• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಸ್ತಕ ವಿಮರ್ಶೆ: ಅಭದ್ರತೆ, ಅಹಮ್ಮಿನ ನಡುವೆ ಸಾಗುವ ಸತ್ತು

By ಶ್ರೀಲಕ್ಷ್ಮಿ, ಬೆಂಗಳೂರು
|
Google Oneindia Kannada News

ಸತ್ತು - ಕನ್ನಡದ ಮಟ್ಟಿಗೆ ವಸ್ತು, ಪಾತ್ರಗಳು, ಹಾಗೂ ನಿರೂಪಣೆಯಲ್ಲಿ revolutionary ಪ್ರಯತ್ನ ಅನ್ನಿಸಿತು. ಓದುಗಳಾಗಿ ನನ್ನ ಸಂವೇದನೆಯ ಮತ್ತು ಆಲೋಚನೆಯ ವ್ಯಾಪ್ತಿಯನ್ನು ಹಿಗ್ಗಿಸಿದ ಪುಸ್ತಕ ಇದು.

ಕೆಲವೇ ದಿನಗಳಲ್ಲಿ ನಡೆಯುವ ಕೆಲವೇ ಪಾತ್ರಗಳ ಕಥೆ. ಆದರೆ ಇಲ್ಲಿರುವ ಜಾತಿ, ಕ್ಲಾಸ್, ಕಲೆ, ಪ್ರಜ್ಞೆ, ನೈತಿಕತೆ, ವಿಜ್ಞಾನ ಇವುಗಳ ಕಾಂಪ್ಲೆಕ್ಸ್ ಹೆಣಿಗೆ ಮತ್ತು ಸಾಮಾಜಿಕ ವಿಶ್ಲೇಷಣೆಯ ಸಾಂದ್ರತೆ ಬಹುಕಾಲ ಯೋಚನೆಗೆ ಹಚ್ಚುವಂತದ್ದು. ಇದರ ಜೊತೆಗೆ ಸಮಯದ ಧೋರಣೆ ಮತ್ತು ಭ್ರಾಮಕತೆಯ ಹಿನ್ನೆಲೆ ಪಾತ್ರಗಳ ಅಸ್ತಿತ್ವಕ್ಕೆ ಹೊಸದೊಂದು ಆಯಾಮ ಕೊಟ್ಟಿದೆ.

ಸಂದರ್ಶನ: ಸತ್ತು ಕಾದಂಬರಿ ಕರ್ತೃ ಕರಣಂ ಪವನ್ ಪ್ರಸಾದ್ಸಂದರ್ಶನ: ಸತ್ತು ಕಾದಂಬರಿ ಕರ್ತೃ ಕರಣಂ ಪವನ್ ಪ್ರಸಾದ್

ನಮ್ಮ ಅಸ್ತಿತ್ವ ಎಂಬ ಭ್ರಮೆಯ ಸುತ್ತ ನಾವು ಕಟ್ಟಿಕೊಳ್ಳುವ ಧೋರಣೆ, ಈ ಭ್ರಮೆಯನ್ನು ಜೀವಂತವಾಗಿಡಲು ಪಡುವ ಹೆಣಗಾಟ, ಮಾನಸಿಕ ಹಿಂಸೆ. ವೈಯುಕ್ತಿಕ ಧೋರಣೆ, ಭ್ರಮೆಗಳನ್ನು ರಕ್ಷಿಸಿಕೊಳ್ಳುವ ಭರದಲ್ಲಿ ಆಗುವ ಸಾಮಾಜಿಕ ಪರಿಣಾಮ. ಆರ್ಥಿಕ ಮತ್ತು ಸಾಮಾಜಿಕ ಸ್ತರಗಳ ನಡುವೆ, generationally perpetuate ಆಗುವ hierarchy ಮತ್ತು power imbalance, ಇವೆಲ್ಲ ಸತ್ತುವಿನಲ್ಲಿ ನಮಗೆ ಎದುರಾಗುತ್ತವೆ.

ದೇಬ್‌ನ ಅಸ್ತಿತ್ವದ ಭಾಗವೇ ಆಗಿರುವ ಕಾರು, ಡಾಬ್ರಿ, ಸುಪರ್ಣಾಳ ಜೊತೆಗಿನ relationship - ಅವರುಗಳ ಬಗ್ಗೆ ಅವನ ಅಭದ್ರತೆ, ಅವುಗಳ ಜೊತೆ ಅವನ ಅಹಮ್ಮಿನ ಗುರುತಿಸಿಕೊಳ್ಳುವಿಕೆ, ಅವುಗಳ ಬಗ್ಗೆ ನಿರಂತರ ಸಾಗುವ ಸ್ವಗತ,ಅವುಗಳಿಗೆ ಧಕ್ಕೆ ಬಂದಾಗ (real or imaginary) ಅನಾವರಣ ವಾಗುವ ಅವನ ಘಾತುಕತೆ, ಅಸ್ತಿತ್ವದ ಭ್ರಮೆ ಕಳಚಿದಾಗ ದೇಬ್ನನ್ನು ಆವರಿಸುವ ಅನಾಥಪ್ರಜ್ಞೆ ಮತ್ತು acute desolation - ಇವೆಲ್ಲವೂ ಬುದ್ಧಿಯ ಆಚೆಗೆ, ನಮ್ಮ ಭಾವಕ್ಕೆ ತಾಕುತ್ತವೆ.

ಕರಣಂ ಅವರ ಅರಿವಿನ ಸತ್ಯ ಹುಡುಕಾಟ ಗ್ರಸ್ತ ಕಾದಂಬರಿಕರಣಂ ಅವರ ಅರಿವಿನ ಸತ್ಯ ಹುಡುಕಾಟ ಗ್ರಸ್ತ ಕಾದಂಬರಿ

ದೇಬ್ ಮತ್ತು ಸುಪರ್ಣಾಳ ಧೋರಣೆಗಳ ತಿಕ್ಕಾಟ ಎಷ್ಟೋ ಕಡೆ ಇಡೀ ಸಮಾಜದ ಸಂಘರ್ಷದ ಪ್ರತಿಫಲನ ಎನಿಸಿದರೆ, ಕೆಲವೊಂದು ಕಡೆ ನಮ್ಮಲ್ಲೇ ಅಂತರ್ಗತವಾಗಿ ಇರುವ ದ್ವಂದ್ವದ (ಆದರ್ಶ vs ಆಚರಣೆ ) ಬಗ್ಗೆ ಯೋಚನೆ ಮಾಡುವಂತೆ ಮಾಡುತ್ತವೆ.

Karanam Pavan Prasad Novel Sattu review by Srilakshmi

ಕೊನೆ ಕೊನೆಗೆ, 'ಈಗ' ಎಂಬುದು ಇಲ್ಲ, ಸಮಯ ಎಂಬುದು ಇಲ್ಲ ಎನ್ನುತ್ತಲೇ ಸುದೀಪ್ತೋ, ದೇಬ್ ನಿಂದಾಗುವ linear cause and effect ಗೆ ಸಾಕ್ಷಿ ಆದನಾ ಅಥವಾ cause and causation ಎಂಬುದು ಚಲನೆಯ ಎರಡು ಬಿಂದು ಅಷ್ಟೇ ಅದಕ್ಕೂ ಸಮಯಕ್ಕೂ ಸಂಬಂಧ ಇಲ್ಲ ಎಂದು ಲೇಖಕರು ಹೊಸ ದೃಷ್ಟಾಂತ ಇಲ್ಲಿ ನೀಡಿದ್ದಾರಾ ಎಂಬ ಜಿಜ್ಞಾಸೆ ಕೂಡ ನನಗೆ ಬಂತು.

