ಬೆಳಗೆರೆ ಅವರ 'ಸಮಾಧಾನ'ದ ಒಂದು ಪತ್ರ: ದುರುಳ ತಂದೆಗೆ ಮರುಳಾದ ಮಕ್ಕಳು

By: ರವಿ ಬೆಳಗೆರೆ
Subscribe to Oneindia Kannada

ರವಿ ಬೆಳಗೆರೆ ಅವರ ಹೊಸ ಪುಸ್ತಕವೊಂದು ಇನ್ನು ಕೆಲ ದಿನದಲ್ಲೇ ಓದಲು ಸಿಗಲಿದೆ. 'ಓ ಮನಸೇ' ಪ್ರಕಟವಾದ ಜನಪ್ರಿಯ ಅಂಕಣ 'ಸಮಾಧಾನ'ದ ಕೆಲ ಪತ್ರಗಳನ್ನು ಒಟ್ಟಾಗಿಸಿ, ಪುಸ್ತಕ ಮಾಡಲಾಗಿದೆ. ಟಿ.ಎಫ್.ಹಾದಿಮನಿ ಅವರು ಪುಸ್ತಕದ ಮುಖ ಪುಟ ವಿನ್ಯಾಸ ಮಾಡಿದ್ದು, ಲೇಖಕ ಜೋಗಿ ಅವರಿಗೆ ಈ ಪುಸ್ತಕವನ್ನು ಅರ್ಪಿಸಲಾಗಿದೆ. ಭಾವನಾ ಪ್ರಕಾಶನ ಹೊರತಂದಿರುವ ಈ ಪುಸ್ತಕದಲ್ಲಿ 216 ಪುಟಗಳಿದ್ದು, ಬೆಲೆ 160 ರು. ಪುಸ್ತಕಕ್ಕಾಗಿ ಮೊಬೈಲ್ ನಂಬರ್ 9448051726 ಸಂಪರ್ಕಿಸಬಹುದು.

ಈ ಪುಸ್ತಕದಲ್ಲಿ ಪ್ರಕಟವಾಗಿರುವ ಒಂದು ಪತ್ರ ಹಾಗೂ ಅದಕ್ಕೆ ರವಿಬೆಳಗೆರೆ ಅವರು ನೀಡಿದ ಉತ್ತರವನ್ನು ಒನ್ಇಂಡಿಯಾ ಓದುಗರಿಗಾಗಿ ಪ್ರಕಟಿಸಲಾಗುತ್ತಿದೆ.[ರಾಜ್-ಲೀಲಾವತಿ ಸಂಬಂಧವೇ ಆ ಪುಸ್ತಕದ ಮುಖ್ಯಭಾಗ: ರವಿಬೆಳಗೆರೆ]

ಪ್ರಿಯ ಅಣ್ಣ,
ನಾನು ಅರವತ್ತು ವರ್ಷದ ಗೃಹಿಣಿ. ಮುಕ್ಕಾಲು ಬದುಕು ನರಕದಲ್ಲೇ ಕಳೆದೆ. ನನ್ನ ಪತಿ ತುಂಬ ಬುದ್ಧಿವಂತರು, ಧಾರಾಳಿ, ಚೆನ್ನಾಗಿ ದುಡಿದವರು. ನನ್ನ ಇಬ್ಬರೂ ಹೆಣ್ಣುಮಕ್ಕಳಿಗೆ ಅವೆಲ್ಲ ಗುಣಗಳು ಬಂದಿವೆ. ಪತಿ ಅತ್ಯಂತ ಪಾಪ್ಯುಲರ್ ಲೆಕ್ಚರರ್. ನಾನು ಹೆಚ್ಚು ಓದಿದವಳಲ್ಲ. ಆದರೆ ತುಂಬ ಸಹನೆಯಿಂದ ಸಂಸಾರ ಮಾಡಿದೆ.

