ಪ್ರತಾಪ್ ಸಿಂಹರ 'ನರೇಂದ್ರ ಮೋದಿ' ಪುಸ್ತಕ ಬಿಡುಗಡೆ
ಬೆಂಗಳೂರು, ಮೇ.2 : 'ಬೆತ್ತಲೆ ಜಗತ್ತು' ಅಂಕಣಕಾರ ಪ್ರತಾಪ್ ಸಿಂಹ ಅವರು ಬರೆದಿರುವ 'ನರೇಂದ್ರ ಮೋದಿ - ಯಾರೂ ತುಳಿಯದ ಹಾದಿ' ಪುಸ್ತಕವನ್ನು ಕೇಂದ್ರ ಮಾಜಿ ಸಚಿವ ಮತ್ತು ಬಿಜೆಪಿ ನಾಯಕ ಅರುಣ್ ಜೇಟ್ಲಿ ಅವರು ಬಸವನಗುಡಿಯ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ನಲ್ಲಿ ಮೇ 2ರಂದು ಶುಕ್ರವಾರ ಬಿಡುಗಡೆ ಮಾಡಿದರು.
ಹೋರಾಟಗಾರ, ಬದಲಾವಣೆಯ ಹರಿಕಾರ ಮತ್ತು ಉತ್ತಮ ವಾಕ್ಪಟು ನರೇಂದ್ರ ಮೋದಿ ಅವರ ಬಾಲ್ಯದಿಂದ ಹಿಡಿದು ಪ್ರಸ್ತುತ ರಾಜಕೀಯ ಜೀವನವನ್ನು ಪುಸ್ತಕ ಅನಾವರಣಗೊಳಿಸಿದೆ. ಪುಸ್ತಕವನ್ನು ಹುಬ್ಬಳ್ಳಿಯ ಸಾಹಿತ್ಯ ಭಂಡಾರ ಪ್ರಕಟಿಸಿದೆ.
ಸಮಾರಂಭದಲ್ಲಿ ಕರ್ತೃ ಪ್ರತಾಪ್ ಸಿಂಹ, ನಿವೃತ್ತ ನ್ಯಾಯಮೂರ್ತಿ ರಾಮಾ ಜೋಯಿಸ್, ವಿಜಯ ಕರ್ನಾಟಕದ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಸಾಹಿತ್ಯ ಭಂಡಾರದ ಸತ್ಯವತಿ ಮತ್ತು ಪ್ರಕಾಶಕ ಸುಬ್ರಹ್ಮಣ್ಯ ಅವರು ಭಾಗವಹಿಸಿದ್ದರು.
(ದಟ್ಸ್ಕನ್ನಡ ವಾರ್ತೆ)


Click it and Unblock the Notifications
