• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಾಲ್ಮೀಕಿ ವಿರಚಿತ ರಾಮಾಯಣ ಅಂದಿಗೂ-ಇಂದಿಗೂ ಪ್ರಸ್ತುತ

By ಪಿ.ಕೌಸಲ್ಯ
|

ಅಕ್ಟೋಬರ್ 27ರ ಮಂಗಳವಾರ ಮಹರ್ಷಿ ವಾಲ್ಮೀಕಿ ಜಯಂತಿ. ಕರ್ನಾಟಕ ಸರ್ಕಾರ ಸರ್ಕಾರಿ ವೆಚ್ಚದಲ್ಲಿ ವಾಲ್ಮೀಕಿ ಜಯಂತಿಯನ್ನು ಆಚರಣೆ ಮಾಡುತ್ತದೆ. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಆಯಾ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆ ಹಾಗೂ ತಾಲೂಕು ಕೇಂದ್ರಗಳಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ವಾಲ್ಮೀಕಿ ಜಯಂತಿ ಆಚರಿಸಲಾಗುತ್ತದೆ. ವಾಲ್ಮೀಕಿ ಜಯಂತಿ ಹಿನ್ನೆಲೆಯಲ್ಲಿ ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆಯ ಪಿ.ಕೌಸಲ್ಯ ಅವರು ಸಂಗ್ರಹಣೆ ಮಾಡಿರುವ ಲೇಖನ ಇಲ್ಲಿದೆ.....

ಕೂಜಂತಂ ರಾಮ ರಾಮೇತಿ ಮಧುರ ಮಧುರಾಕ್ಷರಮ್

ಅರುಹ್ಯ ಕರವಿತಾಶಾಖಾಂ ವಂದೇ ವಾಲ್ಮೀಕಿ ಕೋಕಿಲಂ

ಈ ಸುಂದರವಾದ ರೂಪಕ ಅಲಂಕಾರದಿಂದ ಕೂಡಿದ ವಾಲ್ಮೀಕಿ ಮುನಿಯನ್ನು ವಂದಿಸುವ, ನಮಸ್ಕರಿಸುವ ಶ್ಲೋಕವು ಬುಧಕೌಶಿಕ ಮುನಿಯು ರಚಿಸಿರುವ ಶ್ರೀರಾಮ ರಕ್ಷಾಸ್ತೋತ್ರದಲ್ಲಿದೆ. (ಕಾವ್ಯವೆಂಬ ಮರದ ಮೇಲೆ ಕುಳಿತು, ರಾಮ ರಾಮಾ ಎಂದು ಕೂಜಂತಮ್ ಹಕ್ಕಿಯ ಇಂಪಾದ ಧ್ವನಿ ಹಾಡುತ್ತಿರುವ ವಾಲ್ಮೀಕಿ ಎಂಬ ಕೋಗಿಲೆಗೆ ವಂದೇ ನಮಸ್ಕಾರ)

ವಾಲ್ಮೀಕಿಯ ಜೀವನದ ಕುರಿತು ಬಹಳಷ್ಟು ದಂತಕಥೆಗಳಿದ್ದು, ಅದರ ಒಂದು ಉಪಕಥೆಯ ಪ್ರಕಾರ ವಾಲ್ಮೀಕಿ ಋಷಿಯಾಗುವ ಮೊದಲು ರತ್ನಾಕರನೆಂಬ ಡಕಾಯಿತನಾಗಿದ್ದನು. ಕಾಡಿನ ಮಾರ್ಗ ಮಧ್ಯದಲ್ಲಿ ಸಂಚರಿಸುವ ಪ್ರಯಾಣಿಕರನ್ನು ದೋಚಿ ಜೀವನ ಮಾಡುತ್ತಿದ್ದನು. ನಾರದ ಋಷಿಗಳು ಒಮ್ಮೆ ಕಾಡಿನಲ್ಲಿ ಹೋಗುತ್ತಿದ್ದಾಗ ರತ್ನನು ಅವರನ್ನು ದರೋಡೆ ಮಾಡಲೆತ್ನಿಸುತ್ತಾನೆ. [ರಾಮಾಯಣ ಕತೆ ಹೇಳಲಿವೆ ಅಂಚೆ ಚೀಟಿಗಳು]