Ravi belagere 'Samadhana' book will be in market soon

ಹೆಸರು, ಹಣ, ಮನೆ, ಕಾರು ಎಲ್ಲ ಇದ್ದರೂ ನನ್ನ ಪಾಲಿಗೆ ಮನೆಯೇ ನರಕವಾಯಿತು. ಮದುವೆಗೆ ಮುಂಚೆ ಅವರಿಗೊಂದು ಸಂಬಂಧವಿತ್ತು. ಅದನ್ನು ಮೊದಲ ರಾತ್ರಿಯೇ ನನಗೆ ಹೇಳಿ ಎದೆ ಒಡೆಯುವಂತೆ ಮಾಡಿದರು. 'ಅಷ್ಟೆ ತಾನೆ' ಅಂತ ಸಮಾಧಾನ ಹೇಳಿಕೊಂಡೆ. ಮೊದಲ ರಾತ್ರಿ ಕಳೆದ ಮೂರು ದಿನಗಳಿಗೆ ನನ್ನ ಗುಪ್ತಾಂಗದಲ್ಲಿ ಅಸಹ್ಯ ದ್ರವ ಒಸರತೊಡಗಿತು.

ಆ ಹಿಂಸೆ ಭರಿಸಲಾಗದೆ ನನ್ನ ನಂಬಿಕೆಯ ಲೇಡಿ ಡಾಕ್ಟರ್ ಗೆ ತೋರಿಸಿದೆ. ಇದು ಹೆಂಗಸರ ರೋಗ ಅಂದರು. ಚಿಕಿತ್ಸೆ ತೆಗೆದುಕೊಂಡೆ. ಆದರೆ ಮತ್ತೆ ಮತ್ತೆ ಅಂಥವೇ ಖಾಯಿಲೆಗಳಾದವು. ಕಡೇ ಪಕ್ಷ ನಿರೋಧ್ ಬಳಸಿ ಎಂದು ಕಾಲು ಹಿಡಿದು ಕೇಳಿಕೊಂಡೆ. ಆ ವಿಷಯದಲ್ಲಿ ಆತ ಕ್ರೂರಿ, ನಿರ್ದಯಿ. ಖಾಯಿಲೆಗಳಿಗೆ ತುತ್ತಾಗುತ್ತಲೇ ಇದ್ದೆ.[ಹಾಯ್ ಬೆಂಗಳೂರು ಕಚೇರಿಗೆ ಸಿಬಿಐ ತಂಡ ಭೇಟಿ ಏಕೆ?]

ಬರೀ ವೇಶ್ಯೆಯರ ಸಹವಾಸವಿದೆ ಅಂದುಕೊಂಡಿದ್ದೆ. ಆದರೆ ಅವರಿಗೆ ಹೆಣ್ಣು ಸಿಕ್ಕರೆ ಸಾಕು. ತಮ್ಮ ವಿದ್ಯಾರ್ಥಿನಿಯರನ್ನು ಒಬ್ಬರಾದ ಮೇಲೊಬ್ಬರಂತೆ ಬಳಸಿಕೊಂಡರು. ಸುಮಾರು ಎಂಬತ್ತೇಳು ಈ ತರಹದ ಸಂಬಂಧಗಳಾದವು-ನನಗೆ ಗೊತ್ತಾದಂತೆ. ಇದೆಲ್ಲ 'ಕಷ್ಟ' ಅಷ್ಟೆ ಎಂದು ಸಹಿಸಿಕೊಂಡೆ.

ಆದರೆ ನರಕ ಆರಂಭವಾದದ್ದು ನನ್ನ ಮೊದಲ ಮಗಳ ಒಳ ಉಡುಪಿನಲ್ಲಿ ಅದೇ ಅಸಹ್ಯ ವಾಸನೆ ಮೊದಲ ಬಾರಿಗೆ ಕಂಡಾಗ. ಅವರು ಸ್ವಂತ ಮಗಳನ್ನೂ ಬಿಡಲಿಲ್ಲ. ಅದು ಆಗ ಹದಿಮೂರು ವರ್ಷದ್ದು. ಗದರಿಸಿ ಕೇಳಿದಾಗ ಒಪ್ಪಿಕೊಂಡಳು. ಆದರೆ ತಿರುಗಿಬಿದ್ದಳು. ಏನೆಲ್ಲ ಪ್ರಯತ್ನ ಮಾಡಿದರೂ ಅವಳು ಅಪ್ಪನೊಂದಿಗೆ ಪ್ರತ್ಯೇಕ ಕೋಣೆಯಲ್ಲಿ ಮಲಗುವುದನ್ನು ಬಿಡಲಿಲ್ಲ.

