ತು. ಸಮಾಜದಲ್ಲಿ ಕ್ರಾಂತಿ ಮಾಡಬೇಕು ಎಂಬ ಉನ್ಮಾದ. ಇಂತಹ ಸಂದರ್ಭದಲ್ಲಿ ರಾಜನ್, ಸೂರಿ, ಮಲ್ಲಣ್ಣ ಎಂಬ ಮೂವರು ಸ್ನೇಹಿತರು ಎಡ ಪಂಥೀಯ ಸಂಘಟನೆಗಳ ಜತೆ ಸೇರಿ ಕ್ರಾಂತಿ ಮಾಡುವ ತೀರ್ಮಾನ ತೆಗೆದುಕೊಳ್ಳುತ್ತಾರೆ. ದಶಕಗಳು ಕಳೆದ ನಂತರ ಅವರ ತಂತ್ರಗಳು ವಿಫಲಾಗುತ್ತದೆ. ಐಡಿಯಾಲಜಿ ನಿರುಪಯುಕ್ತವಾಗುತ್ತದೆ. ವಿದೇಶಿ ಬಂಡವಾಳ ಆಗಮನ ಸೇರಿ ನಾನಾ ಬದಲಾವಣೆ ಆಗುತ್ತದೆ. ರಾಜನ್ ಒಬ್ಬ ಪ್ರಾಮಾಣಿಕ ಐಎಎಸ್ ಅಧಿಕಾರಿಯಾಗಿ ಜೀವನದ ಕೊನೆ ಘಟ್ಟ ತಲುಪುತ್ತಾರೆ. ಅವರ ಸ್ನೆಹಿತರಾದ ಸೂರಿ ಮತ್ತು ಮಲ್ಲಣ್ಣ ಅವರದ್ದೇ ಒಂದು ಜೀವನ ಸಾಗಿಸುತ್ತಾರೆ. ಕೆಲವು ದಶಕಗಳು ಕಳೆದ ನಂತರ ಮೂವರು ಸೇರುತ್ತಾರೆ. ಆ ಹಳೇ ನೆನಪುಗಳಿಗೆ ಜಾರುತ್ತಾರೆ. ಹೀಗೆ ಕ್ರಾಂತಿಕಾರಿ ಆಲೋಚನೆ ಇಟ್ಟುಕೊಂಡು ಸಾಗುವ ಮೂವರು ಸ್ನೇಹಿತರ ಜೀವನಾಧಾರಿತ ಕಾಂದಬರಿ ರೇನ್ಬೋ ಇಯರ್ಸ್ ತಿರುಳು.












Click it and Unblock the Notifications