ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರಮನೆ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗರಿ

By Staff
|
Google Oneindia Kannada News


ಬಳ್ಳಾರಿ, ಡಿ.27: ಕನ್ನಡ ಸಾಹಿತ್ಯಲೋಕದ ವಿಶಿಷ್ಟ ಬರಹಗಾರ ಕುಂ.ವೀರಭದ್ರಪ್ಪನವರ 'ಅರಮನೆ' ಕಾದಂಬರಿಗೆ 2007 ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.

ಡಾ.ಬಿ.ಎ.ವಿವೇಕ ರೈ, ಡಾ. ಎಂ.ಎಂ. ಕಲಬುರ್ಗಿ ಹಾಗೂ ಟಿ.ಪಿ. ಅಶೋಕ ಅವರನ್ನೊಳಗೊಂಡ ಆಯ್ಕೆ ಸಮಿತಿ ಕುಂ.ವೀರಭದ್ರಪ್ಪನವರ 'ಅರಮನೆ' ಕೃತಿಯನ್ನು ಈ ಬಾರಿಯ ಪ್ರಶಸ್ತಿಗೆ ಆರಿಸಿದ್ದಾರೆ. 2003 ರ ಜನವರಿಯಿಂದ 2005 ಡಿಸೆಂಬರ್ ವರೆಗಿನ ಅವಧಿಯಲ್ಲಿ ಪ್ರಕಟಗೊಂಡ ಕೃತಿಗಳನ್ನು ಪ್ರಶಸ್ತಿಗಾಗಿ ಪರಿಗಣಿಸಲಾಗಿದೆ. ತಾಮ್ರಫಲಕ ಮತ್ತು 50,000 ರು. ನಗದು ಬಹುಮಾನವನ್ನೊಳಗೊಂಡ ಪ್ರಶಸ್ತಿಯನ್ನು ಫೆಬ್ರವರಿ 20ರಂದು ನಡೆಯುವ ಸಮಾರಂಭದಲ್ಲಿ ವಿತರಣೆ ಮಾಡಲಾಗುವುದು ಎಂದು ಆಯ್ಕೆ ಮಂಡಳಿಯ ಪ್ರಕಟಣೆ ತಿಳಿಸಿದೆ.ಕನ್ನಡ ಸೇರಿದಂತೆ 23 ಭಾಷೆಗಳಲ್ಲಿನ ಕೃತಿಗಳಿಗೆ ಪ್ರಶಸ್ತಿಯನ್ನು ಘೋಷಿಸಲಾಗಿದೆ.

ಅರಮನೆಯ ಸರದಾರ:
ಕುಂ.ವೀ ಅವರ 35 ನೇ ಕೃತಿಯಾದ 'ಅರಮನೆ' ಬ್ರಿಟಿಷ್ ಅಧಿಕಾರಿ ಥಾಮಸ್ ಮನ್ರೋ ಕಲೆಕ್ಟರ್ ಆಗಿದ್ದ ದಿನಗಳಲ್ಲಿ ಬಳ್ಳಾರಿ, ಕಡಪ, ಅನಂತಪುರ ಪ್ರದೇಶಗಳಲ್ಲಿ ನಡೆದ ಸಾಮಾಜಿಕ ಮತು ರಾಜಕೀಯ ಘಟನಾವಳಿಗಳನ್ನು ಆಧರಿಸಿದ ಕತೆ ಹೊಂದಿದೆ .ಈಗಾಗಲೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಜೊತೆಗೆ ಹತ್ತು ಹಲವು ಪ್ರಶಸ್ತಿಗಳನ್ನು ಗಳಿಸಿರುವ ಕುಂ.ವೀ ಅವರ 'ಕಪ್ಪು', 'ಕತ್ತಲನು ತ್ರಿಶೂಲ ಹಿಡಿದ ಕತೆ', 'ಕೆಂಡದ ಮಳೆಯಲ್ಲಿ ಉದಕವಾದವರು', 'ಬೇಲಿ ಮತ್ತು ಹೊಲ' , 'ಶಾಮಣ್ಣ' ಮುಂತಾದ ಕೃತಿಗಳು ವಿಮರ್ಶಕರು ಹಾಗೂ ಓದುಗರ ಮೆಚ್ಚುಗೆ ಗಳಿಸಿದೆ.

ಕಳೆದ 32 ವರ್ಷಗಳಿಂದ ಅಂಧ್ರಪ್ರದೇಶದಲ್ಲಿ ಪ್ರಾಥಮಿಕ ಶಿಕ್ಷಕರಾಗಿರುವ ಕುಂವೀ ಈಗ ಅನಂತಪುರ ಜಿಲ್ಲೆಯ ಹಿರೇಹಾಳ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಹಳ್ಳಿಗಾಡಿನ ಪ್ರದೇಶದ ನೋವು ನಲಿವುಗಳನ್ನು ಹತ್ತಿರದಿಂದ ಕಂಡಿರುವ ಲೇಖಕರು, ಈ ಪ್ರಶಸ್ತಿಯನ್ನು ಗ್ರಾಮೀಣ ಭಾಗದ ಜನತೆಗೆ ಅರ್ಪಿಸುತ್ತಿರುವುದಾಗಿ ತಿಳಿಸಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X