ಅವರು ಸುಮ್ಮನಿದ್ದರೂ ಹಟ ಮಾಡಿ ಅಪ್ಪನಲ್ಲಿಗೆ ಹೋಗುತ್ತಿದ್ದಳು. ನನ್ನ ಕರ್ಮ ನೋಡಿ? ಅವಳ ಕೈಗೆ ನಿರೋಧ್ ಕೊಟ್ಟು ಕಳಿಸುತ್ತಿದ್ದೆ. ಆದರೂ ಅದೇ ವಾಸನೆ. ಒಗೆಯದೆ ಅವಳು ಒಳ ಉಡುಪು ಎಲ್ಲೋ (ಅಪ್ಪನ ಮಂಚದ ಕೆಳಗೆ) ಬಿಸಾಡಿ ಮರೆತಿದ್ದರೆ ಎರಡು ದಿನದ ನಂತರ ನನ್ನ ಕೈಲಿ ಸಿಕ್ಕಾಗ ಆ ಅಸಹ್ಯದ ವಾಸನೆ ದ್ರವ ಒಸರಿದ ಜಾಗದಲ್ಲಿ ಅಷ್ಟಗಲ ತೂತಾಗಿರುತ್ತಿತ್ತು.[ಬೈಗುಳಕ್ಕೆ ಬ್ರಾಹ್ಮಣ ಮಾತ್ರ ಗುರಿ, ಇದ್ಯಾವ ನ್ಯಾಯರಿ?]

Ravi belagere 'Samadhana' book will be in market soon

ಯಾಕೋ ಗೊತ್ತಿಲ್ಲ, ನರಕವು ದುಪ್ಪಟ್ಟಾಗಿದ್ದುದು ಎರಡನೇ ಮಗಳು ಕೈಗೆ ಬಂದ ಮೇಲೆ. ಅವಳ ಬಟ್ಟೆಗಳಲ್ಲೂ ವಾಸನೆ. ಅವಳೂ ತಿರುಗಿಬಿದ್ದಳು. ಕರ್ಮ ತಪ್ಪದು ಎಂಬಂತೆ ಇಬ್ಬರಿಗೂ ರೆಗ್ಯುಲರ್ ಆಗಿ ನಾನು ನುಂಗಿದ ಮಾತ್ರೆಗಳನ್ನೇ ನುಂಗಿಸುತ್ತಿದ್ದೆ. ಅವರು ಮಾತ್ರ ಮಾತ್ರೆ ತೆಗೆದುಕೊಳ್ಳುತ್ತಿರಲಿಲ್ಲ.

ಒಂದೇ ಪುಣ್ಯವೆಂದರೆ ಮಕ್ಕಳು ಅಪಾರ ಬುದ್ಧಿವಂತರು. ಮೊದಲನೆಯವಳು ಸಾಫ್ಟ್ ವೇರ್ ಇಂಜಿನಿಯರ್, ಮದುವೆಯಾಗಿ ಟೊರೆಂಟೋದಲ್ಲಿ ನೆಲೆಸಿದ್ದಾಳೆ. ಎರಡನೆಯವಳು ಕರ್ನಾಟಕದ ಅತಿ ಪ್ರಖ್ಯಾತ ಕಾಲೇಜಿನಲ್ಲಿ ಖ್ಯಾತ ಉಪನ್ಯಾಸಕಿ. ಮದುವೆಯಾಗಿ ಒಂದು ಮಗುವಿದೆ. ನನ್ನ ಸಮಸ್ಯೆಯೆಂದರೆ ಆ ಮಕ್ಕಳೊಂದಿಗಿನ ಸಂಬಂಧವನ್ನು ಇವರು ಇವತ್ತಿನವರೆಗೆ ಬಿಟ್ಟಿಲ್ಲ.