ಆಗ ನಾರದನನಿಗೂ ರತ್ನನಿಗೂ ಸಂವಾದವಾಗಿ ನಿನ್ನ ಈ ಪಾಪದಲ್ಲಿ ನಿಮ್ಮ ಕುಟುಂಬದವರು ಭಾಗಿಯಾಗುವರೇ? ಕೇಳು ಹೋಗು ಎಂದಾಗ ರತ್ನನ ತಂದೆ, ತಾಯಿ ಕಡೆಗೆ ಹೆಂಡತಿಯೂ ಸಹ ರತ್ನನ ಪಾಪದಲ್ಲಿ ನಾವ್ಯಾರು ಭಾಗಿಗಳಾಗುವುದಿಲ್ಲ ಎಂದು ತಿಳಿಸುತ್ತಾರೆ. ರತ್ನನು ನಾರದನಲ್ಲಿಗೆ ಬಂದು ತಿಳಿಸಿ ದುಖಿಃತನಾಗುತ್ತಾನೆ. ನಾರದನು ಮಾಡಿದ ಉಪದೇಶದಿಂದ ರತ್ನನಿಗೆ ಜ್ಞಾನೋದಯವಾಗುತ್ತದೆ.

ವಾಲ್ಮೀಕಿ ಮಹರ್ಷಿಗಳು ಪ್ರಚೇತಮುನಿಯ ಮಗ ಹೀಗಾಗಿ ಅವರಿಗೆ ಪ್ರಾಚೇತಸ ಹೆಸರಿದ್ದು, ಪರಮಾತ್ಮನನ್ನು ಕುರಿತು ಬಹಳ ವರ್ಷಗಳ ಕಾಲ ತಪಸ್ಸನ್ನು ಮಾಡುತ್ತಿದ್ದಾಗ ಅವರ ಸುತ್ತ ಹುತ್ತ ಬೆಳೆದಿತ್ತು. ಸಂಸ್ಕೃತದಲ್ಲಿ ವಲ್ಮೀಕ ಎಂದರೆ ಹುತ್ತ. ಈ ಹುತ್ತವನ್ನು ಭೇದಿಸಿಕೊಂಡು ಹೊರಗೆ ಬಂದಿದ್ದರಿಂದ ವಾಲ್ಮೀಕಿ ಎಂಬ ಹೆಸರು ಬಂದಿದೆ ಎಂಬುದು ಪ್ರಚಲಿತ.

ತಮಸಾ ನದಿ ತೀರದಲ್ಲಿ ಸಂತೋಷವಾಗಿ ಹಾರಾಡುತ್ತಿದ್ದ ಕ್ರೌಂಚ ಪಕ್ಷಿ ಜೋಡಿಯನ್ನು ಬೇಡನೊಬ್ಬನು ಬಂದು ಬಾಣ ಹೂಡಿ ಗಂಡುಹಕ್ಕಿಯನ್ನು ಕೊಂದುಬಿಡುತ್ತಾನೆ. ಅದರ ಸಂಗಾತಿ ಹೆಣ್ಣು ಹಕ್ಕಿಯು ಸಂಕಟದಿಂದ ಕೂಗಲಾರಂಭಿಸುತ್ತದೆ. ಈ ಹೃದಯವಿದ್ರಾವಕ ಸನ್ನಿವೇಶವನ್ನು ನೋಡಿ, ಕರುಣೆ, ದುಖಃ, ಕೋಪದಿಂದ ಮಹರ್ಷಿಗಳು ಬೇಡನನ್ನು ಶಪಿಸುವಾಗ ಶೋಕದಿಂದ ವಾಕ್ಯವನ್ನು ಶ್ಲೋಕ ರೂಪದಲ್ಲಿ ಉದ್ಗರಿಸುತ್ತಾರೆ. [ವಾಲ್ಮೀಕಿ ಯಾರು ಕೃತಿಗೇಕೆ ನಿಷೇಧ?]

ಈ ಶ್ಲೋಕವು ಗದ್ಯರೂಪದಲ್ಲಿರದೆ, ಪ್ರಾಸಬದ್ಧವಾಗಿ, ಲಯ-ಛಂದಸ್ಸುಗಳಿಂದ ಕೂಡಿತ್ತು. ಹಾಗೆಯೇ ಮಹರ್ಷಿ ವಾಲ್ಮೀಕಿಯವರು 24000 ಶ್ಲೋಕಗಳು, ಸರ್ಗಗಳು, ವನ, ಅರ್ಥ, ರಾಮೋಪಖ್ಯಾನ 20 ಆಧ್ಯಾಯಗಳನ್ನು ಛಂದಸ್ಸಿನಲ್ಲಿ ಬರೆದ ರಾಮಾಯಣವು ಮಾನವೀಯ ಮೌಲ್ಯವನ್ನೊಳಗೊಂಡ ಮಹಾಗ್ರಂಥವಾಗಿದೆ. ಬಾಲಕಾಂಡ, ಅಯೋಧ್ಯಾಕಾಂಡ, ಕಿಷ್ಕೆಂಧಾ ಕಾಂಡ, ಸುಂದರಕಾಂಡ, ಯುದ್ಧಕಾಂಡ ಹಾಗೂ ಉತ್ತರಕಾಂಡ ಎಂಬ 7 ಕಾಂಡಗಳನ್ನೊಳಗೊಂಡ ಮಹಾಕಾವ್ಯ ರಾಮಾಯಣ.

