ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
 • search

ಬಾಗೇಪಲ್ಲಿಯ ಬದುಕು, ಬವಣೆ ಹಾಗೂ ಬಂದದ್ದು ಬರಲಿ ಎಂಬ ಜನ..

By ಎಂ.ಎಲ್.ನರಸಿಂಹಮೂರ್ತಿ
Subscribe to Oneindia Kannada
For Quick Alerts
ALLOW NOTIFICATIONS
For Daily Alerts
    IPL 2018 : CSK vs KKR ವಾಟ್ಸನ್ ಹೊಡೆದ ರಭಸಕ್ಕೆ ಏನಾಯ್ತು ಗೊತ್ತಾ ? | Oneindia Kannada

    ದಯವಿಟ್ಟು ಗಮನಿಸಿ: ನಮ್ಮ ಜೊತೆಗೆ ಅಲ್ಲೊಂದು, ಇಲ್ಲೊಂದು ಗೂಡುಗಳಿಲ್ಲದ ಗುಬ್ಬಚ್ಚಿಗಳಿವೆ. ಚಿಲಿಪಿಲಿ ಚಿಂತಾಜನಕವಾಗಿ ರೆಕ್ಕೆಗಳಿದ್ದರೂ ಹಾರಲಾಗದ ಭಯಾನಕ ಸ್ಥಿತಿಗೆ ಮರಗುತ್ತಿದ್ದೇವೆ. ಆಟವಾಡಲು ನಮಗೆ ಮಣ್ಣಿಲ್ಲ, ಇರುವುದೆಲ್ಲ ಬರೀ ದೂಳು ಘನ ಮತ್ತು ಅನಿಲ ರೂಪದಲ್ಲಿ ಚಕ್ರೀಯವಾಗಿ ಸಾಯುತ್ತಿದೆ. ಆ ಮಣ್ಣಿನ ಗಮ್ಮನೆಯ ಸೊಗಡು ಕೊರಗುತ್ತಿದೆ.

    ಸರಿಯಾದ ರಸ್ತೆ ಇಲ್ಲ ನಮ್ಮೂರಿಗೆ. ಹಾಗಂತ ಸುಂದರ ಪರಿಸರದ ಪರಿಮಳವು ಇಲ್ಲ. ಬರೀ ಮೌನ. ನಡೆಯುವ ಮಣ್ಣಿನ ರಸ್ತೆಯೇ ಕಾಲನ್ನು ಕಚ್ಚುತ್ತದೆ. ಆಡುವ ಬೀದಿಯೇ ಬೆದರಿಸುತ್ತಿದೆ. ನಾಯಿಗಳ ವಿಶ್ವಾಸದ ಮೇಲೆ ಅನುಮಾನ ಶುರುವಾಗಿದೆ. ಮುಂಜಾನೆ ಕೂಗುವ ಕೋಳಿ ಹುಂಜವು ಬಂಜೆತನದಿಂದ ಅಂತ್ಯವಾಗುತ್ತಿದೆ.

    ಚಿಲ್ಲಿ ದಾಂಡ್ಲು, ಚೀರಾಡುವ ಲಗೋರಿ, ಚಲ್ಲಾಪಿಲ್ಲಿಯಾಗಿ ಚೆಲ್ಲುವ ಗೋಲಿಗಳು ಗೋಳಾಡುತ್ತಿವೆ. ಮರಕೋತಿ ಆಟ, ಬಟ್ಟೆ ಚೆಂಡಿನ ಓಟ, ಕಾಲ್ಗೆಜ್ಜೆಯ ಸದ್ದಿನ ಕುಂಟೆಬಿಲ್ಲೆ, ಹೆಜ್ಜೇನು ಸವಿಯುವ ಮುದ್ದಿನ ಕಳ್ಳಾಟ ಎಲ್ಲವೂ ಮರೆಯಾಗುತ್ತಿವೆ.[ಚುರುಮುರಿ ಸವಿಯುವ ಸುಖಕ್ಕೆ ಒಮ್ಮೆಯಾದರೂ ಇಲ್ಲಿ ಹೋಗ್ಬೇಕು!]