ಪಾಸ್ ಪೋರ್ಟ್ ಮಾಡಿಸಿಕೊಂಡಿದ್ದಾರೆ. ಟೊರೆಂಟೋಗೆ ಹೋಗುವ ತಯಾರಿ ನಡೆದಿದೆ. ಎರಡನೆಯವಳು ಕಡೇ ಪಕ್ಷ ವಾರಕ್ಕೊಮ್ಮೆ ಅಪ್ಪನನ್ನು ಫೋನ್ ಮಾಡಿ ಕರೆಸಿಕೊಳ್ಳುತ್ತಾಳೆ. ನನ್ನ ಸಮಸ್ಯೆ ಅಂದರೆ ಇವರಿಬ್ಬರ ಸಂಸಾರದ ಗತಿ ಏನು? ಇವರು ಸತ್ತು ಹೋಗಬಾರದೇ ಅನ್ನಿಸುತ್ತದೆ.[ಓ ಮನಸೇಗೆ ನೂರು ಚಪ್ಪಾಳೆ ಹೊಡೆದವರು ನೀವು: ಬೆಳಗೆರೆ]

ಇತ್ತೀಚೆಗೆ ವಿಪರೀತ ಕುಡಿಯುತ್ತಾರೆ. ಆಸ್ಪತ್ರೆಗೆ ಅಡ್ಮಿಟ್ ಆದರು. ಲಿವರ್ ಡಿಸೀಸ್ ಅಂತೆ. ಇನ್ನು ಕುಡಿದರೆ ಬದುಕುವುದಿಲ್ಲ ಅಂದಿದ್ದಾರೆ. ಇವರು ಬಿಡುತ್ತಿಲ್ಲ. ವಿಪರೀತ ಕೃಶರಾಗಿದ್ದಾರೆ. ಆದರೆ ಈ 'ರೋಗ' ಹೋಗುತ್ತಿಲ್ಲ. ನಾನು ಗರ್ಭಕೋಶ ತೆಗೆಸಿಕೊಂಡು ಮೂವತ್ತು ವರ್ಷಗಳಾಗಿವೆ. ಇವರನ್ನು ಹತ್ತಿರದಿಂದ ನೋಡಿಯೂ ಅಷ್ಟೇ ವರ್ಷಗಳಾಗಿವೆ.

ಅನಿವಾರ್ಯ, ಒಂದೇ ಮನೆಯಲ್ಲಿ ಈ ನರಕ ಅನುಭವಿಸುತ್ತ ಬದುಕಿದ್ದೇನೆ. ಅಣ್ಣ, ನನಗೆ ಉತ್ತರ ಬೇಕು. ನಿಮ್ಮ ಕರುಣೆ ಬೇಡುತ್ತೇನೆ.
-ಎಲ್.ಕೆ.

ತಾಯಿ,
ನೀವು ಅಣ್ಣಾ ಅನ್ನಬೇಡಿ, ರವೀ ಅನ್ನಿ. ನನ್ನ ತಾಯಿ ಕೂಗಿದಷ್ಟು ಆನಂದವಾಗುತ್ತದೆ. ನಿಮಗೆ ನಮಸ್ಕಾರಗಳು, ಪ್ರೀತಿಯ 'ದಮ್ಮಯ್ಯ'.

ಇಂಥ ಸಮಸ್ಯೆಗಳನ್ನು ತುಂಬ ಕೇಳಿದ್ದೇನೆ. ಆದರೆ ಈ ಅತಿರೇಕ ಎಲ್ಲೂ ಕೇಳಿರಲಿಲ್ಲ. ನೋಡುವ ಮಾತು ದೂರ ಉಳಿಯಿತು. ಹೆಣ್ಣುಮಕ್ಕಳ ವಿಷಯದಲ್ಲಿ ನಾನು ಎಷ್ಟು ಪೊಸೆಸಿವ್ ಅಂದರೆ ಮಗಳನ್ನು ಹಿಂಸಿಸುವ ತಂದೆ-ಅಣ್ಣಂದಿರ ಮೇಲೆ ಕೊಂದುಬಿಡುವಷ್ಟು ಸಿಟ್ಟಿಗೇಳುತ್ತೇನೆ. ಕೆಲವರನ್ನು ನೆಲಕ್ಕೆ ಬೀಳುವಂತೆ ಥಳಿಸಿದ್ದೇನೆ.[ಆನ್ ಲೈನ್ ಶಾಪಿಂಗು ಎಂಬ ಮೋಹ, ದಾಹ]

Ravi belagere 'Samadhana' book will be in market soon

ಅಂಥ ಹಿಂಸೆಗೆ ಬಲಿಯಾದ ಒಂದು ಮಗುವಿಗೆ ಆಶ್ರಯ, ಕೆಲಸ ಕೊಟ್ಟು ಮದುವೆಯನ್ನೂ ಮಾಡಿದ್ದೇನೆ. ಅವಳಿಗೀಗ ಮುದ್ದಾಗ ಗಂಡು ಮಗು: ನನ್ನನ್ನು ಈಗಲೂ Daddy Boss ಅಂತಾಳೆ.

