ಎಕೆ ರಾಮಾನುಜನ್ ಸಮಗ್ರ ಸಂಪುಟ ಬಿಡುಗಡೆ

A K Ramanujan poetry collection release in Bangalore
ಕನ್ನಡದ ಕವಿಗಳು, ಅವರ ಕೃತಿಗಳು ಸಾಹಿತ್ಯಾಸಕ್ತರು ಮತ್ತು ಸಜ್ಜನರ ಓದಿಗೆ ಮತ್ತು ಬಳಸುವಿಕೆಗೆ ನೆರವಾಗಲೆಂದು ಈ ಕೆಳಗಿನ ಮಾಹಿತಿಯನ್ನು ಪ್ರಕಟಿಸುತ್ತಿದ್ದೇನೆ. ಕನ್ನಡ ಭಾಷೆ ಮತ್ತು ಕನ್ನಡತನ ಕುರಿತ ನಮ್ಮ ಸುದ್ದಿ ಲೇಖನಗಳನ್ನು ಕನ್ನಡ ಮಹಾಜನತೆ ಸ್ವೀಕರಿಸುವುದು ಅಷ್ಟರಲ್ಲೇ ಇದೆ ಎಂದು ಗೊತ್ತಿದ್ದು ಕೂಡ, ಎಕೆ ರಾಮಾನುಜನ್ ಬಗ್ಗೆ ಗೌರವದಿಂದ ಈ ಸುದ್ದಿ ಪ್ರಕಟಿಸಲಾಗಿದೆ.

ಈ ಪುಟದ ಒಳಗೆ ಬಂದು ಇಲ್ಲಿನ ಮಾಹಿತಿಯನ್ನು ಓದಿ ಕರ್ನಾಟಕ ನಾಟಕ ಅಕಾಡೆಮಿ, ಕನ್ನಡ ಭವನಕ್ಕೆ ಹೋಗಿ ಹಿರಿಯ ಕನ್ನಡ ಜೀವಿಗಳ ಮಾತುಗಳಿಗೆ ಕಿವಿಯಾಗುವವರಿಗೆ ಅಭಿನಂದನೆಗಳು. ನನ್ನ ಅನುಭವದಲ್ಲಿ ಈ ಪುಟದ ಕೊಂಡಿಯನ್ನು ಕ್ಲಿಕ್ ಮಾಡುವವರು ನೀವು ಮತ್ತು ನಿಮ್ಮ ಬೆರಳೆಣಿಕೆಯಷ್ಟು ಸ್ನೇಹಿತರು ಮಾತ್ರ.

ಕವಿ ಎಕೆ ರಾಮಾನುಜನ್ ಅವರ ಸ್ಮರಣೆ ಮತ್ತು ಸಮಗ್ರ ಸಂಪುಟ ಬಿಡುಗಡೆ ಸಮಾರಂಭ ಬೆಂಗಳೂರಿನಲ್ಲಿ ಏರ್ಪಾಟಾಗಿದೆ. ನಾಳೆ ಬುಧವಾರ 13 ಜುಲೈ ಸಂಜೆ 6:30 ಕ್ಕೆ; ಸ್ಥಳ : ನಾಟಕ ಅಕಾಡೆಮಿಯ "ಚಾವಡಿ", ಕನ್ನಡ ಭವನ, ರವೀಂದ್ರ ಕಲಾಕ್ಷೇತ್ರ ಆವರಣ.

ಧಾರವಾಡದ ಮನೋಹರ ಗಂಥಮಾಲಾ ಮತ್ತು ದೇಶಕಾಲ ಸಂಯುಕ್ತ ಆಶ್ರಯದಲ್ಲಿ ವ್ಯವಸ್ಥೆಯಾಗಿರುವ ಕಾರ್ಯಕ್ರಮದಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದ ಇಬ್ಬರು ಲೇಖಕರು ಉಪಸ್ಥಿತರಿರುವುದು ಒಂದು ವಿಶೇಷ.

ಡಾ. ಯುಆರ್ ಅನಂತಮೂರ್ತಿ ಪುಸ್ತಕ ಬಿಡುಗಡೆ ಮಾಡುವರು. ಎಸ್ ಜಿ ವಾಸುದೇವ್, ಎಸ್ . ದಿವಾಕರ್ ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆ ಗಿರೀಶ್ ಕಾರ್ನಾಡ್ ವಹಿಸಲಿದ್ದಾರೆ.

ಕೃತಿ ಬಿಡುಗಡೆಯ ನಿಮಿತ್ತ ಸಂಪುಟವನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ ಎಂದು ಮನೋಹರ ಗ್ರಂಥಮಾಲಾದ ಸಮೀರ ಜೋಶಿ ಮತ್ತು ದೇಶಕಾಲದ ವಿವೇಕ ಶಾನಭಾಗ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+