    Life, challenges and people in Bagepalli

    ನಮ್ಮ ಬದುಕು ಚುರುಕುಗೊಂಡಿದೆ ಅಂತ ಯೋಚಿಸದಿರಿ. ಮೇಲಿನ ಎಲ್ಲದರಲ್ಲೂ ಮಲಿನದ ವಾಸನೆ ಹೊರಡುತ್ತಿದೆ. ಗರ್ವ, ದ್ವೇಷಗಳು ಪಸರಿಸಿವೆ. ಹೊರಗಿನ ಲಾಭಕೋರರಿಗೆ ಒಳಗಿನ ಲಾಬಿಕೋರರು ಬಕೆಟ್ ಗಳಿಡುವುದು ಹೆಚ್ಚಾಗಿ. ಬದಲಾವಣೆ ನೆಪದಲ್ಲಿ ಬರಡಾಗಿ ಮಾರ್ಪಡಿಸುತ್ತಿದ್ದಾರೆ. ಪರಿಸರದ ಜೊತೆಗೆ ಮನಸ್ಸುಗಳನ್ನು ಅಶುದ್ಧಗೊಳಿಸಿ ಹಳ್ಳಿಗಳನ್ನು ಕಳ್ಳರ ಸಂತೆಗಳಾಗಿ ಪರಿವರ್ತಿಸುವ ಪ್ರಬಲ ಪ್ರಯತ್ನಗಳು ಜರೂರಾಗಿ ನಡೆಯುತ್ತಿವೆ.

    ಗಮ್ಮೆಂದು ಪರಿಮಳ ಬೀರುತ್ತಿದ್ದ ಮಣ್ಣಿನ ನೆಲೆಗಳು ಬೃಹದಗಲ ಕೂಪಗಳಾಗಿವೆ. ಕಲ್ಲುಬಂಡೆಗಳ ಪುಡಿಪುಡಿಯಾಗಿ ಬೆಟ್ಟ-ಗುಡ್ಡಗಳು ಬೆತ್ತಲಾಗಿ, ಜೇಸಿಬಿಗಳ ಸದ್ದಿಂದ ಹಗಲು ರಾತ್ರಿಯನ್ನದೇ ಘೀಳಿಡುತ್ತಿವೆ. ಗಿಡಬಳ್ಳಿ ಪೊದೆಗಳು, ಮರಗಳ ಸುಳಿವು ನೀಡದೆ ಗುರುತು ಸಿಗದಂತೆ ಕೊಚ್ಚಿಕೊಚ್ಚಿ ಕೊಲೆಗೀಡಾಗುತ್ತಿವೆ.[ತುಮಕೂರಿನ ವಿಶೇಷ: ತಟ್ಟೆ ಇಡ್ಲಿ, ಚಿತ್ರಾನ್ನ, ಮುದ್ದೆ, ಚಪಾತಿ ಊಟ...]

    ಹೀಗಂತ ನಮ್ಮ ಹಳ್ಳಿಗಳು ಉದ್ಧಾರವಾಗಿವೆ ಅಂತಲ್ಲ, ಕುಡಿಯಲು ನೀರು ಸಿಗುತ್ತಿಲ್ಲ, ಆದರೆ ಬೀರಿನ ಬಾಟಲಿಗಳು ಗಳಗಳ ಎನ್ನುತ್ತಿವೆ. ನಮ್ಮ ಬಾಗೇಪಲ್ಲಿ ಸಾಮಾನ್ಯವಾಗಿ ಅದರಲ್ಲೂ ಗೂಳೂರು, ಪಾತಪಾಳ್ಯ ಹೋಬಳಿಗಳು ಹೆಚ್ಚು ಬೆಟ್ಟಗಳಿಂದ ಆವೃತವಾದವು. ಅಷ್ಟೆ ಕುಗ್ರಾಮಗಳಿರುವ ಹೋಬಳಿಗಳು ಇವೆರಡೆ. ಇಂತಹ ಕುಗ್ರಾಮಗಳ ಬೆಟ್ಟ-ಗುಡ್ಡಗಳು ಸಾವಿನ ಕೇಕೆಗಳಿಂದ ಹಗಲಿರಳು ಬೃಹತ್ ಗ್ರಾನೈಟ್ ಲಾರಿಗಳ ಚಕ್ರಗಳಡಿ ಸಿಲುಕಿಕೊಂಡು ದೂಳಿನ ಸುರಳಿಗಳಾಗಿವೆ.

    ಒಲೆ ಅಂಟಿಸಿ ಮನೆ ಸೌದೆ ಹೊರೆ ಹೊತ್ತು ತರುತ್ತಿದ್ದವರು ಈಗ ಸೌದೆಯು ಇಲ್ಲದೆ ಅಡುಗೆ ಅನಿಲದ ಅನುಕೂಲವಿಲ್ಲದೆ ತಿಂಗಳಿಗೆ ದೊರೆಯಬೇಕಾದ ಸೀಮೆ ಎಣ್ಣೆ ಒಂದೂವರೆ ಅಥವಾ ಎರಡು ತಿಂಗಳಿಗೆ ತಗೊಂಡು ದಿನದ ಮೂರು ಹೊತ್ತು ಉರಿಸಿದರೆ ಮುಗಿದು ಹೋಗುವುದೇನೋ ಎಂಬ ಭೀತಿಯಲ್ಲಿ ಬದುಕು ಸಾಗಿಸುವ ದುಃಸ್ಥಿಗೆ ದೂಡಿದ್ದಾರೆ.