ಆದರೆ mom, ನೀವಂದಂತೆ ಕೇವಲ ನರಕವಲ್ಲ, ಖಾಸಗೀ ನರಕ. A private hell. ನಾಲ್ಕು ಗೋಡೆಗಳ ಮಧ್ಯೆ ನಡೆಯುವ ಹಿಂಸಾಚಾರವನ್ನು ತಡೆಯುವುದು ನಿಜಕ್ಕೂ ಕಷ್ಟ. ನಿಮಗೆ ಮೊದಲ ರಾತ್ರಿ ಆತ ನೀಡಿದ ಹೆಂಗಸರ ಖಾಯಿಲೆಯ ಹೆಸರು ಗೊನೋರಿಯಾ. ಈಗ HIVಯ ಸಮ್ಮುಖದಲ್ಲಿ ಅದು ನಗಣ್ಯ ಎಂಬಂತಾಗಿದೆ.

ಮಗುವಿನ ಒಳ ಉಡುಪನ್ನು ತೂತು ಮಾಡಿದ್ದು mostly ಇಲಿ. ಅವು ತಕ್ಷಣ ವಾಸನೆ ಹಿಡಿಯುತ್ತವೆ. ಶವಗಳ ಕಣ್ಣು ಮೊದಲು ಕಿತ್ತು ತಿನ್ನುತ್ತವೆ, soft parts. ಹಾಗೆಯೇ ವಾಸನೆಯ ಬಟ್ಟೆಯನ್ನು ಅಷ್ಟು ಮಾತ್ರ ತಿನ್ನುತ್ತವೆ.[ಫೇಸ್ ಬುಕ್ ಸದಾ ಇಣುಕಿ ನೋಡಬೇಡಿ: ಆರ್ ಬಿ]

ಇರಲಿ, ಮಕ್ಕಳೇಕೆ ತಿರುಗಿಬಿದ್ದರು ಅಂದರೆ, ಅಪ್ಪ ಕುಟುಂಬದ ಹಿರಿಯ. ಅವರ ಪಾಲಿಗೆ ಅಧಿಕಾರದ ಗೋಪುರ, ಸರ್ವಶಕ್ತ. ನನ್ನ ಹೆಣ್ಣುಮಕ್ಕಳು ನನ್ನನ್ನು ಇವತ್ತಿಗೂ 'First man ನೀವು ಅಪ್ಪಾ' 'You are my first and best boy friend' ಅನ್ನುತ್ತಾರೆ. ಅದನ್ಣೇ ದುರುಳ ತಂದೆಯರು ದೈಹಿಕ ದುರುಪಯೋಗಕ್ಕೆ ಬಳಸುತ್ತಾರೆ.

ಅಪ್ಪ ಮಾಡಿದ್ದೆಲ್ಲ ಸರಿ ಎಂಬ ಭಾವದ ಜೊತೆಗೆ ಚಿಕ್ಕಂದಿನಲ್ಲೇ ಸ್ಪಂದಿಸತೊಡಗುವ ದೇಹದ ವಾಂಛೆಗಳು ಅವರನ್ನು ಅಮ್ಮನನ್ನೂ ಧಿಕ್ಕರಿಸಿ ಆ 'ಕೆಟ್ಟ ಸುಖ'ದೆಡೆಗೆ attract ಮಾಡಿ ಬಿಡುತ್ತವೆ. ಮೊದಲು ಅಪ್ಪನ ವರ್ತನೆಗೆ ಹೆದರುತ್ತಾರೆ. ಆನಂತರ ತಮಗೇ ಗೊತ್ತಿಲ್ಲದೆ ಅಣಿಯಾಗುತ್ತಾರೆ.

