ಕನ್ನಡ ಸಂದರ್ಭದ ಸ್ವಜಾತಿ ವೈರಿ ಚತ್ವಾರಿ

Muddukrishna, Baraguru Ramachandrappa and Neeliಬೆಂಗಳೂರು, ಸೆ. 8 : ಸಾಹಿತಿಗಳ ಕಾರ್ಯಕ್ರಮಕ್ಕೆ ಜತೆಗಾರ ಸಾಹಿತಿಗಳೇ ಬರುವುದಿಲ್ಲ, ಏನಿದರ ಅರ್ಥ? ಎಂಬ ರವಿ ಬೆಳಗೆರೆಯವರ ಮಾತು ನೂರಕ್ಕೆ ಶೇಕಡಾ 80ರಷ್ಟು ಸತ್ಯ. ಯಾವ ಕೆಲಸಕ್ಕೂ ಬಾರದ ಇಸಮ್ಮುಗಳು, ಜಾತಿಪ್ರಜ್ಞೆ ಮತ್ತು ಸ್ವಜಾತಿ ವೈರಿ ಚತ್ವಾರಿ ಎನ್ನುವಂತೆ ವಿನಾಕಾರಣ ಜತೆಗಾರ ಬರಹಗಾರರನ್ನು ಅವರ ಗೈರುಹಾಜರಿಯಲ್ಲಿ ಹೀಯಾಳಿಸುವ ಒಂದು ದೊಡ್ಡ ವರ್ಗ ಈ ಕಾಲದಲ್ಲಿ ಕನ್ನಡ ಲೇಖಕರ ಸಮೂಹದಿಂದೆದ್ದು ಕಾಣುತ್ತದೆ. ಇದು ಸಮಕಾಲೀನ ಕನ್ನಡ ಬರಹಗಾರರ ಸಾಮೂಹಿಕ ಒಲವು ನಿಲವುಗಳನ್ನು ಸೂಚಿಸಿ ದಾಖಲಿಸುತ್ತದೆ ಎಂದರೆ ಅತಿಶಯೋಕ್ತಿಯಾಗದು.

ಆದರೂ ಸಹ, ಜೋಗಿ ಅವರ ಕಥಾಸಂಕಲನ ಮತ್ತು ಕಾದಂಬರಿ ಬಿಡುಗಡೆಗೆ ಬಸವನಗುಡಿಯ ಸಭಾಂಗಣದಲ್ಲಿ ಭಾನುವಾರ ನೆರೆದಿದ್ದವರಲ್ಲಿ ಅನೇಕ ಲೇಖಕರು, ಕಲಾವಿದರು ಹಾಜರಿ ಹಾಕಿದ್ದುದು ಗಮನಾರ್ಹ. ಜತೆಗಾರ ಲೇಖಕರು ಹಮ್ಮಿಕೊಳ್ಳುವ ಸಾಹಿತ್ಯಿಕ ಸಭೆಗಳಿಗೆ ಇತರರ ಲೇಖಕರು ಆಗಮಿಸುವುದಿಲ್ಲ ಎಂಬ ಅಪವಾದವು ಸೆ. 7ರಂದು ಬೆಳಗ್ಗೆ 10.30 ಇಂದ 1 ರತನಕ ಇನ್ ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಭಾಗವಹಿಸಿದ್ದವರಿಗೆ ತಟ್ಟಬಾರದು ಎಂಬ ಏಕಮೇವ ಉದ್ದೇಶದಿಂದ ಅಲ್ಲಿದ್ದ ಕವಿ ಕಲಾವಿದ ಗಣ್ಯರ ಕೆಲವಾರು ಹೆಸರುಗಳನ್ನು ಇಲ್ಲಿ ಕಾಣಿಸಲಾಗಿದೆ.

ಸಾಹಿತ್ಯ : ಕವಿ ಎಚ್.ಎಸ್. ವೆಂಕಟೇಶಮೂರ್ತಿ, ವಿಮರ್ಶಕ ಎಸ್.ಆರ್. ವಿಜಯಶಂಕರ್, ಕಥೆಗಾರ ಕೆ. ಸತ್ಯನಾರಾಯಣ, ಕಥೆಗಾರ ವಿವೇಕ್ ಶಾನುಭಾಗ್, ಕವಿ-ಕಾದಂಬರಿಕಾರ ಬರಗೂರು ರಾಮಚಂದ್ರಪ್ಪ, ಛಂದದ ಕಥೆಗಾರ ವಸುಧೇಂದ್ರ, ಕವಿ ಜಿ. ಎನ್. ಮೋಹನ್, ಸಾಹಿತಿ ಯು.ಆರ್. ಅನಂತಮೂರ್ತಿ, ವೈ.ಕೆ. ಮುದ್ದುಕೃಷ್ಣ.

ಸಿನಿಮಾ-ಕಲೆ : ಟಿ. ಎನ್. ಸೀತಾರಾಂ, ಎಚ್. ಜಿ. ಸೋಮಶೇಖರ ರಾವ್, ಬಿ. ಸುರೇಶ್, ಲಿಂಗದೇವರು, ಪೂಜಾ ಲೋಕೇಶ್.

ಪತ್ರಿಕೋದ್ಯಮ ಮತ್ತಿತರ : ಡಾ. ವಿಜಯಮ್ಮ, ಕೆ. ಸತ್ಯನಾರಾಯಣ, ಜಿ.ಎನ್. ರಂಗನಾಥರಾವ್, ರಾಜನ್, ಮಲ್ಲಿಕಾರ್ಜುನಯ್ಯ, ಜಯರಾಮ ಅಡಿಗ, ರಂಗನಾಥ ಮರಕಿಣಿ, ಹಾಲ್ದೊಡ್ಡೇರಿ ಸುಧೀಂದ್ರ, ಗೋಪಾಲಕೃಷ್ಣ ಕುಂಟನಿ, ಹರೀಶ್ ಕೇರ, ನಾಗೇಶ್ ಹೆಗಡೆ, ವಿಕಾಸ್ ನೇಗಿಲೋಣಿ, ವಿವೇಕಾನಂದ, ಶ್ರೀಮತಿ ಎಸ್ತರ್ ಮುಂತಾದವರು.

ಬ್ಲಾಗು ವಿಭಾಗವನ್ನು ಪ್ರತಿನಿಧಿಸುವ ಅನೇಕ ಮಂದಿ ಬ್ಗಾಗೀದಾರರು ಸಭೆಯಲ್ಲಿ ಪಾಲ್ಗೊಂಡಿದ್ದರು. ಯಾರದ್ದೇ ಕಾರ್ಯಕ್ರಮವಾಗಿರಲಿ ತಪ್ಪದೆ ಹಾಜರಾಗುವ ಬ್ಗಾಗುದಾರರಲ್ಲಿ ಕಲಹಗಳಿಲ್ಲ. ಅವರೆಲ್ಲ ಒಂದೇ- ಮಾತರಂ ಜನ. ವಿಸೂ : ನಮ್ಮ ವರದಿಗಾರನ ಕಣ್ಣಿಗೆ ಬಿದ್ದವರ ಹೆಸರುಗಳನ್ನು ಮಾತ್ರ ಕಾಣಿಸಲಾಗಿದೆ.

(ದಟ್ಸ್ ಕನ್ನಡ ವಾರ್ತೆ)

ಪೂರಕ ಓದಿಗೆ
ಸಾಹಿತ್ಯ ಸಭೆಯಲ್ಲಿ ಸಾಹಿತಿಯಾದ ಯುಆರ್ಎ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+