ಕವರ್ ಸ್ಟಾರ್ ಯಾರು? ಊಹಿಸಿ ಬಹುಮಾನ ಗೆಲ್ಲಿ

ಛಂದ ಪುಸ್ತಕ ಪ್ರಕಟಿಸಲಿರುವ ಯುವಕವಿ ರಾಧೇಶ ತೋಳ್ಪಾಡಿಯವರ 'ಹಲೋ ಹಲೋ ಚಂದಮಾಮ' ಮಕ್ಕಳ ಕವಿತೆಗಳ ಸಂಕಲನಕ್ಕೆ ಮುಖಪುಟ ವಿನ್ಯಾಸ ರಚಿಸುವ ಸ್ಪರ್ಧೆಯನ್ನು ಛಂದ ಪುಸ್ತಕ ಪ್ರಕಾಶನ ಏರ್ಪಡಿಸಿತ್ತು. 'ಕವರ್ ಸ್ಟಾರ್' ಯಾರಾಗುವಿರಿ ಎಂಬ ಕರೆಗೆ 130ಕ್ಕೂ ಹೆಚ್ಚಿನ ಕಲಾಕಾರರು ತಮ್ಮ ಕಲಾನೈಪುಣ್ಯವನ್ನು ಒರೆಗೆ ಹಚ್ಚಿದ್ದರು.
ಈ ನೂರಾವೂವತ್ತರಲ್ಲಿ ಅತ್ಯುತ್ತಮವಾದ 30 ಕಲಾಕೃತಿಗಳನ್ನು ಈ ಸ್ಪರ್ಧೆಯ ತೀರ್ಪುಗಾರರಾದ ಕಥೆಗಾರ ಜಯಂತ್ ಕಾಯ್ಕಿಣಿ ಅವರು ಆಯ್ಕೆ ಮಾಡಿದ್ದಾರೆ. ಈ ಸ್ಪರ್ಧೆಯಲ್ಲಿ ಗೆದ್ದವರಿಗೆ 5000 ರು. ಬಹುಮಾನ ನೀಡಲಾಗುತ್ತಿದೆ.
ಈಗ ಮತ್ತೊಂದು ವಿಶೇಷವೆಂದರೆ, ಆಯ್ದ 30 ಮುಖಪುಟ ವಿನ್ಯಾಸಗಳಲ್ಲಿ ಯಾವ ಕಲಾಕೃತಿ ಬಹುಮಾನ ಗೆಲ್ಲುತ್ತದೆಂದು ಊಹಿಸಿದವರಿಗೆ ಸಾವಿರ ರು. ಗೆಲ್ಲುವ ಅವಕಾಶವನ್ನು ಛಂದ ಒದಗಿಸಿಕೊಟ್ಟಿದೆ. ಈ ಬಹುಮಾನವನ್ನು ಛಂದಪುಸ್ತಕ ಮತ್ತು ಮೇಫ್ಲವರ್ ಮೀಡಿಯಾಹೌಸ್ ಜಂಟಿಯಾಗಿ ನೀಡುತ್ತಿವೆ.
ಬಹುಮನಕ್ಕಾಗಿ ಆಯ್ಕೆಯಾಗಿರುವ 30 ಮುಖಪುಟ ವಿನ್ಯಾಸಗಳು ಯಾವುದೆಂದು ತಿಳಿಯಲು ಇಲ್ಲಿ ಕ್ಲಿಕ್ಕಿಸಿ. ಬ್ಲಾಗಿನಲ್ಲಿ ನೀಡಲಾಗಿರುವ ಒಂದು ವಿನ್ಯಾಸದ ಸಂಖ್ಯೆಯನ್ನು ಆಯ್ಕೆ ಮಾಡಿ [email protected]ಕ್ಕೆ ಕಳಿಸಬಹುದು. ಅಥವಾ ನೇರವಾಗಿ ಅಪಾರ ಬ್ಲಾಗಿನಲ್ಲಿ ಕಾಮೆಂಟ್ ವಿಭಾಗದಲ್ಲಿ ನಿಮ್ಮ ಆಯ್ಕೆಯನ್ನು ತಿಳಿಸಬಹುದು. ನೆನಪಿರಲಿ, ಒಬ್ಬರು ಒಂದು ವಿನ್ಯಾಸವನ್ನು ಮಾತ್ರ ಆಯ್ಕೆ ಮಾಡಬೇಕು. ಹೆಚ್ಚು ಆಯ್ಕೆ ಮಾಡಿದರೆ ನಿಮ್ಮ ಆಯ್ಕೆ ಅನರ್ಹವಾಗುತ್ತದೆ.
ಬರುವ ಶನಿವಾರ, ಅಂದರೆ ಜನವರಿ 16ರೊಳಗೆ ಯಾವ ಮುಖಪುಟ ವಿನ್ಯಾಸ ಬಹುಮಾನ ಗೆಲ್ಲುತ್ತದೆಂದು ಊಹಿಸಿ. ಏಕೆಂದರೆ, ಮರುದಿನ ಭಾನುವಾರವೇ ಅಂತಿಮ ಫಲಿತಾಂಶ ಹೊರಬೀಳಲಿದೆ.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications