ಛಂದ ಮುಖಪುಟ ವಿನ್ಯಾಸ ಸ್ಪರ್ಧೆ

ಛಂದ ಪುಸ್ತಕ ಪ್ರಕಟಿಸಲಿರುವ ಯುವಕವಿ ರಾಧೇಶ ತೋಳ್ಪಾಡಿಯವರ ಹಲೋ ಹಲೋ ಚಂದಮಾಮ' ಮಕ್ಕಳ ಕವಿತೆಗಳ ಸಂಕಲನಕ್ಕೆ ನೀವು ಮುಖಪುಟ ರಚಿಸಬಹುದು. ಆಯ್ಕೆಗೊಂಡ ಒಂದು ವಿನ್ಯಾಸಕ್ಕೆ 5000 ರೂ ಬಹುಮಾನ ನೀಡಲಾಗುವುದು. ಈ ಬಾರಿಯ 'ಕವರ್ ಸ್ಟಾರ್' ಆಗಬೇಕೆಂಬ ಹಂಬಲವಿದ್ದರೆ ನಿಮ್ಮ ಕಲಾನೈಪುಣ್ಯತೆಗೆ ಸ್ವಲ್ಪ ಕೆಲಸ ಕೊಡಿ.
ಪುಸ್ತಕದಲ್ಲಿರುವ ಒಂದೆರಡು ಕವಿತೆಗಳನ್ನು ಓದಲು http://raghuapara.blogspot.com ಅಥವಾ http://avadhi.wordpress.com ಬ್ಲಾಗಿಗೆ ಭೇಟಿ ಕೊಡಿ. ವಿನ್ಯಾಸದ ಅಳತೆ: ಎತ್ತರ 19 ಸೆಂ.ಮೀ., ಅಗಲ 11.5 ಸೆಂ.ಮೀ. ಒಬ್ಬರು ಎಷ್ಟು ಬೇಕಾದರೂ ವಿನ್ಯಾಸಗಳನ್ನು ಕಳಿಸಬಹುದು.
ನಿಮ್ಮ ವಿನ್ಯಾಸಗಳನ್ನು [email protected]ಗೆ ಇ ಮೇಲ್ ಮಾಡಿ.
ಕಡೆಯ ದಿನಾಂಕ: ಡಿಸೆಂಬರ್ 31, 2009.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: 98444 22782
ಛಂದಪುಸ್ತಕದ ಪರವಾಗಿ:
ವಸುಧೇಂದ್ರ
ಐ-004, ಮಂತ್ರಿ ಪ್ಯಾರಡೈಸ್
ಬನ್ನೇರುಘಟ್ಟ ರಸ್ತೆ
ಬೆಂಗಳೂರು - 560 076












Click it and Unblock the Notifications