ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿ.5: ಪಲ್ಲವಿ ಇಡೂರು ಬರೆದಿರುವ 'ಆಗಸ್ಟ್ ಮಾಸದ ರಾಜಕೀಯ ಕಥನ' ಲೋಕಾರ್ಪಣೆಗೆ ಸಿದ್ದರಾಮಯ್ಯ

|
Google Oneindia Kannada News

ಬೆಂಗಳೂರು, ಡಿಸೆಂಬರ್ 02: ಲೇಖಕಿ ಪಲ್ಲವಿ ಇಡೂರು ಬರೆದಿರುವ 'ಆಗಸ್ಟ್ ಮಾಸದ ರಾಜಕೀಯ ಕಥನ' ಪುಸ್ತಕ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿದ್ದು, ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಬೆಂಗಳೂರಿನ ಕುಮಾರ ಪಾರ್ಕ್ ಈಸ್ಟ್, ಗಾಂಧಿ ಭವನದ ಬಾಪೂ ಸಭಾಂಗಣದಲ್ಲಿ ಡಿಸೆಂಬರ್ 05ರಂದು ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ಆಯೋಜಿಸಲಾಗಿದೆ. ಪುಸ್ತಕ ಲೋಕಾರ್ಪಣೆ ಸಂಭ್ರಮದಲ್ಲಿ ಹೈಕೋರ್ಟ್ ನಿವೃತ್ತ ನ್ಯಾ. ನಾಗಮೋಹನ್ ದಾಸ್, ಹಿರಿಯ ಪತ್ರಕರ್ತರಾದ ಬಿ.ಎಂ ಹನೀಫ್ ಅವರು ಪಾಲ್ಗೊಳ್ಳಲಿದ್ದಾರೆ ಎಂದು ಕಾನ್ಕೇವ್ ಪುಸ್ತಕ ಪ್ರಕಾಶಕ ಸಂಸ್ಥೆಯ ನಂದೀಶ್ ಅವರು ತಿಳಿಸಿದ್ದಾರೆ.

ಆಗಸ್ಟ್ - ಮಾಸದ ರಾಜಕೀಯ ಕಥನದ ಬಗ್ಗೆ:
ಕನ್ನಡ ಪುಸ್ತಕ ಲೋಕದಲ್ಲಿ ಓದಲು ಸಿಗುವ ವಿಷಯಗಳು ಹಲವಾರು. ಆದರೆ ಭಾರತದ ಮಟ್ಟಿಗೆ ಎಂದೂ ಮರೆಯಲಾಗದ, ಯಾವತ್ತೂ ಕಡೆಗಣಿಸಲಾಗದ ಸ್ವಾತಂತ್ರ್ಯ ಹೋರಾಟ ಮತ್ತು ದೇಶ ವಿಭಜನೆಯ ವಿಚಾರದ ರಾಜಕೀಯ ಆಯಾಮಗಳು ಇದುವರೆಗೂ ಪ್ರಕಟವಾಗಿಲ್ಲ ಮತ್ತು ಚರ್ಚೆಯೂ ಆಗದ ವಿಚಾರವಾಗಿದೆ. ಈ ಕುರಿತು ವಸ್ತುನಿಷ್ಟ ಬರಹವೊಂದರ ಅಗತ್ಯ ಮನಗಂಡು ಕನ್ನಡದ ಓದುಗರಿಗೆ ಅದನ್ನು ತಲುಪಿಸುವ ಜವಾಬ್ದಾರಿಯೊಂದಿಗೆ ಪ್ರಕಟಗೊಂಡಿರುವ ಪುಸ್ತಕ 'ಆಗಸ್ಟ್ - ಮಾಸದ ರಾಜಕೀಯ ಕಥನ'. ಇದು ದೇಶ ವಿದೇಶಗಳಿಂದ ಪುಸ್ತಕಗಳನ್ನು ತರಿಸಿ, ಮಾಹಿತಿಗಳನ್ನು ಕಲೆ ಹಾಕಿ ಸ್ಪಷ್ಟ ವಿಚಾರಗಳೊಂದಿಗೆ ಬರೆದ ಪುಸ್ತಕವಾಗಿದ್ದು ಸ್ವಾತಂತ್ರ್ಯ ಮತ್ತು ದೇಶ ವಿಭಜನೆಯ ಸಂದರ್ಭದ ರಾಜಕೀಯವನ್ನು ಬಹಳ ಆಪ್ತವಾಗಿ ಕಟ್ಟಿಕೊಡಲಾಗಿದೆ.