    ಈ ದುಷ್ಟ ಗಣಿಗಾರಿಕೆಯೆ ದೊರೆಗಳು. ಆ ಕಳ್ಳರಿಗೆ ಸಹಕರಿಸುವ ರಾಜಕೀಯ, ಅಧಿಕಾರಿ, ಮಾಧ್ಯಮ, ಸ್ಥಳೀಯರು ಪರಿಶುದ್ಧ ಗ್ರಾಮಗಳನ್ನು ಅಶುದ್ಧ ತಾಣಗಳಾಗಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ...[ಜೆ.ಪಿ. ನಗರದ 'ನಮ್ಮ ಅಡ್ಡ'ದಲ್ಲಿ ಸಾವಯವ ತಿಂಡಿ ಸಿಗತ್ತೆ ಕಣ್ರೀ]

    ನಮ್ಮ ಅಜ್ಜಿ ಹೇಳ್ತಿರ್ತಾರೆ 7 ವರ್ಷ ಬರಗಾಲ ಬಂದರೂ ಹೊಟ್ಟೆಗೆ ಮೋಸ ಆಗ್ತಿರಲಿಲ್ಲ. ಏಕೆಂದರೆ ಕೆರೆ-ಕುಂಟೆಗಳು ಬತ್ತಿ ಹೋದಾಗ ಅವುಗಳಲ್ಲಿ ಗೆಡ್ಡೆ- ಗೆಣಸು ಇರ್ತಿತ್ತು. ಬೆಟ್ಟಗುಡ್ಡಗಳಲ್ಲಿ ಕಾಯಿ- ಸೊಪ್ಪುಗಳನ್ನು ತಿಂದು ಜೀವ ಉಳಿಸಿಕೊಳ್ತಿದ್ದೆವು. ಆದರೆ ಈಗ ಕಲ್ಲು ಮಣ್ಣಿನ ದೂಳು ಕುಡಿದು ಸಾಯುವ ಪರಿಸ್ಥಿತಿ ಎಂದು.

    ಸಕ್ರಮ ಅಂತ ಎರಡು ಲಾರಿ ಪ್ರತಿ ದಿನ ಲೆಕ್ಕವಿದ್ದರೆ ಎರಡರ ಪಕ್ಕ ಸೊನ್ನೆ ಸೇರಿಸಿ ಇಪ್ಪತ್ತು ಲಾರಿಗಳು ಲೂಟಿ ಹೊಡೆಯುತ್ತಿವೆ. ಇವುಗಳಿಗೆ ಯಾರು ಹೊಣೆ? ಇವೆಲ್ಲವೂ ರೂಢಿಯಾಗಿ ಹೊಂದಿಕೊಂಡಿರುವ ಜನರೋ? ಹೊಂದಾಣಿಕೆ ಮಾಡಿಕೊಂಡಿರುವ ಜನಪ್ರತಿನಿಧಿಗಳೋ? ಹೀಗೊಂದು ತಾಲೂಕಿದೆ, ಅಲ್ಲಿನ ಜನ ಬವಣೆ ಪಡುತ್ತಿದ್ದಾರೆ ಎಂಬ ಕಾಳಜಿಯಿಲ್ಲದ ಸರಕಾರವೇ?

    ನಾವೆಲ್ಲರೂ ಒಂದು ದಿನ ಕಂತಿನ ಲೆಕ್ಕದಲ್ಲಿ ಮುಗಿದುಹೋಗುತ್ತೇವೆ. ಇದೇ ಮಣ್ಣಿನಲ್ಲಿ ಈಗ ತಾನೇ ಆಟ ಆರಂಭಿಸಿರುವ ಕೂಸು-ಕಂದಮ್ಮಗಳ ಗಂಟಲಿನ ಆಳದಿಂದ ಹೊರಹೊಮ್ಮುತ್ತಿರುವ ಆ ನೋವು? ಅದನ್ನು ಯಾರು ನಿವಾರಿಸುತ್ತಾರೆ?

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    How is the life in Bagepalli, Chikkaballapur district? M.L.Narasimhamurthy explains situation of Bagepalli taluk.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more