ವಸುಧೇಂದ್ರ ಮತ್ತು ಜಾಣಗೆರೆ ಪುಸ್ತಕಗಳಿಗೆ ಅಕಾಡೆಮಿ ಗರಿ
ಬೆಂಗಳೂರು, ನ.23 : ಪತ್ರಕರ್ತ ಜಾಣಗೆರೆ ವೆಂಕಟರಾಮಯ್ಯ, ಕಥೆಗಾರ ಪ್ರಹ್ಲಾದ ಅಗಸನಕಟ್ಟೆ, ಲೇಖಕ ವಸುಧೇಂದ್ರ ಸೇರಿದಂತೆ 18ಬರಹಗಾರರ ಪುಸ್ತಕಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಪ್ರಕಟಿಸಿದೆ.
2006ನೇ ಸಾಲಿನಲ್ಲಿ ಆಕಾಡೆಮಿಯ ಅತ್ಯುತ್ತಮ ಕೃತಿ ಪ್ರಶಸ್ತಿಗಾಗಿ ಒಟ್ಟು 523ಕೃತಿಗಳು ಬಂದಿದ್ದು, 18ಪ್ರಕಾರಗಳಲ್ಲಿ ಆಯ್ಕೆಯಾದ ಕೃತಿ ಮತ್ತು ಲೇಖಕರ ವಿವರ ಇಲ್ಲಿದೆ.
ಕಾವ್ಯ : ಚಿತ್ತದ ಬೆನ್ನು (ಎನ್.ಕೆ.ಹನುಮಂತಯ್ಯ)
ಕಾದಂಬರಿ : ಮಹಾನದಿ (ಜಾಣಗೆರೆ ವೆಂಕರಾಮಯ್ಯ)
ಸಣ್ಣಕತೆ : ಮನದ ಮುಂದಣ ಮಾಯೆ (ಪ್ರಹ್ಲಾದ ಅಗಸನಕಟ್ಟೆ)
ನಾಟಕ : ನನ್ನೊಳು ನೀ ನಿನ್ನೊಳು ನಾ (ಮಂಜುನಾಥ ಬೆಳಕೆರೆ)
ಲಲಿತ ಪ್ರಬಂಧ : ನಮ್ಮಮ್ಮ ಅಂದ್ರೆ ನಂಗಿಷ್ಟ (ವಸುಧೇಂದ್ರ)
ಪ್ರವಾಸ ಸಾಹಿತ್ಯ : ಮೃತ್ಯುಂಜಯನ ಮಡಿಲಿನಲ್ಲಿ (ಎಸ್.ವೆಂಕಟೇಶ್)
ಜೀವನ ಚರಿತ್ರೆ/ಆತ್ಮಕಥೆ : ಬಿಸಿಲು ಕೋಲು (ಉಮಾರಾವ್)
ಸಾಹಿತ್ಯ ವಿಮರ್ಶೆ : ಮಿಮರ್ಶೆಯ ಸವಾಲು (ಡಾ. ಆರ್.ಕೆ. ಮಣಿಪಾಲ್)
ಗ್ರಂಥ ಸಂಪಾದನೆ : ಗುಬ್ಬಿಯ ಮಲ್ಲಣ್ಣನ ಗಣಭಾಷ್ಯ ರತ್ನಮಾಲೆ (ಡಾ. ಎಸ್. ವಿದ್ಯಾಶಂಕರ್)
ಮಕ್ಕಳ ಸಾಹಿತ್ಯ : ಹೈಕಳು (ಹೊರೆಯಾಲ ದೊರೆಸ್ವಾಮಿ)
ವಿಜ್ಞಾನ ಸಾಹಿತ್ಯ : ಪಕ್ಷಿ ಪ್ರಪಂಚ (ಹರೀಶ್ ಆರ್. ಭಟ್ ಮತ್ತು ಪ್ರಮೋದರ್ ಸುಬ್ಬರಾವ್)
ಮಾನವಿಕ : ನಾಗಾರ್ಜುನನ ಮೂಲ ಮಾಧ್ಯಮಿಕ ಕಕಾರಿಕ (ಎಸ್. ನಟರಾಜ್ ಭೂದಾಳು)
ಸಂಶೋಧನೆ : ಮಾದಾರ ಚನ್ನಯ್ಯ ಬಹುಮುಖಿ ಅಧ್ಯಯನ (ಡಾ. ಶಿವಾನಂದ ಕೆಳಗಿನಮನಿ)
ಅನುವಾದ (ಸೃಜನಶೀಲ) : ಎಂಜಲು (ಡಾ. ತೇಜಸ್ವಿ ಕಟ್ಟೀಮನಿ)
ಅನುವಾದ (ಸೃಜನೇತರ) : ಗಾಂಧಿ ನಂತರದ ಗಾಂಧಿ ಚಿಂತನೆಗಳು (ಕೆ.ವೆಂಕಟರಾಜು)
ಸಂಕೀರ್ಣ : ಒಕ್ಕಲ ಒನಪು (ಕೇಶವರೆಡ್ಡಿ ಹಂದ್ರಾಳ)
ಲೇಖಕರ ಮೊದಲ ಕೃತಿ : ದೇಸಿ ನಗು (ಎಂ.ಎಸ್. ಮೂರ್ತಿ)
ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದ : Vacanas of women saints (ಡಾ. ಸಿ.ಆರ್. ಯರವಿನತೆಲಿಮಠ)
(ದಟ್ಸ್‌ಕನ್ನಡ ವಾರ್ತೆ)


Click it and Unblock the Notifications