Kannada Writer Pallavi Idoor new book on Politics set to release on Dec 05

ಪುಸ್ತಕದಲ್ಲಿನ ಒಂದು ತುಣುಕು:
"ಈ ನಿರ್ಧಾರ ಖಂಡಿತವಾಗಲೂ ಭಯದಲ್ಲೇ ತೆಗೆದುಕೊಂಡಿದ್ದಾಗಿದೆ. ಈ ವಿಚಾರವನ್ನು ನಾನು ಒಪ್ಪಿಕೊಳ್ಳಲೇ ಬೇಕಿದೆ. ಆದರೆ, ಇದರರ್ಥ ನಾವು ಭಯಭೀತರಾಗಿದ್ದೇವೆಂದಲ್ಲ. ಈ ಭಯ ಇಲ್ಲಿಯವರೆಗಿನ ಹೋರಾಟದಲ್ಲಿ ಜೀವ ಕಳೆದುಕೊಂಡವರನ್ನು ನೆನೆದು ಅಲ್ಲ. ನಮ್ಮ ಹೆಣ್ಣುಮಕ್ಕಳು ವಿಧವೆಯರಾಗಿದ್ದಾರೆ ಎಂದಲ್ಲ, ನಮ್ಮನ್ನು ಬಲಿಪಶುಗಳನ್ನಾಗಿಸಲಾಗಿದೆ ಎಂದಲ್ಲ ಅಥವಾ ಮನೆಮಠಗಳನ್ನು ಸುಟ್ಟು ಹಾಕಬಹುದು ಎಂದಲ್ಲ, ಭಯವೇನೆಂದರೆ, ನಾವು ಹೀಗೆ ಒಬ್ಬರನ್ನೊಬ್ಬರು ಅವಮಾನಗೊಳಿಸುತ್ತಾ, ದ್ವೇಷಿಸುತ್ತಾ ಪ್ರತೀಕಾರ ತೀರಿಸಿಕೊಳ್ಳುತ್ತಾ ಹೋದರೆ ನಾವು ಒಂದು ದಿನ ನರಭಕ್ಷಕರಂತೆ ಆಗಿ ದರಿದ್ರ ಸ್ಥಿತಿಗೆ ತಲುಪುತ್ತೇವೆ. ಪ್ರತಿಯೊಂದು ಹೊಸ ಕೋಮುಗಲಭೆಯಲ್ಲಿ ಹಿಂದಿನ ಕೋಮುಗಲಭೆಯ ಕ್ರೂರತೆ ಮತ್ತು ಕೆಟ್ಟತನ ಒಂದು ಮಾದರಿಯಾಗಿ ಅದು ಬೆಳೆಯುತ್ತಲೇ ಹೋಗುತ್ತದೆ"- ಪಲ್ಲವಿ ಇಡೂರು

