• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಾಲತಿ ರಾವ್ ಗೆ ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ

By Staff
|

ಬೆಂಗಳೂರು, ಜ.04:ಕನ್ನಡತಿ ಪ್ರೊ.ಮಾಲತಿ ರಾವ್ ಅವರ ಆಂಗ್ಲ ಕಾದಂಬರಿ 'ದಿ ಡಿಸ್ ಆರ್ಡರ್ಲಿ ಲಿ ವಿಮೆನ್' ಎಂಬ ಕೃತಿಗೆ 2007 ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ತಮ್ಮ ಸುತ್ತಣ ಬದುಕು ಮತ್ತು ತಮ್ಮೊಳಗಿನ ಹೆಣ್ಣೇ ತಮ್ಮ ಈ ಕೃತಿಯ ಹಿಂದಿನ ಸ್ಫೂರ್ತಿ ಎಂದು ಮಾಲತಿರಾವ್ ಹೇಳಿದ್ದಾರೆ.

ಸ್ತ್ರೀವಾದಿ ಲೇಖಕಿ:

ಮಾಲತಿ ರಾವ್ ಗೆ ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿದೆಹಲಿಯ ಪ್ರಸಿದ್ಧ ಕಾಲೇಜಾದ 'ಮಿರಾಂಡ ಹೌಸ್' ನಲ್ಲಿ 30 ವರ್ಷಗಳ ಕಾಲ ಇಂಗ್ಲೀಷ್ ಬೋಧನೆ ಮಾಡಿ, ಈಗ ಬೆಂಗಳೂರಿನಲ್ಲಿ ನಿವೃತ್ತಿ ಜೀವನ ನಡೆಸುತ್ತಿರುವ ಮಾಲತಿ ಅವರು ಹಲವು ಕಾದಂಬರಿಗಳನ್ನು, ಸಣ್ಣ ಕಥೆಗಳನ್ನು ಬರೆದು ಪ್ರಸಿದ್ಧರಾಗಿದ್ದಾರೆ.ಸ್ವಾತಂತ್ರ್ಯ ಪೂರ್ವ ಭಾರತದ ಕರ್ಮಠ ಬ್ರಾಹ್ಮಣ ಸಮಾಜದಲ್ಲಿ ಸ್ತ್ರೀ ಪುರುಷರ ಸಂಬಂಧ, ಬಾಲವಧುಗಳು, ದಬ್ಬಾಳಿಕೆ, ಹೆಣ್ಣಿನ ಶೋಷಣೆ, ವಿಮುಕ್ತಿಯ ಕುರಿತಾದ ಹಲವು ಆಯಾಮಗಳನ್ನು ತಮ್ಮ ಈ ಪ್ರಶಸ್ತಿ ವಿಜೇತ ಕೃತಿಯಲ್ಲಿ ಚಿತ್ರಿಸಿದ್ದಾರೆ. 2005 ರಲ್ಲಿ ಪ್ರಕಟವಾದ ಈಕೃತಿಯನ್ನು ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಯು ಆರ್. ಅನಂತಮೂರ್ತಿಯವರು ಅನಾವರಣಗೊಳಿಸಿದ್ದರು.

50 ಸಾವಿರ ರುಪಾಯಿ ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ. ದೆಹಲಿಯಲ್ಲಿ ಫೆಬ್ರವರಿ 20 ರಂದು ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅಕಾಡೆಮಿಯ ಪ್ರಕಟಣೆ ತಿಳಿಸಿದೆ.

(ದಟ್ಸ್ ಕನ್ನಡ ವಾರ್ತೆ )

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more