ಮುಂದೆ ಅದು ಅಭ್ಯಾಸ ಹಾಗೂ ಅನಿವಾರ್ಯತೆ ಕೂಡ ಆಗಿ ಹೋಗುತ್ತದೆ. ಮಗುವಿನ ಮನಸು ಹೊಸ ಸ್ಲೇಟಿನಂತಹುದು. ಗೀಚಿದ ಮೊದಲ ಗೆರೆ ಅಳಿಸುವುದು ತುಂಬ ಕಷ್ಟ.[ಓ ಮನಸೇ ಹಳೆ ಸಂಚಿಕೆ ಆನ್ ಲೈನ್ ನಲ್ಲಿ ಲಭ್ಯ]

ತಾಯೀ, ಇದೆಲ್ಲ ಮರೆತುಬಿಡಿ: turn a blind eye. ನೀವು ಮಕ್ಕಳನ್ನು ತೀರ ಪ್ರಶ್ನಿಸಲು ಹೋದರೆ 'ನೀನು ಸರಿಯಾಗಿ ಸುಖ ಕೊಟ್ಟಿದ್ದರೆ ಅಪ್ಪ ಯಾಕೆ ಹೀಗಾಗುತ್ತಿದ್ದ?' ಅಂದು ಬಿಡುತ್ತಾರೆ. ಆ ಮಾತು ಅನ್ನಿಸಿಕೊಳ್ಳಬೇಡಿ. ವಿಪರೀತ ಕೃಶರಾಗಿರುವುದು ಅತಿ ಕೆಟ್ಟ ಖಾಯಿಲೆಯ ಸಂಕೇತವಾಗಿರಬಹುದು.

ಲಿವರ್ ಡಿಸೀಸ್ ಎಂಬುದು ಸಾವಿನೆಡೆಗಿನ ಮೊದಲ ಮೆಟ್ಟಿಲು. ನಾನು ಯಾರ ಸಾವನ್ನೂ ಬಯಸುವುದಿಲ್ಲ. ಆದರೆ, ಲೈಂಗಿಕ ಸ್ವೇಚ್ಛಾಚಾರವನ್ನು 'ದೇಹ-ನಿಸರ್ಗ' ತಾನಾಗೇ ದಂಡಿಸುತ್ತದೆ. ಮಕ್ಕಳ ಆರೋಗ್ಯ ಉಳಿದರೆ ನಿಮ್ಮಷ್ಟೇ ಸಂತಸ ನನಗೂ. ಅವರಿಗೆ ಮನೋವೈದ್ಯರ ಕೌನ್ಸೆಲಿಂಗ್ ಬೇಕು.

ಬಿಡಿ, ನಿಮಗೀಗ ಈ ಮಗ ಸಿಕ್ಕಿದ್ದಾನೆ. ಪ್ರತಿ ಭಾನುವಾರ ಸಂಜೆ ಐದರಿಂದ ಒಂಬತ್ತರ ತನಕ ಬೆಂಗಳೂರಿನ ಗಾಂಧಿ ಬಜಾರ್ ನಲ್ಲಿರುವ 'ರೋಟಿಘರ್' ಹೊಟೇಲಿನ ಪಕ್ಕದ BBC (ಬೆಳಗೆರೆ ಬುಕ್ಸ್ ಅಂಡ್ ಕಾಫಿ) ಪುಸ್ತಕದ ಮಳಿಗೆಯಲ್ಲಿ ನನ್ನ ಓದುಗರಿಗೆ ಸಿಗುತ್ತೇನೆ. ತಪ್ಪದೆ ಬನ್ನಿ ಮಾತನಾಡೋಣ.

ನಿಮಗಾಗಿ ಎಷ್ಟು ಭಾನುವಾರಗಳಾದರೂ ಸರಿ, ಕಾಯುತ್ತಿರುತ್ತೇನೆ. ನಿಮ್ಮ ಮೊಬೈಲ್ ನಂಬರ್ ನೋಟ್ ಮಾಡಿಕೊಂಡಿದ್ದೇನೆ. ನನ್ನ ನಂಬರ್ ಎಸ್ಸೆಮ್ಮೆಸ್ ಮಾಡುತ್ತೇನೆ.
-ನಿಮ್ಮ ಮಗ, -ಆರ್.ಬಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Ravi belagere's one of the famous column 'Samadhana' which was publishing in Oh Manase magazine, now collection of some of the letters become a book by name 'Samadhana'. Book will available in market soon.
Please Wait while comments are loading...