Kannada Writer Pallavi Idoor new book on Politics set to release on Dec 05

ಪಲ್ಲವಿ ಇಡೂರು ಬಗ್ಗೆ:
ಮೂಲತಃ ಕುಂದಾಪುರದವರಾದ ಪಲ್ಲವಿ ಇಡೂರು ಅವರು, ತಮ್ಮ ತಂದೆ ತಾಯಿಯರು ಸೇವೆ ಸಲ್ಲಿಸುತ್ತಿದ್ದ ಸರಕಾರಿ ಶಾಲೆಗಳಲ್ಲೇ ತಮ್ಮ ಹೈಸ್ಕೂಲಿನ ತನಕದ ಶಿಕ್ಷಣ ಪಡೆದು ಮುಂದೆ ಕಂಪ್ಯೂಟರ್ ಸೈನ್ಸ್ ನಲ್ಲಿ ಹಾಗೂ ಬ್ಯುಸಿನೆಸ್ ಅಡ್ಮಿನಿಸ್ಟ್ರೇಶನ್ ನಲ್ಲಿ ಡಿಪ್ಲೊಮಾ ಓದಿ ಕೆಲ ವರ್ಷಗಳ ಕಾಲ ಜೈಗಾಕ್ಸ್, ವಿಪ್ರೊ ಅಂತಹ ಕಂಪೆನಿಗಳಲ್ಲಿ ಕಾರ್ಯ ನಿರ್ವಹಿಸಿರುವರು. ಮದುವೆಯೊಂದಿಗೆ, ಮನೆ ಹಾಗೂ ಮಗನ ಭವಿಷ್ಯದ ದೃಷ್ಟಿಯಿಂದ ಕೆಲಸಕ್ಕೆ ರಾಜೀನಾಮೆಯನ್ನಿತ್ತು ಸ್ವಂತ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದಾರೆ. ಜೊತೆ ಜೊತೆಗೆ ತಮ್ಮ ಓದುವ ಹಾಗೂ ಬರೆಯುವ ಹವ್ಯಾಸಕ್ಕೂ ಗಮನಕೊಡುತ್ತ ಹಲವಾರು ಲೇಖನಗಳು, ರಾಜಕೀಯ, ಸಾಮಾಜಿಕ ವಿಶ್ಲೇಷಣೆಗಳ ಜೊತೆಗೆ ಆರೋಗ್ಯ, ಆಹಾರ ಹಾಗೂ ಫಿಟ್ ನೆಸ್ ಸಂಬಂಧಿ ವಿಚಾರಗಳ ಬಗ್ಗೆಯೂ ಬರೆಯುತ್ತ ಸ್ವಸ್ಥ ಹಾಗೂ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ತಮ್ಮ ಸೇವೆ ಸಲ್ಲಿಸುತಿದ್ದಾರೆ. ಹಿಟ್ಲರ್ ನ ನಾಜಿ ಕ್ಯಾಂಪಿನಿಂದ 2500ಕ್ಕೂ ಹೆಚ್ಚು ಮಕ್ಕಳನ್ನು ರಕ್ಷಿಸಿ ಬದುಕು ಕೊಟ್ಟ ಇರೇನಾ ಸೆಂಡ್ಲರ್ ಎಂಬ ಯುದ್ಧಕಾಲದ ನಾಯಕಿಯ ಜೀವನ ಚರಿತ್ರೆಯನ್ನು ಕನ್ನಡದ ನೆಲಕ್ಕೆ ಪರಿಚಯಿಸಿದ 'ಜೊಲಾಂಟಾ' ಇವರ ಮೊದಲ ಕೃತಿಯಾಗಿದೆ.

Kannada Writer Pallavi Idoor new book on Politics set to release on Dec 05

ಇವರ ಚೊಚ್ಚಲ ಕೃತಿ ಜೊಲಾಂಟಾ ಕಡಿಮೆ ಸಮಯದಲ್ಲಿ ಎರಡನೇ ಮುದ್ರಣವನ್ನು ಕಂಡಿದೆ, ಹಾಗೂ ಈ ಕೃತಿಗೆ ಅತ್ಯುತ್ತಮ ಲೇಖಕಿಗಾಗಿ ಕರ್ನಾಟಕ ಲೇಖಕಿಯರ ಸಂಘ ಕೊಡುವ ನೀಳಾದೇವಿ ದತ್ತಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಈ ಎಲ್ಲ ಸಮಾಜಮುಖಿ ಕೆಲಸಗಳ ನಡುವೆ ಇವರ ರಾಜಕೀಯ ಇತಿಹಾಸದ ಕೃತಿ "ಆಗಸ್ಟ್ - ಮಾಸದ ರಾಜಕೀಯ ಕಥನ" ಬಿಡುಗಡೆಗೆ ಸಿದ್ಧವಾಗಿದೆ.

Recommended Video

Nandi Hills ರಸ್ತೆಗಳ ಮರುನಿರ್ಮಾಣ , ಪ್ರವಾಸಿಗರು ಫುಲ್ ಖುಷ್ | Oneindia Kannada

English summary
Kannada Writer Pallavi Idoor new book on Politics 'August masada rajakeeya kathana' set to release on Dec 05 at Gandhi Bhavan, Bengaluru. Former CM Siddaramaiah will be chief guest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X