ಮಹಾಕವಿಗಳು ಕಂಡಂತೆ ಮಹಾಕಾವ್ಯ : ವಾಲ್ಮೀಕಿ ರಾಮಾಯಣವು ಭರತಖಂಡದ ಸಂಸ್ಕೃಯನ್ನು ಬಹುಕಾಲದಿಂದ ಪೋಷಿಸುತ್ತ ಬಂದಿರುವ ಸಂಗತಿ ಸುವಿದಿತ . ಕಾಲಕಾಲಕ್ಕೆ ಸಂಸ್ಕೃತ ಪ್ರಾಕೃತಗಳಲ್ಲಿಯೂ ಇತರ ದೇಶಭಾಷೆಗಳಲ್ಲಿಯೂ ಬಗೆಬಗೆಯ ರಾಮಾಯಣಗಳು ಬಹುಸಂಖ್ಯೆಯಲ್ಲಿ ರಚಿತವಾಗುತ್ತ ಅನೇಕಾನೇಕ ಪ್ರತಿಭಾವಂತ ಕವಿಗಳನ್ನು ಆಕರ್ಷಿಸಿತು. ವಾಲ್ಮೀಕಿ ವಿರಚಿತ ಮೂಲ ರಾಮಾಯಣವನ್ನು ತಮ್ಮ ತಮ್ಮ ದೃಷ್ಠಿ ರೀತಿ-ರಿವಾಜುಗಳಲ್ಲಿ ಪುನರ್ರಚಿಸುವ ಸ್ಫೂರ್ತಿಯನ್ನು ನೀಡಿತು.

ವಿಭಿನ್ನ ಕವಿಗಳ ಮನಹೊಕ್ಕ ಮೂಲ ವಾಲ್ಮೀಕಿ ರಾಮಾಯಣವನ್ನು ತಮ್ಮ ದೃಷ್ಟಿಗೆ ನಿಲುಕಿದಂತೆ ಕಟ್ಟಿಕೊಟ್ಟರೂ ಅದರಿಂದಾಗಿ ಮೂಲ ವಾಲ್ಮೀಕಿ ರಾಮಾಯಣದ ಕಥನದ ಸೊಗಸು ಕುಂದಿಲ್ಲ, ಮಾಸಿಲ್ಲ ಅದೇ ಈ ಮಹಾಕಾವ್ಯದ ವಿಶೇಷತೆಯಾಗಿದೆ.

ಕುವೆಂಪು ಅವರ ದೃಷ್ಟಿಯಲ್ಲಿ ಮಾಸ್ತಿಯವರ ಆದಿಕವಿ ವಾಲ್ಮೀಕಿ : ಋಷಿಕವಿ ವಾಲ್ಮೀಕಿಯ ಸಮುದ್ರೋಪಮ, ಮಹಾಗಾನಕ್ಕೆ ಜಗತ್ತು "ಮಹಾಕಾವ್ಯ" ಎಂದು ನಾಮಕರಣ ಮಾಡಿದೆ ಏಕೆಂದರೆ ರಾಮಾಯಣವು ಪುರಾಣವಾದರೂ ಅದೊಂದು ಬೃಹದ್ ಭಾವಗೀತೆಯಂತೆಯೂ ಹಾಗೂ ಪುರಾಣದಂತೆಯೂ ಇದೆ. ಹೀಗಾಗಿ ಅದಕ್ಕೆ ಮಹಾಕಾವ್ಯ ಬಿರುದು ಸರ್ವಾಂಗ ಸುಂದರವಾಗಿದೆ. ಅದು ಏಕ ಕವಿಕೃತಿಯೂ ಆಗಿದೆ ಬಹುಕಾಲದ ಸಂಸ್ಕೃತಿಯ ಬಹು ದೊಡ್ಡ ಜನಾಂಗದ ಮನಃಕೃತಿಯೂ ಆಗಿದೆ. ವಾಲ್ಮೀಕಿಯ ಮಹಾಕೃತಿಯು ಚರಿತ್ರೆಯಲ್ಲ ಕಾವ್ಯ, ಕಾಲಾದೇಶಾತೀತವಾಗಿರುವುದರಿಂದ ನಿರಂತವಾಗಿ ನಡೆಯುತ್ತಿರುವ ಶಾಶ್ವತ ಘಟನಾ ಪರಂಪರೆಯಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The birth anniversary of the great sage Maharishi Valmiki who authored the epic Ramayana is celebrated as Valmiki jayanti. Valmiki Ramayana relevant today also, here is a article.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more