ತಮಸ್ಸಿನಿಂದ ಸತ್ಯದ ತೇಜಸ್ಸಿನೆಡೆಗೆ ದಾರಿ ತೋರುವ 'ನನ್ನಿ'ತಮಸ್ಸಿನಿಂದ ಸತ್ಯದ ತೇಜಸ್ಸಿನೆಡೆಗೆ ದಾರಿ ತೋರುವ 'ನನ್ನಿ'

ಕರಣಂ ಅವರ ಮುಂಚಿನ ಕಾದಂಬರಿಗಳಿಗಿಂತ ಸತ್ತು descriptive ಮತ್ತು visual ಆಗಿ ನನಗೆ ಕಂಡಿತು. ಪ್ರತಿಯೊಂದು ಸ್ಥಳ, ಘಟನೆ ಮತ್ತು ಆಲೋಚನೆಯ ಲಹರಿಯೂ ವಿಸ್ತೃತವಾಗಿ immersive ಆಗಿದೆ. ಇಲ್ಲಿನ ಸಾಮಾಜಿಕ ವ್ಯಾಖ್ಯಾನ observation ನಲ್ಲಿ ಸೂಕ್ಷ್ಮವಾದರೂ, ನಿರೂಪಣೆಯಲ್ಲಿ ಸ್ವಲ್ಪ ಜಾಸ್ತಿಯೇ ನೇರವಾಗಿದ್ದಂತೆ ಅನಿಸಿತು.

ಸತ್ತುವಿನ ವಿಷಯ ಘನ ಗಂಭೀರವಾದರೂ, ನಿರೂಪಣೆಯಲ್ಲಿನ dry wit ನಿಂದಾಗಿ ಭಾರ ಅನಿಸುವುದಿಲ್ಲ. ಇನ್ನಷ್ಟು ಓದುಗರ ಅಭಿಪ್ರಾಯವನ್ನು ಗುಡ್‌ರೀಡ್‌ನಲ್ಲಿ ಓದಬಹುದು.

ಲೇಖಕರ ಬಗ್ಗೆ: ನಾಟಕಕಾರ ಪಿಪಿ ಶರ್ಮ ಲೇಖಕ ಕರಣಂ ಪವನ್ ಆಗಿ ಈಗ ಜನಪ್ರಿಯ. ಸದ್ಯ ಕಾನ್ ಕೇವ್ ಮೀಡಿಯಾ ಸಂಸ್ಥೆಯಲ್ಲಿ ಕ್ರಿಯೇಟಿವ್ ಹೆಡ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಕರಣಂ ಪವನ್ ಪ್ರಸಾದ್ ಹಲವು ವರ್ಷಗಳಿಂದ ಸೃಜನಾತ್ಮಕ ವಿನ್ಯಾಸಗಾರರಾಗಿದ್ದಾರೆ. ಕಸ್ತೂರಿ ಮೀಡಿಯಾ. ಪ್ರೈ.ಲಿ ನಲ್ಲಿ ಪೊಗ್ರಾಂ ಕಾನ್ಸೆಪ್ಟ್ ಡಿಸೈನರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ವಂದೇಮಾತರಂ ಟ್ರಸ್ಟ್‌ನ ಜನಗಣ ರಂಗ ತಂಡದ ಸಂಚಾಲಕರಾಗಿದ್ದರು.

Recommended Video

   ಮುಂಬೈನಲ್ಲಿ ಕಳ್ಳನ ಬರ್ತಡೇ ಸೆಲೆಬ್ರೇಶನ್ ಮಾಡಿದ್ಯಾಕೆ? ಸೆಲೆಬ್ರೇಶನ್ ಹಿಂದಿದೆ ಮನಕರಗೋ ಕಥೆ | Oneindia Kannada

   ಬೀದಿ ಬಿಂಬ ರಂಗದ ತುಂಬ, ಪುರಹರ ಸೇರಿದಂತೆ ಐದಾರು ಜನಪ್ರಿಯ ನಾಟಕಗಳನ್ನು ರಚಿಸಿ ನಿರ್ದೇಶಿಸಿದ್ದಾರೆ. ಇವರ ಆರು ಕೃತಿಗಳು ಈವರೆಗೂ ಪ್ರಕಟಗೊಂಡು, ಹೆಚ್ಚು ಓದುಗರನ್ನು ತಲುಪಿವೆ. ಹೆಚ್ಚಿನ ಮಾಹಿತಿಗೆ ಲೇಖಕರ ಕುರಿತ ಹೆಚ್ಚಿನ ಮಾಹಿತಿಯನ್ನು ವಿಕಿಪೀಡಿಯಾ ಪುಟದಲ್ಲಿ ಓದಿ

   English summary
   Sattu- Kannada short novel by Karanam Pavan Prasad A -review by Srilakshmi
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X